ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Telangana Tunnel Collapses : ಏಳು ದಿನವಾದರೂ ಸಿಗದ ಕಾರ್ಮಿಕರ ಸುಳಿವು; ನಡೆಯುತ್ತಲೇ ಇದೆ ರಕ್ಷಣಾ ಕಾರ್ಯಾಚರಣೆ

ಹೈದರಾಬಾದ್‌: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿಯಲ್ಲಿ ಕನಿಷ್ಠ ಎಂಟು ಮಂದಿ ಕಾರ್ಮಿಕರು ಸಿಲುಕಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಸ್ಥಳದಲ್ಲಿ ಸೇನಾ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.

ತೆಲಂಗಾಣ ಸುರಂಗ ಕುಸಿತ; ಸಿಗದ ಕಾರ್ಮಿಕರ ಸುಳಿವು

ತೆಲಂಗಾಣ ಸುರಂಗ ಕುಸಿತ

Profile Vishakha Bhat Mar 1, 2025 3:53 PM

ಹೈದರಾಬಾದ್‌: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗದ (Telangana Tunnel Collapses) ಒಂದು ಭಾಗ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿಯಲ್ಲಿ ಕನಿಷ್ಠ ಎಂಟು ಮಂದಿ ಕಾರ್ಮಿಕರು ಸಿಲುಕಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದ ಒಳಗೆ ಸೋರಿಕೆಯನ್ನು ಸರಿಪಡಿಸಲು ಕಾರ್ಮಿಕರು ತೆರಳಿದ್ದಾಗ, ಸುರಂಗದ ಒಂದು ಭಾಗ ಕುಸಿದಿದೆ. ಈ ವೇಳೆ ಮೂವರು ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸುರಂಗದೊಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ಪತ್ತೆ ಹಚ್ಚಲು 500 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸೇನೆ, ನೌಕಾಪಡೆ, ಸಿಂಗರೇಣಿ ಕಲ್ಲಿದ್ದಲು ಪಡೆಗಳು ಮತ್ತು ಇತರ ಏಜೆನ್ಸಿಗಳ ತಂಡಗಳು ಹಲವಾರು ದಿನಗಳಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸದ್ಯ ಸ್ಥಳದಲ್ಲಿ ಸೇನಾ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಕಾರ್ಮಿಕರನ್ನು ಹೊರತರಲು ಪ್ರಯತ್ನಿಸುತ್ತಿರುವ ರಕ್ಷಣಾ ತಂಡಕ್ಕೆ ಸವಾಲು ಎದುರಾಗಿದ್ದು, ನೀರಿನ ಜೊತೆಯಲ್ಲಿ ಕೆಸರು ಇರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಮೊದಲು ನೀರನ್ನು ತೆಗೆದುಹಾಕುವ ಅಗತ್ಯವಿದೆ. ಕುಸಿದ ಛಾವಣಿಯ ವ್ಯಾಪ್ತಿಯು 200 ಮೀಟರ್ ಆಗಿದ್ದು, ಸುರಂಗದ ಬಾಯಿಯಿಂದ ಸುಮಾರು 13 ಕಿ.ಮೀ ದೂರದಲ್ಲಿದೆ ಎಂದು ಅಂದಾಜಿಸಲಾಗಿದೆ.



ಕಾಂಗ್ರೆಸ್ ಶಾಸಕ ಚಿಕ್ಕುಡು ವಂಶಿ ಮಾತನಾಡಿ, ಪರಿಹಾರ ಕಾರ್ಯಾಚರಣೆಗಳು ಏಳನೇ ದಿನಕ್ಕೆ ಕಾಲಿಟ್ಟಿದ್ದು, 12 ಇಲಾಖೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. , ಸಿಂಗರೇಣಿ ಗಣಿಗಳಿಂದ ಬಂದ ಅನುಭವಿ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು. ಎನ್‌ಡಿಆರ್‌ಎಫ್, ಸೇನೆ, ಸಿಂಗರೇಣಿ ಕೊಲಿಯರೀಸ್ ಮತ್ತು ಇತರ ಏಜೆನ್ಸಿಗಳ ತಂಡಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ನಾಗರ್ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಗಾಯಕ್ವಾಡ್ ತಿಳಿಸಿದ್ದಾರೆ.

ಸುರಂಗದೊಳಗಿನ ಕನ್ವೇಯರ್ ಬೆಲ್ಟ್‌ನ ಹಾನಿಗೊಳಗಾದ ಭಾಗವನ್ನು ಶನಿವಾರ ದುರಸ್ತಿ ಮಾಡುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ (ಎನ್‌ಜಿಆರ್‌ಐ) ವಿಜ್ಞಾನಿಗಳು ಸುರಂಗದೊಳಗಿನ ಕೆಲವು "ವೈಪರೀತ್ಯಗಳನ್ನು" ಪತ್ತೆಹಚ್ಚಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಅನ್ನು ಬಳಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Tunnel Collapses: ತೆಲಂಗಾಣ ಸುರಂಗ ಕುಸಿತ; ಕಾರ್ಮಿಕರ ರಕ್ಷಣೆಗೆ ರ್‍ಯಾಟ್‌ ಮೈನರ್ಸ್‌ ತಂಡ ಎಂಟ್ರಿ

ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಮನೋಜ್ ಕುಮಾರ್ (ಯುಪಿ), ಶ್ರೀ ನಿವಾಸ್ (ಯುಪಿ), ಸನ್ನಿ ಸಿಂಗ್ (ಜೆ & ಕೆ), ಗುರುಪ್ರೀತ್ ಸಿಂಗ್ (ಪಂಜಾಬ್), ಮತ್ತು ಸಂದೀಪ್ ಸಾಹು, ಜೆಗ್ತಾ ಕ್ಸೆಸ್, ಸಂತೋಷ್ ಸಾಹು ಮತ್ತು ಅನುಜ್ ಸಾಹು (ಎಲ್ಲರೂ ಜಾರ್ಖಂಡ್‌ನವರು) ಎಂದು ಗುರುತಿಸಲಾಗಿದೆ.ಅವರಲ್ಲಿ ಇಬ್ಬರು ಎಂಜಿನಿಯರ್‌ಗಳು, ಇಬ್ಬರು ನಿರ್ವಾಹಕರು ಮತ್ತು ಉಳಿದ ನಾಲ್ವರು ಜಾರ್ಖಂಡ್‌ನ ಕಾರ್ಮಿಕರು ಎಂದು ಹೇಳಲಾಗಿದೆ.