ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Tharoor Column: ಕೋವಿಡ್‌ನಲ್ಲಿ ಭಾರತಕ್ಕೆ ಗೋಚರಿಸಿದ ಬೆಳ್ಳಿರೇಖೆ

ಕೋವಿಡ್ ವೇಳೆ ಭಾರತ ಸರಕಾರ ಪ್ರದರ್ಶಿಸಿದ ‘ಲಸಿಕೆಯ ರಾಜತಾಂತ್ರಿಕತೆ’ ಜಾಗತಿಕ ರಾಜತಾಂತ್ರಿಕ ಇತಿಹಾಸದಲ್ಲಿ ದಾಖಲಾದ ಮಹತ್ವದ ಅಧ್ಯಾಯಗಳಲ್ಲಿ ಒಂದು. ಎಲ್ಲೆಡೆ ಹರಡಿದ್ದ ಭೀತಿ ಹಾಗೂ ಭಯಾನಕ ಸನ್ನಿವೇಶದ ನಡುವೆ ಭಾರತವು ತನ್ನ ಆಂತರ್ಯದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಅಂತಾ ರಾಷ್ಟ್ರೀಯ ನಾಯಕತ್ವದ ಗುಣಗಳನ್ನು ಹಾಗೂ ಏಕತೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿತು.

ಕೋವಿಡ್‌ನಲ್ಲಿ ಭಾರತಕ್ಕೆ ಗೋಚರಿಸಿದ ಬೆಳ್ಳಿರೇಖೆ

ಲೇಖಕ, ಸಂಸದ ಶಶಿ ತರೂರ್

Profile Ashok Nayak Apr 1, 2025 6:15 AM

ವಿಶ್ಲೇಷಣೆ

ಶಶಿ ತರೂರ್

ಜಗತ್ತಿಗೆ ಕೋವಿಡ್ ಅಪ್ಪಳಿಸಿ ಐದು ವರ್ಷ ತುಂಬಿತು. 2020ರ ಮಾರ್ಚ್ 24ರಂದು ಭಾರತ ಸರಕಾರ ಕಠಿಣಾತಿಕಠಿಣ ಲಾಕ್‌ಡೌನ್ ಜಾರಿಗೊಳಿಸಿತ್ತು. ದೇಶದಲ್ಲಿ ಯಾರೂ ಇಂದು ಕೋವಿಡ್ ಲಾಕ್ ಡೌನ್‌ ನ ಐದನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿಲ್ಲ. ಮಹಾಮಾರಿಯ ಹೊಡೆತದಲ್ಲಿ ಬದುಕುಳಿದ ನಾವೆಲ್ಲ ಅದನ್ನೊಂದು ಕೆಟ್ಟ ಕನಸಿನಂತೆ ಮರೆಯಲು ಪ್ರಯತ್ನಿಸುತ್ತಿದ್ದೇವೆ.‌ ದುಃಖ, ದುರಂತ, ನಷ್ಟಗಳ ಕರಾಳ ದಿನಗಳು ಅವು. ಆದರೆ ಅದೇ ಮಹಾಮಾರಿಯು ನಮ್ಮ ದೇಶದ ಇತಿಹಾಸದಲ್ಲಿ ದಾಖಲಾದ ಯಶಸ್ವಿ ಹೋರಾಟಗಳಲ್ಲಿ ಒಂದು ಎಂಬುದು ಕೂಡ ಗಮನಾರ್ಹ. ನಮ್ಮ ತಾಕತ್ತನ್ನು ಕೋವಿಡ್ ನಮಗೆ ಮನವರಿಕೆ ಮಾಡಿಕೊಟ್ಟಿತು.

ಕೋವಿಡ್ ವೇಳೆ ಭಾರತ ಸರಕಾರ ಪ್ರದರ್ಶಿಸಿದ ‘ಲಸಿಕೆಯ ರಾಜತಾಂತ್ರಿಕತೆ’ ಜಾಗತಿಕ ರಾಜತಾಂತ್ರಿಕ ಇತಿಹಾಸದಲ್ಲಿ ದಾಖಲಾದ ಮಹತ್ವದ ಅಧ್ಯಾಯಗಳಲ್ಲಿ ಒಂದು. ಎಲ್ಲೆಡೆ ಹರಡಿದ್ದ ಭೀತಿ ಹಾಗೂ ಭಯಾನಕ ಸನ್ನಿವೇಶದ ನಡುವೆ ಭಾರತವು ತನ್ನ ಆಂತರ್ಯದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಅಂತಾರಾಷ್ಟ್ರೀಯ ನಾಯಕತ್ವದ ಗುಣಗಳನ್ನು ಹಾಗೂ ಏಕತೆಯನ್ನು ಯಶಸ್ವಿಯಾಗಿ ಪ್ರದರ್ಶಿ ಸಿತು.

