ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ಗೆ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್‌ XI

Australia's Likely XI For Semifinal: ಸ್ಟೀವನ್‌ ಸ್ಮಿತ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಆದರೆ, ಅಂತಿಮ ನಾಲ್ಕರ ಹಂತದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಯಾವ ತಂಡ ಎದುರಾಗಲಿದೆ ಎಂಬುದು ಭಾನುವಾರ ತಿಳಿಯಲಿದೆ. ಅಂದ ಹಾಗೆ ಸೆಮಿಫೈನಲ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ಗೆ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್‌ XI

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ

Profile Ramesh Kote Mar 1, 2025 6:12 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಲೀಗ್‌ ಹಂತದ ಕೊನೆಯ ಪಂದ್ಯ ಮಳೆಯಿಂದ ರದ್ದಾದ ಬಳಿಕ ಆಸ್ಟ್ರೇಲಿಯಾ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಆಫ್ಘನ್‌ ನೀಡಿದ್ದ 274 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ ಒಂದು ವಿಕೆಟ್‌ ನಷ್ಟಕ್ಕೆ 100 ಕ್ಕೂ ಅಧಿಕ ರನ್‌ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ, ಮಳೆ ಬಂದ ಕಾರಣ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಹಾಗೂ ಪಂದ್ಯ ಮಳೆಗೆ ಬಲಿಯಾಯಿತು. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಯಿತು. ಇದರೊಂದಿಗೆ ನಾಲ್ಕು ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.

ಆಸ್ಟ್ರೇಲಿಯಾನ ತಂಡಕ್ಕೆ ಸೆಮಿಫೈನಲ್‌ನಲ್ಲಿ ಯಾವ ತಂಡ ಎದುರಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಶನಿವಾರ ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಗೆದ್ದರೆ, ಆಸ್ಟ್ರೇಲಿಯಾ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಇಳಿಯಲಿದೆ. ಆಗ, ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಗೆದ್ದ ತಂಡದ ವಿರುದ್ದ ಕಾಂಗರೂ ಪಡೆ ಕಾದಾಟ ನಡೆಸಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್‌ ವಿರುದ್ದ ಸೋತರೇ ಆಗ ಆಸ್ಟ್ರೇಲಿಯಾ ತಂಡ ಗ್ರೂಪ್‌ ಬಿ ನಲ್ಲಿ ಅಗ್ರ ಸ್ಥಾನದಲ್ಲಿಯೇ ಉಳಿಯಲಿದೆ. ಆಗ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಸೋತ ತಂಡದ ವಿರುದ್ದ ಪಂದ್ಯವನ್ನು ಆಡಲಿದೆ.

AFG vs AUS: ಮಳೆಯಿಂದ ಪಂದ್ಯ ರದ್ದು; ಸೆಮಿಫೈನಲ್‌ ಪ್ರವೇಶಿಸಿದ ಆಸೀಸ್‌

ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಸೆಮಿಫೈನಲ್‌ ಪಂದ್ಯದಿಂದ ಗಾಯಾಳು ಮ್ಯಾಥ್ಯೂ ಶಾರ್ಟ್‌ ಹೊರ ಬಿದ್ದಿದ್ದಾರೆ. ಪಂದ್ಯಕ್ಕೂ ಮುನ್ನ ಶಾರ್ಟ್‌ ಅವರು ಸಂಪೂರ್ಣ ಫಿಟ್‌ ಆಗುವುದು ಅನುಮಾನ ಎಂದು ಆಸ್ಟ್ರೇಲಿಯಾ ನಾಯಕ ಸ್ಟೀವನ್‌ ಸ್ಮಿತ್‌ ತಿಳಿಸಿದ್ದಾರೆ. ಹಾಗಾಗಿ ಅಂತಿಮ ನಾಲ್ಕರ ಘಟ್ಟದ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಕಿವೀಸ್‌ ಎದುರಾದರೆ ಎರಡು ಬದಲಾವಣೆ

ಎದುರಾಳಿ ತಂಡ ಹಾಗೂ ಮೈದಾನಕ್ಕೆ ಅನುಗುಣವಾಗಿ ಆಸ್ಟ್ರೇಲಿಯಾ ಪ್ಲೇಯಿಂಗ್‌ XIನಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಲಾಹೋರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡುವುದಾದರೆ, ಆಸ್ಟ್ರೇಲಿಯಾ ತಂಡದಲ್ಲಿಮ್ಯಾಥ್ಯೂ ಶಾರ್ಟ್‌ ಸ್ಥಾನಕ್ಕೆ ಜೇಕ್‌ ಮಗರ್ಕ್‌ ಆಡಲಿದ್ದಾರೆ ಹಾಗೂ ಬೆನ್‌ ದ್ವಾರಷಿಯಸ್ ಸ್ಥಾನದಲ್ಲಿ ಶಾನ್‌ ಎಬಾಟ್‌ ಆಡಲಿದ್ದಾರೆ.

