ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Princess Syndrome: ನಿಮ್ಮ ಮಗಳು ಡ್ಯಾಡ್ಸ್‌ ಲಿಟಲ್‌ ಪ್ರಿನ್ಸೆಸಾ? ಇದು ಕೂಡ ಒಂದು ಕಾಯಿಲೆ.... ಪೋಷಕರೇ ಎಚ್ಚರ!

ನಿಜ ಜೀವನದಲ್ಲಿಯೂ ತಾನು ರಾಜಕುಮಾರಿಯಂತೆ ಬದುಕಬೇಕೆಂಬ ಮಾನಸಿಕ ಖಾಯಿಲೆಯೊಂದು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಕಾಯಿಲೆಗೆ ಪ್ರಿನ್ಸೆಸ್ ಸಿಂಡ್ರೋಮ್ (Princess Syndrome) ಎಂದು ಕರೆಯುತ್ತಾರೆ. ಕಾಲ್ಪನಿಕ ಕತೆಯನ್ನೇ ನಿಜವೆಂದು ಭಾವಿಸಿ ರಾಜಕುಮಾರಿ ರೀತಿಯೇ ಬದುಕನ್ನು ಇಚ್ಛಿಸುವ ಒಂದು ಕಾಯಿಲೆಯಾಗಿದೆ. ಹಾಗಾದರೆ ಪ್ರಿನ್ಸೆಸ್ ಸಿಂಡ್ರೋಮ್‌ನಿಂದ ಏನಾಗುತ್ತೆ? ಯಾವ ರೀತಿಯ ಪರಿಣಾಮ ಬೀರಬಹುದು ಎಂದು ತಿಳಿಯಲು ಈ ಮಾಹಿತಿ ಓದಿ..

ಪ್ರಿನ್ಸೆಸ್ ಸಿಂಡ್ರೋಮ್ ಕಾಯಿಲೆ ಬಗ್ಗೆ ಪೋಷಕರು ಈಗಲೇ ಎಚ್ಚೆತ್ತುಕೊಳ್ಳಿ..!

Profile Pushpa Kumari Apr 1, 2025 7:00 AM

ನವದೆಹಲಿ: ಸಣ್ಣವರಿದ್ದಾಗ ಹಲವು ಕಾಟೂರ್ನಿಸ್ಟ್ ಆಧಾರಿತ ಕಥೆ ಕೇಳಿ ಬೆಳೆದಿರುತ್ತೇವೆ. ಡಿಸ್ನಿ,ಕಾರ್ಟೂನ್ ನಂತಹ ಅನೇಕ ರಾಜಕುಮಾರಿಗಳ ಕತೆಗಳು ಸಣ್ಣ ಮಕ್ಕಳಿಗೆ ಜೀವ ತುಂಬಿದೆ. ಅಂತಹ ಕತೆಯಲ್ಲಿ ಸಾಮಾನ್ಯ ವಾಗಿ ರಾಜಕುಮಾರಿಗೆ ತನ್ನದೆ ಆದ ಭಾವಾಭಿವ್ಯಕ್ತಿ ಇರುತ್ತೆ, ಇತರರಿ ಗಿಂತಲೂ ತಾನೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗ ಬಯಸುತ್ತಾಳೆ.. ಇದೆಲ್ಲ ಕಾಲ್ಪನಿಕವಾಗಿ ಚೆಂದವೆನಿಸುತ್ತೆ. ಆದರೆ ನಿಜ ಜೀವನದಲ್ಲಿಯೂ ತಾನು ರಾಜ ಕುಮಾರಿಯಂತೆ ಬದುಕಬೇಕೆಂಬ ಮಾನಸಿಕ ಖಾಯಿಲೆಯೊಂದು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಕಾಯಿಲೆಗೆ ಪ್ರಿನ್ಸೆಸ್ ಸಿಂಡ್ರೋಮ್ (Princess Syndrome) ಎಂದು ಕರೆಯುತ್ತಾರೆ. ಕಾಲ್ಪನಿಕ ಕತೆಯನ್ನೇ ನಿಜವೆಂದು ಭಾವಿಸಿ ರಾಜಕುಮಾರಿ ರೀತಿಯೇ ಬದುಕನ್ನು ಇಚ್ಛಿಸುವ ಒಂದು ಕಾಯಿಲೆಯಾಗಿದೆ. ಹೀಗಾಗಿ ಪ್ರಿನ್ಸೆಸ್ ಸಿಂಡ್ರೋಮ್ ಕಾಯಿಲೆ ಬಗ್ಗೆ ಪೋಷಕರು ಮೊದಲೇ ಎಚ್ಚರ ವಹಿಸಿದರೆ ಮುಂದಾಗುವ ಅಪಾಯ ತಡೆಯಬಹುದು. ಹಾಗಾದರೆ ಪ್ರಿನ್ಸೆಸ್ ಸಿಂಡ್ರೋಮ್ ನಿಂದ ಏನಾಗುತ್ತೆ? ಯಾವ ರೀತಿಯ ಪರಿಣಾಮ ಬೀರ ಬಹುದು ಎಂದುತಿಳಿಯಲು ಈ ಮಾಹಿತಿ ಓದಿ.