ಇದನ್ನೂ ಓದಿ: Shashi Tharoor: ಬಿಜೆಪಿ ಸೇರ್ಪಡೆ ವದಂತಿ; ಕುತೂಹಲಕ್ಕೆ ತೆರೆ ಎಳೆದ ಶಶಿ ತರೂರ್‌

100ಕ್ಕೂ ಹೆಚ್ಚು ದೇಶಗಳಿಗೆ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನೂ, ಹಾಗೆಯೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ತನ್ನ ಔದಾರ್ಯ ವನ್ನೂ ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಯಾರಿಗೆ ಸಹಾಯಹಸ್ತದ ಅಗತ್ಯ ಅತ್ಯಂತ ಹೆಚ್ಚಿ ದೆಯೋ ಅವರಿಗೆ ಸಮಯಕ್ಕೆ ಸರಿಯಾಗಿ ಸಹಾಯಹಸ್ತ ಚಾಚುವುದು ಬಹುದೊಡ್ಡ ಮಾನವೀಯ ಗುಣಗಳಲ್ಲಿ ಒಂದು.

ಕೋವಿಡ್‌ಗಿಂತಲೂ ಮೊದಲೇ ಭಾರತವು ಜಗತ್ತಿನ ಲಸಿಕೆ ತಯಾರಿಕಾ ಹಬ್ ಆಗಿತ್ತು. ಅದರ ಲಾಭ ಪಡೆದ ಭಾರತ ಸರಕಾರ 2021ರ ಜನವರಿಯಲ್ಲಿ ‘ಲಸಿಕಾ ರಾಜತಾಂತ್ರಿಕತೆ’ (ವ್ಯಾಕ್ಸಿನ್ ಡಿಪ್ಲೊಮೆಸಿ) ಆರಂಭಿಸಿತು. ಲಸಿಕೆಗಾಗಿ ಕಾಯುತ್ತಿದ್ದ ದೇಶಗಳಿಗೆ, ಅದರಲ್ಲೂ ಸ್ವಂತ ಲಸಿಕೆ ತಯಾರಿಸುವ ಸಾಮರ್ಥ್ಯವಿಲ್ಲದ ಅಭಿವೃದ್ಧಿಶೀಲ ಅಥವಾ ಬಡ ದೇಶಗಳಿಗೆ ಕೋವಿಡ್ ಲಸಿಕೆಯನ್ನು ನೀಡುವುದು ಆ ಕಾರ್ಯಕ್ರಮದ ಉದ್ದೇಶವಾಗಿತ್ತು.

doc ok

ಅದರಂತೆ ಭಾರತ ಸರಕಾರ ಲಸಿಕೆಗಳ ರಫ್ತು ಆರಂಭಿಸಿತು. ಕೆಲ ದೇಶಗಳಿಗೆ ಉಚಿತವಾಗಿ ಲಸಿಕೆ ನೀಡಿತು. ಇನ್ನು ಕೆಲ ದೇಶಗಳಿಗೆ ಹಣಕ್ಕೆ ಮಾರಾಟ ಮಾಡಿತು. ಭಾರತದಲ್ಲೇ ಲಸಿಕೆಗಳಿಗೆ ಭಾರಿ ಬೇಡಿಕೆಯಿದ್ದ ಸಮಯದಲ್ಲಿ ಮೇಡ್ ಇನ್ ಇಂಡಿಯಾ ಕೋವಿಡ್ ಲಸಿಕೆಗಳು ಪಶ್ಚಿಮ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ನಮ್ಮ ನೆರೆರಾಷ್ಟ್ರಗಳಿಗೆ ತಲುಪಿದವು. ಭಾರತದಲ್ಲಿ ಪ್ರಮುಖ ವಾಗಿ ಎರಡು ಕೋವಿಡ್ ಲಸಿಕೆಗಳು ತಯಾರಾಗುತ್ತಿದ್ದವು. ಒಂದು ಕೋವಿ ಶೀಲ್ಡ್ (ಆಸ್ಟ್ರಾಜೆನೆಕಾ ಕಂಪನಿ ಕಂಡುಹಿಡಿದ ಮತ್ತು ಭಾರತದ ಸೀರಂ ಸಂಸ್ಥೆ ಉತ್ಪಾ ದಿಸುತ್ತಿದ್ದ ಲಸಿಕೆ) ಮತ್ತು ಇನ್ನೊಂದು ಕೋವ್ಯಾಕ್ಸಿನ್ (ಭಾರತ್ ಬಯೋಟೆಕ್‌ನ ಲಸಿಕೆ). ಈ ಎರಡು ಲಸಿಕೆ ಗಳನ್ನು ಭಾರತ ಸರಕಾರ 100ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿಕೊಟ್ಟಿತು.

