Mono Diet: ಮೊನೊ ಡಯೆಟ್ ಆರೋಗ್ಯಕ್ಕೆ ಒಳ್ಳೆಯದಾ? ಇದರ ಸೈಡ್ ಇಫೆಕ್ಟ್ ಏನು?
ತೂಕ ಇಳಿಸುವ ಸಲುವಾಗಿ ಕಡಿಮೆ ಆಹಾರ ಸೇವನೆ, ಡಯೆಟ್, ವರ್ಕೌಟ್ ವ್ಯಾಯಾಮ, ವಾಕಿಂಗ್ ಎಂದು ತೂಕ ಇಳಿಕೆಗೆ ಹರಸಾಹಸ ಪಡುವವರು ಇದ್ದಾರೆ. ಇದರ ಜೊತೆ ತೂಕ ನಷ್ಟಕ್ಕೆ ಅನೇಕ ವಿಧಾನ ಬಳಸಿ ಸಾಕಾಗಿ ಕೊನೆಗೆ ಮೊನೊ ಡಯೆಟ್‌ನತ್ತ ಮುಖ ಮಾಡುವವರು ಅನೇಕರಿದ್ದಾರೆ.ಆದರೆ ಇದು ನಿಜವಾಗಿಯೂ ದೇಹಕ್ಕೆ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯೇ?


ನವದೆಹಲಿ: ಅತಿಯಾದ ಬೊಜ್ಜಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕಾಡು ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ. ಹಾಗಾಗಿ ತೂಕ ಇಳಿಸುವ ಸಲುವಾಗಿ ಕಡಿಮೆ ಆಹಾರ ಸೇವನೆ, ಡಯೆಟ್, ವರ್ಕೌಟ್ , ವ್ಯಾಯಾಮ, ವಾಕಿಂಗ್ ಎಂದು ತೂಕ ಇಳಿಕೆಗೆ ಹರ ಸಾಹಸ ಪಡುವವರು ಇದ್ದಾರೆ. ಇದರ ಜೊತೆ ತೂಕ ನಷ್ಟಕ್ಕೆ ಅನೇಕ ವಿಧಾನ ಬಳಸಿ ಸಾಕಾಗಿ ಕೊನೆಗೆ ಮೊನೊ ಡಯೆಟ್(Mono Diet)ನತ್ತ ಮುಖ ಮಾಡುವವರು ಅನೇಕರಿದ್ದಾರೆ. ಆದರೆ ಇದು ನಿಜವಾಗಿಯೂ ದೇಹದ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯೇ? ಎಂಬ ಬಗ್ಗೆ ಅನೇಕರಿಗೆ ಗೊಂದಲಗಳಿದ್ದು ಈ ಕುರಿತಾದ ಮಾಹಿತಿ ಇಲ್ಲಿದೆ.
ಮೊನೊ ಡಯೆಟ್ ಎಂದರೇನು?
