ವಿಶಿಷ್ಟವಾದ ಸಮುದಾಯ-ನಿರ್ದೇಶಿತ ಪ್ರೊಗ್ರಾಮ್ “ಗೆಲಾಕ್ಸಿ ಸಬಲೀಕರಣ” ಪರಿಚಯಿಸಿದ ಸ್ಯಾಮ್ ಸಂಗ್
ಪುನರಾವರ್ತಿತ ವಾಸ್ತವ ಹಾಗೂ ಆನ್‌ಲೈನ್ ಕಲಿಕಾ ಕಾರ್ಯಕ್ರಮಗಳ ಮೂಲಕ ನಾಳಿನ ತರಗತಿಗಳಿ ಗಾಗಿ ಶಿಕ್ಷಕರನ್ನು ತಯಾರುಗೊಳಿಸಲಿದೆ. ತಂತ್ರಜ್ಞಾನದಲ್ಲಿ ಜಾಗತಿಕ ಮುಂದಾಳು ಸಂಸ್ಥೆಯಾಗಿ ಸ್ಯಾಂ ಸಂಗ್, ಶಿಕ್ಷಕರು ಇತ್ತೀಚಿನ ತಂತ್ರಜ್ಞಾನ ಹಾಗೂ ಆಧುನಿಕ ಬೋಧನಾ ಕ್ರಮ ಗಳನ್ನು ಅಳವಡಿ ಸಿಕೊಳ್ಳಲು ನೆರವಾಗುವಂತಹ ಭವಿಷ್ಯತ್ತು-ಸಿದ್ಧವಾದ ತರಗತಿಗಳನ್ನು ಸೃಷ್ಟಿ ಸುವ ಮೂಲಕ ಶಿಕ್ಷಣದ ಭವಿಷ್ಯತ್ತನ್ನು ರೂಪಿಸಲು ಬದ್ಧವಾಗಿದೆ
![2025 ರ ವೇಳೆಗೆ 20,000 ಶಿಕ್ಷಕರ ಕೌಶಲ್ಯ ವರ್ಧನೆ](https://cdn-vishwavani-prod.hindverse.com/media/original_images/Sam2.jpg)
![Profile](https://vishwavani.news/static/img/user.png)
ಬೆಂಗಳೂರು: ಭಾರತದ ಅತಿದೊಡ್ಡ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ಸ್ಯಾಂಸಂಗ್, ಶಿಕ್ಷಕರು, ಪ್ರಾಂಶುಪಾಲರುಗಳು ಹಾಗೂ ಶಿಕ್ಷಣ ಕ್ಷೇತ್ರದ ಆಡಳಿತಗಾರರನ್ನು ಸಬಲಗೊಳಿಸುವ ಮೂಲಕ ಭಾರತದಲ್ಲಿ ಶಿಕ್ಷಣವನ್ನು ಪರಿವರ್ತಿಸುವುದಕ್ಕಾಗಿ ವಿನ್ಯಾಸಗೊಂಡ, ತನ್ನ ವಿಧದಲ್ಲೇ ವಿಶಿಷವಾದ ಸಮುದಾಯ-ನಿರ್ದೇಶಿತ ಪ್ರೊಗ್ರಾಮ್ “ಗೆಲಾಕ್ಸಿ ಸಬಲೀಕರಣ (“Galaxy Empowered”) ದ ಬಿಡುಗಡೆಯನ್ನು ಘೋಷಿಸಿದೆ. ಐತಿಹಾಸಿಕ ಶೂಟರ್ ಮತ್ತು 2008 ಒಲಿಂಪಿಕ್ ಸ್ವರ್ಣಪದಕ ವಿಜೇತರಾದ ಅಭಿನವ್ ಭಿಂದ್ರ ಅವರ ಹಾಜರಿಯಲ್ಲಿ ಬಿಡುಗಡೆಯಾದ ಈ ಉಪಕ್ರಮವು, ಬೋಧ ನಾ ಪದ್ಧತಿಗಳೊಳಗೆ ತಂತ್ರಜ್ಞಾನ ಸಂಯೋಜಿಸುವ ಮೂಲಕ ಶಿಕ್ಷಣದಲ್ಲಿ ಆವಿಷ್ಕಾರದ ಸಂಸ್ಕೃ ತಿಯ ನಿರ್ಮಾಣ ಹಾಗೂ ಸೃಜನಶೀಲತೆಗೆ ಪ್ರೇರಣೆ ಒದಗಿಸುವ ಗುರಿ ಹೊಂದಿದೆ.
