Viral News: ಪ್ರಿಯಕರನ ಜೊತೆ ಇರಲು ಎರಡು ಮಕ್ಕಳನ್ನೇ ಬಿಟ್ಟು ಬಂದ ಮಹಾತಾಯಿ; ಮುಂದೆ ಆಗಿದ್ದೇನು?
ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಿವಾಹಿತ ಮಹಿಳೆಯೊಬ್ಬರು ಅನ್ಯ ಕೋಮಿನ ವಿವಾಹಿತ ಯುವಕನೊಬ್ಬನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದು, ಇದೀಗ . ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಆತನೊಂದಿಗೆ ಇರಲು ಭಾಗಲ್ಪುರದ ನವಗಚ್ಚಿಯಾಗೆ ತೆರಳಿದ್ದಾಳೆ. ಆದರೆ ಆತ ಆಕೆಯೊಂದಿಗೆ ಇರಲು ನಿರಾಕರಿಸಿದ್ದಾನೆ.
![ಗೆಳೆಯನ ಜೊತೆ ಇರಲು ಕುಟುಂಬವನ್ನೇ ತೊರೆದ ಮಹಿಳೆ](https://cdn-vishwavani-prod.hindverse.com/media/original_images/Viral_News_5.jpg)
ಪತಿಯನ್ನು ಬಿಟ್ಟು ಪ್ರಿಯಕರನಿಗೋಸ್ಕರ ಬಂದ ಮಹಿಳೆ
![Profile](https://vishwavani.news/static/img/user.png)
ಲಖನೌ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ ವಿವಾಹಿತ ಮಹಿಳೆಯೊಬ್ಬರು ಅನ್ಯ ಕೋಮಿನ ವಿವಾಹಿತ ಯುವಕನೊಬ್ಬನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದು, ಇದೀಗ . ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಆತನೊಂದಿಗೆ ಇರಲು ಭಾಗಲ್ಪುರದ ನವಗಚ್ಚಿಯಾಗೆ ತೆರಳಿದ್ದಾಳೆ. ಮಹಿಳೆಯನ್ನು ಬಿಂದಿಯಾ ಕುಮಾರಿ ಎಂದು ಗುರುತಿಸಲಾಗಿದ್ದು, ನವಗಚ್ಚಿಯಾದ ಟೆಟ್ರಿ ನಿವಾಸಿಯಾದ ತನ್ನ ಪ್ರಿಯಕರ ಮೊಹಮ್ಮದ್ ಮೆರಾಜ್ ಅಲಿಯ ಮನೆಯ ಮುಂದೆ ತೆರಳಿದ್ದಾರೆ. ಬಿಂದಿಯಾ ಕುಮಾರಿ ಮೂರು ವರ್ಷಗಳಿಂದ ಅಲಿ ಎಂಬಾತನನ್ನು ಪ್ರೀತಿಸಿದ್ದಳು ಎಂದು ತಿಳಿದು (Viral Video) ಬಂದಿದೆ.
ಬಿಂದಿಯಾ ಕುಮಾರಿ ತನ್ನ ಮನೆ ಮತ್ತು ಕುಟುಂಬವನ್ನು ತೊರೆದು ಅಲಿಯೊಂದಿಗೆ ಇರಲು ಆತನ ಮನೆ ಎದುರು ಹೋಗಿ ನಿಂತಿದ್ದಾಳೆ. ಆದರೆ ಅಲಿಗೆ ಈಗಾಗಲೇ ಮದುವೆಯಾಗಿದೆ. ಮನೆಯ ಎದುರು ಹೈಡ್ರಾಮಾವೇ ನಡೆದಿದೆ. ಮೊಹಮ್ಮದ್ ಮೆರಾಜ್ ಅಲಿ ನಾಲ್ಕು ವರ್ಷಗಳ ಹಿಂದೆ ಗಾಜಿಯಾಬಾದ್‌ಗೆ ಕೆಲಸಕ್ಕಾಗಿ ತೆರಳಿದ್ದ ಅಲ್ಲಿ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ. ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಐದು ತಿಂಗಳ ಹಿಂದೆ ಅಲಿ ನವಗಚ್ಚಿಯಾಗೆ ಮರಳಿದ್ದ. ನಂತರ ಆತನ ಮದುವೆ ಬೇರೊಂದು ಹುಡುಗಿ ಜೊತೆ ಮದುವೆಯಾಗಿದ್ದ. ಆತನ ಮದುವೆಯ ವಿಷಯ ತಿಳಿದ ಬಿಂದಿಯಾ ತನ್ನ ಕುಟುಂಬವನ್ನು ತೊರೆದು ಅಲಿ ಬಲಿ ತೆರಳಿದ್ದಾಳೆ.
