ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Commercial Cylinder Price : ಗ್ರಾಹಕರಿಗೆ ಗುಡ್‌ನ್ಯೂಸ್‌ ! ಗ್ಯಾಸ್‌ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

LPG Gas Cylinder Price: ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ 1,762.50 ರೂ. ಕೋಲ್ಕತ್ತಾದಲ್ಲಿ 1,872 ರೂ. ಹಾಗೂ ಚೆನ್ನೈನಲ್ಲಿ 1,924.50 ರೂ ಗೆ ಸಿಲಿಂಡರ್‌ಗಳು ದೊರೆಯಲಿವೆ. ಈ ಮೊದಲು ದೆಹಲಿಯಲ್ಲಿ 1,755.50 ರೂ., ಕೋಲ್ಕತ್ತಾದಲ್ಲಿ 1,963 ರೂ. ಮತ್ತು ಚೆನ್ನೈನಲ್ಲಿ1,965.50 ಬೆಲೆ ಇತ್ತು. ಸಿಲಿಂಡರ್ ಬೆಲೆ ಇಳಿಕೆಯಿಂದ ಹೋಟೆಲ್ ಉದ್ಯಮದ ಮೇಲಿನ ಹೊರೆಯನ್ನು ಕೊಂಚ ಇಳಿಸುತ್ತದೆ.

ಗ್ರಾಹಕರಿಗೆ ಗುಡ್‌ನ್ಯೂಸ್‌ ! ಗ್ಯಾಸ್‌ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

Profile Rakshita Karkera Apr 1, 2025 7:30 AM

ನವದೆಹಲಿ: ಇಂದಿನಿಂದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ (Commercial Cylinder Price) ಬೆಲೆ ಇಳಿಕೆಗೊಂಡಿದ್ದು, ಗ್ರಾಹಕರಿಗೆ ಹೊಸ ಆರ್ಥಿಕ ವರ್ಷದಂದೇ ಗುಡ್‌ನ್ಯೂಸ್‌ ಸಿಕ್ಕಿದೆ. ತೈಲ ಮಾರ್ಕೆಟಿಂಗ್‌ ಕಂಪನಿಗಳು ಮಂಗಳವಾರ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 41 ರೂ.ಗಳಷ್ಟು ಹೆಚ್ಚಿಸಿದ್ದು, ಇನ್ನು ಮುಂದೆ ದೆಹಲಿಯಲ್ಲಿ 1,762 ರೂ.ಗೆ ಸಿಲಿಂಡರ್‌ ಲಭ್ಯವಾಗಲಿದೆ.

ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಮುಂಬೈನಲ್ಲಿ 1,714.50 ರೂ. ಕೋಲ್ಕತ್ತಾದಲ್ಲಿ 1,872 ರೂ. ಹಾಗೂ ಚೆನ್ನೈನಲ್ಲಿ 1,924.50 ರೂ ಗೆ ಸಿಲಿಂಡರ್‌ಗಳು ದೊರೆಯಲಿವೆ. ಈ ಮೊದಲು ಮುಂಬೈನಲ್ಲಿ 1,755.50 ರೂ., ಕೋಲ್ಕತ್ತಾದಲ್ಲಿ 1,963 ರೂ. ಮತ್ತು ಚೆನ್ನೈನಲ್ಲಿ1,965.50 ಬೆಲೆ ಇತ್ತು. ಸಿಲಿಂಡರ್ ಬೆಲೆ ಇಳಿಕೆಯಿಂದ ಹೋಟೆಲ್ ಉದ್ಯಮದ ಮೇಲಿನ ಹೊರೆಯನ್ನು ಕೊಂಚ ಇಳಿಸುತ್ತದೆ. ವಾಣಿಜ್ಯ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ತಿಂಗಳಿಂದ ತಿಂಗಳಿಗೆ ಖರ್ಚು ಹೆಚ್ಚಾಗುತ್ತಿತ್ತು. ಇದು ಹೋಟೆಲ್‌ಗಳ ದರ ಪಟ್ಟಿ ಮೇಲೆ ಪರಿಣಾಮ ಬೀರುತ್ತಿತ್ತು. ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಹೊರೆಯಾಗಿತ್ತು.ಇಂದಿನಿಂದ ದರ ಇಳಿಕೆ ಆಗಿರುವುದು ಈ ಹೊರೆಯನ್ನು ತಪ್ಪಿಸಿದೆ.

ಈ ಸುದ್ದಿಯನ್ನೂ ಓದಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ: ಜನಸಾಮಾನ್ಯರಿಗೆ ಬರೆ

ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ (commercial gas cylinder) ಬೆಲೆ (LPG Price Hike) ಹೆಚ್ಚಾಗಿತ್ತು. ಆ ಮೂಲಕ ಗ್ರಾಹಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿತ್ತು. ಇಂಡಿಯನ್ ಆಯಿಲ್ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 16.50 ರೂ.ಗಳಷ್ಟು ಹೆಚ್ಚಿಸಿ ದೆಹಲಿಯಲ್ಲಿ 1818.50 ರೂ.ಗೆ ಸಿಲಿಂಡರ್‌ ಲಭ್ಯವಾಗುತಿತ್ತು.