ಇದು, ಪುನರಾವರ್ತಿತ ವಾಸ್ತವ ಹಾಗೂ ಆನ್‌ಲೈನ್ ಕಲಿಕಾ ಕಾರ್ಯಕ್ರಮಗಳ ಮೂಲಕ ನಾಳಿನ ತರಗತಿಗಳಿಗಾಗಿ ಶಿಕ್ಷಕರನ್ನು ತಯಾರುಗೊಳಿಸಲಿದೆ. ತಂತ್ರಜ್ಞಾನದಲ್ಲಿ ಜಾಗತಿಕ ಮುಂದಾಳು ಸಂಸ್ಥೆಯಾಗಿ ಸ್ಯಾಂಸಂಗ್, ಶಿಕ್ಷಕರು ಇತ್ತೀಚಿನ ತಂತ್ರಜ್ಞಾನ ಹಾಗೂ ಆಧುನಿಕ ಬೋಧನಾ ಕ್ರಮ ಗಳನ್ನು ಅಳವಡಿಸಿಕೊಳ್ಳಲು ನೆರವಾಗುವಂತಹ ಭವಿಷ್ಯತ್ತು-ಸಿದ್ಧವಾದ ತರಗತಿಗಳನ್ನು ಸೃಷ್ಟಿ ಸುವ ಮೂಲಕ ಶಿಕ್ಷಣದ ಭವಿಷ್ಯತ್ತನ್ನು ರೂಪಿಸಲು ಬದ್ಧವಾಗಿದೆ.
ಇದನ್ನೂ ಓದಿ: Bangalore news: ಫೆ. 12 ರಂದು ಶ್ರೀ ಲಕ್ಷ್ಮೀ ನರಸಿಂಹ ವ್ರತ ಮಹೋತ್ಸವ
"Galaxy Empowered" , ಕೇವಲ ಶಿಕ್ಷಕರಿಗೆ ಮಾತ್ರ ಪ್ರಯೋಜನಕಾರಿಯಾಗಿರುವುದಿಲ್ಲ, ಅದು, ಶಾಲೆಗಳು ಶಿಕ್ಷಣ ಆವಿಷ್ಕಾರದಲ್ಲಿ ನಾಯಕರುಗಳಾಗುವುದಕ್ಕೂ ಬೆಂಬಲ ಒದಗಿಸಲಿದೆ. ಬೋಧನಾ ಪದ್ಧತಿಗಳನ್ನು ವರ್ಧಿಸಿ, ತಂತ್ರಜ್ಞಾನ-ಚಾಲಿತ ಕಲಿಕಾ ಪರಿಸರಗಳನ್ನು ಸೃಷ್ಟಿಸುವ ಮೂಲಕ ಶಾಲೆಗಳು ತಮ್ಮನ್ನು ತಾವು, ಪೋಷಕರಿಗೆ ಆಯ್ಕೆಯ ಸಂಸ್ಥೆಯಾಗಿ ಸ್ಥಾಪಿಸಿಕೊಂಡು, ಸಮುದಾಯದಲ್ಲಿ ಅವುಗಳ ಪ್ರಸಿದ್ಧಿ ಹಾಗೂ ಗುರುತನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ, “Galaxy Empowered” ಕಾರ್ಯಕ್ರಮವು, ಶಿಕ್ಷಕರು ಹಾಗೂ ಶಾಲೆಗಳು ಇಬ್ಬರಿಗೂ ಉಚಿತವಾಗಿದ್ದು, ಯಾವುದೇ ಹಣಕಾಸು ಅಡಚಣೆಗಳಿಲ್ಲದೆ ಶಿಕ್ಷಣದ ಉನ್ನತಿಗಾಗಿ ಅಮೂಲ್ಯ ಸಂಪನ್ಮೂಲಗಳನ್ನು ಖಾತರಿಪಡಿಸುತ್ತದೆ.