ಭೂತಾನ್, ಮಾಲ್ಡೀವ್ಸ್, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಆಫ್ರಿಕನ್ ದೇಶಗಳಂಥ ಬಡ ಹಾಗೂ ಮಧ್ಯಮ ಆದಾಯದ ದುರ್ಬಲ ದೇಶಗಳು ಭಾರತದಿಂದ ಲಸಿಕೆ ಸ್ವೀಕರಿಸಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಧೈರ್ಯ ತಂದುಕೊಂಡವು. ‘ವಸುಧೈವ ಕುಟುಂಬಕಂ’- ಜಗತ್ತೇ ಒಂದು ಕುಟುಂಬ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಭಾರತವು ಕೋವಿಡ್ ಮಹಾಮಾರಿಯ ಸಮಯದಲ್ಲಿ ಅದನ್ನು ಜಗತ್ತಿನ ಒಳಿತಿಗಾಗಿ ಇನ್ನೊಮ್ಮೆ ಪ್ರಾಕ್ಟಿಕಲ್ ಆಗಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಅದೇ ವೇಳೆ, ನಮಗೆ ನಮ್ಮ ನೆರೆರಾಷ್ಟ್ರಗಳು ಮೊದಲ ಆದ್ಯತೆ (ನೇಬರ್ ಫಸ್ಟ್) ಎಂಬ ಇನ್ನೊಂದು ವಿದೇಶಾಂಗ ನೀತಿಯನ್ನೂ ಭಾರತ ಕೈಬಿಡಲಿಲ್ಲ. ಭಾರತದೊಂದಿಗೆ ಗಡಿ ಹಂಚಿಕೊಂಡ ದೇಶಗಳಿಗೆ ನಮ್ಮಲ್ಲಿ ತಯಾರಾದ ಕೋವಿಡ್ ಲಸಿಕೆಗಳು ಮೊದಲು ತಲುಪಿದವು. ರಾಜತಾಂತ್ರಿಕತೆಯಲ್ಲಿ ನಾನಾ ರೀತಿಗಳಿವೆ. ಅವುಗಳಲ್ಲಿ ಆರೋಗ್ಯ ರಾಜತಾಂತ್ರಿಕತೆಯೂ ಒಂದು. ಕೋವಿಡ್ ಲಸಿಕೆಗಳನ್ನು ನೀಡುವ ಮೂಲಕ ಭಾರತವು ಜಾಗತಿಕ ಆರೋಗ್ಯ ರಾಜತಾಂತ್ರಿಕ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ವನ್ನು ಎಲ್ಲರಿಗೂ ಮನದಟ್ಟು ಮಾಡಿಕೊಟ್ಟಿತು.

ಜಾಗತಿಕ ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಭಾರತ ಸಮರ್ಥವಾಗಿದೆ ಎಂಬ ಸಂದೇಶ ಜಗತ್ತಿಗೆ ರವಾನೆಯಾಯಿತು. ಇದೇ ವೇಳೆ, ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಕಾರ್ಯ ಕ್ರಮಕ್ಕೂ ಭಾರತ ತನ್ನದೇ ಆದ ಕೊಡುಗೆ ನೀಡಿತು. ಲಸಿಕೆಗಳನ್ನು ತಯಾರಿಸುವ ಅಥವಾ ಖರೀದಿ ಸುವ ಸಾಮರ್ಥ್ಯವಿಲ್ಲದ ಬಡ ದೇಶಗಳಿಗೆ ಶ್ರೀಮಂತ ದೇಶಗಳು ಲಸಿಕೆಗಳನ್ನು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಕೋವ್ಯಾಕ್ಸ್ ಕಾರ್ಯಕ್ರಮ ಕೆಲ ವರ್ಷಗಳಿಂದ ಜಾರಿ ಯಲ್ಲಿದೆ.

