ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ದಿಲ್ಲಿ ಮೆಟ್ರೋದಲ್ಲಿ ಮತ್ತೆ ಜಗಳ; ಗುರಾಯಿಸಿ ನೋಡಿದ್ದಕ್ಕೆ ರೊಚ್ಚಿಗೆದ್ದ ಯುವತಿ!

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಯುವಕನೊಬ್ಬ ಯುವತಿಯನ್ನು ದಿಟ್ಟಿಸಿ ನೋಡಿದ್ದಕ್ಕೆ ಅವರಿಬ್ಬರ ನಡುವೆ ದೊಡ್ಡ ವಾದ ವಿವಾದವೇ ನಡೆದಿದೆ. ಇದನ್ನು ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಮೆಟ್ರೋದಲ್ಲಿ ಯುವತಿಯನ್ನು ಗುರಾಯಿಸಿ ನೋಡಿದ ಯುವಕನಿಗೆ ಕೊನೆಗೆ ಆಗಿದ್ದೇನು?

Profile pavithra Mar 1, 2025 2:52 PM

ನವದೆಹಲಿ: ದಿಲ್ಲಿ ಮೆಟ್ರೋ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಸುದ್ಧಿಯಾಗುತ್ತಿರುತ್ತದೆ. ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ನಡುವೆ ಜಗಳ, ವಾದ-ವಿವಾದಗಳು ನಡೆಯುತ್ತಲೇ ಇರುತ್ತದೆ. ಈ ಕುರಿತಾದ ವಿಡಿಯೊಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಯುವಕ ಹಾಗೂ ಯುವತಿಯ ನಡುವಿನ ಜಗಳದ ಸುದ್ದಿ ಹರಿದಾಡುತ್ತಿದೆ. ರೆಡ್ಡಿಟ್ ಬಳಕೆದಾರರೊಬ್ಬನು ಯುವತಿ ಮತ್ತು ಯುವಕನ ನಡುವಿನ ತಮಾಷೆಯ ಜಗಳವನ್ನು ಹಂಚಿಕೊಂಡಿದ್ದಾನೆ (Viral News). ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಯುವಕನೊಬ್ಬ ಯುವತಿಯನ್ನು ದಿಟ್ಟಿಸಿ ನೋಡಿದ್ದಕ್ಕೆ ದೊಡ್ಡ ಜಗಳವೇ ಆಗಿದೆ. ಯುವಕನೊಬ್ಬ ತನ್ನನ್ನು ದಿಟ್ಟಿಸುತ್ತಿರುವುದನ್ನು ಗಮನಿಸಿದ ಯುವತಿ, ”ನೀವು ಏನನ್ನು ನೋಡುತ್ತಿದ್ದೀರಿ? ನೀವು ಈ ಮೊದಲು ಹುಡುಗಿಯನ್ನು ನೋಡಿಲ್ಲವೇ?ʼʼ ಎಂದು ಕೇಳಿದ್ದಾಳೆ. ನಂತರ ಇದಕ್ಕೆ ಪ್ರತಿಕ್ರಿಯಿಸಿದ ಯುವಕ ತನ್ನನ್ನು ಸಮರ್ಥಿಸಿಕೊಂಡು, "ನಾನು ಸುತ್ತಲೂ ನೋಡುತ್ತಿದ್ದೆ, ನಿರ್ದಿಷ್ಟವಾಗಿ ನಿಮ್ಮನ್ನೆ ನೋಡಲಿಲ್ಲ“ ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಯುವತಿ ಒಪ್ಪಲಿಲ್ಲ. ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆಂದು ಭಾವಿಸಿ ಅವನಿಗೆ ಹೊಡೆದಿದ್ದಾಳೆ. "ಸುಳ್ಳು ಹೇಳಬೇಡಿ, ನೀವು ನನ್ನನ್ನು ದಿಟ್ಟಿಸಿ ನೋಡಿದ್ದಿರಿ. ನನ್ನನ್ನು ನೋಡುವ ಬದಲು ನಿಮ್ಮ ತಾಯಿ ಅಥವಾ ಸಹೋದರಿಯನ್ನು ನೋಡಿ” ಎಂದು ಬೈದಿದ್ದಾಳೆ.