“Galaxy Empowered”ನೊಂದಿಗೆ ನಾವು, ಶಿಕ್ಷಕರು ತಮ್ಮ ವಿದ್ಯಾರ್ಥಿ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸಿಕೊಂಡು ದೀರ್ಘಕಾಲ ಉಳಿಯುವಂತ ಶೈಕ್ಷಣಿಕ ಪ್ರಭಾವವನ್ನು ಬೀರುವುದಕ್ಕೆ ಅವರಿಗೆ ಸಾಧನಗಳನ್ನು ಒದಗಿಸುತ್ತಿದ್ದೇವೆ. ಶಿಕ್ಷಕರ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ಮೂಲಕ ಸ್ಯಾಂಸಂಗ್ ಶಿಕ್ಷಕರು ತಮ್ಮ ತರಗತಿ ಪ್ರಭಾವವನ್ನು ಗರಿಷ್ಟಗೊಳಿಸಿಕೊಳ್ಳಲು ಬಲಒದಗಿಸುವುದರ ಜೊತೆಗೆ, ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿ ಇರುವುದಕ್ಕೂ ಬೆಂಬಲ ಒದಗಿಸಲಿದೆ. ಈ ಉಪಕ್ರಮವು, ಇನ್ನೂ ಉತ್ತಮವಾದ ನಾಳಿಗಾಗಿ ಆವಿಷ್ಕಾರ ನಡೆಸುವ ನಮ್ಮ ದೂರದೃಷ್ಟಿಗೆ ಅನುಗುಣವಾಗಿದ್ದು, ಶಿಕ್ಷಣವು ಆವಿಷ್ಕಾರದ ಮುನ್ನೆಲೆಯಲ್ಲಿದ್ದು ಪ್ರತಿಯೊಬ್ಬ ಶಿಕ್ಷಕನೂ ತಾನು ಯಶಸ್ವಿಯಾಗಲು ಅಗತ್ಯವಾದ ಸಂಪನ್ಮೂಲಗಳನ್ನು ಹೊಂದಿರುವುದನ್ನು ಖಾತರಿಪಡಿಸುತ್ತದೆ.” ಎಂದು ಹೇಳಿದರು, ಸ್ಯಾಂಸಂಗ್ ಇಂಡಿಯಾದ MX ಬಿಜಿನೆಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್.
“Galaxy Empowered” ಕಾರ್ಯಕ್ರಮದಡಿ ಡಿಸಂಬರ್2024ನಿಂದಲೂ ನೇರ ತರಬೇತಿ ಅಧಿವೇಶನ ಗಳ ಮೂಲಕ 2,700ಕ್ಕಿಂತ ಹೆಚ್ಚಿನ ಶಿಕ್ಷಕರಿಗೆ ಭಾರತದಾದ್ಯಂತ ಪ್ರಮಾಣಪತ್ರಗಳನ್ನು ನೀಡ ಲಾಗಿದೆ. 2025ರ ವೇಳೆಗೆ, ಭಾರತದಾದ್ಯಂತ 20,000 ಶಿಕ್ಷಕರನ್ನು ಸಬಲಗೊಳಿಸುವ ಗುರಿಯನ್ನು ಹೊಂದಿದೆ ಈ ಕಾರ್ಯಕ್ರಮ. ದೆಹಲಿ ಹಂತಕ್ಕಾಗಿ, ಸ್ಯಾಂಸಂಗ್ 250 ಶಾಲೆಗಳಲ್ಲಿ “Galaxy Empowered” ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಮೊದಲ ಹಂತಕ್ಕಾಗಿ ಮಹಾತತ್ವ ಎಜುಕೇಶನಲ್ ಅಡ್ವೈಸರಿ ಮತ್ತು STTAR ದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳುವುದಲ್ಲದೆ, ಕಾರ್ಯಕ್ರಮದುದ್ದಕ್ಕೂ ಶಿಕ್ಷಕರಿಗೆ ನೆರವು ಒದಗಿಸುವುದಕ್ಕಾಗಿ ನಿಪುಣ ತರಬೇತುದಾರರು ಹಾಗೂ ಶಿಕ್ಷಣ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ.