ಡ್ಯಾಡಿಸ್ ಪ್ರಿನ್ಸೆಸ್ ಎಂಬ ಮಾತನ್ನು ನೀವು ಕೇಳಿರಬಹುದು ಹೀಗೆಂದರೆ ಅಪ್ಪನ ಮುದ್ದಿನ ರಾಜಕುಮಾರಿ ಎಂಬರ್ಥ. ಆದರೆ ಈ ಮಾತು ಕೂಡ ಪ್ರಿನ್ಸೆಸ್ ಸಿಂಡ್ರೋಮ್ ಗುಣಲಕ್ಷಣ ಹೊಂದಿದ್ದು ಈ ಬಗ್ಗೆ ಪೋಷಕರು ಮೊದಲೇ ಎಚ್ಚೆತ್ತು ಕೊಳ್ಳಬೇಕು. ಸಣ್ಣವರಿದ್ದಾಗ ತನ್ನನ್ನು ತಾನು ರಾಜ ಕುಮಾರಿ ಎಂದುಕೊಂಡು ಬದುಕುವ ಅನೇಕ ಮಕ್ಕಳಿಗೆ ಪ್ರೌಢಾವಸ್ಥೆ ಮೀರಿ ಯೌವನ ಹಂತಕ್ಕೆ ಬರುತ್ತಿದ್ದಂತೆ ಇದರಿಂದ ಅನೇಕ‌ ಸಮಸ್ಯೆ ಉಂಟಾ ಗಲಿದೆ.

ಪ್ರಿನ್ಸೆಸ್ ಸಿಂಡ್ರೋಮ್ ಎಂದರೇನು?

ಪ್ರಿನ್ಸೆಸ್ ಸಿಂಡ್ರೋಮ್ ಎನ್ನುವುದು ರಾಜಕುಮಾರಿಯಂತೆ ಬದುಕಲು ಇಚ್ಛಿಸುವ ಒಂದು ತರನಾದ ಮನೋ ಕಾಯಿಲೆಯಾಗಿದೆ. ಕೆಲವರಿಗೆ ಬಾಲ್ಯದಲ್ಲಿ ತೋರಿಸುವ ಅತಿಯಾದ ಕಾಳಜಿ, ಪ್ರೀತಿಯಿಂದ ಈ ‌ಸಮಸ್ಯೆ ಬಂದರೆ ಇನ್ನು ಕೆಲವರಿಗೆ ಕಾರ್ಟೂನ್ ನಂತಹ ಸಿನೆಮಾ ವೀಕ್ಷಣೆ ಮಾಡುವ ಮೂಲಕ ಬರಲಿದೆ. ಇಂತವರು ತಾನು ಇತರರಿಗಿಂತ ಮೇಲು ಎಂದು ಅಂದುಕೊಳ್ಳುತ್ತಾರೆ. ಬೇರೆ ಮಕ್ಕಳ ಜೊತೆ ಬೆರೆಯಲು ಹಿಂಜರಿ ಯುತ್ತಾರೆ. ಆಂತರಿಕವಾಗಿ ಖಿನ್ನತೆ ಸಮಸ್ಯೆ ಇವರನ್ನು ಕಾಡುತ್ತಿರುತ್ತದೆ. ಇತರರ ನಿಂದನೆ , ಟೀಕೆಗಳನ್ನು ಇವರು ಸಹಿಸಲಾರರು ಇವೆಲ್ಲವೂ ಈ ಕಾಯಿಲೆಯ ಲಕ್ಷಣಗಳಾಗಿದೆ.

