ಭಾರತದ ಇ-ಕಾಮರ್ಸ್ನ ರಫ್ತು ಹೆಚ್ಚಿಸಲು ಅಮೆಜಾನ್ ಮತ್ತು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ ನಡುವಣ ಸಹಯೋಗ ವಿಸ್ತರಣೆ
ಇದು ನವೆಂಬರ್ 2023 ರಲ್ಲಿ ಸಹಿ ಮಾಡಿದ ಒಪ್ಪಂದ ಆಧರಿಸಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್ಎಂಇ) ರಫ್ತು ವಹಿವಾಟು ಹೆಚ್ಚಿಸಲು ಸರ್ಕಾರದ ಆಡಳಿತಾತ್ಮಕ ಜಿಲ್ಲೆಗಳನ್ನು ರಫ್ತು ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಹಾಗೂ ಬಳಸಿಕೊಳ್ಳುವ ಗುರಿಯನ್ನು ಈ ಒಪ್ಪಂದವು ಹೊಂದಿದೆ
![3,000 ಕ್ಕೂ ಹೆಚ್ಚು ʼಎಂಎಸ್ಎಂಇʼ ಗಳಿಗೆ ಪಾಲುದಾರಿಕೆ ಪ್ರಯೋಜನ ನೀಡಿದೆ](https://cdn-vishwavani-prod.hindverse.com/media/original_images/Partner.jpg)
![Profile](https://vishwavani.news/static/img/user.png)
ದೇಶದಾದ್ಯಂತದ 47 ಪ್ರಮುಖ ಜಿಲ್ಲೆಗಳಲ್ಲಿ ಸಣ್ಣ ಉದ್ದಿಮೆಗಳಿಗೆ ಅವುಗಳ ಜಾಗತಿಕ ವ್ಯಾಪಾರ ಹೆಚ್ಚಿಸುವ ಸಾಮರ್ಥ್ಯ ವೃದ್ಧಿಗೆ ಗಮನ ಕೇಂದ್ರೀಕರಿಸಲು ಮತ್ತು ಮಾರ್ಗದರ್ಶನ ನೀಡುವ ಉದ್ದೇಶಕ್ಕೆ ಒಪ್ಪಂದ ನವೀಕರಣ. ʼಎಂಎಸ್‌ಎಂಇʼಗಳಿಗಾಗಿ ಸ್ಥಳೀಯ ಆಫ್‌ಲೈನ್ ನೆಟ್‌ವರ್ಕ್ ಗಳಾಗಿ ರಫ್ತು ಸಮುದಾಯಗಳನ್ನು ಸ್ಥಾಪಿಸುವುದಕ್ಕೆ ಗಮನಹರಿಸಲು ಸಹಯೋಗ. ಸಣ್ಣ ವ್ಯಾಪಾ ರಿಗಳು ಮತ್ತು ಉದ್ಯಮಿಗಳು ತಮ್ಮ ರಫ್ತು ವಹಿವಾಟಿನ ಪ್ರತಿ ಹಂತದಲ್ಲೂ ರಫ್ತು ಅನುಸರಣೆ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಲು ವಿದೇಶ ವ್ಯಾಪಾರ ಮಹಾ ನಿರ್ದೇ ಶನಾಲಯದ (ಡಿಜಿಎಫ್‌ಟಿ) ರಫ್ತಿಗೆ ಸಂಪರ್ಕ ಕಲ್ಪಿಸುವ ಅಂತರ್ಜಾಲ ತಾಣದಲ್ಲಿa ರಫ್ತು ಮಾರ್ಗ ದರ್ಶನ ಸೌಲಭ್ಯ ಅಳವಡಿಕೆ.
ನವದೆಹಲಿ: ಭಾರತದಿಂದ ಇ-ಕಾಮರ್ಸ್ ರಫ್ತು ವಹಿವಾಟಿಗೆ ವೇಗ ನೀಡಲು ಅಮೆಜಾನ್ ಮತ್ತು ವಿದೇಶಿ ವ್ಯಾಪಾರ ನಿರ್ದೇಶನಾಲಯದ (ಡಿಜಿಎಫ್‌ಟಿ) ನಡುವಣ ಸಹಯೋಗ ವಿಸ್ತರಿಸಲಾಗಿದೆ. ಇದು ನವೆಂಬರ್ 2023 ರಲ್ಲಿ ಸಹಿ ಮಾಡಿದ ಒಪ್ಪಂದ ಆಧರಿಸಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್ಎಂಇ) ರಫ್ತು ವಹಿವಾಟು ಹೆಚ್ಚಿಸಲು ಸರ್ಕಾರದ ಆಡಳಿತಾತ್ಮಕ ಜಿಲ್ಲೆಗಳನ್ನು ರಫ್ತು ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಹಾಗೂ ಬಳಸಿಕೊಳ್ಳುವ ಗುರಿಯನ್ನು ಈ ಒಪ್ಪಂದವು ಹೊಂದಿದೆ.
