ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಛೀ...ಇದೆಂಥಾ ಅಸಹ್ಯ...ಚರಂಡಿ ನೀರಿನಲ್ಲಿ ಸೊಪ್ಪು ತೊಳೆದ ವ್ಯಾಪಾರಿ

ತರಕಾರಿ ಮಾರಾಟಗಾರನು ಶುದ್ಧ ನೀರಿನ ಬದಲಾಗಿ ಚರಂಡಿ ನೀರಿನಲ್ಲಿ ಸೊಪ್ಪು ತೊಳೆಯುವ ದೃಶ್ಯ ಸದ್ಯ ಸೋಶಿಯಲ್‌ ಮೀಡಿಯಅದಲ್ಲು ವೈರಲ್‌ ಆಗಿದೆ. ಈ ಅಘಾತಕಾರಿ ದೃಶ್ಯ ನೀಡಿದ ಅನೇಕರು ಇಂತಹ ತರಕಾರಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸೊಪ್ಪನ್ನು ಚರಂಡಿ ನೀರಲ್ಲಿ ತೊಳೆದ ತರಕಾರಿ ವ್ಯಾಪಾರಿ

Washing Vegetables In Sewer Water

Profile Pushpa Kumari Mar 1, 2025 4:18 PM

ಮುಂಬೈ: ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಸೊಪ್ಪನ್ನು ತೊಳೆಯುತ್ತಿರುವ ಅಸಹ್ಯಕಾರಿ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ವಿಡಿಯೊ ಕಂಡು ನೆಟ್ಟಿಗರು ದಂಗಾಗಿದ್ದಾರೆ. ಮಹಾರಾಷ್ಟ್ರದ ಥಾಣೆಯ ಉಲ್ಲಾಸ ನಗರದ ಮಾರುಕಟ್ಟೆಯೊಂದರಲ್ಲಿ ಈ ಘಟನೆ ನಡೆದಿದ್ದು, ಚರಂಡಿ ನೀರಿನಲ್ಲಿ ತರಕಾರಿ ತೊಳೆಯುವ ದೃಶವನ್ನು ಆ ಪ್ರದೇಶದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದಾನೆ. ಈ ದೃಶ್ಯ ಇದೀಗ ಹರಿದಾಡುತ್ತಿದೆ (Viral Video). ವಿಡಿಯೊ ವೈರಲ್‌ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ತರಕಾರಿ ಮಾರಾಟಗಾರ ಕೊಳಚೆ ನೀರಿನಲ್ಲಿ ಸೊಪ್ಪು ತೊಳೆದದ್ದು ಮಾತ್ರವಲ್ಲದೆ ಅದೇ ನೀರನ್ನು ತರಕಾರಿಗಳ ಮೇಲೆ ಸಿಂಪಡಿಸಿದ್ದಾನೆ.

ತರಕಾರಿ ಮಾರಾಟಗಾರ ಶುದ್ಧ ನೀರಿನ ಬದಲಾಗಿ ಚರಂಡಿ ನೀರಿನಲ್ಲಿ ಸೊಪ್ಪು ತೊಳೆಯುವ ದೃಶ್ಯ ಇದಾಗಿದೆ. ಮಾರುಕಟ್ಟೆಯಲ್ಲಿ ತರಕಾರಿಗಳು ಫ್ರೆಶ್ ಆಗಿ ದೊರೆಯುತ್ತವೆ ಎಂದು ಖರೀದಿಸಲು ಮುಂದಾದರೆ ಕಾಯಿಲೆ ಕಟ್ಟಿಟ್ಟ ಬುತ್ತಿ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಘಾತಕಾರಿ ದೃಶ್ಯವು ಸಾರ್ವಜನಿಕ ಆರೋಗ್ಯದ ಬಗ್ಗೆ ಪರಿಣಾಮ ಬೀರಲಿದ್ದು ಮಾರಾಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಹೇಳಿದ್ದಾರೆ.



ಟ್ವಿಟ್ಟರ್‌ನಲ್ಲಿ ಈ ವಿಡಿಯೊ‌ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕ ರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ತರಕಾರಿಗಳ ನೈರ್ಮಲ್ಯದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಹಕರ ಆರೋಗ್ಯದ ಮೇಲೆ ಯಾವುದೇ ಕಾಳಜಿ ಇಲ್ಲದೆ ಇಂತಹ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮಾರುಕಟ್ಟೆಯಲ್ಲಿ ನೈರ್ಮಲ್ಯ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಬಲವಾಗಿದೆ.

ಇದನ್ನು ಓದಿ: Viral Video: ಹಳದಿ ಸಮಾರಂಭಕ್ಕೆ ನುಗ್ಗಿದ ಕೋತಿಯಿಂದ ಅವಾಂತರ; ಬಿದ್ದು ಬಿದ್ದು ನಕ್ಕ ನೆಟ್ಟಿಗರು

ಈ ವಿಡಿಯೊ ನೋಡಿದ ಬಳಕೆದಾರರು ನಾನಾ ಬಗೆಯ ಕಮೆಂಟ್ ಮಾಡಿದ್ದು, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರೆ ಕೆಲವೊಂದು ವ್ಯಾಪಾರಿಗಳು ಈ ರೀತಿಯ ಅಸಹ್ಯ ಕೆಲಸ ಮಾಡುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ತರಕಾರಿ ಹೇಗೆ ಇದ್ದರೂ ಮನೆಯಲ್ಲಿ ಶುದ್ಧ ನೀರಿನಲ್ಲಿ ತೊಳೆದ ಬಳಿಕವೇ ಬಳಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಉಲ್ಲಾಸ್ ನಗರದ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ರಾಜಕೀಯ ಮುಖಂಡರು ಈ ಬಗ್ಗೆ ಎಚ್ಚೆತ್ತುಕೊಂಡಿದ್ದು, ಆರೋಗ್ಯ ಅಧಿಕಾರಿ ಮನೀಶ್ ಹಿವಾಲೆ ಅವರು ಕೃತ್ಯ ಎಸಗಿದ ವ್ಯಾಪಾರಿಯನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.