ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sikandar Movie: 'ಸಿಕಂದರ್‌' ರಿಲೀಸ್‌ ಬೆನ್ನಲ್ಲೇ ಸಲ್ಮಾನ್‌ ಖಾನ್‌ಗೆ ಶಾಕ್‌ ಕೊಟ್ಟ ಹ್ಯಾಕರ್ಸ್‌; ಆನ್‌ಲೈನ್‌ನಲ್ಲಿ ಎಚ್‌ಡಿ ಪ್ರಿಂಟ್‌ ಲೀಕ್‌

Sikandar Full Movie Leaked: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರ ʼಸಿಕಂದರ್‌ʼ ತೆರೆಕಂಡಿದೆ. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌-ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಈ ಸಿನಿಮಾ ಈದ್‌ ಹಿನ್ನೆಲೆಯಲ್ಲಿ ಸಂಪ್ರದಾಯ ಮುರಿದು ಭಾನುವಾರ (ಮಾ. 30) ಚಿತ್ರ ತೆರೆಕಂಡಿದೆ. ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿರುವ ಮಧ್ಯೆಯೇ ಎಚ್‌ಡಿ ಪ್ರಿಂಟ್‌ ಲೀಕ್‌ ಆಗಿದ್ದು, ಕಲೆಕ್ಷನ್‌ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ.

'ಸಿಕಂದರ್‌' ರಿಲೀಸ್‌ ಮುನ್ನವೇ ಎಚ್‌ಡಿ ಪ್ರಿಂಟ್‌ ಲೀಕ್‌

ʼಸಿಕಂದರ್‌ʼ ಚಿತ್ರದ ಪೋಸ್ಟರ್‌.

Profile Ramesh B Mar 30, 2025 2:10 PM

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರ ʼಸಿಕಂದರ್‌ʼ (Sikandar Movie) ತೆರೆಕಂಡಿದೆ. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan)-ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು, ಕಾಲಿವುಡ್‌ ಸೂಪರ್‌ ಹಿಟ್‌ ಸಿನಿಮಾಗಳ ನಿರ್ದೇಶಕ ಎ.ಆರ್‌.ಮುರುಗದಾಸ್‌ (A.R. Murugadoss) ಅವರ ಆ್ಯಕ್ಷನ್‌ ಕಟ್‌, ಅದ್ದೂರಿ ನಿರ್ಮಾಣ, ಈಗಾಗಲೇ ರಿಲೀಸ್‌ ಆಗಿ ಗಮನ ಸೆಳೆದ ಟ್ರೈಲರ್‌, ಟೀಸರ್‌, ಹಾಡು-ಈ ಎಲ್ಲ ಕಾರಣಗಳಿಂದ ʼಸಿಕಂದರ್‌ʼ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿತ್ತು. ಈದ್‌ ಹಿನ್ನೆಲೆಯಲ್ಲಿ ಸಂಪ್ರದಾಯ ಮುರಿದು ಶುಕ್ರವಾರದ ಬದಲು ಭಾನುವಾರ (ಮಾ. 30) ಚಿತ್ರ ತೆರೆಕಂಡಿದೆ. ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿರುವ ಮಧ್ಯೆಯೇ ಬಹುದೊಡ್ಡ ಶಾಕ್‌ ಎದುರಾಗಿದೆ. ಹೌದು, ʼಸಿಕಂದರ್‌ʼ ಚಿತ್ರದ ಎಚ್‌ಡಿ ಪ್ರಿಂಟ್‌ ಲೀಕ್‌ ಆಗಿದೆ.

ʼಸಿಕಂದರ್‌ʼ ಚಿತ್ರದ ಎಚ್‌ಡಿ ಪ್ರಿಂಟ್‌ ವಿವಿಧ ವೆಬ್‌ಸೈಟ್‌ಗಳಲ್ಲಿ ಉಚಿತ ಡೌನ್‌ಲೋಡ್‌ಗೆ ಲಭ್ಯವಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಆ ಮೂಲಕ ಸಣ್ಣ ಬಜೆಟ್‌ ಚಿತ್ರಗಳು ಮಾತ್ರವಲ್ಲದೆ ಬಹುಕೋಟಿ ರೂ. ವೆಚ್ಚದ ಸಿನಿಮಾವೂ ಪೈರಸಿ ಕಾಟದಿಂದ ಮುಕ್ತವಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಕೋಮಲ್‌ ನಹ್ತಾ ಅವರ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Sikandar Teaser Out: 'ಸಿಕಂದರ್‌' ಚಿತ್ರದ ಟೀಸರ್‌ ಔಟ್‌; ಸಲ್ಮಾನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ: ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ

