The Family Man: ʻದಿ ಫ್ಯಾಮಿಲಿ ಮ್ಯಾನ್ 3ʼ ರಿಲೀಸ್ ಡೇಟ್ ಫಿಕ್ಸ್! ಇಲ್ಲಿದೆ ಡಿಟೇಲ್ಸ್
The Family Man: ವೆಬ್ ಸೀರಿಸ್ ನಾಯಕ ಮನೋಜ್ ಬಾಜ್ ಪಾಯಿ ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ದಿ ಫ್ಯಾಮಿಲಿ ಮೆನ್ ವೆಬ್ ಸೀರಿಸ್ 3ನೇ ಸೀಸನ್ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀಸನ್ 3ಯನ್ನು ರಾಜ್ & ಡಿಕೆ ಇಬ್ಬರೂ ನಿರ್ದೇಶನ ಮಾಡುತ್ತಿದ್ದು ಈ ಬಾರಿ ಕೂಡ ಇಂಟ್ರೆಸ್ಟಿಂಗ್ ಕಥೆಯನ್ನು ತರಲು ಮುಂದಾಗಿದ್ದಾರೆ.


ಮುಂಬೈ: ಸಿನಿಮಾಗಳಂತೆ ವೆಬ್ ಸೀರಿಸ್‌ಗಳು ಕೂಡ ಬಹಳ ಪಾಪ್ಯುಲರ್ ಆಗಿವೆ. ವೆಬ್ ಸೀರಿಸ್ ಸಾಲಿನಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಫ್ಯಾಮಿಲಿ ಮ್ಯಾನ್ ಸೀಸನ್ 1, 2 ರ ಬಳಿಕ ಇದೀಗ ಸೀಸನ್ 3 ರ (Family Man 3) ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯೊಂದು ಹೊರ ಬಿದ್ದಿದೆ. ಮೊದಲೆರಡು ಭಾಗ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು ಮೂರನೇ ಭಾಗ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ದಿ ಫ್ಯಾಮಿಲಿ ಮ್ಯಾನ್ ಸೀಸನ್ ಎರಡರಲ್ಲಿ ಮೂರರ ಸುಳಿವು ಕೂಡ ನೀಡಲಾಗಿತ್ತು. ಇದೀಗ ಫ್ಯಾಮಿಲಿ ಮ್ಯಾನ್ ಸೀಸನ್ 3 ಬಗ್ಗೆ ವೆಬ್ ಸೀರಿಸ್ ತಂಡವೇ ಅಧಿಕೃತ ಮಾಹಿತಿ ಹೊರಹಾಕಿದ್ದು ಅಭಿಮಾನಿಗಳ ಕುತೂಹಲ ಇನ್ನಷ್ಟು ಹೆಚ್ಚಿಸಿದಂತಾಗಿದೆ.
ವೆಬ್ ಸೀರಿಸ್ ನಾಯಕ ಮನೋಜ್ ಬಾಜ್ ಪಾಯಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭದಲ್ಲಿದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ 3ನೇ ಸೀಸನ್ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 2025ನೇ ನವೆಂಬರ್ ತಿಂಗಳಿನಂದು ಈ ವೆಬ್ ಸೀರಿಸ್ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನುವ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀಸನ್ 3ಯನ್ನು ರಾಜ್ & ಡಿಕೆ ಇಬ್ಬರೂ ನಿರ್ದೇಶನ ಮಾಡುತ್ತಿದ್ದು ಈ ಬಾರಿ ಕೂಡ ಇಂಟ್ರಸ್ಟಿಂಗ್ ಕಥೆಯನ್ನು ಹೊತ್ತು ತರಲು ಮುಂದಾಗಿದ್ದಾರೆ. ಸೀಸನ್ 3 ಯಲ್ಲೂ ಆಕ್ಷನ್ ಸೀಕ್ವೆನ್ಸ್, ಥ್ರಿಲ್ಲರ್ ಸ್ಟೋರಿಯನ್ನು ನಿರೀಕ್ಷೆ ಮಾಡಬಹುದು ಎನ್ನಲಾಗಿದೆ.
ಈ ಮೂರನೇ ಸೀಸನ್‌ನ ಹೈಲೈಟ್ ಅಂದರೆ, 'ಪಾತಾಳ್‌ಲೋಕ್' ಸೀರಿಸ್‌ನ ನಟ ಜೈದೀಪ್ ಅಹ್ಲವಾತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೂ ಇಂಟಲಿಜೆನ್ಸ್ ಆಫೀಸರ್ ಪಾತ್ರದಲ್ಲಿ ಶ್ರೀಕಾಂತ್ ತಿವಾರಿ, ಪ್ರಿಯಾಮಣಿ, ಆಶ್ಲೇಶಾ ಠಾಕೂರ್, ವೇದಾಂತ್ ಸಿನ್ಹಾ ಇತರರು ಕೂಡ ಕಾಣಿಸಿಕೊಳ್ಳಲಿದ್ದಾರೆ. ವೈಯಕ್ತಿಕವಾಗಿ ಫ್ಯಾಮಿಲಿ ಮತ್ತು ಪ್ರೊಫೇಶನ್‌ನ ಸುತ್ತ ಇಂಟ್ರಸ್ಟಿಂಗ್ ಕಥಾ ಹಂದರ ಈ ವೆಬ್ ಸರಣಿಯಲ್ಲಿ ಇದೆ. ರಾಜ್ ಮತ್ತು ಡಿಕೆ ಇಬ್ಬರು ನಿರ್ದೇಶಕರು ಪಾತ್ರಗಳನ್ನು ಅಚ್ಚು ಕಟ್ಟಾಗಿ ಪೋಣಿಸಿ ನಿರ್ದೇಶನ ಮಾಡಿದ್ದಾರೆ. ಭಾಗ ಎರಡರಲ್ಲಿ ಬಾಂಬ್ ಮೂಲಕ ದಾಳಿ ಮಾಡುವ ಸಸ್ಪೆನ್ಸ್ ತ್ರಿಲ್ಲಿಂಗ್ ಭಾಗ ಇದ್ದರೆ ಮೂರರಲ್ಲಿ ವೈರಸ್ ಮೂಲಕ ಶತ್ರುಗಳ ದಾಳಿ ಮಾಡುವ ದೃಶ್ಯ ಇರಲಿದೆ. ಈ ವೆಬ್ ಸೀರಿಸ್ ಕಾಗಿ ಎದುರು ನೋಡುತ್ತಿದ್ದ ಒಟಿಟಿ ಪ್ರಿಯರಿಗೆ ಈ ಸುದ್ದಿ ಇದೀಗ ಸಖತ್ ಕಿಕ್ ನೀಡಿದೆ.
ಇದನ್ನು ಓದಿ: Monk the Young Movie: ವಿಭಿನ್ನ ಕಥಾಹಂದರವುಳ್ಳ ʼಮಾಂಕ್ ದಿ ಯಂಗ್ʼ ಚಿತ್ರ ಫೆ.28ಕ್ಕೆ ರಿಲೀಸ್
ಅಮೆಜಾನ್ ಪ್ರೈಮ್ ಒಟಿಟಿ ಮೂಲಕ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ನಲ್ಲಿ ನಟಿ ಸಮಂತಾ ವಿಲನ್ ಪಾತ್ರ ಮಾಡಿದ್ದರು. ಈ ಪಾತ್ರವನ್ನು ಕಥಾ ನಾಯಕ ಮನೋಜ್ ಕೊನೆ ಮಾಡುತ್ತಾರೆ.ಈ ಸೀಸನ್ ಪೂರ್ಣಗೊಳ್ಳುವುದಕ್ಕೂ ಮೊದಲು ಮೂರನೇ ಸೀಸನ್ಗೆ ಲಿಂಕ್ ನೀಡ ಲಾಗಿತ್ತು. ಅಲ್ಲದೆ, ಮೂರನೇ ಸೀಸನ್ ನ ಸಣ್ಣ ಸುಳಿವು ಸಹ ನೀಡ ಲಾಗಿತ್ತು. ಇದೀಗ ಸೀಸನ್ 3 ಗೆ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಪ್ರೇಕ್ಷಕರಿಗೆ ಬಹಳಷ್ಟು ಖುಷಿ ನೀಡಿದೆ. ಈ ಮೂಲಕ ಮೂರನೇ ಆವೃತ್ತಿಯಲ್ಲಿ ಯಾವೆಲ್ಲ ಸಸ್ಪೆನ್ಸ್ ಇರಬಹುದು. ಕಥೆ ಹೇಗೆ ಮೂಡಿಬರಬಹುದು ಎಂಬ ಅನೇಕ ಕುತೂಹಲಕ್ಕೆ ನವೆಂಬರ್ ತನಕ ಕಾಯಲೇಬೇಕು.