ಇದನ್ನೂ ಓದಿ: Harish Kera Column: ಟ್ರಂಪ್ ಮತ್ತು ಡೇರಿಯನ್ ಗ್ಯಾಪ್
ಈಗ ನವೀಕರಿಸಿರುವ ಈ ಸಹಯೋಗವು ಭಾರತದಾದ್ಯಂತ ʼಎಂಎಸ್‌ಎಂಇʼಗಳನ್ನು ಇ-ಕಾಮರ್ಸ್ ರಫ್ತು ವಹಿವಾಟಿನಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಅಗತ್ಯವಾದ ಕೌಶಲ ಮತ್ತು ಸಂಪನ್ಮೂಲ ಗಳ ನೆರವಿನಿಂದ ಸಜ್ಜುಗೊಳಿಸುವತ್ತ ಗಮನ ಹರಿಸಲಿದೆ.
ವಿದೇಶ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್‌ಟಿ) ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕ ಸಂತೋಷ್ ಸಾರಂಗಿ, ಅಮೆಜಾನ್ನ ಸಾರ್ವಜನಿಕ ನೀತಿ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ ಮತ್ತು ಅಮೆಜಾನ್ ಇಂಡಿಯಾದ ಜಾಗತಿಕ ವ್ಯಾಪಾರದ ನಿರ್ದೇಶಕ ಭೂಪೇನ್ ವಾಕಂಕರ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನವೀಕರಿಸಲಾಯಿತು.
ವಿಸ್ತೃತಗೊಳಿಸಿದ ಈ ಸಹಯೋಗವು ಭಾರತದ ಇ-ಕಾಮರ್ಸ್ ರಫ್ತು ವಹಿವಾಟಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಲವಾರು ಹೊಸ ಉಪಕ್ರಮಗಳನ್ನು ಪರಿಚಯಿಸಲಿದೆ. ಇವುಗಳಲ್ಲಿ 47 ಜಿಲ್ಲೆಗಳಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳು, ಡಿಜಿಎಫ್‌ಟಿ-ಯ ಟ್ರೇಡ್ ಕನೆಕ್ಟ್ ಅಂತರ್ಜಾಲ ತಾಣದಲ್ಲಿ ಅಮೆಜಾನ್‌ನ ರಫ್ತು ಮಾರ್ಗದರ್ಶಿ ಸೌಲಭ್ಯ ಅಳವಡಿಕೆ ಮತ್ತು ʼಎಂಎಸ್‌ಎಂಇʼ ಗಳಿಗಾಗಿ ಸ್ಥಳೀಯ ಆಫ್‌ಲೈನ್ ಸಂಪರ್ಕಜಾಲಗಳಾಗಿ ರಫ್ತು ಸಮುದಾಯಗಳನ್ನು ಸ್ಥಾಪಿಸುವುದು ಸೇರಿವೆ.
ಉತ್ಪನ್ನಗಳ ಆಯ್ಕೆ ಮತ್ತು ರಫ್ತು ಪ್ರಮಾಣ ಹೆಚ್ಚಳ ಕುರಿತು ʼಎಂಎಸ್‌ಎಂಇʼಗಳಿಗೆ ಮಾರ್ಗದರ್ಶನ ನೀಡಲು ಈ ಸಹಯೋಗವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಿದೆ. ʼಡಿಜಿಎಫ್‌ಟಿʼ ಯ ಸ್ಥಳೀಯ ಪರಿಣತಿಯೊಂದಿಗೆ ಅಮೆಜಾನ್‌ನ ಜಾಗತಿಕ ವ್ಯಾಪ್ತಿ ಮತ್ತು ಇ-ಕಾಮರ್ಸ್ ರಫ್ತು ವಹಿವಾಟಿನಲ್ಲಿನ ಪರಿಣತಿ ಒಂದುಗೂಡಿಸುವ ಮೂಲಕ, ಈ ಉಪಕ್ರಮವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಮಾರಾಟಗಾರರಿಗೆ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಅವಕಾಶ ಒದಗಿಸುವ ಗುರಿ ಹೊಂದಿದೆ.