ಈ ಗಲಾಟೆ ಜೋರಾಗಿ ಯುವಕ ಕೋಪಗೊಂಡು ಅವಳನ್ನೇ ದಿಟ್ಟಿಸಿ ನೋಡುತ್ತಾ"ನೋಡಿ, ನೀವು ಅಷ್ಟು ವಿಶೇಷವೆನಲ್ಲ. ನಾನು ನಿಮ್ಮನ್ನು ದಿಟ್ಟಿಸಿ ನೋಡುವಷ್ಟು ಅಪ್ಸರೆ ಅಲ್ಲ" ಎಂದಿದ್ದಾನೆ. ಅದಕ್ಕೆ ಯುವತಿ “ನಾನು ಅಪ್ಸರೆಯೇ, ನೀವು ಏನು ಮಾಡುತ್ತೀರಿ?” ಎಂದು ಕೇಳಿದ್ದಾಳೆ. ಅದಕ್ಕೆ ಯುವಕ “ನೀವು ಅಪ್ಸರೆಯಾಗಿದ್ದರೆ, ಸ್ವರ್ಗಕ್ಕೆ ಹೋಗಿ” ಎಂದಿದ್ದಾನೆ. ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇವರ ಜಗಳ ನೋಡಿ ನಕ್ಕಿದ್ದಾರೆ ಎನ್ನಲಾಗಿದೆ.

ಇದು ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಜನರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ದಿಲ್ಲಿ ಮೆಟ್ರೋ ನಮ್ಮನ್ನು ಬೆರಗುಗೊಳಿಸಲು ಎಂದಿಗೂ ವಿಫಲವಾಗುವುದಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮೆಟ್ರೋದಲ್ಲಿ ಯುವತಿಗೆ ಬಾಡಿ ಶೇಮಿಂಗ್‌ ಮಾಡಿದ ಮಹಿಳೆ; ವಿಡಿಯೊ ವೈರಲ್

ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ನಡುವೆ ಈ ರೀತಿಯಲ್ಲಿ ಜಗಳವಾಗಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಮಧ್ಯವಯಸ್ಸಿನ ಮಹಿಳಾ ಪ್ರಯಾಣಿಕಳೊಬ್ಬಳು ಬಾಡಿ ಶೇಮಿಂಗ್‌ ಮಾಡಿದ ಘಟನೆಯೊಂದು ನಡೆದಿತ್ತು. ನೋಡುವುದಕ್ಕೆ ಸ್ವಲ್ಪ ದಪ್ಪಗಿದ್ದ ಯುವತಿಗೆ ಮಹಿಳೆಯೊಬ್ಬಳು ನೀವು 50 ವರ್ಷದ ಮುದುಕಿಯಂತೆ ಕಾಣುತ್ತಿದ್ದಿಯಾ ಎಂದು ಅವಮಾನಿಸಿದ್ದಾಳೆ. 20 ವರ್ಷದ ಯುವತಿ ಮೆಟ್ರೋದಲ್ಲಿ ಚಿಪ್ಸ್‌ ತಿಂದ ಹುಡುಗಿಯೊಬ್ಬ ಪರವಾಗಿ ಮಾತನಾಡಿದ್ದಕ್ಕೆ ಮಹಿಳೆ ಸಿಟ್ಟಾಗಿ ಈಕೆಯ ಮೇಲೆ ಹರಿಹಾಯ್ದಿದ್ದಾಳೆ. ಕೊನೆಗೆ ಸಹಪ್ರಯಾಣಿಕರೊಬ್ಬರು ಮದ್ಯಪ್ರವೇಶಿಸಿ ಈ ರೀತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.