ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಗೆಳತಿಯನ್ನು ಕೂರಿಸಿ ನಡುರಸ್ತೆಯಲ್ಲಿ ರೊಮ್ಯಾನ್ಸ್‌ ಮಾಡಿದಾತನ ಕೊಬ್ಬು ಇಳಿಸಿದ ಪೊಲೀಸರು

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ್ದಲ್ಲದೇ ಪೆಟ್ರೋಲ್ ಟ್ಯಾಂಕ್ ಮೇಲೆ ತನ್ನ ಗೆಳತಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡಿದ್ದಾನೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪೊಲೀಸರು ಇಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ನಡುರಸ್ತೆಯಲ್ಲಿ ಗೆಳತಿ ಜತೆ ಬೈಕ್‌ ಸ್ಟಂಟ್‌; ಕಿಡಿಕಾರಿದ ನೆಟ್ಟಿಗರು

Profile pavithra Mar 1, 2025 4:07 PM

ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ಬೈಕ್ ಸ್ಟಂಟ್‍ಗಳನ್ನು ಮಾಡುವುದು ಚಾಲಕರಿಗೆ ಮಾತ್ರವಲ್ಲದೆ ಅವರ ಸುತ್ತಮುತ್ತಲಿನವರಿಗೂ ಅಪಾಯವನ್ನುಂಟು ಮಾಡುತ್ತವೆ. ಹಾಗಾಗಿ ಕಟ್ಟುನಿಟ್ಟಾದ ಸಂಚಾರ ನಿಯಮಗಳನ್ನು ಜಾರಿಗೆ ತಂದರೂ ಮತ್ತು ರಸ್ತೆ ಸಂಚಾರದ ಬಗ್ಗೆ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಿದರೂ ಕೂಡ ಕೆಲವರು ಸುರಕ್ಷತೆಯನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಬೈಕ್‍ನ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಗೆಳತಿಯನ್ನು ಕೂರಿಸಿಕೊಂಡು ಅಪಾಯಕಾರಿ ಸ್ಟಂಟ್ ಮಾಡಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸರ್ಜಾಪುರ ಮುಖ್ಯರಸ್ತೆಯಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ್ದಲ್ಲದೇ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ತನ್ನ ಗೆಳತಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡಿದ್ದಾನೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ ಮತ್ತು ಅಂತಹ ಅಜಾಗರೂಕ ನಡವಳಿಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಕರೆ ನೀಡಿದ್ದಾರೆ.



ಬೆಂಗಳೂರು ಜಿಲ್ಲಾ ಪೊಲೀಸರು ಈ ಘಟನೆಯನ್ನು ಗಮನಿಸಿದ್ದು, ವಿಡಿಯೊದಲ್ಲಿರುವ ವ್ಯಕ್ತಿ ಟೆಕ್ ಎಂದು ದೃಢಪಡಿಸಿದ್ದಾರೆ. ಇಂತಹ ಅಪಾಯಕಾರಿ ಬೈಕ್ ಓಡಿಸಿದ್ದಕ್ಕಾಗಿ ಅಧಿಕಾರಿಗಳು ಆತ ಮತ್ತು ಆತನ ಗೆಳತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. "ಅಜಾಗರೂಕ ಬೈಕ್ ಸ್ಟಂಟ್ ಪ್ರೀತಿಯ ಪ್ರದರ್ಶನವಲ್ಲ - ಇದು ಕಾನೂನಿನ ಉಲ್ಲಂಘನೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ. ಅಪಾಯಕಾರಿ ಸವಾರಿಗಾಗಿ ಟೆಕ್ಕಿ ಮತ್ತು ಆತನ ಗೆಳತಿಯ ವಿರುದ್ಧ ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ತಿಳಿಸಿದ್ದಾರೆ.

