Viral News: ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ; ಫ್ಲೈಟ್ ಸಿಬ್ಬಂದಿ ಹೇಳಿದ್ದೇನು?
ಮಹಿಳೆಯೊಬ್ಬಳು ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಸುದ್ದಿ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬ್ರಸೆಲ್ಸ್ ಏರ್‌ಲೈನ್ಸ್ ವಿಮಾನ ಈ ಅಪರೂಪದ ಘಳಿಗೆಗೆ ಸಾಕ್ಷಿಯಾಗಿದೆ. ಸದ್ಯ ತಾಯಿ-ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

baby birth in flight

ಹೊಸದಿಲ್ಲಿ: ಈ ಹಿಂದೆ ವಿಮಾನದಲ್ಲಿ ಜಗಳ ಆಡುವ, ಸಂಗೀತ ಹಾಡುವ, ನೃತ್ಯ ಮಾಡುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿವೆ. ಇತ್ತೀಚೆಗೆ ಬ್ರಸೆಲ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ವಿಮಾನದಲ್ಲಿ ಮಹಿಳೆಗೆ ತೀವ್ರ ಹೊಟ್ಟೆನೋವು ಶುರುವಾಗಿದೆ. ಆಗ ಆಕೆ ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದ್ದಾಳೆ. ಸಿಬ್ಬಂದಿಯೂ ವಿಮಾನದಲ್ಲಿದ್ದ ವೈದ್ಯರಿಗೆ ತಿಳಿಸಿ ಆಕೆಗೆ ಹೆರಿಗೆ ಮಾಡಿಸಿದ್ದಾರೆ. ಈ ವಿಚಾರವನ್ನು ಲಿಂಕ್ಡ್ಇನ್‍ನಲ್ಲಿ ವಿಮಾನಯಾನ ಸಂಸ್ಥೆ ಪೋಸ್ಟ್ ಮಾಡಿದೆ (Viral News). ಇದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಮಾಹಿತಿ ಪ್ರಕಾರ, ವಿಮಾನ ಸೆನೆಗಲ್‍ನ ಡಾಕರ್‌ನಿಂದ ಹೊರಟ ಸ್ವಲ್ಪ ಸಮಯದ ನಂತರ, ಎನ್ಡೆ ಎಂಬಾಕೆಗೆ ಹೊಟ್ಟೆನೋವು ಶುರುವಾಗಿದೆ. ಆಕೆ ಈ ವಿಚಾರವನ್ನು ಫ್ಲೈಟ್ ಅಟೆಂಡೆಂಟ್ ಜೆನ್ನಿಫರ್ ಜೋಯಿಗೆ ತಿಳಿಸಿದ್ದಾಳೆ. ನಂತರ ಜೆನ್ನಿಫರ್ ಕೂಡಲೇ ಪರಿಸ್ಥಿತಿಯನ್ನು ಅರಿತುಕೊಂಡು ತಕ್ಷಣ ವಿಮಾನದಲ್ಲಿದ್ದ ಡಾಕ್ಟರರಿಗೆ ತಿಳಿಸಿದ್ದಾಳೆ. ಆಗ ವಿಮಾನದಲ್ಲಿದ್ದ ವೈದ್ಯರು ಹಾಗೂ ನರ್ಸ್ ಸಹಾಯಕ್ಕೆ ಬಂದಿದ್ದಾರಂತೆ. ಕೊನೆಗೆ ಅವರು ಎನ್ಡೆ ಸುಲಭವಾಗಿ ಹೆರಿಗೆಯಾಗಲು ನೆರವಾದರು.
ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ʼʼಮಗು ಅಳುವ ಧ್ವನಿ ಇಡೀ ವಿಮಾನದಲ್ಲಿ ತುಂಬಿತ್ತು. ಅದು ಆ ಮಗುವಿನ ಮೊದಲ ಅಳುವಾಗಿತ್ತು” ಎಂದು ವಿಮಾನಯಾನ ಸಂಸ್ಥೆ ಲಿಂಕ್ಡ್ಇನ್‍ನ ಪೋಸ್ಟ್‌ನಲ್ಲಿ ಬರೆದಿದೆ. ಡಾಕಾರ್‌ನಲ್ಲಿ ಇಳಿಯುವಾಗ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದಿರುವುದು ಎಂದಿಗೂ ಮರೆಯಲಾಗದ ಕ್ಷಣ ಎಂದು ಜೆನ್ನಿಫರ್ ಹೇಳಿದ್ದಾಳೆ. ಈ ಪೋಸ್ಟ್ ವೈರಲ್ ಆಗಿದೆ.
