ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Virat Kohli: ಪಾಕಿಸ್ತಾನದಲ್ಲೂ ಕೊಹ್ಲಿಯ ಶತಕ ಸಂಭ್ರಮಿಸಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ

ಇಸ್ಲಾಮಾಬಾದ್‌ನಲ್ಲಿ ದೊಡ್ಡ ಪರದೆಯೊಂದರಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಲ್ಲಿನ ಅಭಿಮಾನಿಗಳು ಕೊಹ್ಲಿಗೆ ಶತಕ ಬಾರಿಸಲು ನಾಲ್ಕು ರನ್‌ ಬೇಕಿದ್ದಾಗ ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಕೊಹ್ಲಿ ಬೌಂಡರಿ ಮೂಲಕ ಶತಕ ಪೂರ್ತಿಗೊಳಿಸುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಚೀರಾಡಿ ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದರು. ಮಹಿಳೆಯರು ಮಕ್ಕಳು ಸೇರಿದಂತೆ ದೊಡ್ಡ ಅಭಿಮಾನಿ ಬಳಗವೇ ಅಲ್ಲಿ ನೆೆರೆದಿತ್ತು.

Virat Kohli: ಪಾಕಿಸ್ತಾನದಲ್ಲೂ ಕೊಹ್ಲಿಯ ಶತಕ ಸಂಭ್ರಮಿಸಿದ ಅಭಿಮಾನಿಗಳು

Profile Abhilash BC Feb 24, 2025 11:13 AM

ಕರಾಚಿ: ಭಾರತ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli)ಗೆ ಪಾಕಿಸ್ತಾನದಲ್ಲಿಯೂ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಪಾಕ್‌(IND vs PAK) ವಿರುದ್ಧ ಭಾರತ ಪಂದ್ಯ ಇದ್ದಾಗ ಈ ಅಭಿಮಾನದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಪಾಕ್‌ ತಂಡಕ್ಕಿಂತ ಕೊಹ್ಲಿಗೆ, ಅಲ್ಲಿನ ಅಭಿಮಾನಿಗಳು ಬೆಂಬಲ ಸೂಚಿಸುತ್ತಾರೆ. ಇಂತಹ ಹಲವು ನಿದರ್ಶನಗಳನ್ನು ಈಗಾಗಲೇ ಕಂಡಿದ್ದೇವೆ. ಭಾನುವಾರ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ಕೊಹ್ಲಿಯ ಈ ಶತಕವನ್ನು ಪಾಕಿಸ್ತಾನ ಲಾಹೋರ್‌ ಸೇರಿದಂತೆ ಹಲವೆಡೆ ಸಂಭ್ರಮಿಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral video) ಆಗಿದೆ.

ಇಸ್ಲಾಮಾಬಾದ್‌ನಲ್ಲಿ ದೊಡ್ಡ ಪರದೆಯೊಂದರಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಲ್ಲಿನ ಅಭಿಮಾನಿಗಳು ಕೊಹ್ಲಿಗೆ ಶತಕ ಬಾರಿಸಲು ನಾಲ್ಕು ರನ್‌ ಬೇಕಿದ್ದಾಗ ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಕೊಹ್ಲಿ ಬೌಂಡರಿ ಮೂಲಕ ಶತಕ ಪೂರ್ತಿಗೊಳಿಸುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಚೀರಾಡಿ ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದರು. ಮಹಿಳೆಯರು ಮಕ್ಕಳು ಸೇರಿದಂತೆ ದೊಡ್ಡ ಅಭಿಮಾನಿ ಬಳಗವೇ ಅಲ್ಲಿ ನೆೆರೆದಿತ್ತು.



ಪಂದ್ಯದ ಬಳಿಕ ಮಾತನಾಡಿದ ಪಾಕ್‌ ಅಭಿಮಾನಿಯೊಬ್ಬ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋತ ಬೇಸರವಿದ್ದರೂ ವಿರಾಟ್‌ ಕೊಹ್ಲಿ ಶತಕ ಬಾರಿಸಿದ್ದು ಸೋಲಿನ ನೋವನ್ನು ಮರೆಸುವಂತೆ ಮಾಡಿತು. ಅವರು ಭಾರತೀಯನಾಗಿದ್ದರೂ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದು ಕೊಹ್ಲಿಯನ್ನು ಶ್ಲಾಘಿಸಿದರು.



ವಿರಾಟ್‌ ಕೊಹ್ಲಿ(Virat Kohli) ಈ ಪಂದ್ಯದಲ್ಲಿ ತೋರಿದ ಕ್ರೀಡಾಸ್ಪೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿರೋಧಿ ತಂಡ, ತಾನೊಬ್ಬ ಸ್ಟಾರ್‌ ಆಟಗಾರ ಎನ್ನುವ ಯಾವುದೇ ಅಹಂ ತೋರದ ಕೊಹ್ಲಿ, ಪಾಕ್‌ ಯುವ ವೇಗಿ ನಸೀಮ್ ಶಾ ಅವರ ಬಿಚ್ಚಿದ ಶೂ ಲೇಸ್ ಕಟ್ಟುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದರು. ಪಂದ್ಯ ಆರಂಭಕ್ಕೂ ಮುನ್ನವೂ ಕೊಹ್ಲಿ ಪಾಕ್‌ ಆಟಗಾರರನ್ನು ಆಲಿಂಗಿಸಿ, ಕೈಲುಕಿ ಆತ್ಮೀಯವಾಗಿ ವರ್ತಿಸಿದರು.

ಇದನ್ನೂ ಓದಿ IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

ವಿರಾಟ್‌ ಕೊಹ್ಲಿ ಕ್ರೀಡಾಸ್ಪೂರ್ತಿ ಮೆರೆದರೂ ಪಾಕ್‌ ಆಟಗಾರರು ಮಾತ್ರ ತಮ್ಮ ಕುತಂತ್ರಿ ಬುದ್ಧಿಯನ್ನು ಮಾತ್ರ ಬಿಡಲಿಲ್ಲ. ಕೊಹ್ಲಿಗೆ ಶತಕ ತಪ್ಪಿಸುವ ನಿಟ್ಟಿನಲ್ಲಿಯೇ ಉದ್ದೇಶ ಪೂರ್ವಕವಾಗಿ ಸತತ ವೈಡ್‌ ಎಸೆತಗಳನ್ನು ಎಸೆದರು. ಆದರೂ ಕೊಹ್ಲಿ ಕೊನೆಗೆ ಶತಕ ಪೂರ್ತಿಗೊಳಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌ ಸೇರಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು.