Kareena Kapoor: ಕರೀನಾ-ಸೈಫ್ ಬಾಳಲ್ಲೂ ಬಿರುಗಾಳಿ; ಡಿವೋರ್ಸ್ ಬಗ್ಗೆ ಬೇಬೋ ಪೋಸ್ಟ್
ಬಿ ಟೌನ್‌ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ವಿಚ್ಛೇದನದ ಬಗ್ಗೆ ಸುದ್ದಿ ಹಬ್ಬುತ್ತಿದೆ. ನಟಿ ಕರೀನಾ ಕಪೂರ್(Kareena Kapoor) ಮತ್ತು ಸೈಫ್ ಅಲಿ ಖಾನ್(Saif Ali Khan) ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ಇಬ್ಬರು ವಿಚ್ಛೇದನದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಟಿ ಕರೀನಾ ಮಾಡಿರುವ ಒಂದು ಪೋಸ್ಟ್ ಭಾರೀ ಸದ್ದು ಮಾಡುತ್ತಿದೆ.
![ಬಿಟೌನ್‌ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ಡಿವೋರ್ಸ್ ವದಂತಿ](https://cdn-vishwavani-prod.hindverse.com/media/original_images/kareena_-_Saif.jpg)
![Profile](https://vishwavani.news/static/img/user.png)
ಮುಂಬೈ: ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಜೋಡಿಯ ವೈವಾಹಿಕ ಬದುಕು ವಿಚ್ಛೇದನಕ್ಕೆ ಬಂದು ತಲುಪಿದೆ ಎಂಬ ಸುದ್ದಿ ಭಾರೀ ಹಬ್ಬಿತ್ತು. ಆದರೆ ನಂತರ ದಿನಗಳಲ್ಲಿ ಈ ಜೋಡಿ ಹಲವು ಬಾರಿ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿತ್ತು. ಇದೀಗ ಬಿ ಟೌನ್‌ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ವಿಚ್ಛೇದನದ ಬಗ್ಗೆ ಸುದ್ದಿ ಹಬ್ಬುತ್ತಿದೆ. ನಟಿ ಕರೀನಾ ಕಪೂರ್(Kareena Kapoor) ಮತ್ತು ಸೈಫ್ ಅಲಿ ಖಾನ್(Saif Ali Khan) ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ಇಬ್ಬರು ವಿಚ್ಛೇದನದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಟಿ ಕರೀನಾ ಮಾಡಿರುವ ಒಂದು ಪೋಸ್ಟ್ ಭಾರೀ ಸದ್ದು ಮಾಡುತ್ತಿದೆ.
ಕರೀನಾ ಪೋಸ್ಟ್‌ನಲ್ಲಿ ಏನಿದೆ?
ಪತಿ ಸೈಫ್ ಅಲಿ ಖಾನ್ ಮೇಲೆ ಜನವರಿ 16 ರಂದು ನಡೆದ ಹಲ್ಲೆ ಮತ್ತು ನಂತರದ ವಿವಾದಗಳ ನಂತರ ಕರೀನಾ ಈ ಪೋಸ್ಟ್ ಮಾಡಿದ್ದು, ಮದುವೆ, ವಿಚ್ಛೇದನ, ಆತಂಕ, ಹೆರಿಗೆ, ಪ್ರೀತಿಪಾತ್ರ ವ್ಯಕ್ತಿಯ ಸಾವು, ಪೋಷಕರಾಗುವುದು ಇವೆಲ್ಲವೂ ನಿಮಗೆ ಅರ್ಥವಾಗುವುದಿಲ್ಲ. ನಿಮ್ಮ ಜೀವನದಲ್ಲಿ ಅವು ಸಂಭವಿಸುವವರೆಗೆ. ಜೀವನದ ಸನ್ನಿವೇಶಗಳ ಬಗ್ಗೆ ಊಹೆಗಳು ಮತ್ತು ಊಹಾಪೋಹಗಳು ವಾಸ್ತವವಲ್ಲ. ನಿಮ್ಮ ಸರದಿ ಬಂದಾಗ, ಜೀವನದಲ್ಲಿ ಅದನ್ನು ಅನುಭವಿಸುವವರೆಗೆ ನೀವು ಎಲ್ಲರಿಗಿಂತಲೂ ಬುದ್ಧಿವಂತರು ಎಂದು ನೀವು ಭಾವಿಸುತ್ತೀರಿ" ಎಂದು ಕರೀನಾ ಶನಿವಾರ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
![Kareena Kapoor](https://cdn-vishwavani-prod.hindverse.com/media/images/WhatsApp_Image_2025-02-11_at_21.15.40.width-800.jpg)
ಇದರಲ್ಲಿ ವಿಚ್ಛೇದನ ಎಂಬ ಪದ ಕಂಡುಬಂದ ನಂತರ ಬಾಲಿವುಡ್ ಮಾಧ್ಯಮಗಳಲ್ಲಿ ದೊಡ್ಡ ಗಾಳಿಸುದ್ದಿ ಹಬ್ಬಿದೆ. ಇದರ ಬಗ್ಗೆ ರೆಡ್ಡಿಟ್‌ನಲ್ಲಿ ವಿವಿಧ ಚರ್ಚೆಗಳು ನಡೆಯುತ್ತಿವೆ. ಕರೀನಾ ತನ್ನ ಸ್ವಂತ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆಯೇ ಎಂಬಂತಹ ಹಲವು ಪ್ರಶ್ನೆಗಳನ್ನು ಜನರು ಎತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Saif Ali Khan: ಸೈಫ್ ಪ್ರಕರಣದಲ್ಲಿ ಮುಂಬೈ ಪೊಲೀಸರ ಒಂದು ಮಿಸ್ಟೇಕ್; ಅಮಾಯಕನ ಕೆಲಸವೂ ಹೋಯ್ತು, ಮದುವೆ ಕ್ಯಾನ್ಸಲ್!
ಕಳೆದ ತಿಂಗಳು ಅಂದರೆ ಜನವರಿ 16 ರಂದು ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದಿತ್ತು. ಈ ದಾಳಿ ಅವರ ಮೇಲೆ ಅವರದೇ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯರಾತ್ರಿ ನಡೆದಿತ್ತು. ಒಬ್ಬ ಒಳನುಗ್ಗುವವನು ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದನು, ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರ ಶಸ್ತ್ರಚಿಕಿತ್ಸೆ ನಡೆಯಿತು. ದಾಳಿಯ ನಂತರ ಸೈಫ್ ಅಲಿ ಖಾನ್ 5 ದಿನಗಳ ಕಾಲ ಲೀಲಾವತಿ ಆಸ್ಪತ್ರೆಯಲ್ಲಿದ್ದರು. ದಾಳಿಯಾದ ದಿನವೇ ಅವರಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಅವರನ್ನು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಅವರಿಗೆ ಆರು ಕಡೆ ಗಾಯಗಳಾಗಿವೆ ಎಂದು ಹೇಳಿದ್ದಾರೆ, ಅದರಲ್ಲಿ ಎರಡು ಆಳವಾದ ಗಾಯಗಳಾಗಿವೆ. ಸೈಫ್ ಅವರನ್ನು ಜನವರಿ 21 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.