Alia Bhatt: ಸೋಶಿಯಲ್ ಮೀಡಿಯಾದಿಂದ ಮಗಳ ಎಲ್ಲ ಫೋಟೊ ಡಿಲೀಟ್ ಮಾಡಿದ ಆಲಿಯಾ ಭಟ್
ಬಾಲಿವುಡ್‌ನ ಸ್ಟಾರ್ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯ ಪುತ್ರಿ ರಾಹಾ ಕೂಡ ಸೋಶಿಯಲ್ ಮೀಡಿಯಾಲ್ಲಿ ಸಾಕಷ್ಟು ಜನಪ್ರಿಯ. ಪಾಪರಾಜಿಗಳು ಎದುರು ಸಿಕ್ಕಾಗ ರಾಹಾ ಕ್ಯೂಟ್ ರಿಯಾಕ್ಷನ್ ನೀಡಿ ಅಭಿಮಾನಿಗಳ ಮನಸ್ಸು ಗೆಲ್ಲುತ್ತಾಳೆ. ಆದರೆ ಇದೀಗ ಆಲಿಯಾ ಅವರು ಸೋಶಿಯಲ್ ಮೀಡಿಯಾದಿಂದ ರಾಹಾಳ ಪೋಟೊ ಡಿಲೀಟ್ ಮಾಡಿದ್ದಾರೆ.

ಮಗಳು ರಾಹಾಳೊಂದಿಗೆ ರಣಬೀರ್ ಕಪೂರ್ ಮತ್ತು ಅಲಿಯಾಭಟ್.

ಮುಂಬೈ: ಬಾಲಿವುಡ್ ನಟ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕ್ಯೂಟ್ ಜೋಡಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತವೆ. ಅದರಲ್ಲೂ ಇವರಿಬ್ಬರ ಮಗಳು ರಾಹಾ (Raha) ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ರಾಹಾ ಬೇಬಿಯ ಕ್ಯೂಟ್ ರಿಯಾಕ್ಷನ್‌ಗಳು ಗಮನ ಸೆಳೆಯುತ್ತವೆ. ಅದರಲ್ಲಿಯೂ ಪಾಪರಾಜಿಗಳನ್ನು ಕಾಣ್ತಿದ್ದಂತೆ ಫ್ಲೈಯಿಂಗ್ ಕಿಸ್ ನೀಡುವ ರಾಹಾ, ಬೈ ಎನ್ನುತ್ತ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿರುತ್ತಾಳೆ. ರಾಹಾ ವಿಡಿಯೊಗಳಿಗಾಗಿಯೇ ಕಾದು ಕೂರುವ ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡದಿದೆ. ಆಲಿಯಾ ಭಟ್ ಕೂಡ ತಮ್ಮ ಮಗಳ ಫೋಟೊಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದರೆ ಇದೀಗ ದಿಢೀರ್ ಆಗಿ ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿನ ರಾಹಾ ಫೋಟೊ ಡಿಲೀಟ್ ಮಾಡಿದ್ದಾರೆ.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಆಗಾಗ ಮಗಳು ರಾಹಾ ಜತೆ ಕಾಣಿಸಿಕೊಳ್ಳುತ್ತಾರೆ. ಪಾಪರಾಜಿಗಳು ಎದುರು ಸಿಕ್ಕಾಗ ರಾಹಾ ಕ್ಯೂಟ್ ರಿಯಾಕ್ಷನ್ ನೀಡಿ ಅಭಿಮಾನಿಗಳ ಮನಸ್ಸು ಗೆಳ್ಳುತ್ತಾಳೆ. ರಾಹಾ ವಿಡಿಯೊ ನೋಡಿದ ಫ್ಯಾನ್ಸ್ ಕೂಡ ರಾಹಾ ವಿಡಿಯೊಗೆ ಹುರಿದುಂಬಿಸುತ್ತಾರೆ.
ಆದರೆ ಇದೀಗ ಆಲಿಯಾ ಅವರ ಪ್ರೊಫೈಲ್‌ನಲ್ಲಿ ರಾಹಾಳ ಯಾವುದೇ ಫೋಟೊಗಳು ಕಾಣಿಸುತ್ತಿಲ್ಲ. ಪ್ಯಾರಿಸ್ ಪ್ರವಾಸದ ವೇಳೆ ಪೋಸ್ಟ್ ಮಾಡಿದ್ದ ಫೋಟೊವನ್ನು ಸಹ ಆಲಿಯಾ ತೆಗೆದುಹಾಕಿದ್ದಾರೆ. ರಾಹಾ ಮುಖವನ್ನು ಬಹಿರಂಗಪಡಿಸದ ಫೋಟೊಗಳು ಮಾತ್ರ ಉಳಿಸಿಕೊಂಡಿದ್ದು ಅಭಿಮಾನಿಗಳು ಈ ಬಗ್ಗೆ ಅಚ್ಚರಿಗೊಂಡಿದ್ದಾರೆ.
ಇತ್ತೀಚೆಗೆ ಆಲಿಯಾ ಮಾಧ್ಯಮದವರ ಬಳಿಗೆ ಬಂದು ಮಾತನಾಡಲು ಬಯಸಿದಾಗ ಕ್ಯಾಮೆರಾಗಳನ್ನು ಮುಚ್ಚುವಂತೆ ಕೇಳಿಕೊಂಡಿದ್ದರು. ರಾಹಾ ಅವರ ಫೋಟೊ ಕ್ಲಿಕ್ ಮಾಡಬೇಡಿ ಎಂದು ಈ ವೇಲೆ ಅವರು ಹೇಳಿರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಈ ಬಗ್ಗೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದರೆ, ಇನ್ನು ಹಲವರು ಪೋಷಕರಾಗಿ ಮಗುವಿನ ಒಳಿತಿಗಾಗಿ ಮಾಡುವ ಯಾವುದೇ ಕೆಲಸ ತಪ್ಪಲ್ಲ ಎಂದಿದ್ದಾರೆ. ಕೆಲವೊಮ್ಮೆ ಪಾಪಾರಾಜಿಗಳು ಫೋಟೊಗಾಗಿ ಮುಗಿದು ಬೀಳುತ್ತಾರೆ. ಮಕ್ಕಳ ಗೌಪ್ಯತೆಯನ್ನು ಕಾಪಾಡುವ ಪೋಷಕರ ನಿರ್ಧಾರ ಸರಿ ಇದೆ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ.
ಇದನ್ನು ಓದಿ: Viral News: ದಿಲ್ಲಿ ಮೆಟ್ರೋದಲ್ಲಿ ಮತ್ತೆ ಜಗಳ; ಗುರಾಯಿಸಿ ನೋಡಿದ್ದಕ್ಕೆ ರೊಚ್ಚಿಗೆದ್ದ ಯುವತಿ!
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು 2022ರ ಏಪ್ರಿಲ್ 14ರಂದು ವಿವಾಹವಾಗಿದ್ದು 2022ರ ನವೆಂಬರ್ 6ರಂದು ರಾಹಾ ಜನಿಸಿದ್ದಾಳೆ. ಕೆಲವು ಸಮಯ ಮಗುವಿನ ಮುಖವನ್ನು ದಂಪತಿ ರಿವೀಲ್ ಮಾಡಿರಲಿಲ್ಲ. ಆ ಬಳಿಕ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ತಮ್ಮ ಮಗಳ ಮುಖವನ್ನು ಜಗತ್ತಿಗೆ ತೋರಿಸಿದ್ದರು. ಇದೀಗ ನಟಿ ಆಲಿಯಾ ತಮ್ಮ ಮಗಳು ರಾಹಾ ಫೋಟೊಗಳನ್ನು ಸಡನ್ ಆಗಿ ರಿಮೂವ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.