Sandeep Sharma Muteri Column: ವಾರಕ್ಕೆ 90 ಗಂಟೆ ಕೆಲಸ ವಾದ ವಿವಾದದ ಸುತ್ತ
ಭಾರತದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವೃತ್ತಿಗತ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020ರ ಪ್ರಕಾರ, ಯಾವುದೇ ನೌಕರನು ಯಾವುದೇ ಸಂಸ್ಥೆಯಲ್ಲಿ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಅಥವಾ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡು ವಂತಿಲ್ಲ
![ವಾರಕ್ಕೆ 90 ಗಂಟೆ ಕೆಲಸ ವಾದ ವಿವಾದದ ಸುತ್ತ](https://cdn-vishwavani-prod.hindverse.com/media/original_images/sn-subrahmanyan-1_J.jpg)
![Profile](https://vishwavani.news/static/img/user.png)
ಪ್ರಸ್ತುತ
ಸಂದೀಪ್ ಶರ್ಮಾ ಮೂಟೇರಿ
ಲಾಸನ್ ಟೂಬ್ರೊ ಸಂಸ್ಥೆಯ ಸಿಎಂಡಿ ಎಸ್.ಎನ್. ಸುಬ್ರಹ್ಮಣ್ಯನ್ ಅವರು ಇತ್ತೀಚೆಗೆ ಭಾನುವಾರ ದಂದೂ ನೌಕರರನ್ನು ಕೆಲಸಕ್ಕೆ ಕರೆಯಲು ಸಾಧ್ಯವಾಗದ ಬಗ್ಗೆ ವ್ಯಕ್ತಪಡಿಸಿದ ಖೇದವು ತೀವ್ರ ಚರ್ಚೆಯನ್ನು ಹುಟ್ಟು ಹಾಕಿತ್ತು. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಪ್ರತಿ ಪಾದಿಸಿದ 70 ಗಂಟೆಗಳ ವಾರದ ಕೆಲಸದ ಅವಧಿಯನ್ನು ಮೀರಿ, ಅವರು 90 ಗಂಟೆಗಳ ವಾರದ ಕೆಲಸದ ಅವಧಿಯನ್ನು ಸೂಚಿಸಿದ್ದಾರೆ. 26 ವರ್ಷದ ಅರ್ನಸ್ಟೆ ಆಂಡ್ ಯಂಗ್ ನೌಕರೆ ಅನ್ನಾ ಸೆಬಾಸ್ಟಿಯನ್ ಪೆರಯಿಲ್ ಅವರ ಸಾವಿನ ನಂತರ ಭಾರತದಲ್ಲೂ ಕೆಲಸದ ಒತ್ತಡದ ಕುರಿತು ಚರ್ಚೆ ಆರಂಭವಾಗಿದೆ.
ಈ ಸಂದರ್ಭದಲ್ಲಿಯೇ ಇವರು ನೀಡಿದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. ಸುಬ್ರಹ್ಮಣ್ಯನ್ ಅವರ ಹೇಳಿಕೆಯನ್ನು ಹಲವಾರು ಕಾರ್ಪೊರೇಟ್ ಮುಖ್ಯಸ್ಥರು ತಿರಸ್ಕರಿಸಿದ್ದಾರೆ.
ಇವರಲ್ಲಿ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ, ಐಟಿಸಿ ಲಿಮಿಟೆಡ್‌ನ ಸಿಎಂಡಿ ಸಂಜೀವ್ ಪುರಿ, ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಪ್ರಸ್ತುತ ಅಧ್ಯಕ್ಷ ಹರ್ಷವರ್ಧನ್ ಗೊಯೆಂಕಾ, ಭಾರತ್‌ಪೇ ಸಿಇಒ ನಲಿನ್ ನೇಗಿ, ಬಜಾಜ್ ಆಟೋದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್, ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಆರ್ಥಿಕ ಸದಸ್ಯ ಸಂಜೀವ್ ಸನ್ಯಾಲ್ ಕೂಡ ಸೇರಿದ್ದಾರೆ.
ಇದನ್ನೂ ಓದಿ: Sandeep Shastri Column: ನಿರಂತರ ನಡೆವ ಚುನಾವಣೆಗಳ ಸುಳಿಯಿಂದ ತಪ್ಪಿಸಿಕೊಳ್ಳಬೇಕಿದೆ
ಭಾರತದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವೃತ್ತಿಗತ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020ರ ಪ್ರಕಾರ, ಯಾವುದೇ ನೌಕರನು ಯಾವುದೇ ಸಂಸ್ಥೆಯಲ್ಲಿ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಅಥವಾ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡು ವಂತಿಲ್ಲ.