ಸದ್ಯ ಅಲಿಯ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿದೆ. ಆಕೆಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಎದುರೇ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಈ ಬಗ್ಗೆ ಮಾತನಾಡಿದ ಮಹಿಳೆ ಮೆರಾಜ್ ಮೊದಲು ನನ್ನನ್ನು ಪ್ರೀತಿಸುತ್ತಿದ್ದ. ಉತ್ತರ ಪ್ರದೇಶಕ್ಕೆ ಮತ್ತು ಕೆಲವೊಮ್ಮೆ ಬಿಹಾರಕ್ಕೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳಸಿದ್ದ. ಮದುವೆಯ ವಿಷಯಕ್ಕೆ ಬಂದಾಗ, ಬೇರೊಬ್ಬರ ಜೊತೆ ಮದುವೆಯಾಗಿದ್ದಾನೆ. ಮೆರಾಜ್ ಅಲಿ ನನ್ನನ್ನು ಬಳಸಿಕೊಂಡು ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಈಗ ನಾನು ನನ್ನ ಕುಟುಂಬದವರೊಂದಿಗೆ ಜಗಳವಾಡಿ ಮನೆಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ: Viral Video: ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ನಡುರಸ್ತೆಯಲ್ಲಿ ಪೆಟ್ರೋಲ್ ಸುರಿದ ಯುವಕ; ಭಯಾನಕ ವಿಡಿಯೊ ವೈರಲ್
ಆಕೆಯ ಮಾತಿಗೆ ಪ್ರತಿಕ್ರಿಯಿಸಿರುವ ಅಲಿ ಮೂರು ವರ್ಷಗಳ ಹಿಂದೆ ನಾನು ಫೇಸ್‌ಬುಕ್ ಮೂಲಕ ಆ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದೆ. ನನಗೆ ಆಗ ಆಕೆಗೆ ಮದುವೆಯಾಗಿದೆ ಎಂದು ತಿಳಿದಿರಲಿಲ್ಲ. ಅವಳು ಎರಡು ಮಕ್ಕಳ ತಾಯಿ ಎಂದು ನನಗೆ ತಿಳಿದಾಗ, ನಾನು ಎಂಟು ತಿಂಗಳ ಕಾಲ ಆಕೆಯೊಂದಿಗೆ ಮಾತನಾಡಿರಲಿಲ್ಲ. ಆಗ ನಾನು ಆಕೆಗೆ ಬೇರೆಯೊಬ್ಬರ ಜೊತೆ ಮದುವೆಯಗುತ್ತಿದ್ದೇನೆ ಎಂದು ಆಕೆಗೆ ಹೇಳಿದಾಗ ನೀನು ಸತ್ತು ಹೋಗು, ನನಗೆ ನಿನ್ನ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದ್ದಳು. ಈಗ ಬೇಕಂತಲೇ ಬಂದು ಗಲಾಟೆ ಸೃಷ್ಟಿಸುತ್ತಿದ್ದಾಳೆ ಎಂದು ಹೇಳಿದ್ದಾನೆ. ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.