ನೀವು ಭಾರತೀಯ ಕ್ರಿಕೆಟ್ನಿಂದಲೇ ಸಂಬಳ ಪಡೆಯುತ್ತಿದ್ದೀರಿ ಎಂಬುದು ನೆನಪಿರಲಿ; ಆಂಗ್ಲರಿಗೆ ಚಳಿ ಬಿಡಿಸಿದ ಗವಾಸ್ಕರ್
Sunil Gavaskar: ಭಾರತವನ್ನು ಈ ರೀತಿ ಆದರಿಸುವುದನ್ನು ನೋಡಿದರೆ ನನಗೆ ಮಜುಗರವೆನಿಸುತ್ತದೆ’ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಹಾಗೂ ವೀಕ್ಷಕ ವಿವರಣೆಗಾರ ಜೊನಾಥನ್ ಆ್ಯಗ್ನೂ ಎಬಿಸಿ ಸ್ಪೋರ್ಟ್ಸ್ ಜತೆಗಿನ ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೆ ಒಗ್ಗರಣೆ ಹಾಕಿದಂತೆ ಆಥರ್ಟನ್ ಮತ್ತು ನಾಸಿರ್ ಹುಸೇನ್, ಭಾರತಕ್ಕೆ ನಿರಾಕರಿಸಲಾಗದಂಥ ಅನುಕೂಲವಿದೆ ಎಂದು ಹೇಳಿದ್ದರು.


ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಉಳಿದ ತಂಡಗಳಿಗೆ ಮೂರು ಕಡೆ ಆಡಿಸಿ, ಭಾರತಕ್ಕೆ ಎಲ್ಲ ಪಂದ್ಯಗಳನ್ನು ದುಬೈನ ಒಂದೇ ತಾಣದಲ್ಲಿ ಆಡಿಸುವುದರಿಂದ ತಂಡಕ್ಕೆ ಹೆಚ್ಚಿನ ಅನುಕೂಲ ಸಿಕ್ಕಿದೆ ಎಂದು ಹೇಳಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ಮೈಕೆಲ್ ಆಥರ್ಟನ್ ಮತ್ತು ನಾಸಿರ್ ಹುಸೇನ್‌ಗೆ ಭಾರತ ತಂಡದ ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ತಕ್ಕ ಉತ್ತರ ನೀಡುವ ಮೂಲಕ ಚಳಿ ಬಿಡಿಸಿದ್ದಾರೆ.
ಭಾರತ ತಂಡದ ಪ್ರದರ್ಶನದ ಬಗ್ಗೆ ಚಿಂತಿಸುದಕ್ಕಿಂತ ನಿಮ್ಮ ತಂಡದ ಸ್ಥಿತಿ-ಗತಿಯ ಬಗ್ಗೆ ನೀವು ಕೊಂಚ ಗಮನ ಹರಿಸಿದರೆ ಉತ್ತಮ. ನಿಮ್ಮ ಇಂಗ್ಲೆಂಡ್ ತಂಡ ಇತ್ತೀಚೆಗೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಅಫಘಾನಿಸ್ತಾನ ವಿರುದ್ಧವೂ ಸೋತಿರುವಾಗ ನೀವು ಏಕೆ ಈ ಬಗ್ಗೆ ಚಿಂತಿಸಬಾರದು. ನಿಮ್ಮ ತಂಡವು ಏಕೆ ಅರ್ಹತೆ ಪಡೆದಿಲ್ಲ ಎಂದು ನೀವು ಏಕೆ ನೋಡಬಾರದು?. ನೀವೆಲ್ಲರೂ ಭಾರತೀಯ ಕ್ರಿಕೆಟ್ನಿಂದಲೇ ಸಂಬಳ ಪಡೆಯುತ್ತಿದ್ದಾರೆ ಎಂಬುದು ಗೊತ್ತಿರಲಿ ಎಂದು ಗವಾಸ್ಕರ್ ಟೀಕಾಪ್ರಹಾರ ನಡೆಸಿದ್ದಾರೆ.
ಈ ಟೂರ್ನಿಯ ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ತೆರಳಲು ಭದ್ರತೆ ಮತ್ತು ರಾಜಕೀಯ ಉದ್ವಿಗ್ನತೆಯ ಕಾರಣ ನೀಡಿ ಬಿಸಿಸಿಐ ನಿರಾಕರಿಸಿತ್ತು. ಇದರಿಂದ ಭಾರತ ತಂಡಕ್ಕೆ ಹೈಬ್ರಿಡ್ ಮಾದರಿಯಲ್ಲಿ ಆಡಲು ಅವಕಾಶ ನೀಡಲಾಗಿತ್ತು. ಭಾರತ ಎಲ್ಲ ಪಂದ್ಯಗಳನ್ನು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುತ್ತಿದೆ. ಆದರೆ ಭಾರತ ತಂಡದ ಗೆಲುವನ್ನು ಕಂಡು ಕೆಲ ದೇಶದ ಮಾಜಿ ಆಟಗಾರರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.
ಭಾರತವನ್ನು ಈ ರೀತಿ ಆದರಿಸುವುದನ್ನು ನೋಡಿದರೆ ನನಗೆ ಮಜುಗರವೆನಿಸುತ್ತದೆ’ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಹಾಗೂ ವೀಕ್ಷಕ ವಿವರಣೆಗಾರ ಜೊನಾಥನ್ ಆ್ಯಗ್ನೂ ಎಬಿಸಿ ಸ್ಪೋರ್ಟ್ಸ್ ಜತೆಗಿನ ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೆ ಒಗ್ಗರಣೆ ಹಾಕಿದಂತೆ ಆಥರ್ಟನ್ ಮತ್ತು ನಾಸಿರ್ ಹುಸೇನ್, ಭಾರತಕ್ಕೆ ನಿರಾಕರಿಸಲಾಗದಂಥ ಅನುಕೂಲವಿದೆ ಎಂದು ಹೇಳಿದ್ದರು. ಇದು ಗವಾಸ್ಕರ್‌ಗೆ ಪಿತ್ತರ ನೆತ್ತಿಗೇರುವಂತೆ ಮಾಡಿತು. ಇದೀಗ ಗವಾಸ್ಕರ್ ಭಾರತ ತಂಡದ ಬಗ್ಗೆ ಮಾತನಾಡಿದ ಎಲ್ಲರಿಗೂ ತಕ್ಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ IND vs NZ: ಸಚಿನ್ ನಾಯಕತ್ವದ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್
ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ನಾಳೆ(ಭಾನುವಾರ) ತನ್ನ ಕೊನೆಯ ಲೀಗ್ ಪಂದ್ಯವನ್ನು ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಆಡಲಿದೆ. ಪಂದ್ಯದ ಫಲಿತಾಂಶವೇನೇ ಬಂದರೂ ಭಾರತ ತಂಡ ಮಾರ್ಚ್ 4 ರಂದು ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ಲೇ ಆಡಲಿದೆ. ನ್ಯೂಜಿಲ್ಯಾಂಡ್ ಮಾರ್ಚ್ 5 ರಂದು ಲಾಹೋರ್‌ನಲ್ಲಿ ನಡೆಯುವ 2ನೇ ಸೆಮಿಫೈನಲ್‌ನಲ್ಲಿ ಆಡಲಿದೆ.