ವಿಮಾನ ಸಿಬ್ಬಂದಿಯ ಈ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼʼತಂಡದ ಕೆಲಸ ಅದ್ಭುತವಾಗಿತ್ತು. ಮಗುವಿಗೆ ಸ್ವಾಗತ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಈಗ ಅದನ್ನೇ ನೀವು ಅನಿರೀಕ್ಷಿತ ಇನ್-ಫ್ಲೈಟ್ ಡೆಲಿವರಿ ಎಂದು ಕರೆಯುತ್ತೀರಿ!" ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Mahurat Deliveries: ಮುಹೂರ್ತಕ್ಕೆ ಸರಿಯಾಗಿ ಹೆರಿಗೆ! ಏನಿದು ಹೊಸ ಕ್ರೇಜ್- ವೈದ್ಯರು ಬಿಚ್ಚಿಟ್ಟ ಆ ಭಯಾನಕ ಸಂಗತಿ ಏನು?
ಮಗುವಿಗೆ ಜನ್ಮನೀಡುವುದು ಎಂದರೆ ತಂದೆ ತಾಯಿಗೆ ಸಂತಸದ ಕ್ಷಣ. ಅಲ್ಲದೇ ಜೀವನದ ಖುಷಿಯನ್ನು ಸಂಭ್ರಮಿಸುವ ಸುಂದರವಾದ ಘಳಿಗೆಯಾಗಿದ್ದು ಎಲ್ಲರೂ ಆ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವ (Mahurat Deliveries) ಕ್ರಮ ಟ್ರೆಂಡ್ ಆಗಿ ಬಿಟ್ಟಿದೆ. ಹಿಂದೆಲ್ಲ ಇದಕ್ಕೆ ಅವಕಾಶವಿರಲಿಲ್ಲ. ಇಂದು ತಂತ್ರಜ್ಞಾನ ಬಹಳ ಮುಂದುವರಿದಿದ್ದು ಮಗುವಿನ ಬಗ್ಗೆ ಸಂಪೂರ್ಣ ವಿಚಾರ ಗರ್ಭದಲ್ಲಿರುವಾಗಲೇ ತಿಳಿದುಕೊಳ್ಳವ ಅವಕಾಶ ಇದ್ದು, ಅದರ ಜತೆ ಮಗುವಿನ ಹೆರಿಗೆ ಇದೇ ಮುಹೂರ್ತದಲ್ಲಿ ಆಗಬೇಕು ಎಂದು ಪೋಷಕರೇ ವೈದ್ಯರಿಗಿಂತ ಮೊದಲು ನಿಗದಿ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಟ್ರೆಂಡ್ ಮೀತಿ ಮೀರಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮುಹೂರ್ತ ಡೆಲಿವರಿ ಎಂದೇ ಜನಜನಿತವಾಗಿರುವ ಈ ಟ್ರೆಂಡ್ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು ಜ್ಯೋತಿಷಿಗಳ ಬಳಿ ಹೋಗಿ ಮಗು ಜನನಕ್ಕೆ ಯಾವ ದಿನ ಯಾವ ಘಳಿಗೆ ಉತ್ತಮ ಎಂಬುದನ್ನು ಬರೆಸಿಕೊಂಡು ಬಂದು ವೈದ್ಯರಿಗೆ ತಿಳಿಸುತ್ತಾರೆ. ಅಶುಭ ಘಳಿಗೆ ಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಪೋಷಕರು ಈ ರೀತಿಯ ನಿರ್ಧಾರ ತೆಗೆದುಕೊಳುತ್ತಿದ್ದಾರೆ. ಪೋಷಕರೇ ಇಂತಹ ದಿನ ಹೆರಿಗೆಯಾದರೆ ಉತ್ತಮ ಎಂದು ಅವರೇ ಸಮಯವನ್ನು ನಿಗದಿ ಮಾಡಿಕೊಂಡು ವೈದ್ಯರಿಗೆ ತಿಳಿಸು ವಂತಹ ಸನ್ನಿವೇಶ ಉಂಟಾಗಿದೆ. ಇತ್ತೀಚೆಗೆ ಈ ರೀತಿಯ ಘಟನೆಗಳು ವಿಪರೀತವಾಗಿವೆ ಎಂದು ವೈದ್ಯರೇ ಬಹಿರಂಗ ಪಡಿಸಿದ್ದಾರೆ.