ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ಇಲ್ಲಿದೆ ನೋಡಿ ಹೃದಯಾಕಾರದ ಆಲೂಗಡ್ಡೆ; ಪ್ರಕೃತಿ ಕೂಡ ಪ್ರೀತಿಸ್ತಿದೆ ಎಂದ ನೆಟ್ಟಿಗರು

ವ್ಯಕ್ತಿಯೊಬ್ಬರು ಅಡುಗೆ ಮಾಡಲು ತಂದ ಆಲೂಗಡ್ಡೆಯೊಂದು ಹೃದಯಾಕಾರದಲ್ಲಿರುವುದನ್ನು ಕಂಡು ಅದರ ಫೋಟೊ ತೆಗೆದು ರೆಡ್ಡಿಟ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನೆಟ್ಟಿಗರ ಗಮನಸೆಳೆದು ವೈರಲ್ ಆಗಿದೆ. ಇದನ್ನು ನೆಟ್ಟಿಗರು ಪ್ರಕೃತಿಯ ಪ್ರೀತಿಯ ಸಂದೇಶ ಎಂದು ಹೇಳಿದ್ದಾರೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಹಾರ್ಟ್‌ ಶೇಪ್‌ ಆಲೂಗಡ್ಡೆ

Profile pavithra Mar 1, 2025 3:12 PM

ಹೊಸದಿಲ್ಲಿ: ಪ್ರಕೃತಿಯಲ್ಲಿ ಕೆಲವು ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ದೆಹಲಿ ವ್ಯಕ್ತಿಯೊಬ್ಬರು ಆಲೂಗಡ್ಡೆಯ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ. ವಿಶೇಷ ಎಂದರೆ ಆತ ಅಡುಗೆ ಮಾಡಲು ತಂದ ಆಲೂಗಡ್ಡೆಯೊಂದು ಹೃದಯಾಕಾರದಲ್ಲಿದೆ. ಹೃದಯಾಕಾರದ ಆಲೂಗಡ್ಡೆಯನ್ನು ಕಂಡು ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಅಪರೂಪದ ಆವಿಷ್ಕಾರ ಎಂದಿದ್ದಾರೆ. ಒಬ್ಬರು “ಪ್ರಕೃತಿ ಕೂಡ ನಮ್ಮನ್ನು ಪ್ರೀತಿಸುತ್ತಿದೆ ಎಂಬುದನ್ನು ಈ ಮೂಲಕ ತಿಳಿಸಿದೆ” ಎಂದಿದ್ದಾರೆ. "ಅವು ತಿರುಗಿದ ಚೆಂಡುಗಳಂತೆ ಕಾಣುತ್ತವೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ "ಪ್ಯಾರ್ ಕಿ ಸಬ್ಜಿ" ಅನ್ನು ಪ್ರದರ್ಶಿಸುವ ಈ ರೆಡ್ಡಿಟ್ ಪೋಸ್ಟ್ ನಿಸ್ಸಂದೇಹವಾಗಿ ಜನರನ್ನು ರಂಜಿಸಿದೆ.

ಇನ್ನು ಈ ವ್ಯಕ್ತಿ ಆಲೂಗಡ್ಡೆಯನ್ನು ಕೈಯಲ್ಲಿ ಹಿಡಿದ ಫೋಟೊಕ್ಕೆ ಸಿಕ್ಕಾಪಟ್ಟೆ ಜನ ಕಾಮೆಂಟ್‌ ಮಾಡಿದ್ದಾರೆ. ಆತ ಹೆಬ್ಬೆರಳಿನ ಉಗುರುಗಳನ್ನು ಮುಚ್ಚಿಕೊಂಡಿದ್ದಾನೆ. ಆತ ಯಾಕೆ ಬೆರಳಿನ ತುದಿಯನ್ನು ಮುಚ್ಚಿದ್ದಾನೆ ಎಂಬ ಕುತೂಹಲವೂ ಹಲವರಲ್ಲಿ ಮೂಡಿದೆ.

ಆತನಿಗೆ ಉಗುರು ಕಚ್ಚುವ ಅಭ್ಯಾಸವಿರಬಹುದು ಎಂದು ಕೆಲವರು ಆಡಿಕೊಂಡಿದ್ದಾರೆ. ತನ್ನ ಹಾಳಾದ ಉಗರುಗಳನ್ನು ಕ್ಯಾಮೆರಾಕ್ಕೆ ತೋರಿಸಲು ನಾಚಿಕೆ ಆಗಿ ಮುಚ್ಚಿಕೊಂಡಿದ್ದಾನೆ ಎಂದು ಇನ್ನು ಕೆಲವರು ಟೀಕಿಸಿದ್ದಾರೆ. ಇನ್ನೊಬ್ಬರು ಕಾಮೆಂಟ್‌ ಮಾಡಿ ಆತ ಕೂದಲಿಗೆ ಬಣ್ಣ ಹಚ್ಚುವಾಗ ಅದು ಕೈಗೆ ತಾಕಿರಬಹುದು ಎಂದು ಹೇಳಿದ್ದಾರೆ.ಹಾಗಾದ್ರೆ ಆತ ಅಡುಗೆಮನೆಯಲ್ಲಿ ಆಲೂಗಡ್ಡೆಯನ್ನು ಬೇಯಿಸುವಾಗ ಕೂದಲಿಗೆ ಬಣ್ಣ ಹಚ್ಚುತ್ತಿದ್ದನೇ? ಎಂದು ಹಲವರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ತರಕಾರಿ ಮಾರುವ ಶತಾಯಷಿ ಅಜ್ಜನ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ..!

ಇದೇ ರೀತಿಯಲ್ಲಿ ಪ್ರಕೃತಿಯಲ್ಲಿ ಹಲವು ವಿಸ್ಮಯಗಳು ಆಗಾಗ ಕಂಡುಬರುತ್ತದೆ. ಆದರೆ ಅದನ್ನು ನಾವು ನೋಡಿದಾಗ ಒಮ್ಮೆಲೆ ನಮಗೆ ಆಶ್ಚರ್ಯವೆನಿಸುತ್ತದೆ. ಇತ್ತೀಚೆಗೆ ಚೀನಾದ ಗುವೊ ಕ್ವಿಂಗ್ಶಾನ್ ಎಂಬ ವ್ಯಕ್ತಿ ನಾಯಿಯ ಮುಖವನ್ನು ಹೋಲುವ ಪರ್ವತವನ್ನು ಪ್ರದರ್ಶಿಸುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಚೀನಾದ ಹುಬೈ ಪ್ರಾಂತ್ಯದ ಯಿಚಾಂಗ್‍ನ ಯಾಂಗ್ಟ್ಸೆ ನದಿಯ ದಡದಲ್ಲಿರುವ ಈ ಪರ್ವತವು ದೂರದಿಂದ ನಾಯಿಯ ಮುಖದಂತೆ ಕಾಣುತ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರಲ್ಲಿ ವಿಸ್ಮಯವನ್ನು ಮೂಡಿಸಿದೆ.