Viral Video: ʼಮ್ಯಾಗಿ ಚಹಾʼ ನೋಡಿ ಮುಖ ಕಿವುಚಿಕೊಂಡ ನೆಟ್ಟಿಗರು; ವಿಡಿಯೊ ಇಲ್ಲಿದೆ
ಮ್ಯಾಗಿ ನೂಡಲ್ಸ್ ಅನ್ನು ಚಹಾಗೆ ಮಿಕ್ಸ್ ಮಾಡಿದ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೊ ಕಂಡು ಚಹಾ ಮತ್ತು ಮ್ಯಾಗಿ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಈ ಚಹಾಕ್ಕೆ ಮ್ಯಾಗಿ ಚಹಾ ಎಂದು ಕರೆಯಲಾಗಿದೆ.


ಹೊಸದಿಲ್ಲಿ: ಸೋಶಿಯಲ್ ಮಿಡಿಯಾದಲ್ಲಿ ಆಹಾರಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳು ಆಗಾಗ ಹರಿದಾಡುತ್ತಿರುತ್ತವೆ. ಈ ಹಿಂದೆ ಮ್ಯಾಗಿ ನೂಡಲ್ಸ್‌ಗೆ ಕಾಫಿ, ಕೊಕೊಕೋಲಾ ಮಿಕ್ಸ್ ಮಾಡಿ ತಯಾರಿಸಿದ ಅನೇಕ ವಿಲಕ್ಷಣದ ವಿಡಿಯೊಗಳು ವೈರಲ್ ಆಗಿದ್ದವು. ಇದೀಗ ಮ್ಯಾಗಿ ನೂಡಲ್ಸ್ ಅನ್ನು ಚಹಾಗೆ ಮಿಕ್ಸ್ ಮಾಡಿದ ವಿಡಿಯೊ ವೈರಲ್ (Viral Video) ಆಗಿದೆ. ಈ ವೈರಲ್ ವಿಡಿಯೊ ಕಂಡು ಚಹಾ ಮತ್ತು ಮ್ಯಾಗಿ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಅನೇಕರು ಕಾಮೆಂಟ್ ಮೂಲಕ ತಮ್ಮ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.
ಈ ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಒಂದು ಕಪ್ ಚಹಾಕ್ಕೆ ನೂಡಲ್ಸ್ ಸೇರಿಸುವುದನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಹಾರ ಪ್ರಯೋಗಗಳ ಬಗ್ಗೆ ಜನರು ಆಘಾಗೊಂಡಿದ್ದಾರೆ. ಒಬ್ಬ ವ್ಯಕ್ತಿಯು ಮಣ್ಣಿನ ಕಪ್‍ಗೆ ಬಿಸಿ ಚಹಾವನ್ನು ಸುರಿದು ನಂತರ ಆ ಚಹಾದ ಕಪ್‌ಗೆ ಬೇಯಿಸಿದ ಮ್ಯಾಗಿಯನ್ನು ಫೋರ್ಕ್‍ನಲ್ಲಿ ತೆಗೆದುಕೊಂಡು ಹಾಕಿದ್ದಾನೆ. ಇದಕ್ಕೆ “ಮ್ಯಾಗಿ ಚಹಾ” ಎಂದು ಕರೆದಿದ್ದಾನೆ. ಆದರೆ ಈ ಚಹಾ ತೆಗೆದುಕೊಂಡ ಕಂಟೆಂಟ್ ಕ್ರಿಯೇಟರ್ ಅದನ್ನು ನೋಡಿ ಅಸಹ್ಯಪಟ್ಟು ಅದನ್ನು ಹಾಗೇ ಡಸ್ಟ್‌ಬಿನ್‌ಗೆ ಹಾಕಿದ್ದಾನೆ. ಈ ವಿಡಿಯೊದಲ್ಲಿ ಮ್ಯಾಗಿಗೆ ನ್ಯಾಯ ಒದಗಿಸಿ ಎಂದು ಬರೆಯಲಾಗಿದೆ. ಈ "ಮ್ಯಾಗಿ ಚಾಯ್" ರಸ್ತೆಬದಿಯ ಅಂಗಡಿಯಲ್ಲಿ ಲಭ್ಯವಿರುವ ನಿಜವಾದ ಖಾದ್ಯವೇ ಅಥವಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಮಾತ್ರ ಪ್ರದರ್ಶಿಸಲಾದ ವಿಷಯವೇ ಎಂಬುದು ಸ್ಪಷ್ಟವಾಗಿಲ್ಲ.
