ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಿಂಗ್ ಕೋಬ್ರಾವನ್ನು ಬರಿಗೈಯಲ್ಲೇ ಹಿಡಿದ ಆಸಾಮಿ; ಮೈಜುಮ್ಮೆನಿಸುವ ವಿಡಿಯೊ ನೋಡಿ

ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರವೀನ್ ಕಸ್ವಾನ್ ಹಂಚಿಕೊಂಡ 11 ಸೆಕೆಂಡ್‌ಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ದೈತ್ಯ ಕಿಂಗ್ ಕೋಬ್ರಾವನ್ನು ಬರಿಗೈಯಿಂದ ಸುಲಭವಾಗಿ ಹಿಡಿದಿರುವ ದೃಶ್ಯ ಜನರನ್ನು ಆಶ್ಚರ್ಯಗೊಳಿಸಿದೆ. ಈ ವಿಡಿಯೊದಲ್ಲಿ ಕಿಂಗ್ ಕೋಬ್ರಾದ ವಿಶಾಲ ಗಾತ್ರವನ್ನು ಗಮನಿಸಿದ ಜನರು, ವ್ಯಕ್ತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಬ್ಬಾ ಏನು ಧೈರ್ಯ?! ಹಗ್ಗದಂತೆ ಕಾಳಿಂಗ ಸರ್ಪವನ್ನು ಹಿಡಿದ ಯುವಕ

ದೈತ್ಯ ಕಿಂಗ್ ಕೋಬ್ರಾವನ್ನು ಬರಿಗೈಯಿಂದ ಯುವಕ

Profile Sushmitha Jain Jul 9, 2025 5:26 PM

ನವದೆಹಲಿ: ಭಾರತೀಯ ಅರಣ್ಯ ಸೇವಾ ಅಧಿಕಾರಿ (Indian Forest Service officer) ಪರವೀನ್ ಕಸ್ವಾನ್ (Parveen Kaswan) ಹಂಚಿಕೊಂಡ 11 ಸೆಕೆಂಡ್‌ಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ದೈತ್ಯ ಕಿಂಗ್ ಕೋಬ್ರಾವನ್ನು (King Cobra) ಬರಿಗೈಯಿಂದ ಸುಲಭವಾಗಿ ಹಿಡಿದಿರುವ ದೃಶ್ಯ ಜನರನ್ನು ಆಶ್ಚರ್ಯಗೊಳಿಸಿದೆ. ಈ ವಿಡಿಯೊದಲ್ಲಿ ಕಿಂಗ್ ಕೋಬ್ರಾದ ವಿಶಾಲ ಗಾತ್ರವನ್ನು ಗಮನಿಸಿದ ಜನರು, ವ್ಯಕ್ತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಸ್ವಾನ್ ತಮ್ಮ ವಿಡಿಯೊದಲ್ಲಿ, "ಕಿಂಗ್ ಕೋಬ್ರಾ ನಿಜವಾದ ಗಾತ್ರವೇನು ಅನ್ನೋದು ತಿಳಿಯಬೇಕು ಎಂದರೆ ಈ ವಿಡಿಯೊ ನೋಡಿ. ಭಾರತದಲ್ಲಿ ಇದು ಎಲ್ಲಿ ಕಾಣ ಸಿಗುತ್ತದೆ? ಹಾಗೆ ಅದು ಸಿಕ್ಕಿದರೆ ಏನು ಮಾಡಬೇಕು?" ಎಂದು ಪ್ರಶ್ನಿಸಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಜನರು ಆಶ್ಚರ್ಯ, ಭಯ ಮತ್ತು ಗೌರವದಿಂದ ಪ್ರತಿಕ್ರಿಯಿಸಿದ್ದಾರೆ.



ಒಬ್ಬ ಬಳಕೆದಾರ, ʼʼನಾನು ಒಂದು ಬಾರಿ ನೋಡಿದ್ದೆ. ಸುಮಾರು 17 ಅಡಿ ಉದ್ದವಿತ್ತು. ಮತ್ತೆ ಕಾಡಿನಲ್ಲಿ ನೋಡುವ ಪರಿಸ್ಥಿತಿ ಬರಬಾರದುʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, "ಕಾಡಿನಲ್ಲಿ ನಿಜವಾದ ಕೋಬ್ರಾವನ್ನು ನೋಡಿದ್ದೆ. ಬಿಳಿ ಪಟ್ಟಿಯ ಕಪ್ಪು ಬಣ್ಣ. ಕೋಬ್ರಾ ಸೀಳಿಡುವ ಶಬ್ದವು ಭಯಾನಕವಾಗಿತ್ತು" ಎಂದಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಗಂಡನನ್ನು ಕೊಂದು ಹೂತು ಹಾಕ್ತೀರಾ....? ಕುಡಿದ ಮತ್ತಿನಲ್ಲಿ ಮಹಿಳೆಯ ರಂಪಾಟ! ವಿಡಿಯೊ ನೋಡಿ

ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಕಾರಿ ಸರ್ಪವಾಗಿದ್ದು, 18 ಅಡಿ (5.5 ಮೀಟರ್) ತನಕ ಬೆಳೆಯುತ್ತದೆ. ಭಾರತದ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳ ಜತೆಗೆ ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಂತಹ ಈಶಾನ್ಯ ರಾಜ್ಯಗಳ ಕಾಡುಗಳಲ್ಲಿ ಕಂಡುಬರುತ್ತದೆ. ಈ ಸರ್ಪಗಳು ತಮ್ಮ ವೈಭವದ ನೋಟ ಮತ್ತು ವಿಷದಿಂದ ಗಮನ ಸೆಳೆದರೂ, ಮಾನವರ ಸಂಪರ್ಕವನ್ನು ಸಾಮಾನ್ಯವಾಗಿ ತಪ್ಪಿಸುತ್ತವೆ. ಇವು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇತ್ತೀಚೆಗೆ ಕೇರಳದ ತಿರುವನಂತಪುರಂನ ಪೆಪ್ಪರಾ ಹತ್ತಿರ ಒಬ್ಬ ಮಹಿಳಾ ಅರಣ್ಯ ಅಧಿಕಾರಿಯು ದೊಡ್ಡ ಕಿಂಗ್ ಕೋಬ್ರಾವನ್ನು ಸ್ಟ್ರೀಮ್‌ನಿಂದ ರಕ್ಷಿಸುವ ವಿಡಿಯೊ ವೈರಲ್ ಆಗಿತ್ತು. ಭಾರತದ ಜೈವಿಕ ವೈವಿಧ್ಯತೆಯ ಸಂರಕ್ಷಣೆಗಾಗಿ ಅವರ ಧೈರ್ಯ ಮತ್ತು ಕೌಶಲಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.