ಕೊಹ್ಲಿ 50 ರನ್ ಬಾರಿಸಿದರೆ ಪತನಗೊಳ್ಳಲಿದೆ ಮೂರು ದಿಗ್ಗಜ ಆಟಗಾರರ ದಾಖಲೆ
ಕೊಹ್ಲಿ ಕಿವೀಸ್ ವಿರುದ್ಧ 50 ಪ್ಲಸ್ ಮೊತ್ತ ಪೇರಿಸಿದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 6 ಫಿಫ್ಟಿ ಪ್ಲಸ್ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.


ದುಬೈ: ಕಳೆದ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ(champions trophy) ಪಂದ್ಯದಲ್ಲಿ ಶತಕ ಬಾರಿಸಿ ಹಲವು ದಾಖಲೆ ಬರೆದಿದ್ದ ವಿರಾಟ್ ಕೊಹ್ಲಿ(Virat Kohli) ಇದೀಗ ಮಾರ್ಚ್ 2 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್(IND vs NZ) ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಉತ್ತಮ ಇನ್ನಿಂಗ್ಸ್ ಆಡಿದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಲವು ದಾಖಲೆಗಳನ್ನು ಮುರಿಯಬಹುದು.
ಕೊಹ್ಲಿ ಕಿವೀಸ್ ವಿರುದ್ಧ 50 ಪ್ಲಸ್ ಮೊತ್ತ ಪೇರಿಸಿದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 6 ಫಿಫ್ಟಿ ಪ್ಲಸ್ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದೊಮ್ಮೆ ಕೊಹ್ಲಿ ನ್ಯೂಜಿಲ್ಯಾಂಡ್ ಎದುರು 50 ಪ್ಲಸ್ ಮೊತ್ತ ದಾಖಲಿಸಿದರೆ, ಶಿಖರ್ ಧವನ್(6), ಸೌರವ್ ಗಂಗೂಲಿ(6), ರಾಹುಲ್ ದ್ರಾವಿಡ್(6) ದಾಖಲೆ ಮುರಿಯಲಿದ್ದಾರೆ.
ಕೊಹ್ಲಿ ನ್ಯೂಜಿಲ್ಯಾಂಡ್ ಪಂದ್ಯದಲ್ಲಿ 85 ರನ್ ಬಾರಿಸಿದರೆ, ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರೈಸಿದ ವಿಶ್ವದ 5ನೇ ಹಾಗೂ ಭಾರತದ ಎರಡನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ ಕಿವೀಸ್ ವಿರುದ್ಧ ಇದುವರೆಗೆ 55 ಪಂದ್ಯಗಳಿಂದ 47.01 ಸರಾಸರಿಯಲ್ಲಿ ಒಂಬತ್ತು ಶತಕಗಳು ಮತ್ತು 15 ಅರ್ಧ ಶತಕಗಳೊಂದಿಗೆ 2915* ರನ್ ಗಳಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊಹ್ಲಿ ಕೊನೆಯ ಬಾರಿಗೆ ಕಿವೀಸ್ ವಿರುದ್ಧ ಏಕದಿನ ಪಂದ್ಯವನ್ನಾಡಿದ್ದರು. ಆ ಪಂದ್ಯದಲ್ಲಿ 117 ರನ್‌ಗಳನ್ನು ಗಳಿಸಿದ್ದರು.
ನ್ಯೂಜಿಲ್ಯಾಂಡ್ ವಿರುದ್ಧ ಅತ್ಯಧಿಕ ರನ್(ಮೂರು ಮಾದರಿಯ ಕ್ರಿಕೆಟ್‌ನಲ್ಲಿ) ಗಳಿಸಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್(3345) ಹೆಸರಿನಲ್ಲಿದೆ. ಆ ಬಳಿಕ ರಿಕಿ ಪಾಂಟಿಂಗ್(3145), ಜಾಕ್ ಕ್ಯಾಲಿಸ್(3071) ಮತ್ತು ಜೋ ರೂಟ್( 3068) ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ IND vs PAK: ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಬಗ್ಗೆ ಗವಾಸ್ಕರ್ ಹೇಳಿದ್ದೇನು?
ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 105 ರನ್ ಬಾರಿಸಿದರೆ ಏಕದಿನ ಮಾದರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅತ್ಯಧಿಕ ರನ್ ಕಲೆ ಹಾಕಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಸಚಿನ್ ಹೆಸರಿನಲ್ಲಿದೆ. ಸಚಿನ್ 42 ಪಂದ್ಯಗಳಿಂದ ಐದು ಶತಕ ಮತ್ತು ಎಂಟು ಅರ್ಧ ಶತಕಗಳೊಂದಿಗೆ 1750 ರನ್ ಗಳಿಸಿ ದಾಖಲೆ ಹೊಂದಿದ್ದಾರೆ. ಒಟ್ಟಾರೆಯಾಗಿ, ರಿಕಿ ಪಾಂಟಿಂಗ್ 51 ಪಂದ್ಯಗಳಿಂದ 1971 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಅವರು ಗುರುವಾರ ಸ್ಪಿನ್ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಆಡಿ ಅಭ್ಯಾಸ ನಡೆಸಿದ್ದರು. ತಂಡದಲ್ಲಿರುವ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜ ಅವರ ಬೌಲಿಂಗ್ ಎದುರು ಕೊಹ್ಲಿ ಅಭ್ಯಾಸ ಮಾಡಿದ್ದರು.