ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಇದು ದಕ್ಷಿಣದ ದೋಸೆ ಮತ್ತು ಮಧ್ಯಪ್ರಾಚ್ಯದ ಕುನಾಫದ 'ದೋಸ್ತಿ' -ಈ ಫುಡ್ ಫ್ಯೂಶನ್ ಫುಲ್‌ ವೈರಲ್‌

ಸೋಷಿಯಲ್ ಮೀಡಿಯಾದಲ್ಲಿ ಪ್ರತೀದಿನ ಹೊಸ ಹೊಸ ಫುಡ್ ಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತಿವೆ. ಅಂತದ್ದೇ ಒಂದು ಫ್ಯೂಸನ್ ಡಿಶ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಇದರ ಹೆಸರು ಕುನಾಫಾ ದೋಸೆ.

ಎಂದಾದರೂ ಚಾಕೊಲೇಟ್​​ ಪಿಸ್ತಾ ದೋಸೆ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಕುನಾಫಾ ದೋಸೆ

Profile Sushmitha Jain Jan 24, 2025 3:23 PM

ಮುಂಬಯಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತೀದಿನ ಹೊಸ ಹೊಸ ಫುಡ್ ಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತಿವೆ. ಅಂತದ್ದೇ ಒಂದು ಫ್ಯೂಸನ್ ಡಿಶ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ನೀವು ಪಿಸ್ತಾಚಿಯೋ ಕುನಾಫಾ ಚಾಕೊಲೇಟ್ ನ ಸ್ವಾದವನ್ನು ಸವಿಯಲೆಂದೇ ದುಬಾಯಿ ಪ್ರವಾಸದ ಯೋಜನೆ ಹಾಕಿಕೊಂಡಿದ್ದರೆ ಈ ಸುದ್ದಿಯನ್ನೊಮ್ಮೆ ಓದಲೇಬೇಕು. ನಮ್ಮಲ್ಲಿ ಇದರ ದೋಸೆ ಆವೃತ್ತಿ ಬಂದಿದೆ! ಸಂಗೀತದಲ್ಲಿ ಫ್ಯೂಶನ್ ಕಾರ್ಯಕ್ರಮಗಳನ್ನ ನೀವು ನೋಡಿರುತ್ತೀರಿ. ಇದೀಗ ಫುಡ್ ನಲ್ಲೂ ಫ್ಯೂಶನ್ ಟ್ರೆಂಡ್ ಪ್ರಾರಂಭಗೊಂಡಿದೆ.

ಇದೀಗ ಫುಡ್ ಫ್ಯೂಶನ್ ನಲ್ಲಿ ಫುಲ್ ಟ್ರೆಂಡಿಂಗ್ ನಲ್ಲಿರುವುದು 'ಕುನಾಫಾ ದೋಸೆ'. ಮುಂಬಯಿಯಲ್ಲಿ ಈ ದೋಸೆ ಇದೀಗ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ದೇಶಾದ್ಯಂತ ಸಾವಿರಾರು ಫುಡ್ ಸಂಬಂಧಿತ ರೀಲ್ ಗಳು ಫೇಮಸ್ ಆಗುತ್ತಿರುವ ನಡುವೆ ಈ ಕುನಾಫಾ ದೋಸೆ ಅವೆಲ್ಲವನ್ನೂ ಮೀರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

ಐಸ್ ಕ್ರೀಂ ಮತ್ತು ದೋಸೆ ದೋಸ್ತ್ ಮಾಡಿಕೊಂಡು ತಯಾರಾಗಿರುವ ಈ ವಿಶೇಷ ಡಿಶ್ ತಯಾರಿಸುವ ವಿಡಿಯೋ ಇದೀಗ ದೋಸೆ ಮತ್ತು ಐಸ್ ಕ್ರೀಂ ಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ. ಈ ದೋಸೆಯನ್ನು ಬೇರೆ ಬೇರೆ ಚಟ್ನಿಗಳೊಂದಿಗೆ, ಮಧ್ಯಪ್ರಾಚ್ಯದ ಕುನಾಫದ ಸವಿಯೊಂದಿಗೆ ಸರ್ವ್ ಮಾಡಲಾಗುತ್ತದೆ. ಅಲ್ಲಿಗೆ ದಕ್ಷಿಣ ಭಾರತದ ದೋಸೆ ಮತ್ತು ಮಧ್ಯಪ್ರಾಚ್ಯದ ಕುನಾಫಾ 'ದೋಸ್ತಿ' ಮಾಡಿಕೊಂಡಂತಾಗಿದೆ. ಇಲ್ಲಿ ದೋಸೆಯೊಂದಿಗೆ ಕುನಾಫಾ ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ಹರಡಿ ಈ ವಿಶೇಷ ಫ್ಯೂಶನ್ ಡಿಶ್ ತಯಾರಿಸಲಾಗುತ್ತದೆ.

ಈ ಸುದ್ದಿಯನ್ನು ಓದಿ: Viral Video: ಪ್ಲೀಸ್‌ ಬಿಟ್ಬಿಡಿ ಸರ್... ವಾಪಸ್‌ ಬರ್ತಾ ಸ್ವೀಟ್‌ ತರುತ್ತೀನಿ....ಟ್ರಾಫಿಕ್‌ ಪೊಲೀಸ್‌ಗೆ ವಧುವಿನ ಮನವಿ

ಈ ಸ್ಪೆಷಲ್ ಡಿಶ್ ವಿಡಿಯೋವನ್ನು ರೋನಕ್ ರಾಥೋಡ್ ಎಂಬ ಫುಡ್ ವ್ಲೋಗರ್ ತನ್ನ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿAಗ್ ಆಗಿದೆ.

ಈ ವಿಡಿಯೋದಲ್ಲಿರುವಂತೆ ದೋಸೆ ಮೇಕರ್ ತುಪ್ಪ ಸವರಿದ ದೋಸೆಗೆ ಚಾಕೊಲೇಟ್ ಸಿರಪ್ ಮತ್ತು ಶ್ಯಾವಿಗೆಯನ್ನು ಹರಡುತ್ತಿರುವುದನ್ನು ಕಾಣಬಹುದು. ಮೊದಲಿಗೆ ದೋಸೆಯನ್ನು ತವಾದ ಮೇಲೆ ಹರಡಿ ಬಳಿಕ ಅದಕ್ಕೆ ತುಪ್ಪವನ್ನು ಸವರಿ ನಂತರ ಅದರ ಮೇಲೆ ಯಮ್ಮಿ ಕುನಾಫಾದ ಚಿತ್ತಾರವನ್ನು ಬಿಡಿಸುತ್ತಾರೆ. ಬಳಿಕ ತುಪ್ಪ, ಲಿಕ್ವಿಡ್ ಚಾಕೊಲೇಟ್ ಹಾಗೂ ಪಿಸ್ತಾಚಿಯೋ ಪೇಸ್ಟ್ ಗಳನ್ನು ದೋಸೆ ಮೇಲೆ ಹರಡುತ್ತಾರೆ. ಬಳಿಕ ಶ್ಯಾವಿಗೆ ಸ್ಟಿಕ್ ಗಳನ್ನು ಸೇರಿಸುತ್ತಾರೆ.

ಬಳಿಕ, ಆ ಕುನಾಫ ದೋಸೆಯನ್ನು ಸಣ್ಣ ತುಂಡುಗಲಾಗಿ ಕತ್ತರಿಸಿ 'ಕುನಾಫ ದೋಸೆ'ಯನ್ನು ಸರ್ವ್ ಮಾಡುತ್ತಾರೆ. ದೋಸೆಯನ್ನು ಮಡಚಿ ಸಣ್ಣದಾಗಿ ತುಂಡುಗಳನ್ನಾಗಿ ಮಾಡಿದ ಬಳಿಕ ಅದರ ಮೇಲ್ಭಾಗಕ್ಕೆ ಚಾಕೊಲೇಟ್ ಸಾಸ್ ಹಾಗೂ ಪಿಸ್ತಾಚಿಯೋ ಸಿರಪ್ ಸುರಿಯುವ ಮೂಲಕ ಇದನ್ನು ಇನ್ನಷ್ಟು ಯಮ್ಮಿ ಮಾಡಲಾಗಿದೆ. ಈ ರೀತಿಯಾಗಿ ಫ್ಯೂಶನ್ ಡಿಶ್ ನಿಮಗೆ ಇಷ್ಟವಾಗುತ್ತದೆಯೇ? ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