ಕಾಮೆಂಟ್ ವಿಭಾಗದಲ್ಲಿ, ನಿಯಮ ಉಲ್ಲಂಘಿಸಿದವರ ವಿರುದ್ಧ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಅನೇಕ ಜನರು ಬೆಂಗಳೂರು ಪೊಲೀಸರನ್ನು ಹೊಗಳಿದ್ದಾರೆ. ಒಬ್ಬರು, "ಒಳ್ಳೆಯ ಕೆಲಸ. ಬೆಂಗಳೂರಿನಲ್ಲಿ ಪ್ರತಿದಿನ ಹೆಚ್ಚುತ್ತಿರುವ ಎಲ್ಲ ರೀತಿಯ ಸಂಚಾರ ಉಲ್ಲಂಘನೆಗಳ ವಿರುದ್ಧ ದಯವಿಟ್ಟು ಕಠಿಣ ಕ್ರಮ ಕೈಗೊಳ್ಳಿ" ಎಂದು ಹೇಳಿದ್ದಾರೆ.
ಇನ್ನೊಬ್ಬರು, "ತ್ವರಿತ ಕ್ರಮವನ್ನು ತೆಗೆದುಕೊಂಡಿದ್ದಕ್ಕೆ ಪ್ರಶಂಸಿಸುತ್ತೇನೆ ಸರ್. ದ್ವಿಚಕ್ರ ವಾಹನಗಳಿಂದ ಲಾರಿಗಳವರೆಗೆ ರಾಂಗ್ ಸೈಡ್ ಡ್ರೈವಿಂಗ್ ಮಾಡುವುದು ಕಂಡುಬಂದಿದೆ. ದಯವಿಟ್ಟು ಇದಕ್ಕೆ 20,000 ರೂ.ಗಳ ದಂಡದೊಂದಿಗೆ ಜೈಲು ಶಿಕ್ಷೆಯನ್ನು ಘೋಷಿಸಿ ಮತ್ತು ಅವರ ಡಿಎಲ್ ರದ್ದುಗೊಳಿಸಿ. ದಯವಿಟ್ಟು ಒಂದು ವಾರದಲ್ಲಿ ಅಪರಾಧಿಗಳನ್ನು ಬಂಧಿಸಿ, ಈ ಸಮಸ್ಯೆಯನ್ನು ತೊಲಗಿಸಿ” ಎಂದು ಕೇಳಿಕೊಂಡಿದ್ದಾನೆ.

ಇದರ ನಡುವೆ ಇನ್ನೊಬ್ಬರು ಕಾಮೆಂಟ್ ಮಾಡಿ ಗಮನ ಹರಿಸಬೇಕಾದ ಇತರ ಸಂಚಾರ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ತ್ವರಿತ ಕ್ರಮ ತೆಗೆದುಕೊಂಡಿದ್ದು ಉತ್ತಮ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಡೇಂಜರಸ್‌ ಬೈಕ್‌ ಸ್ಟಂಟ್! ಕಿಡಿಗೇಡಿಯ ಕೃತ್ಯಕ್ಕೆ ನೆಟ್ಟಿಗರು ಫುಲ್‌ ಗರಂ

ಇತ್ತೀಚೆಗೆ ಉತ್ತರ ಪ್ರದೇಶದ ಬಾಂದಾದ ಜನದಟ್ಟಣೆಯ ರಸ್ತೆಯಲ್ಲಿ ಯುವಕನೊಬ್ಬ ಬೈಕಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಯುವಕ ಹೆಲ್ಮೆಟ್ ಕೂಡ ಹಾಕಿಕೊಳ್ಳದೇ ಈ ರೀತಿ ಸ್ಟಂಟ್‌ ಮಾಡಿದ್ದಾನಂತೆ. ವಿಡಿಯೊದಲ್ಲಿ, ಯುವಕ ಜಿಗ್-ಜಾಗ್ ರೀತಿಯಲ್ಲಿ ಅತಿ ವೇಗವಾಗಿ ಬೈಕ್ ಓಡಿಸಿದ್ದಾನೆ. ಇನ್ನು ಬೈಕಿನ ನಂಬರ್ ಪ್ಲೇಟ್ ಕೂಡ ತೆಗೆದಿದ್ದಾನೆ. ಈ ವಿಡಿಯೊ ವೈರಲ್ ಆಗಿದ್ದು, ಬೈಕ್‍ ಸವಾರನು ಮಾಡಿದ ಕೃತ್ಯದಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾನೆ.