Karun Nair: ರಣಜಿ ಫೈನಲ್ ಪಂದ್ಯದಲ್ಲೂ ಶತಕ ಬಾರಿಸಿದ ಕರುಣ್ ನಾಯರ್
Karun Nair: ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿರುವ ಕರುಣ್ ನಾಯರ್ ಪ್ರದರ್ಶನದ ಮೇಲೆ ಆಯ್ಕೆ ಸಮಿತಿಯ ನಿಗಾ ಇದೆ ಎಂದು ಹೇಳಿದ್ದರು. ಹೀಗಾಗಿ ಇಂಗ್ಲೆಂಡ್ ಸರಣಿಯಲ್ಲಿ ಅವರಿಗೆ ಅವಕಾಶ ಸಿಗವ ಸಾಧ್ಯತೆ ಇದೆ.


ನಾಗ್ಪುರ: ಭಾರತ ತಂಡಕ್ಕೆ ಮತ್ತೆ ಕಮ್‌ಬ್ಯಾಕ್ ಮಾಡುವ ಪ್ರಯತ್ನದಲ್ಲಿ ಕರುಣ್ ನಾಯರ್(Karun Nair) ರಣಜಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇದು ಈ ಆವೃತ್ತಿಯ ರಣಜಿಯಲ್ಲಿ ನಾಯರ್ ಬಾರಿಸಿದ 9ನೇ ಶತಕವಾಗಿದೆ. ವಿದರ್ಭ ತಂಡಔನ್ನು ಮುನ್ನಡೆಸುತ್ತಿರುವ ಅವರು ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. 33 ವರ್ಷದ ಕರುಣ್ ತಮ್ಮ ಆಟದ ಮೂಲಕ ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಜೂನ್‌ನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.
ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿರುವ ಕರುಣ್ ನಾಯರ್ ಪ್ರದರ್ಶನದ ಮೇಲೆ ಆಯ್ಕೆ ಸಮಿತಿಯ ನಿಗಾ ಇದೆ ಎಂದು ಹೇಳಿದ್ದರು. ಹೀಗಾಗಿ ಇಂಗ್ಲೆಂಡ್ ಸರಣಿಯಲ್ಲಿ ಅವರಿಗೆ ಅವಕಾಶ ಸಿಗವ ಸಾಧ್ಯತೆ ಇದೆ. ವಿಜಯ್ ಹಜಾರೆ ಟೂರ್ನಿಯಲ್ಲಿಯೂ ಕರುಣ್ ಉತ್ತಮವಾಗಿ ಆಡಿದ್ದರು. ಅಲ್ಲಿಯೂ ಸತತ ಶತಕ ಬಾರಿಸಿ ಮಿಂಚಿದ್ದರು. ಈ ಆವೃತ್ತಿಯ ರಣಜಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿಯೂ ಕರುಣ್ ಅಗ್ರಸ್ಥಾನದಲ್ಲಿದ್ದಾರೆ.
With his 9⃣4⃣4⃣th run, Vidarbha's Yash Rathod becomes the highest run-getter in the 2024-25 #RanjiTrophy season 👌#RanjiTrophy | @IDFCFIRSTBank | #Final
— BCCI Domestic (@BCCIdomestic) March 1, 2025
Scorecard ▶️ https://t.co/up5GVaflpp pic.twitter.com/ht4XcmZBFq
ಮಾರ್ಚ್ 22 ರಿಂದ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ಕರುಣ್ ಇಲ್ಲಿಯೂ ತಮ್ಮ ಬ್ಯಾಟಿಂಗ್ ತೋಳ್ಬಲ ಪ್ರದರ್ಶಿಸಿದರೆ ಭಾರತ ಟಿ20, ಏಕದಿನ ತಂಡಕ್ಕೂ ಆಯ್ಕೆಯಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಕರುಣ್ ನಾಯರ್ ಹೆಸರಿನಲ್ಲಿದೆ. ಅವರು 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ Champions Trophy: ಭಾರತ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಕನ್ನಡಿಗ ಕರುಣ್ ನಾಯರ್ ಪ್ರತಿಕ್ರಿಯೆ!
ಕೇರಳ ವಿರುದ್ಧ ಶತಕ ಬಾರಿಸಿದ ಕೂಡಲೇ ಕೈ ಎತ್ತಿ ಇದು ಈ ಆವೃತ್ತಿಯಲ್ಲಿ ನನ್ನ 9ನೇ ಶತಕ ಎನ್ನುವ ಸನ್ನೆಯ ಮೂಲಕ ಆಯ್ಕೆ ಸಮಿತಿಗೆ ತನ್ನಲ್ಲಿ ಕ್ರಿಕೆಟ್ ಸಾಮರ್ಥ್ಯ ಇನ್ನೂ ಉಳಿದಿದೆ ಎನ್ನುವ ಸ್ಪಷ್ಟ ಸಂದೇಶವೊಂದನ್ನು ನೀಡಿದರು. ಕರುಣ್ ಶತಕದ ಬಲದಿಂದ ವಿದರ್ಭ ತಂಡ ಕೇರಳ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದೆ.