School Vehicles: ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ ವಾಹನ ಸೀಜ್
ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಕ್ಕಳನ್ನು ಬೇಕಾಬಿಟ್ಟಿಯಾಗಿ ಕೂಡಿಸಿಕೊಂಡು ಹೋಗುವುದು, ವಾಹನಗಳ ಪರವಾನಿಗೆ ಇಲ್ಲದಿರುವುದು, ಚಾಲಕರು ಡಿಎಲ್ ಇಲ್ಲದೆ ಸಂಚರಿಸುವುದು ಮುಂತಾದ ಅಪರಾಧಗಳನ್ನು ಗುರುತಿಸಲಾಗಿದ್ದು, ನಿಯಮ ಪಾಲಿಸದ ಶಾಲಾ ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ನಿಯಮಾವಳಿ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು (School Vehicles) ಆರ್‌ಟಿಒ ಅಧಿಕಾರಿಗಳು (RTO Officers) ಸೀಜ್ ಮಾಡಿದ್ದಾರೆ. ಟ್ರಾಫಿಕ್ ಹಾಗೂ ಸುರಕ್ಷತಾ ರೂಲ್ಸ್ (Safety rules) ಪಾಲಿಸದ ಖಾಸಗಿ (Private school) ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ ಅಧಿಕಾರಿಗಳು, ಬೆಂಗಳೂರಿನ ಪ್ರಮುಖ ಶಾಲಾ ಕಾಲೇಜು ವಾಹನಗಳನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಕ್ಕಳನ್ನು ಬೇಕಾಬಿಟ್ಟಿಯಾಗಿ ಕೂಡಿಸಿಕೊಂಡು ಹೋಗುವುದು, ವಾಹನಗಳ ಪರವಾನಿಗೆ ಇಲ್ಲದಿರುವುದು, ಚಾಲಕರು ಡಿಎಲ್ ಇಲ್ಲದೆ ಸಂಚರಿಸುವುದು ಮುಂತಾದ ಅಪರಾಧಗಳನ್ನು ಗುರುತಿಸಲಾಗಿದ್ದು, ನಿಯಮ ಪಾಲಿಸದ ಶಾಲಾ ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು. ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ. ಹಾಗಾಗಿ ಆರ್ ಟಿ ಓ ಅಧಿಕಾರಿಗಳು ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶಾಲಾ-ಕಾಲೇಜು ವಾಹನಗಳ ಮೇಲೆ ಶಾಲೆ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಇರಬೇಕು. ವಾಹನದೊಳಗೆ ಸಿಸಿ ಕ್ಯಾಮರಾ, ಫ್ಯಾನಿಕ್ ಬಟನ್, ಫಸ್ಟ್ ಏಡ್ ಬಾಕ್ಸ್, ಫೈರ್ ಎಸ್ಟಿಂಗ್ವಿಷರ್ ಇರಬೇಕು. ಈ ಯಾವ ನಿಯಮಗಳು ಕೂಡ ಪಾಲನೆಯಾಗಿಲ್ಲ ಎಂದು ತಿಳಿದುಬಂದಿದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ಮತ್ತೆ ವಿಸ್ತರಣೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ವಾಹನ ಮಾಲೀಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಹನಗಳಿಗೆ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ಮಾರ್ಚ್ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯ ಪತ್ರ ಹೊರಡಿಸಲಾಗಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಸರ್ಕಾರ 2023ರ ಆ.17ರಂದು ಅಧಿಸೂಚನೆ ಹೊರಡಿಸಿತ್ತು. ಅಲ್ಲದೇ ಕಾಲಮಿತಿಯನ್ನು ನಿಗದಿ ಪಡಿಸಿತ್ತು. ಆದರೆ, ಇನ್ನೂ ಅನೇಕ ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದ ಹಿನ್ನೆಲೆಯಲ್ಲಿ ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಹಲವು ಬಾರಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಿಸಲಾಗಿತ್ತು. ಆದರೆ ಇನ್ನೂ ಅನೇಕ ವಾಹನ ಸವಾರರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ ದಿನಾಂಕ 31-03-2025ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಉಳಿದಂತೆ ದಿನಾಂಕ 17-08-2023ರಲ್ಲಿ ಹೊರಡಿಸಿದಂತ ಆದೇಶದಲ್ಲಿ ಬೇರೆ ಯಾವುದೇ ಬದಲಾವಣೆ ಇರುವುದಿಲ್ಲ ರಾಜ್ಯ ಸರ್ಕಾರ ತಿಳಿಸಿದೆ.
ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕಿದೆ. ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದರ್ಥ. ಕರ್ನಾಟಕದ ವಾಹಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯಕವಾಗಲಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಮೊದಲ ಬಾರಿ 500 ರೂಪಾಯಿ ದಂಡ ವಿಧಿಸಲು, ಆ ನಂತರ ಪ್ರತಿ ಬಾರಿ 1000 ರೂ. ದಂಡ ಹಾಕಲು ಸಾರಿಗೆ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಆದರೆ, ನೋಂದಣಿ ಮಾಡಿದರೂ ನಂಬರ್ ಪ್ಲೇಟ್‌ಗಳ ವಿತರಣೆಯೂ ಸಾಕಷ್ಟು ವಿಳಂಬ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸಾಕಷ್ಟು ಮಂದಿ ನೋಂದಣಿ ಮಾಡಿ ತಿಂಗಳುಗಳಾದರೂ ಹೊಸ ನಂಬರ್ ಪ್ಲೇಟ್ ಬಂದಿಲ್ಲ. ಹೀಗಾಗಿ ಮತ್ತೊಮ್ಮೆ ಗಡುವು ವಿಸ್ತರಣೆಯಾಗಿದೆ.
ಇದನ್ನೂ ಓದಿ: Bengaluru Traffic Police: ವಾಹನ ಸವಾರರ ಗಮನಕ್ಕೆ; ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಡಿಎಲ್ ಅಮಾನತು!