ಆದರೆ, ಕೋವಿಡ್ ಸಮಯದಲ್ಲಿ ಶ್ರೀಮಂತ ದೇಶಗಳು ಬಡ ದೇಶಗಳನ್ನು ಮರೆತೇ ಬಿಟ್ಟಿದ್ದವು. ಹೀಗಾಗಿ ದುರ್ಬಲ ದೇಶಗಳು ಕೋವಿಡ್ ಮಹಾಮಾರಿಯಿಂದ ತಮ್ಮ ನಾಗರಿಕರ ಜೀವ ಉಳಿಸಿ ಕೊಳ್ಳಲಾಗದೆ ಕೈಚೆಲ್ಲುವ ದುಸ್ಥಿತಿ ಎದುರಾಗಿತ್ತು. ಆದರೆ ಭಾರತ ಅಂಥ ದೇಶಗಳಿಗೆ ಧೈರ್ಯ ತುಂಬಿತು.

ಪಶ್ಚಿಮದ ಶ್ರೀಮಂತ ದೇಶಗಳು ಯಾವ ಬಡ ದೇಶಗಳನ್ನು ಮರೆತಿದ್ದವೋ ಅಂಥ ದೇಶಗಳಿಗೆ ಭಾರತ ಸರಕಾರ ಮೊದಲು ಲಸಿಕೆಗಳನ್ನು ಕಳುಹಿಸಿತು. ಹಾಗೆ ಮಾಡುವ ಮೂಲಕ ಜಾಗತಿಕ ನಾಯಕನಾಗುವ ತನ್ನ ಸಾಮರ್ಥ್ಯವನ್ನು ಇನ್ನೊಮ್ಮೆ ಸಾಬೀತುಪಡಿಸಿತು. ಲಸಿಕೆಯಷ್ಟೇ ಅಲ್ಲ, ಬೇರೆ ಬೇರೆ ಔಷಧಗಳು, ಆಹಾರ ವಸ್ತುಗಳು, ಆರ್ಥಿಕ ನೆರವು ಮತ್ತು ಆರೋಗ್ಯ ಸಲಕರಣೆಗಳನ್ನೂ ಅಂಥ ದೇಶಗಳಿಗೆ ಭಾರತ ಕಳುಹಿಸಿತು.

ಹೀಗೆ ನಮ್ಮ ದೇಶ ಎಲ್ಲರಿಗೂ ಧೈರ್ಯ ತುಂಬುತ್ತಿದ್ದಾಗ ಶ್ರೀಮಂತ ದೇಶಗಳು ತಮ್ಮಲ್ಲಿ ತಯಾರಾದ ಲಸಿಕೆಗಳನ್ನು ಯಾರಿಗೂ ಕೊಡದೆ ತಮ್ಮದೇ ನಾಗರಿಕರಿಗಾಗಿ ದಾಸ್ತಾನು ಮಾಡಿಕೊಳ್ಳುತ್ತಿದ್ದವು. ಬಡ ದೇಶಗಳ ಜನರ ಜೀವ ಉಳಿಸಬಹುದಾಗಿದ್ದ ಆ ಲಸಿಕೆಗಳು, ನಂತರ ಅವಧಿ ಮುಗಿದ ಮೇಲೆ ವ್ಯರ್ಥ ವಾಗಿ ಎಸೆಯಲ್ಪಟ್ಟವು!

ಹೀಗೆ ಶ್ರೀಮಂತ ದೇಶಗಳು ಯಾವ ಕೆಲಸವನ್ನು ಮಾಡಲಿಲ್ಲವೋ ಅದನ್ನು ಭಾರತ ಮಾಡಿತು. ಲಸಿಕೆಗಳ ರಫ್ತಿನಿಂದಾಗಿ ಜಾಗತಿಕ ವೇದಿಕೆಯಲ್ಲಿ ಭಾರತದ ಇಮೇಜ್ ವೃದ್ಧಿಯಾಯಿತು. ಭಾರತದ ಕ್ರಮವನ್ನು ಎಲ್ಲಾ ದೇಶಗಳೂ ಶ್ಲಾಘಿಸಿದವು. ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ದೇಶವು ಪ್ರದರ್ಶಿಸಿದ ಜವಾಬ್ದಾರಿಯುತ ನಡೆಯನ್ನು ವಿಶ್ವ ಮಾಧ್ಯಮಗಳು ಮುಕ್ತ ಕಂಠದಿಂದ ಹೊಗಳಿದವು.

