Watermelon Nail Art: ಬೇಸಿಗೆಯಲ್ಲಿ ಹುಡುಗಿಯರ ಉಗುರುಗಳನ್ನು ಸಿಂಗರಿಸುತ್ತಿರುವ ವಾಟರ್‌ಮೆಲನ್ ನೇಲ್ ಆರ್ಟ್
Watermelon Nail Art: ಸಮ್ಮರ್ ಸೀಸನ್‌ನಲ್ಲಿ ತಂಪೆರೆಯುವ ವಾಟರ್‌ಮೆಲನ್ ಇದೀಗ ನೇಲ್ ಆರ್ಟ್ ಡಿಸೈನ್‌ನಲ್ಲೂ ನುಸುಳಿದೆ. ಹುಡುಗಿಯರ ಉಗುರುಗಳ ಮೇಲೆ ನಾನಾ ಡಿಸೈನ್‌ನಲ್ಲಿ ಲಗ್ಗೆ ಇಟ್ಟಿವೆ. ಅದು ಡಿಸೈನ್ ಆಗಿರಬಹುದು ಅಥವಾ ನೇಲ್ ಸ್ಟಿಕ್ಕರ್ ಆಗಿರಬಹುದು. ಏನಿದು ವಾಟರ್‌ಮೆಲನ್ ನೇಲ್ ಆರ್ಟ್? ಈ ಕುರಿತಂತೆ ಇಲ್ಲಿದೆ ವಿವರ.

ಚಿತ್ರಕೃಪೆ: ಇನ್ಸ್ಟಾಗ್ರಾಮ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ ತನುವನ್ನು ತಂಪಾಗಿಸುವ ಕಲ್ಲಂಗಡಿ ಹಣ್ಣು ಇದೀಗ ಚಿತ್ತಾರದ ಮೂಲಕ ಹುಡುಗಿಯರ ಉಗುರುಗಳ ಮೇಲೆ ಲಗ್ಗೆ ಇಟ್ಟಿದೆ. ನಾನಾ ಡಿಸೈನ್ ಮೂಲಕ ನಲಿದಾಡುತ್ತಿದೆ. ಸದ್ಯ ಸೀಸನ್ ಟ್ರೆಂಡಿ ನೇಲ್ ಆರ್ಟ್‌ನ (Watermelon Nail Art) ಟಾಪ್ ಲಿಸ್ಟ್‌ಗೆ ಸೇರಿದೆ. ಯುವತಿಯರ ಹಾಗೂ ಫಂಕಿ ಲುಕ್ ಬಯಸುವ ಮಾನಿನಿಯರ ಕೈಗಳ ಅದರಲ್ಲೂ ಉಗುರುಗಳ ಅಂದ ಹೆಚ್ಚಿಸುವ ಈ ವಾಟರ್‌ಮೆಲನ್ ನೇಲ್ ಆರ್ಟ್ ಇದೀಗ ಯಾವ ಮಟ್ಟಿಗೆ ಕಾಮನ್ ಆಗಿದೆ ಎಂದರೆ, ಫ್ಯಾಷನ್ ಕಾನ್ಶಿಯಸ್ ಹುಡುಗಿಯರು ಇದನ್ನು ಫಂಕಿ ಲುಕ್‌ಗಾಗಿ ಆಯ್ಕೆ ಮಾಡುತ್ತಿದ್ದಾರೆ. ಐದು ಬೆರಳಿಗೂ ಬಗೆಬಗೆಯ ವಾಟರ್‌ಮೆಲನ್ ಚಿತ್ತಾರವನ್ನು ಮೂಡಿಸುತ್ತಿದ್ದಾರೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಂಜಿತಾ.

ವಾಟರ್‌ಮೆಲನ್ ನೇಲ್ ಆರ್ಟ್
ವಾಟರ್‌ಮೆಲನ್ ನೇಲ್ ಆರ್ಟ್ ಡಿಸೈನ್ ಮಾಡಿಸಲು ತಾಳ್ಮೆ ಬೇಕು. ಹಣ ಸುರಿಯಲೂ ಬೇಕು. ಕೈಗಳಿಂದ ಚಿತ್ತಾರ ಮೂಡಿಸುವಿರಾದಲ್ಲಿ ನೇಲ್ ಆರ್ಟ್ ಡಿಸೈನ್ ಸ್ಟುಡಿಯೋಗೆ ಭೇಟಿ ನೀಡಬೇಕು. ಇದು ಕೊಂಚ ದುಬಾರಿ ಎನ್ನುತ್ತಾರೆ ನೇಲ್ ಆರ್ಟ್ ಪ್ರಿಯೆ ರಾಗಿಣಿ ಹಾಗೂ ದಿಶಾ.