“ಸಮಾಜದ ಪ್ರಗತಿಯಲ್ಲಿ ಶಿಕ್ಷಣದ್ದು ಪ್ರಮುಖ ಪಾತ್ರವಾಗಿರುತ್ತದೆ ಮತ್ತು ಸ್ಯಾಂಸಂಗ್ ಶಿಕ್ಷಕರಿಗೆ ಸರಿಯಾದ ಸಾಧನಗಳನ್ನು ಒದಗಿಸಿ ತರಗತಿಯಲ್ಲಿ ಅವರು ತಂತ್ರಜ್ಞಾನವನ್ನು ಬಳಸಿಕೊಳ್ಳುವು ದಕ್ಕೆ ಬೆಂಬಲ ಒದಗಿಸುವುದರ ಪ್ರಾಮುಖ್ಯತೆಯನ್ನು ಗುರುತಿಸಿದೆ.ಶಿಕ್ಷಕರು ಮತ್ತು ಶಿಕ್ಷಣ ಆಡಳಿತ ಗಾರರಿಗೆ ಬಲ ಒದಗಿಸುವ ಮೂಲಕ, ಸ್ಯಾಂಸಂಗ್ ತಂತ್ರಜ್ಞಾನವು ಕಲಿಕೆಯನ್ನು ವರ್ಧಿಸಿ, ಅಂತರ ಗಳನ್ನು ಕಡಿಮೆ ಮಾಡಿ, ಶಿಕ್ಷಣದ ಭವಿಷ್ಯತ್ತನ್ನು ರೂಪಿಸುವ ಒಂದು ಪರಿಸರ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿದೆ. ಬೃಹತ್ ಪ್ರಮಾಣದಲ್ಲಿ ಇನ್ನಷ್ಟು ಉತ್ತಮವಾದ ಕಲಿಕಾ ಅನುಭವಗಳನ್ನು ಒದಗಿಸುವುದಕ್ಕೆ ನಮ್ಮ ಶಿಕ್ಷಕರ ಕೌಶಲ್ಯ ವರ್ಧನೆ ಮಾಡುವಲ್ಲಿ ಈ ಉಪಕ್ರಮವು ಒಂದು ಪ್ರಮುಖ ಸೋಪಾನವಾಗಲಿದೆ ಎಂದು ನಾನು ನಂಬುತ್ತೇನೆ.” ಎಂದು ಹೇಳಿದರು, ಮುಖ್ಯ ಅತಿಥಿ ಮತ್ತು 2008 ಒಲಿಂಪಿಕ್ ಸ್ವರ್ಣಪದಕ ವಿಜೇತರಾದ ಅಭಿನವ್ ಭಿಂದ್ರ
“ಸ್ಯಾಂಸಂಗ್‌ನ Galaxy Empowered, ಆಧುನಿಕ ತಂತ್ರಜ್ಞಾನಕ್ಕೆ ಸುಲಭ ಪ್ರವೇಶಾವಕಾಶ, ಮಿಶ್ರಿತ ಕಲಿಕಾ ಸಾಧನಗಳು ಹಾಗೂ ಬೆಂಬಲಾತ್ಮಕ ಸಮುದಾಯವನ್ನು ಶಿಕ್ಷಕರಿಗೆ ಒದಗಿಸುವ ಮೂಲಕ ಅಂತರಗಳನ್ನು ಕಡಿಮೆ ಮಾಡುತ್ತದೆ. ಆನ್‌ಲೈನ್ ಹಾಗೂ ವ್ಯಕ್ತಿಗತ ವೃತ್ತಿಪರ ಅಭಿವೃದ್ಧಿಯ ಮೂಲಕ ಶಿಕ್ಷಕರು ತಮ್ಮ ತರಗತಿಗಳೊಳಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಸಂಯೋ ಜಿಸಿಕೊಳ್ಳಬಹುದು. ಸ್ಯಾಂಸಂಗ್‌ನ ಉತ್ಪನ್ನಗಳು ಹಾಗೂ ಅಗತ್ಯಕ್ಕೆ ತಕ್ಕ ಸಂಪನ್ಮೂಲಗಳೊಂದಿಗೆ ವಾಸ್ತವ ಅನುಭವ ಒದಗಿಸುವ ಮೂಲಕ ನಾವು, ಶಿಕ್ಷಕರು ವಿದ್ಯಾರ್ಥಿ ತೊಡಗಿಕೊಳ್ಳುವಿಕೆಯನ್ನು ವರ್ಧಿಸಿಕೊಳ್ಳಲು, ಟಾಸ್ಕ್‌ಗಳನ್ನು ಸ್ಟ್ರೀಮ್‌ಲೈನ್ ಮಾಡಿಕೊಳ್ಳಲು ಮತ್ತು ಬೋಧನಾ ಪರಿಣಾಮ ಕಾರಿತ್ವವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತಿದ್ದೇವೆ ಎಂದು ಹೇಳಿದರು, ಸ್ಯಾಂಸಂಗ್ ಇಂಡಿ ಯಾದ MX ಬಿಜಿನೆಸ್ ವಿಭಾಗದ ಉಪಾಧ್ಯಕ್ಷ ಆದಿತ್ಯ ಬಬ್ಬರ್.
“Galaxy Empowered” ಉಪಕ್ರಮವು, ಮೂರು ಪ್ರಮುಖ ಆಧಾರಸ್ತಂಬಗಳ ಮೇಲೆ ನಿರ್ಮಾಣ ಗೊಂಡಿದೆ-ತಂತ್ರಜ್ಞಾನ ಕೌಶಲ್ಯವರ್ಧನೆ, ಆನುಭವಿಕ ಕಲಿಕೆ ಮತ್ತು ಸಹಯೋಗಿಯಿಂದ-ಸಹ ಯೋಗಿಯೊಂದಿಗೆ ಕಾರ್ಯಜಾಲ. ಅಡಿಪಾಯ, ಪೂರ್ವಭಾವಿ, ಮಾಧ್ಯಮಿಕ, ಪ್ರಾಥಮಿಕ ಆಗಿರ ಬಹುದು ಅಥವಾ ಆಡಳಿತಗಾರರಿಗಾಗಿ ಇರಬಹುದು, “Galaxy Empowered”, ಶಿಕ್ಷಕರಿಗೆ ಗುರಿ ಯಿರಿಸಲಾದ ಬೆಂಬಲ ಒದಗಿಸಿ, ಅವರು ತಮ್ಮ ನಿರ್ದಿಷ್ಟ ಬೋಧನಾ ಪರಿಸರಗಳಲ್ಲಿ ಯಶಸ್ವಿ ಯಾಗಲು ಅಗತ್ಯವಾದ ಸಾಧನಗಳನ್ನು ಹೊಂದಿರುವುದನ್ನು ಖಾತರಿಪಡಿಸುತ್ತದೆ.
- ತಂತ್ರಜ್ಞಾನ ಕೌಶಲ್ಯವರ್ಧನೆ: ಪರಿವರ್ತನೀಯ ಆನ್‌ಲೈನ್ ತರಬೇತಿ ಅಧಿವೇಶನಗಳು, ಭೌತಿಕ ಬೂಟ್‌ಕ್ಯಾಂಪ್೬ಗಳು ಹಾಗೂ ಸಂಪನ್ಮೂಲಗಳ ಸಮಗ್ರವಾದ ಗ್ರಂಥಾಲಯ ಒದಗಿಸುವ ಮೂಲಕ “Galaxy Empowered”, ಗೇಮಿಫಿಕೇಶನ್ ತಂತ್ರಗಳು, ಪರಸ್ಪರ ಸಂವಾದದ ಆಪ್‍೬ ಗಳು ಹಾಗೂ ವಿರ್ಚುವಲ್ ತರಗತಿಗಳು ಒಳಗೊಂಡಂತೆ, ಶಿಕ್ಷಕರು ತಮ್ಮ ತರಗತಿಗಳೊಳಗೆ ಇತ್ತೀಚಿನ ಡಿಜಿಟಲ್ ಸಾಧನಗಳನ್ನು ಸಂಯೋಜಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
- ವಾಸ್ತವ ತರಬೇತಿ ಮತ್ತು ಪ್ರಮಾಣಪತ್ರ: ಶಿಕ್ಷಕರು ತಮ್ಮ ಸಾಧನೆಗಳನ್ನು ಗುರುತಿಸಿಕೊಂಡು ತಮ್ಮ ಕೌಶಲ್ಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವರಿಗೆ ವಾಸ್ತವ ಕಾರ್ಯಾಗಾರಗಳು, ಮಾರ್ಗದರ್ಶನ ಹಾಗೂ ಪ್ರಮಾಣಪತ್ರ ಅವಕಾಶಗಳಿಗೆ ಪ್ರವೇಶಾವಕಾಶ ಪಡೆದುಕೊಳ್ಳುವರು. ಈ ಕಾರ್ಯಕ್ರಮವು, ಪಠ್ಯಕ್ರಮ ಮತ್ತು ಕಂಟೆಂಟ್ ವಿನ್ಯಾಸಕ್ಕಾಗಿ ವಿಶೇಷ ಸಂಪನ್ಮೂಲಗಳು ಜೊತೆಗೆ, ಶಿಕ್ಷಕರ ಸ್ವಾಸ್ಥ್ಯ(ಕ್ಷೇಮಾಭಿವೃದ್ಧಿ)ಯ ಕುರಿತು ಮಾರ್ಗದರ್ಶನವನ್ನೂ ಕೂಡ ಒಳಗೊಂಡಿರುತ್ತದೆ.
