ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Kiara Advani: ಪ್ರೆಗ್ನೆನ್ಸಿ ಪೋಸ್ಟ್ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಕಿಯಾರಾ

ನಟಿ ಕಿಯಾರಾ ಮುಂಬೈನಲ್ಲಿ ಶೂಟಿಂಗ್ ಸೆಟ್‌ಗೆ ನಡೆದುಕೊಂಡು ಬರುವ ದೃಶ್ಯ ವೈರಲ್ ಆಗಿದೆ. ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ತೋರುತ್ತಿದ್ದು, ಅವರು ಖುಷಿಯಿಂದ ಫೋಟೊಕ್ಕೆ ಪೋಸ್ ನೀಡಿದ್ದಾರೆ. ನಟಿ ಸಂಪೂರ್ಣ ಬಿಳಿ ಉಡುಪನ್ನು ಧರಿಸಿದ್ದು ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ‌. ತಾಯಿಯಾಗುತ್ತಿರುವ ತಮಗೆ ಶುಭಹಾರೈಸಿದ ಪಾಪರಾಜಿಗಳಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ.

ಪ್ರೆಗ್ನೆನ್ಸಿ ಗುಡ್‌ನ್ಯೂಸ್‌ ಬಳಿಕ ಮುಂಬೈನಲ್ಲಿ ಕಾಣಿಸಿಕೊಂಡ ಕಿಯಾರಾ

ಕಿಯಾರಾ ಅಡ್ವಾಣಿ.

Profile Pushpa Kumari Mar 1, 2025 3:54 PM

ನವದೆಹಲಿ: ಬಾಲಿವುಡ್‌ನ ತಾರಶಾ ಜೋಡಿ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ದಂಪತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿಯಾರಾ ಸದ್ಯ ಯಶ್ ಜತೆ ಬಹು ನಿರೀಕ್ಷಿತ ʼಟಾಕ್ಸಿಕ್ʼ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು, ತಾಯಿ ಆಗುತ್ತಿರುವ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ತಾಯಿ ಆಗುತ್ತಿರುವ ನಡುವೆಯು ನಟಿ ಶೂಟಿಂಗ್‌ಗೆ ಮರಳಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಕಿಯಾರಾ ಮುಂಬೈನಲ್ಲಿ ಶೂಟಿಂಗ್ ಸೆಟ್‌ಗೆ ನಡೆದುಕೊಂಡು ಬರುವ ದೃಶ್ಯ ವೈರಲ್ ಆಗಿದ್ದು ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ತೋರುತ್ತಿದ್ದು ಎಂದು ಹಲವರು ತಿಳಿಸಿದ್ದಾರೆ. ಅವರು ಬಹಳಷ್ಟು ಖುಷಿಯಿಂದ ಫೋಟೊಕ್ಕೆ ಪೋಸ್ ನೀಡಿದ್ದಾರೆ. ನಟಿ ಸಂಪೂರ್ಣ ಬಿಳಿ ಉಡುಪನ್ನು ಧರಿಸಿದ್ದು ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ‌. ಈ ಸಂದರ್ಭ ಶುಭ ಹಾರೈಸಿದ ಪಾಪರಾಜಿಗಳಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ. ಸದ್ಯ ಗರ್ಭಿಣಿ ಆಗಿರುವ ಕಿಯಾರಾ ಸಿನಿಮಾಗಳಲ್ಲಿ ನಟಿಸುತ್ತಾರಾ? ಬ್ರೇಕ್ ಪಡೆಯುತ್ತಾರಾ? ಎನ್ನುವ ಗೊಂದಲ ಅಭಿಮಾನಿಗಳಿಗಿದ್ದು ಇದೀಗ ನಟಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಕಿಯಾರಾ ಅಡ್ವಾಣಿ 2023ರ ಫೆಬ್ರವರಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ಮದುವೆ ಆಗಿದ್ದರು. ರಾಜಸ್ಥಾನದ ಜೈಸಲ್ಮೇರ್​ನಲ್ಲಿ ವಿವಾಹ ಸಂಭ್ರ ಮ ನಡೆದಿತ್ತು‌. ಇತ್ತೀಚೆಗೆ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ದಾರ್ಥ್‌ ದಂಪತಿ ತಂದೆ-ತಾಯಿಯಾಗುತ್ತಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ ಪೋಸ್ಟ್‌ ಹಂಚಿಕೊಂಡಿದ್ದರು. ತಮ್ಮ ಜೀವನದ ಶ್ರೇಷ್ಠ ಉಡುಗೊರೆ, ಆದಷ್ಟು ಬೇಗ ಬರ್ತಿದೆ ಎಂದು ಇಬ್ಬರು ಕೈಯಲ್ಲಿ ಮಗುವಿನ ಸಾಕ್ಸ್ ಹಿಡಿದಿರುವ ಫೋಟೊ ಹಂಚಿಕೊಂಡಿದ್ದರು. ಕಿಯಾರಾ ಹಾಗೂ ಸಿದ್ಧಾರ್ಥ್ ಜೋಡಿಗೆ ಅಪಾರ ಅಭಿಮಾನಿಗಳಿದ್ದು, ಈ ಪೋಸ್ಟ್ ನೋಡಿ ಶುಭ ಹಾರೈಸಿದ್ದಾರೆ.

ಇದನ್ನು ಓದಿ: Tumkur (Gubbi) News: ಪಕ್ಷದಲ್ಲಿ ಯಾರ ಬಗ್ಗೆಯೂ ನನಗೆ ಭಿನ್ನಾಭಿಪ್ರಾಯವಿಲ್ಲ. ಸಾಮಾಜಿಕ ಜಾಲತಾಣ ಪೋಸ್ಟ್ ವಿಚಾರ ನನಗೆ ತಿಳಿದಿಲ್ಲ

10 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದ ಕಿಯಾರಾ ಅಡ್ವಾಣಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ತೆಲುಗಿನ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 2021ರಲ್ಲಿ ರಿಲೀಸ್‌ ಆದ 'ಶೇರ್‌ಷಾ' ಸಿನಿಮಾದಲ್ಲಿ ನಟಿಸುವಾಗ ನಟ ಸಿದ್ದಾರ್ಥ್‌ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ನಡುವೆ ಪ್ರೀತಿ ಹುಟ್ಟಿತ್ತು. ನಂತರ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಕಿಯಾರಾ ಮತ್ತು ಸಿದ್ದಾರ್ಥ್‌ ಮದುವೆಯಾಗಿದ್ದರು.

ಕಿಯಾರಾ ಸದ್ಯ ಯಶ್ ಜತೆ ʼಟಾಕ್ಸಿಕ್ʼ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದು, ಹೃತಿಕ್ ರೋಷನ್ ಜತೆ ʼವಾರ್ 2ʼ ಮತ್ತು ರಣವೀರ್ ಸಿಂಗ್ ಜತೆ ʼಡಾನ್ 3ʼ ಸಿನಮಾವನ್ನೂ ಒಪ್ಪಿಕೊಂಡಿದ್ದಾರೆ. ಈಗಗಾಲೇ ʻಟಾಕ್ಸಿಕ್‌ʼ ಸಿನಿಮಾದಲ್ಲಿನ ಕಿಯಾರಾ ಅಡ್ವಾಣಿಯ ಪೋರ್ಷನ್‌ ಕಂಪ್ಲೀಟ್‌ ಆಗಿದೆ ಅಂತಲೂ ಹೇಳಲಾಗುತ್ತಿದೆ.