IND vs NZ: ಭಾರತ-ಕಿವೀಸ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಭಾರತ ಎದುರಾದರೆ ನಾಲ್ಕು ಬದಲಾವಣೆ

ಒಂದು ವೇಳೆ ಭಾರತದ ವಿರುದ್ಧ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಸೆಮಿಫೈನಲ್‌ನಲ್ಲಿ ಆಡುವುದಾದರೆ, ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XIನಲ್ಲಿ ಹಲವು ಬದಲಾವಣೆಯನ್ನು ತರಬಹುದಾಗಿದೆ. ಜೇಕ್‌ ಮೆಗರ್ಕ್‌ ಹಾಗೂ ಶಾನ್‌ ಎಬಾಟ್‌ ಅವರು ಪ್ಲೇಯಿಂಗ್‌ XIಗೆ ಬರುವ ಜೊತೆಗೆ ದುಬೈ ಪಿಚ್‌ ಸ್ಪಿನ್‌ ಸ್ನೇಹಿಯಾಗಿರುವ ಕಾರಣ ಸ್ಪೆನ್ಸರ್‌ ಜಾನ್ಸನ್‌ ಸ್ಥಾನಕ್ಕೆ ತನ್ವೀರ್‌ ಸಂಘ ಮತ್ತು ಮಾರ್ನಸ್‌ ಲಾಬುಶೇನ್‌ ಅವರ ಸ್ಥಾನಕ್ಕೆ ಆರೋನ್‌ ಹಾರ್ಡಿ ಆಡಬಹುದು. ಒಟ್ಟಾರೆ ಭಾರತ ತಂಡ ಎದುರಾಳಿಯಾದರೆ, ಆಸೀಸ್‌ ಪ್ಲೇಯಿಂಗ್‌ XIನಲ್ಲಿ ಒಟ್ಟು ನಾಲ್ಕು ಬದಲಾವಣೆ ಮಾಡಬಹುದಾಗಿದೆ.

IND vs NZ: ನೆಟ್‌ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿ ಹೃದಯವಂತಿಕೆ ಮೆರೆದ ಶ್ರೇಯಸ್‌ ಅಯ್ಯರ್‌!

ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರಾದರೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XI: ಜೇಕ್‌ ಫ್ರಸರ್‌ ಮೆಗರ್ಕ್‌, ಟ್ರಾವಿಸ್‌ ಹೆಡ್‌, ಸ್ಟೀವನ್‌ ಸ್ಮಿತ್‌ (ನಾಯಕ), ಮಾರ್ನಸ್‌ ಲಾಬುಶೇನ್‌, ಜಾಶ್‌ ಇಂಗ್ಲಿಸ್‌ (ವಿ.ಕೀ), ಅಲೆಕ್ಸ್‌ ಕೇರಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾನ್‌ ಎಬಾಟ್‌, ನೇಥನ್‌ ಎಲ್ಲಿಸ್‌, ಆಡಂ ಝಾಂಪ, ಸ್ಪೆನ್ಸರ್‌ ಜಾನ್ಸನ್‌

ಸೆಮಿಫೈನಲ್‌ನಲ್ಲಿ ಭಾರತ ಎದುರಾದರೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XI: ಜೇಕ್‌ ಫ್ರಸರ್‌ ಮೆಗರ್ಕ್‌, ಟ್ರಾವಿಸ್‌ ಹೆಡ್‌, ಸ್ಟೀವನ್‌ ಸ್ಮಿತ್‌ (ನಾಯಕ), ಮಾರ್ನಸ್‌ ಲಾಬುಶೇನ್‌/ ಆರೋನ್‌ ಹಾರ್ಡಿ, ಜಾಶ್‌ ಇಂಗ್ಲಿಸ್‌ (ವಿ.ಕೀ), ಅಲೆಕ್ಸ್‌ ಕೇರಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾನ್‌ ಎಬಾಟ್‌, ನೇಥನ್‌ ಎಲ್ಲಿಸ್‌, ಆಡಂ ಝಾಂಪ, ತನ್ವೀರ್‌ ಸಂಘ