ರಫ್ತುಗಳನ್ನು ಹೆಚ್ಚಿಸುವ ಮತ್ತು ಸ್ಥಳೀಯ ಉದ್ಯಮಗಳನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಧೋರಣೆಗೆ ಅನುಗುಣವಾಗಿ ತಮ್ಮ ಸಹಭಾಗಿತ್ವದ ಮೊದಲ ವರ್ಷದಲ್ಲಿ, ʼಡಿಜಿಎಫ್ಟಿʼ ಮತ್ತು ಅಮೆಜಾನ್, ಭಾರತದ 20 ಜಿಲ್ಲೆಗಳಲ್ಲಿ ಇ-ಕಾಮರ್ಸ್ ರಫ್ತು ಉತ್ತೇಜನೆಯ ಸರಣಿ ಕಾರ್ಯಕ್ರಮ ಗಳನ್ನು ಆಯೋಜಿಸಿದ್ದವು. ಡಿಸೆಂಬರ್ 2023 ಮತ್ತು ಡಿಸೆಂಬರ್ 2024ರ ಮಧ್ಯೆ ನಡೆದ ಈ ಕಾರ್ಯಕ್ರಮಗಳಲ್ಲಿ, ಅಮೆಜಾನ್ ಪ್ರತಿನಿಧಿಗಳು 3,000 ಕ್ಕೂ ಹೆಚ್ಚು ʼಎಂಎಸ್ಎಂಇʼಗಳಿಗೆ ಇ-ಕಾಮರ್ಸ್ ರಫ್ತು ವಹಿವಾಟು ಮತ್ತು ಅಮೆಜಾನ್ನ ಜಾಗತಿಕ ಮಾರುಕಟ್ಟೆ ತಾಣಗಳಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಸ್ಥಳದಲ್ಲಿಯೇ ಸಹಾಯ ಪಡೆದರಲ್ಲದೆ, ತಕ್ಷಣವೇ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ಈ ಕಾರ್ಯಕ್ರಮಗಳ ನಂತರ, ಅಮೆಜಾನ್, ಆಸಕ್ತ ಮಾರಾಟಗಾರರಿಗೆ ಅಗತ್ಯ ಬೆಂಬಲ ನೀಡಿದೆ. ತನ್ನ ತರಬೇತಿ ಕಾರ್ಯಕ್ರಮ ಗಳಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಉದ್ಯಮಿಗಳಿಗೆ ನೆರವಿನ ಹಸ್ತಚಾಚಿದೆ. ಅಗತ್ಯ ದಾಖಲೆಗಳನ್ನು ಪಡೆಯಲು, ಅನುಸರಣೆ ಅವಶ್ಯಕತೆಗಳನ್ನು ಪೂರೈಸಲು ಮತ್ತು ವಹಿವಾಟು ಮತ್ತು ಜಾಹೀರಾತು ಬೆಂಬಲ ಪಡೆಯಲು ಸಹಾಯ ಮಾಡಲು ಅವರನ್ನು ವಿಶ್ವಾಸಾರ್ಹ ಮೂರ ನೇ ವ್ಯಕ್ತಿಯ ಸೇವಾ ಪೂರೈಕೆದಾರರ ಜೊತೆಗೆ ಸಂಪರ್ಕಿಸಿತು.
ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಡಿಜಿಎಫ್ಟಿ ಮಹಾನಿರ್ದೇಶಕ ಸಂತೋಷ್ ಸಾರಂಗಿ ಅವರು ಮಾತನಾಡಿ, "ದೇಶದಲ್ಲಿನ ಪ್ರತಿಯೊಂದು ಜಿಲ್ಲೆಯನ್ನು ರಫ್ತು ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಅಮೆಜಾನ್ ಜೊತೆಗಿನ ನಮ್ಮ ನಿರಂತರ ಸಹಯೋಗವು ಒಂದು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಆರಂಭಿಕ ಯಶಸ್ಸು ಆಧರಿಸಿ ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಹೆಚ್ಚಿನ ʼಎಂಎಸ್ಎಂಇʼ - ಗಳಿಗೆ ನೆರವಾಗಲು ನಾವು ನಮ್ಮ ಗಮನವನ್ನು ಈಗ 47 ಜಿಲ್ಲೆಗಳಿಗೆ ವಿಸ್ತರಿಸುತ್ತಿದ್ದೇವೆ. ಈ ಪಾಲುದಾರಿಕೆಯು ಈಗಾಗಲೇ 3,000 ಕ್ಕೂ ಹೆಚ್ಚು ʼಎಂಎಸ್ಎಂಇʼ ಗಳಿಗೆ ಪ್ರಯೋಜನವನ್ನು ನೀಡಿದೆ. ಇದರ ಬೆಳವಣಿಗೆಯನ್ನು ನೋಡಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಇದು 2030 ರ ವೇಳೆಗೆ ಭಾರತದಿಂದ 200 ರಿಂದ 300 ಶತಕೋಟಿ ಡಾಲರ್ ಮೊತ್ತದ ರಫ್ತುಗಳನ್ನು ಕಾರ್ಯಗತ ಗೊಳಿಸುವ ನಮ್ಮ ಗುರಿಯ ಜೊತೆಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ. ಇದು 'ಭಾರತ ದಲ್ಲಿಯೇ ತಯಾರಿಸುವʼ ಅತ್ಯುತ್ತಮ ಸಾಧನೆಯನ್ನೂ ಜಗತ್ತಿಗೆ ಪ್ರದರ್ಶಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆಜಾನ್ ಇಂಡಿಯಾದ ಜಾಗತಿಕ ವ್ಯಾಪಾರ ನಿರ್ದೇಶಕ ಭೂಪೇನ್ ವಾಕಂಕರ್ ಅವರು ಮಾತ ನಾಡಿ, "ಭಾರತದಾದ್ಯಂತ ʼಎಂಎಸ್ಎಂಇʼಗಳು ಮತ್ತು ಉದ್ಯಮಿಗಳನ್ನು ಬೆಂಬಲಿಸಲು ಮತ್ತು ಸಮರ್ಥ ಸ್ವರೂಪದ ಜಾಗತಿಕ ವಹಿವಾಟು ಕಾರ್ಯಗತಗೊಳಿಸಲು ಮತ್ತು ಭಾರತದ ಒಟ್ಟಾರೆ ರಫ್ತು ವಹಿವಾಟಿಗೆ ಗಮನಾರ್ಹ ಕೊಡುಗೆ ನೀಡಲು ಡಿಜಿಎಫ್ಟಿ- ಜೊತೆಗಿನ ನಮ್ಮ ಪಾಲುದಾರಿಕೆ ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. 2023 ರಿಂದ ಜಾರಿಯಲ್ಲಿ ಇರುವ ನಮ್ಮ ಈ ಸಹಯೋಗವು ಭರವಸೆಯ ಫಲಿತಾಂಶಗಳನ್ನು ನೀಡಿದೆ. ಈ ವರ್ಷ 47 ಜಿಲ್ಲೆಗಳಿಗೆ ನಮ್ಮ ಸಂಘಟಿತ ಗಮನ ವಿಸ್ತರಿಸಲು ನಾವು ಎದುರು ನೋಡುತ್ತಿದ್ದೇವೆ. 2030 ರ ವೇಳೆಗೆ ಭಾರತದಿಂದ 80 ಶತಕೋಟಿ ಡಾಲರ್ ಮೊತ್ತದ ಒಟ್ಟಾರೆ ಇ-ಕಾಮರ್ಸ್ ರಫ್ತು ವಹಿವಾಟು ಕಾರ್ಯಗತಗೊಳಿಸುವ ನಮ್ಮ ಗುರಿಯತ್ತ ನಾವು ಕೆಲಸ ಮಾಡುತ್ತಿರುವಾಗ, ರಫ್ತುಗಳನ್ನು ಸರಳ ಮತ್ತು ಎಲ್ಲಾ ಗಾತ್ರದ ಉದ್ದಿಮೆ ವಹಿವಾಟುಗಳಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಈಗ ಅಮೆಜಾನ್ ಗಮನ ಕೇಂದ್ರೀ ಕರಿಸಿದೆ" ಎಂದು ಹೇಳಿದ್ದಾರೆ.