ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡು ರಸ್ತೆಯಲ್ಲಿ ಪತ್ನಿಯ ರೀಲ್ಸ್... ಪತಿ ಸಸ್ಪೆಂಡ್‌- ಅಷ್ಟಕ್ಕೂ ಆಗಿದ್ದೇನು? ವಿಡಿಯೊ ಇದೆ

ಮಹಿಳೆಯೊಬ್ಬಳು ರಸ್ತೆ ಮಧ್ಯದಲ್ಲಿ ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡಿದ್ದರಿಂದ ಅದು ಟ್ರಾಫಿಕ್ ಜಾಮ್‍ಗೆ ಕಾರಣವಾದ ಘಟನೆ ಚಂಡೀಗಢದಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದರಿಂದ ಆಕೆ ಹಾಗೂ ಆಕೆಯ ಅತ್ತಿಗೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತು ಪತ್ನಿಯ ಈ ಕೃತ್ಯದಿಂದ ಪೊಲೀಸ್ ಅಧಿಕಾರಿಯಾಗಿದ್ದ ಆಕೆಯ ಪತಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ನಡು ರಸ್ತೆಯಲ್ಲಿ ಪತ್ನಿಯ ರೀಲ್ಸ್... ಪತಿ ಸಸ್ಪೆಂಡ್‌

Profile pavithra Apr 1, 2025 1:46 PM

ಚಂಡೀಗಢ: ರೀಲ್ ಕ್ರೇಜ್ ಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಎಲ್ಲೆಂದರಲ್ಲಿ ರೀಲ್ಸ್ ಮಾಡಲು ಶುರುಮಾಡುತ್ತಾರೆ. ಇದೀಗ ಮಹಿಳೆಯೊಬ್ಬಳು ರಸ್ತೆ ಮಧ್ಯದಲ್ಲಿ ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡಿದ್ದರಿಂದ ಅದು ಟ್ರಾಫಿಕ್ ಜಾಮ್‍ಗೆ ಕಾರಣವಾದ ಘಟನೆ ಚಂಡೀಗಢದಲ್ಲಿ ನಡೆದಿದೆ. ಜೀಬ್ರಾ ಕ್ರಾಸಿಂಗ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದಾಗ ಅವಳು ಡ್ಯಾನ್ಸ್ ವಿಡಿಯೊ ಶೂಟ್ ಮಾಡಿದ್ದಾಳೆ. ಅವಳು ಹರ್ಯಾನ್ವಿ ಹಾಡಿಗೆ ಕುಣಿದು ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಚಂಡೀಗಢದ ಸೆಕ್ಟರ್ 20ರ ರಸ್ತೆಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆಯಂತೆ. ಆಕೆಯನ್ನು ಪೊಲೀಸ್ ಅಧಿಕಾರಿಯ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ಈಕೆ ಹತ್ತಿರದ ಹನುಮಾನ್ ದೇವಸ್ಥಾನದಲ್ಲಿ ದರ್ಶನ ಪಡೆಯಲು ಬಂದಾಗ ತನ್ನ ಅತ್ತಿಗೆ ಜೊತೆ ಸೇರಿಕೊಂಡು ಜನನಿಬಿಡ ರಸ್ತೆಯಲ್ಲಿ ರೀಲ್ ಮಾಡಿದ್ದಾಳೆ. ನಡುರಸ್ತೆಯಲ್ಲಿ ಅವಳು ಡ್ಯಾನ್ಸ್ ಮಾಡಿದ್ದರಿಂದ ಅವಳ ಡ್ಯಾನ್ಸ್ ಮುಗಿಯುವವರೆಗೂ ವಾಹನಗಳು ರಸ್ತೆಯಲ್ಲಿ ನಿಂತು ಕಾಯುವ ಹಾಗಾಗಿದೆ. ಇದು ಟ್ರಾಫಿಕ್ ಜಾಮ್‍ಗೆ ಕಾರಣವಾಗಿದೆ.