ʼಸಿಕಂದರ್‌ʼ ಚಿತ್ರ ತೆರೆಗೆ ಬರುವ ಮುನ್ನವೇ ಅದರ ಪೈರಸಿ ಕಾಪಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಸಿನಿಮಾ ವಿಶ್ಲೇಷಕ ಕೋಮಲ್‌ ನಹ್ತಾ ತಿಳಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ʼʼಯಾವುದೇ ಚಿತ್ರ ನಿರ್ಮಾಪಕರಿಗೆ ಪೈರಸಿ ಎನ್ನುವುದು ದುಃಸ್ವಪ್ನವಿದ್ದಂತೆ. ಕೆಲವೊಮ್ಮೆ ಸಿನಿಮಾ ತೆರೆ ಕಾಣುವ ಮುನ್ನವೇ ಅದರ ಕಾಪಿ ಆನ್‌ಲೈನ್‌ನಲ್ಲಿ ಲೀಕ್‌ ಆಗುತ್ತವೆ. ಸಾಜಿದ್‌ ನಾಡಿಯಾವಾಲಾ ಅವರ ʼಸಿಕಂದರ್‌ʼ ಕೂಡ ಅದಕ್ಕೆ ಹೊರತಲ್ಲ. ʼಸಿಕಂದರ್‌ʼ ಭಾನುವಾರ ತೆರೆಗೆ ಬಂದಿದ್ದು, ಶನಿವಾರ ಸಂಜೆಯೇ ಆನ್‌ಲೈನ್‌ನಲ್ಲಿ ಪೈರಸಿ ಕಾಪಿ ಹರಿದಾಡಿದೆ. ಚಿತ್ರತಂಡ 600 ವೆಬ್‌ಸೈಟ್‌ಗಳಿಂದ ಸಿನಿಮಾವನ್ನು ಡಿಲೀಟ್‌ ಮಾಡಿದೆ. ಆದರೆ ಅದಕ್ಕೂ ಮುನ್ನ ಸಾಕಷ್ಟು ಹಾನಿ ಸಂಭವಿಸಿದೆʼʼ ಎಂದು ಬರೆದುಕೊಂಡಿದ್ದಾರೆ.

ತಮಿಳ್‌ರಾಕರ್ಸ್‌, ಮೂವಿರೂಲ್ಸ್‌, ಫಿಲ್ಮಿಝಿಲ್ಲಾ ಮತ್ತು ಟೆಲಿಗ್ರಾಮ್‌ಗಳಲ್ಲಿ ಪೂರ್ಣ ಚಿತ್ರ ಕಾಣಿಸಿಕೊಂಡಿದೆ. ಈ ಬಗ್ಗೆ ದೂರು ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.



ಹೇಗಿದೆ ʼಸಿಕಂದರ್‌ʼ?

ಚಿತ್ರ ನೋಡಿದ ಪ್ರೇಕ್ಷಕರು ಎಕ್ಸ್‌ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಲ್ಮಾನ್‌-ರಶ್ಮಿಕಾ ಜೋಡಿಗೆ ಬಹುತೇಕರು ಜೈ ಎಂದಿದ್ದಾರೆ. ಆದರೆ ಕಥೆ, ಚಿತ್ರಕಥೆ ಕೆಲವರಿಗೆ ಹಿಡಿಸಿಲ್ಲ. ʼ‘ಸಿಕಂದರ್’ ಮಾಸ್ ಎಂಟರ್ಟೈನರ್. ಆ್ಯಕ್ಷನ್‌ ಜತೆಗೆ ಎಮೋಷನ್ಸ್ ಇದೆ. ಸಲ್ಮಾನ್ ತಮ್ಮ ಮ್ಯಾನರಿಸಂ, ಸ್ಟೈಲ್​ನಿಂದ ಮೋಡಿ ಮಾಡಿದ್ದಾರೆ. ಇದೊಂದು ಸಾಮಾಜಿಕ ವಿಷಯ ಹೊಂದಿರುವ ಕಮರ್ಶಿಯಲ್ ಸಿನಿಮಾ. ಇನ್ನು ರಶ್ಮಿಕಾ, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆʼʼ ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರಂತೂ ಸಲ್ಮಾನ್‌ ಖಾನ್‌ ಅವರ ಅತ್ಯುತ್ತಮ ಚಿತ್ರ ಎಂದಿದ್ದಾರೆ. ಈ ಮಧ್ಯೆ ನೆಗೆಟಿವ್‌ ವಿಮರ್ಶೆಯೂ ಕೇಳಿ ಬಂದಿದೆ. ಇದು ಸಲ್ಮಾನ್‌ ಖಾನ್‌ ಅವರ ಕೆಟ್ಟ ಚಿತ್ರ ಎಂದೂ ಕೆಲವರು ಟೀಕಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನ ಎಷ್ಟು ಕಲೆಕ್ಷನ್‌ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.