ವಾಟರ್‌ಮೆಲನ್ ನೇಲ್ ಆರ್ಟ್ ಸ್ಟಿಕ್ಕರ್
ನೇಲ್ ಆರ್ಟ್‌ಗೆ ಹೆಚ್ಚು ಹಣ ವೆಚ್ಚ ಮಾಡಲು ಸಾಧ್ಯವಿಲ್ಲ ಎನ್ನುವವರು ಹಾಗೂ ನೇಲ್ ಆರ್ಟ್ ಮಾಡಿಕೊಳ್ಳಲು ಬಯಸದವರು, ಫಟಾ ಫಟ್ ಚಿತ್ತಾರ ಬಯಸುವವರು ಆದಷ್ಟೂ ಸ್ಟಿಕ್ ಆನ್ ನೇಲ್ಸ್ ಖರೀದಿಸುವುದು ಉತ್ತಮ. ತಕ್ಷಣ ಉಗುರಿಗೆ ಸ್ಟಿಕ್ ಮಾಡಿಕೊಳ್ಳಬಹುದು. ಯಾವಾಗ ಬೇಕು ಆವಾಗ ತೆಗೆಯಬಹುದು. ಇವು ಎಲ್ಲಾ ಫ್ಯಾನ್ಸಿ ಸ್ಟೋರ್‌ಗಳಲ್ಲಿ ದೊರೆಯುತ್ತವೆ. ಕೈಗೆಟಕುವ ಬೆಲೆಯಲ್ಲಿಯೂ ದೊರೆಯುತ್ತವೆ. ನಾನಾ ವಿನ್ಯಾಸದಲ್ಲಿ ಪ್ರಿಂಟ್‌ನಲ್ಲಿ ದೊರೆಯುತ್ತವೆ, ಹಚ್ಚುವುದು ತೆಗೆಯುವುದು ಸುಲಭ ಎನ್ನುತ್ತಾರೆ ಮಾರಾಟಗಾರರು.


ವಾಟರ್ ಮೆಲನ್ ನೇಲ್ ಆರ್ಟ್ ಪ್ರಿಯರಿಗೆ 7 ಟಿಪ್ಸ್
- ಮೆನಿಕ್ಯೂರ್ ಮಾಡಿಸಿ, ನಂತರ ವಾಟರ್ ಮೆಲನ್ ನೇಲ್ ಆರ್ಟ್ ಮಾಡಿಸಿ/ಮಾಡಿ.
- ಆದಷ್ಟೂ ವಾಟರ್ ಮೆಲನ್‌ನಂತೆ ಕಾಣಿಸುವ ಬಣ್ಣಗಳನ್ನೇ ಆಯ್ಕೆ ಮಾಡಿ.
- ಸಿಂಪಲ್ ವಾಟರ್ ಮೆಲನ್ ಚಿತ್ತಾರಗಳನ್ನು ಬಿಡಿಸಿ.
- ರೆಡ್ ಹಾಗೂ ಗ್ರೀನ್ ಬಣ್ಣ ಸೇರಿಸಿಕೊಳ್ಳಿ.
- ನೇಲ್ ಸ್ಟಿಕ್ಕರ್ ಇನ್‌ಸ್ಟಂಟ್ ನೇಲ್ ಆರ್ಟ್ ಲುಕ್ ನೀಡುತ್ತದೆ.
- ರೆಡ್, ಗ್ರೀನ್ ಶೇಡ್ ಉಡುಪುಗಳಿಗೆ ಮ್ಯಾಚ್ ಆಗುತ್ತದೆ.
- ನೀರು ತಾಕಿಸಕೂಡದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Summer Fashion: ಬೇಸಿಗೆಯ ಬಿಂದಾಸ್ ಲುಕ್‌ಗೆ ಮರಳಿ ಬಂತು ಸ್ಟ್ರಾಪ್ ಡ್ರೆಸ್