- ಸಹಯೋಗ ಮತ್ತು ಕಾರ್ಯಜಾಲ: ಶಿಕ್ಷಕರು, ಶಿಕ್ಷಕರ ಒಂದು ಸಕ್ರಿಯ ಸಮುದಾಯದ ಭಾಗವಾಗಿ, ಸಹಯೋಗಿಯಿಂದ-ಸಹಯೋಗಿಯೊಂದಿಗೆ ಕಾರ್ಯಜಾಲ, ಉದ್ದಿಮೆ ತಜ್ಞರು, ಮತ್ತು ವಿಶೇಷ ಪ್ಯಾನೆಲ್‌ಗಳು ಹಾಗೂ ಪ್ರಮುಖ ಅಧಿವೇಶನಗಳ ಮೂಲಕ ಶಿಕ್ಷಣದಲ್ಲಿ ಆಲೋಚನಾ ನಾಯಕತ್ವಕ್ಕೆ ಪ್ರವೇಶಾವಕಾಶ ಪಡೆದುಕೊಳ್ಳುವರು.
ಶಿಕ್ಷಕರಿಗಾಗಿ ವಿಶೇಷವಾದ ಸ್ಯಾಂಸಂಗ್ ಬಹುಮಾನ(ಪರ್ಕ್ಸ್)ಗಳು
ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಒಳಗೊಂಡಂತೆ, ಸ್ಯಾಂಸಂಗ್, “Galaxy Empowered” ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಕ್ಷಣ ತಜ್ಞರು ಹಾಗೂ ಶಾಲಾ ನಾಯಕರುಗಳಿಗಾಗಿ ತನ್ನ ಉತ್ಪನ್ನಗಳ ವ್ಯಾಪಕ ಶ್ರೇಣಿಯ ಮೇಲೆ ವಿಶೇಷ ರಿಯಾಯಿತಿಗಳನ್ನು ಒದಗಿಸುತ್ತಿದೆ. ಹೆಚ್ಚುವರಿ ಲಾಭಗಳು, ವಿಸ್ತರಿತ ವಾರಂಟಿಗಳು, ಉಚಿತ ವಿಮೆ, ಮತ್ತು ವಿಶೇಷ ಕಾಲ-ಸೀಮಿತ ಡೀಲ್‌ಗಳಿಗೆ ಪ್ರವೇಶಾವಕಾಶ ಮುಂತಾದವನ್ನು ಒಳಗೊಂಡಿವೆ.
“Galaxy Empowered”ನೊಂದಿಗೆ ಶಿಕ್ಷಣ ಕ್ರಾಂತಿಯನ್ನು ಸೇರಿಕೊಳ್ಳಿ
“Galaxy Empowered”, ಶಿಕ್ಷಣತಜ್ಞರು ಹಾಗೂ ಶಾಲೆಗಳು ಇಬ್ಬರಿಗೂ ಉಚಿತ ಕಾರ್ಯಕ್ರಮ ವಾಗಿದ್ದು, ವೃತ್ತಿಪರ ಬೆಳವಣಿಗೆ ಮತ್ತು ಶೈಕ್ಷಣಿಕ ವರ್ಧನೆಗಾಗಿ ಅಮೂಲ್ಯ ಸಂಪನ್ಮೂಲಗಳನ್ನು ಒದಗಿಸುತ್ತದೆ. ಶಿಕ್ಷಕರನ್ನು ಆಧುನಿಕ ಕೌಶಲ್ಯಗಳು ಮತ್ತು ಸಾಧನಗಳಿಂದ ಸಜ್ಜುಗೊಳಿಸುವ ಮೂಲಕ “Galaxy Empowered” , ಭಾರತದಾದ್ಯಂತ ಶಿಕ್ಷಕರು ಹಾಗೂ ಸಂಸ್ಥೆಗಳ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿ ಹೊಂದಿದೆ.
“Galaxy Empowered”, ಕುರಿತು ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಲು ಕಾರ್ಯಕ್ರಮದಲ್ಲಿ ದಾಖಲಾಗು ವುದಕ್ಕೆ, ವಿಶೇಷ ಕೊಡುಗೆಗಳಿಗೆ ಪ್ರವೇಶಾವಕಾಶ ಪಡೆದುಕೊಳ್ಳುವುದಕ್ಕೆ ಉಕ್ಕುಗೆ ಭೇಟಿ ನೀಡಿ: www.samsung.com/in/galaxy-empowered/.