ಮೊನೊ ಡಯಟ್ ಒಂದು ಥರದ ಪಥ್ಯದಂತೆ. ಇದರಲ್ಲಿ ಒಂದೇ ರೀತಿಯ ಆಹಾರ ಅಥವಾ ಬಹಳ ಸೀಮಿತ ಆಹಾರಗಳನ್ನು ಸೇವಿಸುವುದು,ಅಂದರೆ ತೂಕ ಇಳಿಸುವ ಸಲುವಾಗಿ ಏಕ ಪ್ರಕಾರದ ಆಹಾರವನ್ನು ಮಾತ್ರವೇ ಸೇವನೆ ಮಾಡುವುದು ಮೊನೊ ಡಯೆಟ್ ಆಗಿದೆ. ಪ್ರತೀ ಊಟಕ್ಕೆ ಅಥವಾ ದಿನಕ್ಕೆ ಒಂದು ತರನಾದ ಆಹಾರವನ್ನು ಮಾತ್ರವೇ ಸೇವಿಸುವುದಾಗಿದೆ. ಹೆಚ್ಚಾಗಿ ಈ ಡಯೆಟ್ಅನ್ನು ಸೆಲೆಬ್ರಿಟಿಗಳು ಪಾಲಿಸುತ್ತಾರೆ. ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮೊನೊ ಡಯೆಟ್ ಫಾಲೋ ಮಾಡಿದ್ದು ಅವರ ದೇಹ ಸದೃಢವಾಗಿದೆ. ಹಾಗಾಗಿ ತಮ್ಮ ಸೆಲೆಬ್ರಿಟಿಗಳ ಡಯೆಟ್ ಫಾಲೋ ಮಾಡುವ ಅನೇಕರು ಮೊನೊ ಡಯೆಟ್ ಬಗ್ಗೆ ಒಲವು ಹೊಂದಿದ್ದಾರೆ. ಆದರೆ ಇದನ್ನೇ ಪಾಲಿಸಿ ಬಂದ ಅನೇಕ ಜನರಿಗೆ ಆರೋಗ್ಯಕ್ಕೆ ಸಮಸ್ಯೆ ಆಗಿದ್ದು ವೈದ್ಯರು ಕೂಡ ದೇಹ ಸ್ಥಿತಿಗೆ ಅನುಗುಣವಾಗಿಯೇ ಮೊನೊ ಡಯೆಟ್ ಮಾಡಬಹುದು ಎಂಬ ಸಲಹೆ ನೀಡುತ್ತಿದ್ದಾರೆ
ಯಾವೆಲ್ಲ ಆಹಾರ ಸೇರಿದೆ?
ಒಂದು ದಿನಕ್ಕೆ ಏಕ ಪ್ರಕಾರದ ಆಹಾರ ಮಾತ್ರ ಸೇವಿಸುವ ಈ ಒಂದು ಮೊನೊ ಡಯೆಟ್ ನಲ್ಲಿ ಅನೇಕ ಆಹಾರಗಳನ್ನು ಸೇವಿಸಬಹುದು. ಕುಚ್ಚಲಕ್ಕಿ, ಬಾಳೆಹಣ್ಣು, ಆಲೂಗಡ್ಡೆ, ಮೊಟ್ಟೆ, ವಿವಿಧ ಹಣ್ಣುಗಳು, ಎಲೆಕೋಸು, ಚಿಕನ್, ಹಾಲು, ಮೊಳಕೆ ಕಾಳು, ಡ್ರೈಫ್ರುಟ್ಸ್ ಸೇವಿಸಬಹುದು. ಉದಾಹರಣೆಗೆ ಅನೇಕ ವಾರಗಳ ತನಕವು ಹಾಲು, ಮೊಟ್ಟೆ , ಸೇಬು ಮಾತ್ರವೇ ಸೇವಿಸುವುದು ಬೇರೆ ಯಾವುದೇ ಆಹಾರ ಸೇವಿಸದೇ ಇರುವುದು. ಅತೀ ಕಡಿಮೆ ಅವಧಿಯಲ್ಲಿ ದೇಹದ ತೂಕ ಇಳಿಸುವ ನೆಲೆಯಲ್ಲಿ ಮೊನೊ ಡಯೆಟ್ ಬಹಳ ಪರಿಣಾಮಕಾರಿಯಾಗಿರುತ್ತದೆ ಎಂದು ತಜ್ಞರು ಶಿಫಾರಸ್ಸು ಮಾಡಿದ್ದರು ಇದರಿಂದಾಗಿ ಅನೇಕ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಸಹ ಇದೆ.
ಈ ಎಲ್ಲ ಆರೋಗ್ಯ ಸಮಸ್ಯೆ ಬರಬಹುದು:
- ಒಂದೇ ರೀತಿಯ ಆಹಾರ ಕ್ರಮ ದೇಹದ ಎಲ್ಲ ಭಾಗಗಳಿಗೆ ಅಗತ್ಯ ಪೋಷಕಾಂಶ ನೀಡುವುದು ಬಹಳ ವಿರಳ ಎನ್ನಬಹುದು. ಹಾಗಾಗಿ ಆಯಾಸ, ಜಡತ್ವ, ದೀರ್ಘಕಾಲದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.
