ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs IND: ಟೀಮ್ ಇಂಡಿಯಾ ಆಸೀಸ್ ಪ್ರವಾಸದ ವೇಳಾಪಟ್ಟಿ ಪ್ರಕಟ

ಪುರುಷರ ಮಾತ್ರವಲ್ಲದೆ ಭಾರತ ಮಹಿಳಾ ಕ್ರಿಕೆಟ್‌ ತಂಡವು ಕೂಡ ಮೂರೂ ಮಾದರಿಯ ಸರಣಿಯಲ್ಲಿ ಆಡಲು 2026ರ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿ 15 ರಿಂದ ಮಾರ್ಚ್‌ 9ರ ವರೆಗಿನ ಈ ಪ್ರವಾಸದ ಅವಧಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು, ‌ಒಂದು ಟೆಸ್ಟ್ ಹಾಗೂ ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿವೆ.

ಟೀಮ್ ಇಂಡಿಯಾ ಆಸೀಸ್ ಪ್ರವಾಸದ ವೇಳಾಪಟ್ಟಿ ಪ್ರಕಟ

Profile Abhilash BC Apr 1, 2025 10:35 AM

ಸಿಡ್ನಿ: ಭಾರತ ಪುರುಷರ ಕ್ರಿಕೆಟ್ ತಂಡವು ಅಕ್ಟೋಬರ್‌–ನವೆಂಬರ್‌ನಲ್ಲಿ ಆಸ್ಟ್ರೇಲಿಯಾ(AUS vs IND) ಪ್ರವಾಸ ಮಾಡಲಿದ್ದು ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್(Cricket Australia) ಮಂಡಳಿ ತಿಳಿಸಿದೆ. ಪ್ರತಿಷ್ಠಿತ ಆಶಸ್ ಟೆಸ್ಟ್(Ashes) ಸರಣಿಗೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಸೀಮಿತ ಓವರ್‌ಗಳ ನಡೆಯಲಿದ್ದು, ಅಕ್ಟೋಬರ್ 19ರಂದು ಪರ್ತ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗೆ ಚಾಲನೆ ದೊರೆಯಲಿದೆ. ನಂತರ ಅ.29ರಿಂದ ಕ್ಯಾನ್‌ಬೆರದಲ್ಲಿ ಐದು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ.

ಈ ಸರಣಿಯೊಂದಿಗೆ ಆಸ್ಟ್ರೇಲಿಯಾ 2025-26ರ ಕ್ರಿಕೆಟ್ ಋತು ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ 8 ರಾಜ್ಯ ಹಾಗೂ ನಗರಗಳಲ್ಲಿ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮುನ್ನ ಈ ಸರಣಿ ಪೂರ್ವ ಸಿದ್ಧತೆ ಎನಿಸಿದೆ.

ಸರಣಿಯ ವೇಳಾಪಟ್ಟಿ

ಅ.19 ಮೊದಲ ಏಕದಿನ, ಪರ್ತ್

ಅ.23 ಎರಡನೇ ಏಕದಿನ, ಅಡಿಲೇಡ್

ಅ.25 ಮೂರನೇ ಏಕದಿನ, ಸಿಡ್ನಿ

ಟಿ20 ಸರಣಿ

ಅ.29 ಮೊದಲ ಟಿ20, ಕ್ಯಾನ್‌ಬೆರ

ಅ.31 ಎರಡನೇ ಟಿ20, ಮೆಲ್ಬೋರ್ನ್

ನ.2 ಮೂರನೇ ಟಿ20, ಹೋಬರ್ಟ್

ನ.6 ನಾಲ್ಕನೇ ಟಿ20, ಗೋಲ್ಡ್ ಕೋಸ್ಟ್

ನ.8 ಐದನೇ ಟಿ20, ಬ್ರಿಸ್ಬೇನ್

ಪುರುಷರ ಮಾತ್ರವಲ್ಲದೆ ಭಾರತ ಮಹಿಳಾ ಕ್ರಿಕೆಟ್‌ ತಂಡವು ಕೂಡ ಮೂರೂ ಮಾದರಿಯ ಸರಣಿಯಲ್ಲಿ ಆಡಲು 2026ರ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿ 15 ರಿಂದ ಮಾರ್ಚ್‌ 9ರ ವರೆಗಿನ ಈ ಪ್ರವಾಸದ ಅವಧಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು, ‌ಒಂದು ಟೆಸ್ಟ್ ಹಾಗೂ ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿವೆ. ಮೊದಲು ಚುಟುಕು ಪಂದ್ಯಗಳು, ನಂತರ ಏಕದಿನ ಹಾಗೂ ಟೆಸ್ಟ್‌ ಪಂದ್ಯ ನಡೆಯಲಿವೆ.

ಇದನ್ನೂ ಓದಿ IPL 2025: 8 ಸಾವಿರ ರನ್‌ ಪೂರೈಸಿ ಕೊಹ್ಲಿ, ರೋಹಿತ್‌ ಜತೆ ಎಲೈಟ್‌ ಪಟ್ಟಿ ಸೇರಿದ ಸೂರ್ಯ

ವೇಳಾಪಟ್ಟಿ

ಟಿ20 ಸರಣಿ

ಮೊದಲ ಪಂದ್ಯ:ಫೆಬ್ರವರಿ 15 - ಸಿಡ್ನಿ

ಎರಡನೇ ಪಂದ್ಯ:ಫೆಬ್ರವರಿ 19 - ಕ್ಯಾನ್‌ಬೆರಾ

ಮೂರನೇ ಪಂದ್ಯ:ಫೆಬ್ರವರಿ 21 - ಅಡಿಲೇಡ್‌

ಏಕದಿನ ಸರಣಿ

ಮೊದಲ ಪಂದ್ಯ:ಫೆಬ್ರವರಿ 24 - ಬ್ರಿಸ್ಬೇನ್‌

ಎರಡನೇ ಪಂದ್ಯ:ಫೆಬ್ರವರಿ 27 - ಹೋಬರ್ಟ್‌

ಮೂರನೇ ಪಂದ್ಯ:ಮಾರ್ಚ್‌ 1 - ಮೆಲ್ಬರ್ನ್‌

ಏಕೈಕ ಟೆಸ್ಟ್‌ ಪಂದ್ಯ: ಮಾರ್ಚ್‌ 6-9 - ಪರ್ತ್‌