ಲಸಿಕೆಯನ್ನು ಪಡೆದ ದೇಶಗಳ ಜತೆಗೆ ಭಾರತದ ವಿಶ್ವಾಸಾರ್ಹತೆ ಮತ್ತು ದ್ವಿಪಕ್ಷೀಯ ರಾಜತಾಂತ್ರಿ ಕತೆ ವೃದ್ಧಿಸಿತು. ಅದರಿಂದಾಗಿ ಭಾರತಕ್ಕೆ ಅಂಥ ದೇಶಗಳಲ್ಲಿ ಅಮೂಲ್ಯವಾದ ವ್ಯೂಹಾತ್ಮಕ ಬಲ ವೂ ದೊರಕಿತು. ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿ ವೃದ್ಧಿಸುತ್ತಿದ್ದ ಚೀನಾದ ಪ್ರಭಾವಕ್ಕೆ ಭಾರತ ವು ಲಸಿಕೆ ರಾಜತಾಂತ್ರಿಕತೆಯ ಮೂಲಕ ಹೊಡೆತ ನೀಡಿತು.

ಈ ದೇಶಗಳಿಗೆ ಚೀನಾ ಕೂಡ ಲಸಿಕೆಗಳನ್ನು ನೀಡಿ ಪ್ರಭಾವ ಹೆಚ್ಚಿಸಿಕೊಳ್ಳುವುದಕ್ಕೆ ಯತ್ನಿಸಿ ತಾದರೂ, ಕೋವಿಡ್ ವಿಷಯದಲ್ಲಿ ಚೀನಾ ಆಡಿದ ನಾಟಕದಿಂದಾಗಿ ಯಾರೂ ಆ ದೇಶವನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಕೋವಿಡ್‌ನ ಎರಡನೇ ಅಲೆಯಲ್ಲಿ ಭಾರತದ ಲಸಿಕೆ ರಫ್ತಿಗೆ ತಾತ್ಕಾಲಿಕವಾಗಿ ಹೊಡೆತ ಬಿದ್ದಿದ್ದು ನಿಜ.

ದೇಶದಲ್ಲೇ ಲಸಿಕೆಗೆ ಭಾರಿ ಬೇಡಿಕೆಯಿತ್ತು. ಹೀಗಾಗಿ ಸ್ಥಳೀಯ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯ ನಡುವೆ ಹೊಂದಾಣಿಕೆ ಸಾಧಿಸುವ ಅನಿವಾರ್ಯತೆ ಭಾರತಕ್ಕಿತ್ತು. ಆದರೂ ಲಸಿಕೆಯ ಪೂರೈಕೆಯನ್ನು ಭಾರತ ಸಂಪೂರ್ಣ ನಿಲ್ಲಿಸಲಿಲ್ಲ. ಹೀಗಾಗಿ ದೇಶದ ವಿದೇಶಾಂಗ ನೀತಿಯಲ್ಲಿ ಲಸಿಕೆಯ ರಾಜತಾಂತ್ರಿಕತೆಯು ಇಂದಿಗೂ ಒಂದು ಮಹತ್ವದ ಅಧ್ಯಾಯವಾಗಿ ಉಳಿದಿದೆ.

ಮಾನವೀಯ ಅಗತ್ಯಗಳನ್ನೂ ವ್ಯೂಹಾತ್ಮಕ ಅಗತ್ಯಗಳನ್ನೂ ಹೇಗೆ ಒಟ್ಟೊಟ್ಟಿಗೇ ನಿಭಾಯಿಸಬೇಕು ಎಂಬುದಕ್ಕೆ ಭಾರತದ ನಡೆ ನಿದರ್ಶನವಾಗಿದೆ. ಲಸಿಕೆಗಳ ರಫ್ತು ಭಾರತದ ‘ಸಾಫ್ಟ್‌ ಪವರ್’ ಅನ್ನು ಇನ್ನೊಂದು ಎತ್ತರಕ್ಕೆಏರಿಸಿತು. ಅಗತ್ಯ ಬಂದಾಗ ಭಾರತವು ಮಾನವೀಯ ನೆರವಿಗೆ ಹೆಚ್ಚಿನ ಆದ್ಯತೆ ನೀಡುವ ಶಕ್ತಿ ಹೊಂದಿದೆ ಎಂಬುದು ಅಭಿವೃದ್ಧಿಶೀಲ ದೇಶಗಳಿಗೆ ಮನವರಿಕೆಯಾಯಿತು. ಹೀಗಾಗಿ ಜಾಗತಿಕ ವೇದಿಕೆಯಲ್ಲಿ ಭಾರತವು ತಮಗೆ ವಿಶ್ವಾಸಾರ್ಹ ಮತ್ತು ಸ್ನೇಹಶೀಲ ಪಾಲುದಾರನಾಗಲಿದೆ ಎಂಬ ನಂಬಿಕೆ ಆ ದೇಶಗಳಲ್ಲಿ ಮೂಡಿತು.