ನೂಡಲ್ಸ್‌ನೊಂದಿಗೆ ಚಹಾವನ್ನು ಮಿಕ್ಸ್ ಮಾಡುವ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾಗಿ ಮತ್ತು ಚಹಾ ಪ್ರಿಯರು ಮುಖ ಕಿವುಚಿಕೊಂಡಿದ್ದಾರೆ. "ದಯವಿಟ್ಟು ಮ್ಯಾಗಿಯನ್ನು ಹಾಗೇ ತಿನ್ನಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಮ್ಯಾಗಿಯನ್ನು ಚಹಾದೊಂದಿಗೆ ಪ್ರಯೋಗ ಮಾಡುವುದು ಅಗತ್ಯವೇ?" ಎಂದು ಇನ್ನೊಬ್ಬರು ಕೇಳಿದ್ದಾರೆ. "ಮ್ಯಾಗಿಗಾಗಿ ಹೋರಾಡಬೇಕೋ ಅಥವಾ ಚಹಾ ಕುಡಿಯಬೇಕೋ ನನಗೆ ಅರ್ಥವಾಗುತ್ತಿಲ್ಲ" ಎಂದು ನೆಟ್ಟಿಗರು ಬರೆದಿದ್ದಾರೆ.
ಈ ಹಿಂದೆ ಬೀದಿ ಬದಿ ವ್ಯಾಪಾರಿಯೊಬ್ಬರು ಕಾಫಿ ಮತ್ತು ಹಾಲಿನಿಂದ ಮ್ಯಾಗಿ ತಯಾರಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. 'ಎಚ್ಎನ್‌ವಿ ಸ್ಟ್ರೀಟ್ ಫುಡ್' ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಪಾತ್ರೆಯಲ್ಲಿ ಹಾಲನ್ನು ಕುದಿಸಿ ಅದಕ್ಕೆ ಮ್ಯಾಗಿ ನೂಡಲ್ಸ್ ಸೇರಿಸುತ್ತಿರುವುದನ್ನು ಸೆರೆಹಿಡಿಯಲಾಗಿತ್ತು. ಹಾಗೇ ಇದಕ್ಕೆ ಟೊಮೆಟೊ, ಕ್ಯಾರೆಟ್, ಈರುಳ್ಳಿ, ಕ್ಯಾಪ್ಸಿಕಂ, ಮ್ಯಾಗಿ ಮಸಾಲಾ, ಕಾಫಿ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸುತ್ತಾರೆ. ನಂತರ, ಅದನ್ನು ಬಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮಕ್ಕಳಂತೆ ಮ್ಯಾಗಿ ನೂಡಲ್ಸ್ ಸವಿದ ಶತಾಯುಷಿ ಅಜ್ಜಿ; ಹೃದಯಸ್ಪರ್ಶಿ ವಿಡಿಯೊ ವೈರಲ್
ಶತಾಯುಷಿ ಅಜ್ಜಿ ಮ್ಯಾಗಿ ನೂಡಲ್ಸ್‌ಗಾಗಿ ಆಸೆ ಪಟ್ಟು, ನಂತರ ಕೊನೆಗೆ ಮಕ್ಕಳಂತೆ ರಚ್ಚೆ ಹಿಡಿದು ಮನೆಯವರು ಬಳಿ ಹೇಳಿ ಮಾಡಿಸಿಕೊಂಡು ಸವಿದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕುಟುಂಬದ ಸದಸ್ಯರೊಬ್ಬರು ಅಜ್ಜಿಯು ಮ್ಯಾಗಿ ತಿನ್ನುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.