ಅವಧಿ ಮೀರಿ ಕೆಲಸ ಮಾಡಲು ಒತ್ತಡ ಹೇರಿದರೆ ಕಾನೂನು ರೀತ್ಯ ಕ್ರಮ ಜರುಗಿಸಬಹುದಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಪ್ರಕಾರ, 2024ರ ಮಧ್ಯಂತರ ಜನವರಿ ಯಂತೆ, ವಿಶ್ವದ 10 ದೊಡ್ಡ ಆರ್ಥಿಕತೆಗಳಲ್ಲಿ ಪ್ರತಿ ಉದ್ಯೋಗಿಯ ಸರಾಸರಿ ವಾರದ ಕೆಲಸದ ಗಂಟೆಗಳು ಹೀಗಿವೆ:
- ಅಮೆರಿಕ : 38 ಗಂಟೆಗಳು
- ಚೀನಾ: 46.1 ಗಂಟೆಗಳು
- ಜರ್ಮನಿ: 34.2 ಗಂಟೆಗಳು
- ಜಪಾನ್: 36.6 ಗಂಟೆಗಳು
- ಭಾರತ: 46.7 ಗಂಟೆಗಳು
- ಗ್ರೇಟ್ ಬ್ರಿಟನ್ : 35.9 ಗಂಟೆಗಳು
- -ನ್ಸ್ : 35.9 ಗಂಟೆಗಳು
- ಬ್ರೆಜಿಲ: 39 ಗಂಟೆಗಳು
- ಇಟಲಿ: 36.3 ಗಂಟೆಗಳು
- ಕೆನಡಾ: 32.1 ಗಂಟೆಗಳು
ವಿಶ್ವದ ಅತಿ ಹೆಚ್ಚು ಕೆಲಸ ಮಾಡುವ ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. ಪ್ರತಿ ವಾರ ಸರಾ ಸರಿ 46.7 ಗಂಟೆಗಳ ಕೆಲಸದ ಅವಧಿಯೊಂದಿಗೆ, ಭಾರತವು ವಿಸ್ತರಿತ ಕೆಲಸದ ವೇಳಾಪಟ್ಟಿಯ ನಿರಂ ತರ ಸಂಸ್ಕೃತಿಯನ್ನು ಎದುರಿಸುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಅತಿಯಾದ ಕೆಲಸವನ್ನು ವೃತ್ತಿಪರ ರೋಗಗಳಿಗೆ ಸಂಬಂಧಿಸಿದ ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿ ಗುರುತಿಸಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಟನೆಯ ದತ್ತಾಂಶದ ಪ್ರಕಾರ, ಲಕ್ಸೆಂಬರ್ಗ್ ಪ್ರತಿ ಗಂಟೆಯ ಕೆಲಸದಲ್ಲಿ 166.1 ಜಿಡಿಪಿಯೊಂದಿಗೆ ಅತ್ಯಧಿಕ ಉತ್ಪಾದಕತೆಯನ್ನು ಹೊಂದಿದ್ದು, ಸರಾಸರಿ 35.6 ಗಂಟೆಗಳ ವಾರದ ಕೆಲಸದ ವೇಳಾಪಟ್ಟಿ ಯನ್ನು ಹೊಂದಿದೆ.
ಐರ್ಲೆಂಡ್ ಪ್ರತಿ ಗಂಟೆಯ ಕೆಲಸದಲ್ಲಿ 139.1 ಜಿಡಿಪಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಸರಾಸರಿ 35.6 ಗಂಟೆಗಳ ವಾರದ ಕೆಲಸದ ವೇಳಾಪಟ್ಟಿಯನ್ನು ಹೊಂದಿದೆ. ಆದರೆ ಭಾರತವು ಪ್ರತಿ ಗಂಟೆಯ ಕೆಲಸದಲ್ಲಿ 1.0.7 ಜಿಡಿಪಿ ಕಾರ್ಮಿಕ ಉತ್ಪಾದಕತೆಯನ್ನು ಹೊಂದಿದ್ದು, ಸರಾಸರಿ 46.7 ಗಂಟೆಗಳ ವಾರದ ಕೆಲಸದ ವೇಳಾಪಟ್ಟಿಯನ್ನು ಹೊಂದಿದೆ.
