IND vs ENG: ʻಲಾರ್ಡ್ಸ್‌ನಲ್ಲಿ ಭಾರತವನ್ನು ಮಣಿಸುತ್ತೇವೆʼ-ಪ್ರವಾಸಿಗರಿಗೆ ಬೆನ್ ಸ್ಟೋಕ್ಸ್ ವಾರ್ನಿಂಗ್!
Ben Stokes in 3rd Test against India: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜುಲೈ 10 ರಂದು ಗುರುವಾರ ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಲು ನಾವು ಪ್ರಯತ್ನಿಸಲಿದ್ದೇವೆಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಭರವಸೆಯನ್ನು ನೀಡಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ನಿಮಿತ್ತ ಬೆನ್ ಸ್ಟೋಕ್ಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಲಂಡನ್: ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ(IND vs ENG) ಹೀನಾಯ ಸೋಲು ಅನುಭವಿಸಿದ್ದ ಇಂಗ್ಲೆಂಡ್ ತಂಡ, ಜುಲೈ 10 ರಿಂದ ಜುಲೈ 14ರವರೆಗೆ ಇಲ್ಲಿನ ಲಾರ್ಡ್ಸ್ ಅಂಗಣದಲ್ಲಿ ನಡೆಯುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದೆ ಎಂದು ಆಂಗ್ಲರ (England) ನಾಯಕ ಬೆನ್ ಸ್ಟೋಕ್ಸ್ (Ben Stokes) ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡವಷ್ಟೇ ಅಲ್ಲ, ವಿಶ್ವದ ಯಾವುದೇ ತಂಡವಾದರೂ ನಾವು ಗೌರವಿಸುತ್ತೇವೆ ಹಾಗೂ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ.
ಲೀಡ್ಸ್ ಟೆಸ್ಟ್‌ನಲ್ಲಿ ಭಾರತ ನೀಡಿದ್ದ 371 ರನ್‌ಗಳ ಗುರಿಯನ್ನು ಚೇಸ್ ಮಾಡಿದ ಬಳಿಕ ಇಂಗ್ಲೆಂಡ್ ತಂಡ, ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ 336 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಆಂಗ್ಲರ ಬೌಲಿಂಗ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಅಲ್ಲದೆ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್‌ಗೆ ಕೌಂಟರ್ ನೀಡುವಲ್ಲಿ ವಿಫಲರಾಗಿದ್ದರು. ಆದರೆ, ಭಾರತ ತಂಡದ ಪರ ನಾಯಕ ಶುಭಮನ್ ಗಿಲ್ 269 ರನ್‌ಗಳು ಹಾಗೂ 161 ರನ್‌ಗಳನ್ನು ಕಲೆ ಹಾಕಿದ್ದರು. ಆಕಾಶ್ ದೀಪ್ 10 ವಿಕೆಟ್ ಸಾಧನೆ ಮಾಡಿದ್ದರು. ಇದು ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಲು ನೆರವಾಗಿತ್ತು.
IND vs ENG: ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಸುಳಿವು ನೀಡಿದ ರಿಷಭ್ ಪಂತ್!
ಇದೀಗ ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XIಅನ್ನು ಈಗಾಗಲೇ ಪ್ರಕಟಿಸಲಾಗಿದೆ. ಜೋಫ್ರಾ ಆರ್ಚರ್ ನಾಲ್ಕು ವರ್ಷಗಳ ಬಳಿಕ ಭಾರತ ತಂಡದ ಪ್ಲೇಯಿಂಗ್ XIಗೆ ಬಂದಿದ್ದಾರೆ. ಅವರು ಗಾಯದ ಸಮಸ್ಯೆಯಿಂದ ನಾಲ್ಕು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಮೂರನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಆಂಗ್ಲರ ನಾಯಕ ಬೆನ್ ಸ್ಟೋಕ್ಸ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಬೇಕೆಂದ ಕೆವಿನ್ ಪೀಟರ್ಸನ್!
ಭಾರತ ತಂಡವನ್ನು ಸೋಲಿಸಲು ಪ್ರಯತ್ನಿಸುತ್ತೇವೆ: ಬೆನ್ ಸ್ಟೋಕ್ಸ್
"ಇದು ಯಾವಾಗಲೂ ಸರಣಿಯಾಗಿರುತ್ತಿತ್ತು, ಕ್ಷಣಗಳು ಕಡಿಮೆಯಾಗುತ್ತಲೇ ಇದ್ದವು ಹಾಗೂ ಫಲಿತಾಂಶಗಳು ಕಡಿಮೆಯಾಗುತ್ತಲೇ ಇದ್ದವು ಏಕೆಂದರೆ ಎರಡು ಉತ್ತಮ ತಂಡಗಳು ಕಠಿಣ ಪೈಪೋಟಿ ನಡೆಸುತ್ತಿವೆ. ಹೆಡಿಂಗ್ಲೆಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೆವು ಮತ್ತು ಕಳೆದ ಪಂದ್ಯದಲ್ಲಿ ಭಾರತ ಅಸಾಧಾರಣ ಪ್ರದರ್ಶನವನ್ನು ತೋರಿತ್ತು. ಎರಡು ಉತ್ತಮ ತಂಡಗಳು ಪರಸ್ಪರ ವಿರುದ್ಧ ಹೋರಾಡುತ್ತಿರುವಾಗ, ನೀವು ಕಠಿಣ ಪೈಪೋಟಿಯನ್ನು ನೋಡುತ್ತೀರಿ. ನಮಗೆ ಯಾರ ವಿರುದ್ಧವೂ ಮೇಲುಗೈ ಸಾಧಿಸಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಎದುರಾಳಿ ಯಾರೇ ಆಗಿರಲಿ, ನಾವು ಅವರನ್ನು ಗೌರವಿಸುತ್ತೇವೆ. ಈ ವಾರ ನಾವು ಕಮ್‌ಬ್ಯಾಕ್ ಮಾಡುತ್ತೇವೆ ಹಾಗೂ ಭಾರತ ತಂಡವನ್ನು ಶಕ್ತಿಯುತವಾಗಿ ಸೋಲಿಸಲು ಪ್ರಯತ್ನಿಸುತ್ತೇವೆ ಮತ್ತು ಸ್ಪಷ್ಟವಾಗಿ ಗೆಲುವಿನೊಂದಿಗೆ ಹೊರಬರಲು ಪ್ರಯತ್ನಿಸುತ್ತೇವೆ," ಎಂದು ಸ್ಟೋಕ್ಸ್ ಭರವಸೆ ನೀಡಿದ್ದಾರೆ.
One change for Lord's 🔁
— England Cricket (@englandcricket) July 9, 2025
After a four year wait...
Jofra returns to Test Cricket 😍
ಇಂಗ್ಲೆಂಡ್ ಪ್ಲೇಯಿಂಗ್ XI: ಝ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿ.ಕೀ), ಕ್ರಿಸ್ ವೋಕ್ಸ್, ಬ್ರೈಡೆನ್ ಕಾರ್ಸ್, ಜೋಫ್ರಾ ಆರ್ಚರ್, ಶೋಯೆಬ್ ಬಶೀರ್