Archana Puran Singh: ಸಿನಿಮಾ ಶೂಟಿಂಗ್ ವೇಳೆ ಅವಘಡ; ನಟಿ ಅರ್ಚನಾ ಪೂರಣ್ ಸಿಂಗ್‌ಗೆ ಗಾಯ!
ಅರ್ಚನಾ ಪೂರಣ್ ಸಿಂಗ್ ಇತ್ತೀಚೆಗೆ ಮುಂಬೈನ ವಿರಾರ್‌ನಲ್ಲಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಬಿದ್ದು ಅಪಘಾತಗೀಡಾಗಿದ್ದಾರೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರೊಂದಿಗಿನ ಚಿತ್ರದ ಚಿತ್ರೀಕರಣದ ವೇಳೆ ಅರ್ಚನಾ ಕಾಲು ಜಾರಿ ಬಿದ್ದು ಮಣಿಕಟ್ಟು ಮುರಿದುಕೊಂಡಿದ್ದಾರೆ. ತಕ್ಷಣವೇ ಅವರನ್ನು ವಿಲೆ ಪಾರ್ಲೆಯಲ್ಲಿರುವ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು ಸದ್ಯ ಚೇತರಿಸಿಕೊಂಡಿದ್ದಾರೆ.


ಮುಂಬೈ: ಚಿತ್ರದ ಶೂಟಿಂಗ್ ವೇಳೆ ನಟಿ ಅರ್ಚನಾ ಪೂರಣ್ ಸಿಂಗ್ (Archana Puran Singh) ಬಿದ್ದು, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಅರ್ಚನಾ ಈ ಬಗ್ಗೆ ವಿಡಿಯೊ ಮಾಡಿ ಶೇರ್ ಮಾಡಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಅರ್ಚನಾ ಪೂರಣ್ ಸಿಂಗ್ ಇತ್ತೀಚೆಗೆ ಮುಂಬೈನ ವಿರಾರ್‌ನಲ್ಲಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಬಿದ್ದು ಅಪಘಾತಕ್ಕೀಡಾಗಿದ್ದಾರೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರೊಂದಿಗಿನ ಚಿತ್ರದ ಚಿತ್ರೀಕರಣದ ವೇಳೆ ಅರ್ಚನಾ ಕಾಲು ಜಾರಿ ಬಿದ್ದು ಮಣಿಕಟ್ಟು ಮುರಿದುಕೊಂಡಿದ್ದಾರೆ. ತಕ್ಷಣವೇ ಅವರನ್ನು ವಿಲೆ ಪಾರ್ಲೆಯಲ್ಲಿರುವ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು ಸದ್ಯ ಚೇತರಿಸಿಕೊಂಡಿದ್ದಾರೆ.
ನಟಿ ಅರ್ಚನಾ ಪೂರಣ್ ಅವರು ಇನ್ಸ್ಟಾಗ್ರಾಂನಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದು ಮಣಿಕಟ್ಟು ಮುರಿದುಕೊಂಡಿದ್ದು ಮುಖಕ್ಕೂ ಗಾಯಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. ಈ ಆಘಾತಕಾರಿ ವಿಚಾರ ಕೇಳಿ ಅವರ ಕುಟುಂಬ ಹೇಗೆ ಪ್ರತಿಕ್ರಿಯೆ ನೀಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಅಪಘಾತದ ವಿಚಾರವನ್ನು ತನ್ನ ಮಗ ಕುಟುಂದವರಿಗೆ ತಿಳಿಸಿದ್ದಾನೆ.ಈ ಸ್ಥಿತಿ ನೋಡಿ ತನ್ನ ಮಗ ಕಣ್ಣೀರಿಟ್ಟಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ತನ್ನ ಸಿನಿಮಾ ಚಿತ್ರೀಕರಣವನ್ನು ಅರ್ಧಕ್ಕೆ ಬಿಟ್ಟಿದ್ದಕ್ಕಾಗಿ ಕ್ಷಮೆ ಕೇಳಲು ನಾನು ರಾಜ್‌ಕುಮಾರ್ ರಾವ್‌ಗೆ ಕರೆ ಮಾಡಿದ್ದೇನೆ. ಅವರು ಮತ್ತಷ್ಟು ತೊಂದರೆ ಅನುಭವಿಸುವುದು ತನಗೆ ಇಷ್ಟವಿಲ್ಲವಾದ್ದರಿಂದ ಆದಷ್ಟು ಬೇಗ ಮತ್ತೆ ಕೆಲಸಕ್ಕೆ ಮರಳುತ್ತೇನೆ ಎಂದು ಅವರು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ: Madhugiri News: ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಪರಾರಿಯಾದ ದಂಪತಿ!
ಕುಚ್ ಕುಚ್ ಹೋತಾ ಹೈ ಸಿನಿಮಾ ಮೂಲಕ ಫೇಮ್ ಗಿಟ್ಟಿಸಿಕೊಂಡ ನಟಿ ಕ್ರಿಶ್' ಮಸ್ತಿ ದೇ ದನಾ ದನ್ ಬೋಲ್ ಬಚ್ಚನ್' ಸಿನಿಮಾದಲ್ಲಿ ಅರ್ಚನಾ ಅವರು ನಟಿಸಿದ್ದರು. Nach Baliye 1 ಶೋನಲ್ಲಿ ಅರ್ಚನಾ ಪರ್ಮೀತ್ ಅವರು ಜೋಡಿಯಾಗಿ ಭಾಗಿಯಾಗಿದ್ದರು ಶ್ರೀಮಾನ್ ಶ್ರೀಮತಿ ಜುನೂನ್ ಧಾರಾವಾಹಿಯಲ್ಲಿಯೂ ಅರ್ಚನಾ ನಟಿಸಿದ್ದರು.