ಮ್ಯಾಕ್‌ಕಿನ್ಸಿ ಹೆಲ್ತ್ ಇನ್ಸ್ಟಿಟ್ಯೂಟ್‌ನ ಇತ್ತೀಚಿನ ವರದಿಯ ಪ್ರಕಾರ, ನೌಕರರ ಆರೋಗ್ಯದಲ್ಲಿ ಹೂಡಿಕೆ ಮಾಡುವುದು ಆರ್ಥಿಕ ಲಾಭವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ತಿಳಿಸಿದೆ. ವರ್ಲ್ಡ್ ಎಕನಾಮಿಕ್ ಫಾರಂ ನೊಂದಿಗೆ ಸಹಯೋಗದಲ್ಲಿ ಸಂಸ್ಥೆಯು ನಡೆಸಿದ ಸಂಶೋಧನೆಯ ಪ್ರಕಾರ, ನೌಕರರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವು ಜಾಗತಿಕ ಆರ್ಥಿಕ ಮೌಲ್ಯದಲ್ಲಿ 11. ಟ್ರಿಲಿಯನ್‌ವರೆಗೆ ಹೆಚ್ಚಳ ವನ್ನು ತರಬಹುದಾಗಿದೆ ಎಂದು ವರದಿ ಹೇಳುತ್ತಿದೆ.
ಈ ಅಧ್ಯಯನಗಳು ಮತ್ತು ಅಂಕಿ-ಅಂಶಗಳು ಸ್ಪಷ್ಟಪಡಿಸುವಂತೆ, ಉದ್ಯೋಗಿಗಳ ಆರೋಗ್ಯ ಮತ್ತು ಕೆಲಸದ-ಜೀವನದ ಸಮತೋಲನವು ಕೇವಲ ಮಾನವೀಯ ವಿಷಯವಷ್ಟೇ ಅಲ್ಲ, ಆರ್ಥಿಕ ಅಭಿವೃದ್ಧಿಯ ಪ್ರಮುಖ ಅಂಶವೂ ಆಗಿದೆ. ವಿಸ್ತರಿತ ಕೆಲಸದ ಅವಧಿಯು ಉದ್ಯೋಗಿಗಳ ಆರೋಗ್ಯ ದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರ ಜೊತೆಗೆ, ಸಂಸ್ಥೆಗಳ ದೀರ್ಘಾವಧಿಯ ಉತ್ಪಾದಕತೆ ಮತ್ತು ಲಾಭದಾಯಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ.
ಈ ಹಿನ್ನೆಲೆಯಲ್ಲಿ, ಭಾರತದ ಕಾರ್ಪೊರೇಟ್ ವಲಯವು ಉದ್ಯೋಗಿಗಳ ಯೋಗಕ್ಷೇಮ ಮತ್ತು ಕಾರ್ಯಕ್ಷಮತೆಯ ಪ್ರೀತಿಗೆ ಸಾಕೇ ಒಂದೇ ದಿನ ? ನಾಳೆ ಫೆಬ್ರವರಿ 14. ಹಲವು ಪ್ರೇಮಿಗಳ ಪಾಲಿಗೆ ಇದು ವ್ಯಾಲಂಟೈನ್ಸ್ ಡೇ. ಹೊರದೇಶದ ಆಚರಣೆ ನಮ್ಮಲ್ಲಿಗೂ ಎರವಲು ತಂದು ಈ ದಿನ ಆಚರಿಸಲಾಗುತ್ತದೆ.
ಆಚರಣೆಯ ಪರ ಮತ್ತು ವಿರೋಧದ ಅಭಿಪ್ರಾಯಗಳು ಪ್ರತೀ ವರ್ಷ ಇದ್ದೇ ಇರುತ್ತದೆ. ಈ ಪ್ರೀತಿ ಒಂಥರಾ ಕಚಗುಳಿ. ಆ ಕಚಗುಳಿಯ ನಗು ಪ್ರೇಮಿಗಳಲ್ಲಿ ನಿರಂತರವಾಗಿ ಜೀವನದುದ್ದಕ್ಕೂ ಇರುವಂತಹದು. ನಿಜವಾದ ಪ್ರೀತಿ ಇದ್ದರೆ ಅದನ್ನು ವ್ಯಕ್ತಪಡಿಸಲು ಒಂದು ದಿನ ಬೇಕೆ? ಅಥವಾ ಒಂದೇ ದಿವಸ ಸಾಕೇ? ಎನ್ನುವ ಒಂದು ಪ್ರಶ್ನೆ ಬರುತ್ತದೆ. ಹಾಗಾಗಿ ಈ ದಿನ ಮಾತ್ರ ವಿಶೇಷ ಏಕೆ ಅಂತ ಅನಿಸುತ್ತದೆ.