- ಏಕ ಪ್ರಕಾರದ ಆಹಾರ ಕ್ರಮದಿಂದ ದೇಹದ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಆಗಲಿದೆ ಹಾಗಾಗಿ ಸ್ನಾಯುಗಳ ಆರೋಗ್ಯ ಸ್ಥಿತಿ ಹದಗೆಡುವ ಸಾಧ್ಯತೆ ಇದೆ.
- ಒಂದು ತರಹದ ಆಹಾರ ಮಾತ್ರ ಸೇವಿಸಿದಾಗ ಕೆಲವೊಮ್ಮೆ ಅದೇ ಅಧಿಕ ಪೋಷಕಾಂಶಕ್ಕೆ ಕಾರಣವಾಗಿ ತೂಕ ಇಳಿಕೆ ಆಗದಿರುವ ಸಾಧ್ಯತೆ ಇದೆ.
ಇದನ್ನು ಓದಿ: India First Life: ಮೂರು ತಿಂಗಳಲ್ಲಿ 18 ಶಾಖೆ ಗಳನ್ನು ಪ್ರಾರಂಭಿಸಿದ ʻಇಂಡಿಯಾ ಫಸ್ಟ್ ಲೈಫ್ʼ
- ಒಂದೇ ರೀತಿಯ ಆಹಾರ ತುಂಬಾ ದಿನ ಸೇವಿಸುವುದರಿಂದ ಅಸ್ವಸ್ಥತೆ ಸಮಸ್ಯೆ ಕಾಡುವ ಸಾಧ್ಯತೆ ಇದೆ.
- ಮೊನೊ ಡಯೆಟ್ ಅನುಸರಿಸುವವರಿಗೆ ಮಾನಸಿಕ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ನಮಗಿಷ್ಟದ ಆಹಾರ ಸೇವಿಸುವಂತಿಲ್ಲ, ಬಾಯಿಗೆ ರುಚಿ ಇಲ್ಲ ಎಂಬ ಅನೇಕ ಮನೋರೋಗಗಳು ಉಲ್ಬಣಿಸುವ ಸಾಧ್ಯತೆ ಇದೆ.
- ಒಂದೇ ತರನಾದ ಆಹಾರ ಅತಿಯಾಗಿ ಸೇವಿಸುವುದರಿಂದ ದೇಹದ ತೂಕ ಏರಿಕೆ ಆಗುವ ಸಾಧ್ಯತೆ ಇದೆ.
ಈ ವಿಚಾರ ಗಮನಿಸಿ:
ಕೆಲವು ಸೆಲೆಬ್ರಿಟಿಗಳು ಮೊನೊ ಡಯೆಟ್ ಕ್ರಮ ಅನುಸರಿಸಿದರೂ ಅವರ ಆಹಾರ ದೇಹದ ಕಾರ್ಯಚಟುವಟಿಕೆಗೆ ಸಂಬಂಧ ಪಟ್ಟಂತೆ ತಜ್ಞರ ಹಾಗೂ ವೈದ್ಯಕೀಯ ಸಲಹೆ ಮೇರೆಗೆ ಪಾಲಿಸುತ್ತಾರೆ. ಹಾಗಾಗಿ ಯಾರಾದರು ಮೊನೊ ಡಯೆಟ್ ಪ್ರಯತ್ನ ಪಡುವ ಮೊದಲು ನಿಮ್ಮ ದೇಹ ಸ್ಥಿತಿ ಅರ್ಥೈಸಿ ವೈದ್ಯಕೀಯ ಸಲಹೆ ಮೆರೆಗೆ ಡಯೆಟ್ ಅನುಕರಣೆ ಮಾಡಿದರೆ ಯಾವುದೇ ಸಮಸ್ಯೆ ಬರಲಾರದು.