ಟ್ರಾಫಿಕ್‌ ಸಿಗ್ನಲ್‌ನಲ್ಲಿ ಡ್ಯಾನ್ಸ್‌ ಮಾಡಿದ ಮಹಿಳೆಯ ವಿಡಿಯೊ ಇಲ್ಲಿದೆ ನೋಡಿ...



ವೈರಲ್ ಆದ ವಿಡಿಯೊದಲ್ಲಿ ಈಕೆ ಹಳದಿ ಬಣ್ಣದ ಡ್ರೆಸ್‌ ಮತ್ತು ದುಪಟ್ಟಾ ಧರಿಸಿ 'ಸಾಸು ತೇರಾ ಲಾಡ್ಲಾ ಮ್ಯಾನ್ ಪೈಕ್ ಲವ್ ಯು ಬೋಲೆ ಸೆ' ಹಾಡಿಗೆ ಸೊಂಟ ಬಳುಕಿಸಿದ್ದಾಳೆ. ವರದಿಗಳ ಪ್ರಕಾರ, ಹೆಡ್ ಕಾನ್‌ಸ್ಟೇಬಲ್‌ ಜಸ್ಬೀರ್ ಜ್ಯೋತಿಯ ಡ್ಯಾನ್ಸ್ ಪ್ರದರ್ಶನದಿಂದ ಟ್ರಾಫಿಕ್ ಜಾಮ್‍ ಉಂಟಾದ ಕಾರಣ ಆಕೆಯ ವಿರುದ್ಧ ದೂರು ನೀಡಿದ್ದಾನೆ. ಹೀಗಾಗಿ ಚಂಡೀಗಢ ಪೊಲೀಸರು ಜ್ಯೋತಿ ಮತ್ತು ಆಕೆಯ ಅತ್ತಿಗೆ ಪೂಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಮಹಿಳೆಯರಿಗೆ ಶೀಘ್ರದಲ್ಲೇ ಜಾಮೀನು ಸಿಕ್ಕಿದೆಯಂತೆ.

ಈ ರೀಲ್‌ ಅನ್ನು ಆಕೆ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಅಪ್ಲೋಡ್ ಮಾಡಿದ್ದರಿಂದ ಪೊಲೀಸ್ ಅಧಿಕಾರಿಯಾಗಿದ್ದ ಆಕೆಯ ಪತಿ ಕೂಡ ಕಾನೂನು ಕ್ರಮವನ್ನು ಎದುರಿಸಬೇಕಾಯಿತು. ಆಕೆಯ ಪತಿ ಸೆಕ್ಟರ್ 19 ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಸ್ಟೇಬಲ್‌ ಅಜಯ್ ಕುಂಡು ಎಂದು ಗುರುತಿಸಲಾಗಿದೆ.ಈತನ ಪತ್ನಿಯ ಕೃತ್ಯಗಳು ಟ್ರಾಫಿಕ್ ಜಾಮ್‍ಗೆ ಕಾರಣವಾದ ನಂತರ ಅವನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಹಲ್ಲೆ

ಚಂಡೀಗಢದ ಸೆಕ್ಟರ್ 31 ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ರಂಜಿತ್, ಎಎಸ್ಐ ಸೇವಾ ಸಿಂಗ್ ಮತ್ತು ಹಿರಿಯ ಕಾನ್‌ಸ್ಟೇಬಲ್‌ ದೀಪಕ್ ಅವರನ್ನು ಚಂಡೀಗಢ ಪೊಲೀಸರು ಶನಿವಾರ(ಮಾರ್ಚ್‌ 29) ಅಮಾನತುಗೊಳಿಸಿದ್ದಾರೆ. ಗೋವಿಂದ್ ಕುಮಾರ್ ಮತ್ತು ರೋಹಿತ್ ಕುಮಾರ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಅವರ ವಿರುದ್ಧ ಔಪಚಾರಿಕ ದೂರು ದಾಖಲಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.