ಇಡೀ ಜಗತ್ತಿನ ಒಳಿತಿಗಾಗಿ ನಾವು ಕೆಲಸ ಮಾಡುತ್ತೇವೆ ಎಂದು ಭಾರತ ಹೇಳುತ್ತಿದ್ದ ಮಾತು ಕೋವಿ ಡ್‌ನ ಕರಾಳ ದಿನಗಳಲ್ಲಿ ನಿಕಷಕ್ಕೆ ಒಡ್ಡಲ್ಪಟ್ಟಿತು. ಭಾರತೀಯರ ರಕ್ಷಣೆ ಹೇಗೆ ಮುಖ್ಯವೋ ಹಾಗೆ ಯೇ ಜಗತ್ತಿನಲ್ಲಿರುವ ಎಲ್ಲಾ ಜನರ ರಕ್ಷಣೆಯೂ ತನಗೆ ಮುಖ್ಯ ಎಂಬುದನ್ನು ಭಾರತ ತೋರಿಸಿ ಕೊಟ್ಟಿತು. ಅದರಿಂದಾಗಿ ಭಾರತದ ಸಾಫ್ಟ್‌ ಪವರ್‌ ಬಗ್ಗೆ ಜಗತ್ತಿಗೆ ನಂಬಿಕೆ ಮೂಡಿತು. ಕೋವಿಡ್ ಸಮಯದಲ್ಲಿ ಲಸಿಕೆ ಪೂರೈಸುವುದಕ್ಕಷ್ಟೇ ಭಾರತದ ಪ್ರಯತ್ನಗಳು ಸೀಮಿತವಾಗಲಿಲ್ಲ. ಬದಲಿಗೆ ಆ ಸಮಯದಲ್ಲಿ ನೇಪಾಳ, ಮಾಲ್ಡೀವ್ಸ್, ಕುವೈತ್‌ನಂಥ ದೇಶಗಳಿಗೆ ಭಾರತವು ತನ್ನು ಮಿಲಿಟರಿ ಡಾಕ್ಟರ್‌ಗಳನ್ನು ಕಳುಹಿಸಿಕೊಟ್ಟಿತು.

ಅಲ್ಲಿ ನಮ್ಮ ದೇಶದ ವೈದ್ಯರು ಕೋವಿಡ್ ಚಿಕಿತ್ಸಾ ಶಿಬಿರಗಳನ್ನು ತೆರೆದರು. ಸಾವಿರಾರು ಭಾರತೀಯ ವೈದ್ಯರು ಆನ್‌ಲೈನ್‌ನಲ್ಲೇ ಭಾರತದಿಂದ ಬೇರೆ ಬೇರೆ ದೇಶಗಳಿಗೆ ವೈದ್ಯಕೀಯ ಸೇವೆ ನೀಡಿದರು. ಜಗತ್ತಿನ ಅನೇಕ ದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಇಲ್ಲಿನ ವೈದ್ಯರು ಆನ್‌ಲೈನ್‌ ನಲ್ಲಿ ತರಬೇತಿ ನೀಡಿದರು. ಅದರ ಜತೆಗೆ, ಗವಿ, ಕ್ವಾಡ್, ಪ್ಯಾನ್ ಆಫ್ರಿಕಾ ಇ-ನೆಟ್‌ವರ್ಕ್‌ನಂಥ ಜಾಗತಿಕ ವೇದಿಕೆಗಳ ಮೂಲಕ ತಕ್ಷಣದ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಕಾರ್ಯವನ್ನು ಕೂಡ ಭಾರತ ಮಾಡಿತು. ಅದು ದೀರ್ಘಕಾಲದಅಂತಾರಾಷ್ಟ್ರೀಯ ಸಹಕಾರಕ್ಕೆ ಗಟ್ಟಿಯಾದ ತಳಪಾಯ ಹಾಕಿಕೊಟ್ಟಿತು.