ಸ್ವಾವಲಂಬಿಗಳಾಗಿರುತ್ತಾರೆ

ಪ್ರಿನ್ಸೆಸ್ ಸಿಂಡ್ರೋಮ್ ಕಾಯಿಲೆ ಇರುವವರು ಹೆಚ್ಚಾಗಿ ಸ್ವಾವಲಂಬನ ವಾಗಿ ಬದುಕಲು ಇಷ್ಟ ಪಡುತ್ತಾರೆ.ಅವರ ಬಗ್ಗೆ ಅವರಿಗೆ ಗಾಢ ನಂಬಿಕೆ, ತಾನು ಬಹಳ ಶ್ರೇಷ್ಠ ಎಂಬ ಕಲ್ಪನೆ ಅವರಿಗೆ ಇರುತ್ತದೆ. ತಮ್ಮ ಸುತ್ತಲು ಇರುವವರು ತನಗೆ ಮೊದಲ ಆದ್ಯತೆ ನೀಡಬೇಕು ಎಂದು‌ ಹೆಚ್ಚಾಗಿ ಬಯ ಸುತ್ತಾರೆ. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರ ಮೇಲೆ ಹೇರು ತ್ತಾರೆ. ಅವರು ಅದನ್ನು ಒಪ್ಪದಿದ್ದರೆ ಅಂತವರ ಪ್ರೀತಿ, ಸ್ನೇಹ ಸಂಬಂಧ ದಿಂದ ದೂರ ಉಳಿಯುತ್ತಾರೆ. ಹೀಗೆ ಅನೇಕ ಮಾನಸಿಕ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.

ಇದನ್ನು ಓದಿ: Health Tips: ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?

ಏನು ಮಾಡಬೇಕು?

  • ಪೋಷಕರು ಈ ಕಾಯಿಲೆ ಬಗ್ಗೆ ಜಾಗೃತೆ ವಹಿಸಬೇಕು.
  • ಈ ಬಗ್ಗೆ ಹೆಣ್ಣು ಮಕ್ಕಳೆ ಮೊದಲೇ ಜಾಗೃತವಾಗಿ ಆದಷ್ಟು ತಮ್ಮ ನಡವಳಿಕೆ ಬದಲಾಯಿಸುವತ್ತ ಗಮನ ಹರಿಸಬೇಕು.
  • ಪರಸ್ಪರ ಸ್ನೇಹ ಸಂಬಂಧದ ಮೌಲ್ಯಗಳನ್ನು ಅರ್ಥೈಸಿಕೊಂಡು ಬದುಕಲು ಕಲಿಯಬೇಕು.
  • ಇತರರ ಏಳ್ಗೆ ಸಹಿಸಿಕೊಂಡು ಅದನ್ನು ಮೆಚ್ಚಿಕೊಂಡು ಹೋಗುವ ಗುಣವನ್ನು ಬೆಳೆಸಿಕೊಳ್ಳಬೇಕು.
  • ಹಣಕಾಸು, ವೃತ್ತಿ ಎಲ್ಲ ವಿಚಾರದಲ್ಲಿಯೂ ಸ್ವತಂತ್ರವಾಗಿ ನಿರ್ಧಾರ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು.
  • ಇತರರಿಂದ ಸಹಾಯ ಪಡೆದಾಗ ಅದಕ್ಕೆ ಕೃತಜ್ಞತೆ ಸಲ್ಲಿಸುವುದನ್ನು ಕಲಿಯಬೇಕು.
  • ಟೀಕೆಗಳನ್ನು ಸ್ವೀಕರಿಸುವ ಗುಣವನ್ನು ಕಲಿಯಬೇಕು.
  • ಇತರರಿಂದ ರಕ್ಷಣೆ ನಿರೀಕ್ಷಿಸದೆ ಸವಾಲುಗಳನ್ನು ಪ್ರಬಲವಾಗಿ ಎದುರಿಸುವ ಗುಣ ಬೆಳೆಸಿಕೊಳ್ಳಬೇಕು.