ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Theft: ಡಿ-ಮಾರ್ಟ್‌ನಲ್ಲಿ ಏಲಕ್ಕಿ ಕದ್ದು ಒಳಉಡುಪಿನಲ್ಲಿ ಅಡಗಿಸಿಟ್ಟ; ಕೊನೆಗೆ ಸಿಕ್ಕಿಬಿದ್ದ!

ತೆಲಂಗಾಣದ ಹೈದರಾಬಾದ್‌ನ ಸನತ್‌ನಗರ ಪ್ರದೇಶದಲ್ಲಿರುವ ಡಿ-ಮಾರ್ಟ್‌ನಲ್ಲಿ ಏಲಕ್ಕಿ ಕದ್ದು ಯುವಕನೊಬ್ಬ ಸಿಕ್ಕಿಬಿದ್ದ ಪ್ರಕರಣ ನಡೆದಿದೆ. ಒಬ್ಬ ಯುವಕ ಇಲ್ಲಿ ಏಲಕ್ಕಿಯನ್ನು ಕದ್ದು ಬಳಿಕ ಅದನ್ನು ತನ್ನ ಒಳಉಡುಪಿನಲ್ಲಿ ಅಡಗಿಸಿಟ್ಟಿದ್ದಾನೆ. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೆ ಇದೇ ತಂತ್ರವನ್ನು ಬಳಸಿ ಕದಿಯಲು ಬಂದಾಗ ಡಿ-ಮಾರ್ಟ್‌ ಸಿಬ್ಬಂದಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಡಿ-ಮಾರ್ಟ್‌ನಲ್ಲಿ ಏಲಕ್ಕಿ ಕದ್ದು ಸಿಕ್ಕಿಬಿದ್ದ ಯುವಕ

ಹೈದರಾಬಾದ್: ಕಳ್ಳರು ವಸ್ತುಗಳನ್ನು ಕದಿಯಲು ನಾನಾ ತಂತ್ರಗಳನ್ನು ಬಳಸುವುದು ಹೊಸದೇನಲ್ಲ. ಇಲ್ಲೊಬ್ಬ ಕಳ್ಳ ಡಿ-ಮಾರ್ಟ್‌ನಲ್ಲಿ(D-mart) ಏಲಕ್ಕಿ (Cardamom) ಕದಿಯಲು (Cordamom theft) ಹೋಗಿ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ (Telangana) ಹೈದರಾಬಾದ್‌ನ ಸನತ್‌ನಗರ ಪ್ರದೇಶದಲ್ಲಿರುವ ಡಿ-ಮಾರ್ಟ್‌ನಲ್ಲಿ (D-mart) ಈ ಪ್ರಕರಣ ನಡೆದಿದೆ. ಒಬ್ಬ ಯುವಕ ಇಲ್ಲಿ ಏಲಕ್ಕಿಯನ್ನು ಕದಿದ್ದು, ಬಳಿಕ ಅದನ್ನು ತನ್ನ ಒಳಉಡುಪಲ್ಲಿ ಅಡಗಿಸಿಟ್ಟಿದ್ದಾನೆ. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೆ ಇದೇ ತಂತ್ರವನ್ನು ಬಳಸಿ ಏಲಕ್ಕಿ ಕದಿಯಲು ಬಂದಾಗ ಡಿ-ಮಾರ್ಟ್‌ ಸಿಬ್ಬಂದಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ದಿನಸಿ ಖರೀದಿ ನೆಪದಲ್ಲಿ ಡಿ-ಮಾರ್ಟ್‌ಗೆ ಬಂದ ಯುವಕ ಒಂದು ಸಣ್ಣ ಬುಟ್ಟಿಯನ್ನು ಎತ್ತಿಕೊಂಡು ಏಲಕ್ಕಿ ಸೇರಿದಂತೆ ಕೆಲವು ದೈನಂದಿನ ಅಗತ್ಯ ವಸ್ತುಗಳನ್ನು ಅದರಲ್ಲಿ ಹಾಕಲು ಪ್ರಾರಂಭಿಸಿದನು. ಅನಂತರ ಅವನು ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಲಿಫ್ಟ್ ಹತ್ತಿದ್ದಾನೆ. ಲಿಫ್ಟ್‌ನಲ್ಲಿ ಒಬ್ಬಂಟಿಯಾಗಿರುವ ಅವಕಾಶವನ್ನು ಬಳಸಿಕೊಂಡು, ಬುಟ್ಟಿಯಿಂದ ಏಲಕ್ಕಿ ಪ್ಯಾಕೆಟ್ ಅನ್ನು ಹೊರತೆಗೆದು ಅದನ್ನು ತನ್ನ ಒಳ ಉಡುಪುಗಳಲ್ಲಿ ರಹಸ್ಯವಾಗಿ ಬಚ್ಚಿಟ್ಟಿದ್ದಾನೆ. ಆದರೆ ಯುವಕ ಲಿಫ್ಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ಬಗ್ಗೆ ಮರೆತಿದ್ದ. ಮಳಿಗೆಯ ಆಡಳಿತ ಮಂಡಳಿಯು ಏಲಕ್ಕಿ ದಾಸ್ತಾನಿನಲ್ಲಿ ಕೊರತೆಯನ್ನು ಗಮನಿಸಿದಾಗ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಯುವಕನ ಕೃತ್ಯಗಳು ಬಹಿರಂಗಗೊಂಡಿದೆ.

ಇದನ್ನೂ ಓದಿ: Chikkanayakanahalli News: ಸ್ನೇಹಿತೆಯನ್ನು ಕರೆಸಿ ಗೆಳೆಯರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿದ ಧೂರ್ತ!

ಆದರೆ ಯುವಕ ಮತ್ತೆ ಕೆಲವು ಗಂಟೆಗಳ ಬಳಿಕ ಡಿ-ಮಾರ್ಟ್‌ಗೆ ಹಿಂದಿರುಗಿ ಎರಡು ಏಲಕ್ಕಿ ಪ್ಯಾಕೆಟ್‌ಗಳನ್ನು ಕದ್ದು ಶೌಚಾಲಯಕ್ಕೆ ಹೋಗಿ ಅದನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಲು ಪ್ರಯತ್ನಿಸಿದನು. ಆದರೆ ಈ ಬಾರಿ ಸಿಬ್ಬಂದಿ ಮೊದಲೇ ಜಾಗರೂಕರಾಗಿದ್ದರಿಂದ ಯುವಕ ಶೌಚಾಲಯದಿಂದ ಹೊರಬಂದ ತಕ್ಷಣ ಅವನನ್ನು ಹಿಡಿಯಲಾಯಿತು.

ಮಳಿಗೆಯ ನೌಕರರು ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಯುವಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.