ಕೋವಿಡ್ ಸಮಯದಲ್ಲಿ ಭಾರತ ಪ್ರದರ್ಶಿಸಿದ ದಿಟ್ಟತನವು ಜಾಗತಿಕ ಆರೋಗ್ಯ ರಾಜತಾಂತ್ರಿಕತೆ ಯಲ್ಲಿ ನಮ್ಮ ದೇಶದ ಸ್ಥಾನವನ್ನು ಗಟ್ಟಿಯಾಗಿಸಿತು. ವಿಪತ್ತಿನ ಸಮಯದಲ್ಲಿ ಯಾವ ದೇಶವು ನೆರವಿಗೆ ಬರದಿದ್ದರೂ ಭಾರತ ನೆರವಿಗೆ ಬರುತ್ತದೆ ಎಂಬ ವಿಶ್ವಾಸ ಬಡ ದೇಶಗಳಲ್ಲಿ ಮೂಡಿತು. ಸಾಫ್ಟ್‌ ಪವರ್ ಎಂಬ ವಿಭಿನ್ನ ಮಾದರಿಯ ರಾಜತಾಂತ್ರಿಕತೆಯ ಕುರಿತೂ ಜಗತ್ತಿಗೆ ನಂಬಿಕೆ ಮೂಡ ಲಾರಂಭಿಸಿತು.

ಸಾಫ್ಟ್‌ ಪವರ್ ರಾಜತಾಂತ್ರಿಕತೆಯಲ್ಲಿ ಮಿಲಿಟರಿ ಅಥವಾ ವಾಣಿಜ್ಯ ಸಂಬಂಧಗಳಿಗಿಂತ ಹೆಚ್ಚಾಗಿ ದಯೆ, ಕರುಣೆ, ಸಹಕಾರ, ಸಹಭಾಗಿತ್ವ ಹಾಗೂ ಭ್ರಾತೃತ್ವಕ್ಕೆ ಒತ್ತು ನೀಡಲಾಗುತ್ತದೆ. ಈ ಮೌಲ್ಯ ಗಳನ್ನು ಗೌರವಿಸುವ ದೇಶವು ಜಾಗತಿಕ ಮಟ್ಟದಲ್ಲಿ ಪ್ರಬಲವಾಗುತ್ತಾ ಹೋಗುತ್ತದೆ. ಲಸಿಕೆಗಳ ರಫ್ತಿನ ಮೂಲಕ ಭಾರತ ಬಹಳ ನಾಜೂಕಾಗಿ ಈ ಮಾದರಿಯ ರಾಜತಾಂತ್ರಿಕತೆಯ ಲಾಭ ಪಡೆ ಯಿತು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆಶೋತ್ತರಗಳಿಗೆ ಶ್ರೀಮಂತ ಅಥವಾ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳ ಸ್ನೇಹಕ್ಕಿಂತ ಭಾರತದಂಥ ದೇಶದ ಸ್ನೇಹವು ಹೊಸ ಶಕ್ತಿಯನ್ನು ತುಂಬ ಬಲ್ಲದು ಎಂಬ ವಿಶ್ವಾಸ ಬಡ ದೇಶಗಳಲ್ಲಿ ಮೂಡಿತು. ಇದೆಲ್ಲ ಆಗಿ ಈಗ ಐದು ವರ್ಷ ಕಳೆದಿದೆ. ಆದರೆ ಭಾರತದಿಂದ ಲಾಭ ಪಡೆದ ದೇಶಗಳು ಭಾರತದ ಔದಾರ್ಯವನ್ನು ಮರೆತಿಲ್ಲ. ಹೀಗಾಗಿ
ಕೋವಿಡ್‌ನ ಕರಾಳತೆಯಲ್ಲೂ ಲಸಿಕೆಯ ರಾಜತಾಂತ್ರಿಕತೆಯು ಬೆಳ್ಳಿಯ ರೇಖೆಯಾಗಿ ಭಾರತದ ವಿದೇಶಾಂಗ ನೀತಿಯಲ್ಲಿ ಪ್ರಜ್ವಲಿಸುತ್ತಿದೆ.

(ಲೇಖಕರು ಸಂಸದರು)