ಈಗ ಪ್ರತೀ ಒಂದಕ್ಕೂ ಒಂದೊಂದು ದಿವಸ ಅಂತ ಆಚರಿಸುತ್ತಿರುವಾಗ ಪ್ರೇಮಿಗಳ ದಿನ ಆಚರಿ ಸುವುದರಲ್ಲಿ ತಪ್ಪೇನಿಲ್ಲ ಅಂತ ಆಚರಿಸುವವರ ವಾದ. ಅಪ್ಪನ ದಿನ,ಅಮ್ಮನ ದಿನ ಹಾಗೂ ಪ್ರೀತಿ ವ್ಯಕ್ತಪಡಿಸುವ ಈ ವ್ಯಾಲೆಂಟೈನ್ಸ್ ದಿನ ಈ ಮೂರನ್ನೂ ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಿಸು ವಂತದು ಅಷ್ಟು ಸೂಕ್ತವಲ್ಲ ಅನಿಸುತ್ತದೆ.
ಏಕೆಂದರೆ ತಾಯಿಯ ಪ್ರೀತಿ, ತಂದೆಯ ಮಮತೆ, ಸಂಗಾತಿಯ ಪ್ರೀತಿ ಒಂದು ದಿನ ನೆನಪು ಮಾಡಿ ಕೊಂಡು ಆಚರಿಸುವಂತಹದಲ್ಲ.ಈ ಮೂರೂ ಕೂಡ ಶಾಶ್ವತವಾದ ಬಂಧನದಿಂದ ಕೂಡಿರು ವಂತಹದು. ಜೀವನದುದ್ದಕ್ಕೂ ನಿರಂತರವಾಗಿ ಇರುವಂತಹ ಬಂಧ ಇದು. ಆದರೆ ಆಚರಣೆ ಅವರ ವರ ಸ್ವಂತ ಅಭಿಪ್ರಾಯ. ಆಯ್ಕೆಗೆ ಬಿಟ್ಟಿದ್ದು. ಆದ್ದರಿಂದ ವಾಲೈಂಟೈನ್ಸ್ ಡೇ ಆಚರಿಸುತ್ತಿರುವವರಿಗೆ ಕೇಳಿದರೆ ರವಿಚಂದ್ರನ್ ಅವರ ಶೈಲಿಯಲ್ಲಿ ’ಪ್ರೀತ್ಸೋದ್ ತಪ್ಪಾ’? ಅಂತ ಕೇಳುತ್ತಾರೆ. ಅದಕ್ಕೆ ರವಿಚಂದ್ರನ್ ಅವರ ಶೈಲಿಯ ‘ಪ್ರೀತ್ಸು ತಪ್ಪೇನಿಲ್ಲ’ ಎನ್ನುತ್ತಾರೆ.
ಪ್ರೀತಿಯಲ್ಲಿ ಹಾರಾಡುತ್ತಿರುವ ಹಕ್ಕಿಗಳಿಗೊಂದು ಕಿವಿ ಮಾತು. ಪ್ರೀತಿ ಕೇವಲ ಆಕರ್ಷಣೆ ಆಗದಿರಲಿ, ಪ್ರೀತಿ ಕೇವಲ ಸಮಯ ಕಳೆಯುವ ಅಸ್ತ್ರವಾಗದಿರಲಿ, ಪ್ರೀತಿ ಕೇವಲ ಒಂದು ದಿನದ ಸಂಭ್ರಮ ವಾಗದಿರಲಿ, ಪ್ರೀತಿಯಲ್ಲಿ ಭರವಸೆ ಇರಲಿ,ನಂಬಿಕೆ ಗಟ್ಟಿಯಾಗಿರಲಿ, ಪ್ರಾಮಾಣಿಕತೆಯಿಂದ ಕೂಡಿರಲಿ, ಸಂಬಂಧಗಳಲ್ಲಿ ಹೊಂದಾಣಿಯಿರಲಿ, ಫೆಬ್ರುವರಿಯಲ್ಲಿ ಅರಳಿದ ಪ್ರೀತಿ ಮಾರ್ಚ್ ನಲ್ಲಿ ಬಾಡದಿರಲಿ. ಪ್ರೀತಿ ಶಾಶ್ವತವಾಗಿರಲಿ. ಆಗ ಅರ್ಥವಿಲ್ಲದ ವ್ಯಾಲೆಂಟೈನ್ಸ್ ಡೇಗೂ ಕೂಡ ಒಂದು ಅರ್ಥ ಬರುತ್ತದೆ.