ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Avalanche Rescue : ಉತ್ತರಾಖಂಡದ ಹಿಮಪಾತದಲ್ಲಿ ನಾಲ್ವರು ಸಾವು, ಮುಂದುವರಿದ ರಕ್ಷಣಾ ಕಾರ್ಯ

ಉತ್ತರಾಖಂಡದ ಬದರಿನಾಥದ ಮಾನಾ ಗ್ರಾಮದ ಬಳಿ ಬಿಆರ್‌ಒ ಶಿಬಿರದಲ್ಲಿ ಹಿಮಪಾತ ಸಂಭವಿಸಿದ್ದು ಹಲವು ಕಾರ್ಮಿಕರು ಹಿಮದ ಅಡಿಗೆ ಸಿಲುಕಿದ್ದಾರೆ. ಸದ್ಯ 50 ಜನರನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಐವರು ಹಿಮದ ಒಳಗೆ ಸಿಲುಕಿದ್ದಾರೆ ಎಂದು ಹೇಳಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದೆ.

ಉತ್ತರಾಖಂಡ್ ಹಿಮಪಾತದಲ್ಲಿ ನಾಲ್ವರು ಸಾವು

ಉತ್ತರಾಖಂಡ ಹಿಮಪಾತ

Profile Vishakha Bhat Mar 1, 2025 3:02 PM

ಶಿಮ್ಲಾ: ಉತ್ತರಾಖಂಡದ ಬದರಿನಾಥದ ಮಾನಾ ಗ್ರಾಮದ ಬಳಿ ಬಿಆರ್‌ಒ ಶಿಬಿರದಲ್ಲಿ ಹಿಮಪಾತ ಸಂಭವಿಸಿದ್ದು (Avalanche Rescue) ಹಲವು ಕಾರ್ಮಿಕರು ಹಿಮದ ಅಡಿಗೆ ಸಿಲುಕಿದ್ದಾರೆ. ಈಗಾಗಲೇ 50 ಜನರನ್ನು ರಕ್ಷಿಸಲಾಗಿದೆ. 9 ಜನರು ಇನ್ನೂ ಹಿಮದ ಅವಷೇಶಗಳ ಅಡಿಯಲ್ಲಿ ಸಿಲುಕಿದ್ದರು. ಅವರ ಪೈಕಿ ಈಗ ನಾಲ್ವರು ಮೃತಪಟ್ಟಿದ್ದಾರೆ. ಉಳಿದ 5 ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಆಸ್ಪತ್ರೆಗೆ ದಾಖಲಿಸಲು ಹೆಲಿಕಾಪ್ಟರ್‌ನ್ನು ನಿಯೋಜಿಸಲಾಗಿದೆ.

2ನೇ ದಿನದಂದು ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿದ ಭಾರತೀಯ ಸೇನೆಯು, ಇನ್ನೂ 17 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಎಲ್ಲಾ ಕಾರ್ಮಿಕರಿಗೆ ಮಾನಾದ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತ-ಟಿಬೆಟ್ ಗಡಿಯ ಸಮೀಪವಿರುವ ಮಾನಾ ಗ್ರಾಮ ಮತ್ತು ಮಾನಾ ಪಾಸ್ ನಡುವಿನ ಪ್ರದೇಶದಲ್ಲಿ ರಾತ್ರಿಯಿಡೀ ಸುಮಾರು ಏಳು ಅಡಿ ಹಿಮವನ್ನು 65 ಕ್ಕೂ ಹೆಚ್ಚು ಸಿಬ್ಬಂದಿ ತೆರವು ಮಾಡಿದ್ದಾರೆ.



ಚಮೋಲಿ ಜಿಲ್ಲೆಯಲ್ಲಿ ರಾಜ್ಯದ ಹವಾಮಾನ ಇಲಾಖೆ ಮಳೆ ಮತ್ತು ಹಿಮಪಾತದ ಎಚ್ಚರಿಕೆಯನ್ನು ನೀಡಿದೆ. ಡೆಹ್ರಾಡೂನ್, ಉತ್ತರಕಾಶಿ, ರುದ್ರಪ್ರಯಾಗ, ತೆಹ್ರಿ, ಪೌರಿ, ಪಿಥೋರಗಢ, ಬಾಗೇಶ್ವರ, ಅಲ್ಮೋರಾ, ನೈನಿತಾಲ್ ಮತ್ತು ಚಂಪಾವತ್‌ಗಳಲ್ಲಿಯೂ ಸಹ ಲಘು ಮಳೆಯಾಗುವ ಸಾಧ್ಯತೆಗಳಿವೆ ಎಂದು ಊಹಿಸಲಾಗಿದೆ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಹಿಮದಡಿಯಲ್ಲಿ ಸಿಲುಕಿರುವ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ರಾಜ್ಯದವರು ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ: Avalanche Rescue: ಉತ್ತರಾಖಂಡ ಹಿಮಪಾತ; 46 ಕಾರ್ಮಿಕರ ರಕ್ಷಣೆ ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಡಿಫೆನ್ಸ್ ಲೆ. ಕರ್ನಲ್ ಮನೀಶ್ ಶ್ರೀವಾಸ್ತವ ಅವರು ಮಾತನಾಡಿ, ಹಿಮಕುಸಿತದ ನಂತರ ಚಮೋಲಿ ಜಿಲ್ಲೆಯ ಮನ ಗ್ರಾಮದಲ್ಲಿ ಭಾರತೀಯ ಸೇನೆಯ ಐಬಿಎಕ್ಸ್ ಬ್ರಿಗೇಡ್‌ನ ಏಳು ಅಧಿಕಾರಿಗಳು, 17 ಜೆಸಿಒಗಳು ಮತ್ತು 150 ಸಿಬ್ಬಂದಿಗಳನ್ನು ಒಳಗೊಂಡ ರಕ್ಷಣಾ ಪಡೆಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.