ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಿಟಕಿಯಲ್ಲಿ ನೇತಾಡುತ್ತಿದ್ದ 4 ವರ್ಷದ ಬಾಲಕಿ; ರಜೆ ದಿನವೂ ಕರ್ತವ್ಯ ಮರೆಯದ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಮನೆಯಲ್ಲಿ ಒಂಟಿಯಾಗಿದ್ದಾಗ ಕಿಟಕಿಯಿಂದ ಹೊರಗೆ ಜಾರಿ ನೇತಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಗ್ನಿಶಾಮಕ ಸಿಬ್ಬಂದಿ ತಮ್ಮ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಪುಣೆಯ ಕಾಟ್ರಾಜ್ ಎಂಬಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಾಯಿ ತನ್ನ ಹಿರಿಯ ಮಗಳನ್ನು ಶಾಲೆಗೆ ಕರೆದೊಯ್ಯಲು ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

3ನೇ ಅಂತಸ್ತಿನಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ ಫೈರ್ ಮ್ಯಾನ್

ಬಾಲಕಿಯನ್ನು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ

Profile Sushmitha Jain Jul 9, 2025 5:21 PM

ಮುಂಬೈ: ಮನೆಯಲ್ಲಿ ಒಂಟಿಯಾಗಿದ್ದಾಗ ಕಿಟಕಿಯಿಂದ ಹೊರಗೆ ಜಾರಿ ಸಿಲುಕಿಕೊಂಡಿದ್ದ, ನಾಲ್ಕು ವರ್ಷದ ಬಾಲಕಿಯನ್ನು ಅಗ್ನಿಶಾಮಕ ಸಿಬ್ಬಂದಿ (Fireman) ತಮ್ಮ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಪುಣೆಯ (Pune) ಕಾಟ್ರಾಜ್ (Katraj) ಎಂಬಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಾಯಿ ತನ್ನ ಹಿರಿಯ ಮಗಳನ್ನು ಶಾಲೆಗೆ ಕರೆದೊಯ್ಯಲು ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಬಾಲಕಿಯು ಮಲಗುವ ಕೋಣೆಯಲ್ಲಿ ಆಟವಾಡುತ್ತಿದ್ದಾಗ ಕಿಟಕಿಯ ಮೇಲೆ ಹತ್ತಿದ್ದಾಗ ಗ್ರಿಲ್‌ನಿಂದ ಜಾರಿಕೊಂಡಿದ್ದಾಳೆ. ಅದೇ ಕಟ್ಟಡದಲ್ಲಿ ವಾಸಿಸುವ ಅಗ್ನಿಶಾಮಕ ಅಧಿಕಾರಿ ಚವಾಣ್, ಬಾಲಕಿಯನ್ನು ರಕ್ಷಿಸಿದ್ದಾರೆ. "ಕಿಟಕಿಯ ಗ್ರಿಲ್‌ನಲ್ಲಿ ಮಗುವಿನ ತಲೆ ಸಿಲುಕಿ ದೇಹವು ಹೊರಗೆ ತೂಗಾಡುತ್ತಿತ್ತು. ನೋವಿನಿಂದ ಮಗು ಕಿರುಚುತ್ತಿತ್ತು" ಎಂದು ಚವಾಣ್ ತಿಳಿಸಿದ್ದಾರೆ.

ಓರ್ವ ನಿವಾಸಿ ನೆಲಮಹಡಿಯಿಂದ ಬಾಲಕಿಯನ್ನು ಗಮನಿಸಿ, "ಬಚ್ಚಿ ಗಿರ್ ರಹಿ ಹೈ (ಮಗು ಬೀಳುತ್ತಿದೆ)" ಎಂದು ಕೂಗಿದ್ದಾರೆ. ಆ ಸಮಯದಲ್ಲಿ ವಾರಾಂತ್ಯದ ರಜೆಯಲ್ಲಿದ್ದ ಚವಾಣ್, ಚಹಾ ಕುಡಿಯುತ್ತಿದ್ದಾಗ ಕಿರುಚಾಟವನ್ನು ಕೇಳಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. "ನನ್ನ ಅಗ್ನಿಶಾಮಕ ತರಬೇತಿಯಿಂದಾಗಿ ಏನು ಮಾಡಬೇಕೆಂದು ತಿಳಿದಿತ್ತು. ಕಟ್ಟಡಕ್ಕೆ ಓಡಿ, ಮಗುವಿನ ತಾಯಿಯಿಂದ ಬೀಗ ತೆಗೆದುಕೊಂಡು, ಫ್ಲ್ಯಾಟ್ ತೆರೆದು ಕಿಟಕಿಯಿಂದ ಬಾಲಕಿಯನ್ನು ಸುರಕ್ಷಿತವಾಗಿ ಹೊರತೆಗೆದೆ" ಎಂದು ಚವಾಣ್ ಹೇಳಿದರು.



ಈ ಸುದ್ದಿಯನ್ನು ಓದಿ: Viral Video: ಚಿಕ್ಕಮ್ಮನನ್ನೇ ಮದುವೆಯಾಗುವಂತೆ ಯುವಕನಿಗೆ ಒತ್ತಾಯಿಸಿದ ಗ್ರಾಮಸ್ಥರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಚವಾಣ್‌ ತ್ವರಿತವಾಗಿ ಕಾರ್ಯ ಪ್ರವೃತ್ತವಾಗಿದ್ದರಿಂದ ಮತ್ತು ಅವರ ವೃತ್ತಿಪರ ತರಬೇತಿಯಿಂದ ಬಾಲಕಿಯ ಜೀವ ಉಳಿಯಿತು. ಈ ಘಟನೆಯು ಮಕ್ಕಳ ಸುರಕ್ಷತೆಯ ಕುರಿತು ಗಂಭೀರವಾಗಿ ಚಿಂತನೆ ನಡೆಸುವಂತೆ ಮಾಡಿದೆ. ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವುದರ ಅಪಾಯವನ್ನು ಈ ಘಟನೆ ಎತ್ತಿ ತೋರಿಸಿದೆ. ಸ್ಥಳೀಯರು ಚವಾಣ್‌ ಅವರ ಶೀಘ್ರ ಕ್ರಮವನ್ನು ಶ್ಲಾಘಿಸಿದ್ದಾರೆ. ಈ ಘಟನೆಯಿಂದ ಎಲ್ಲರೂ, ವಿಶೇಷವಾಗಿ ಪೋಷಕರು, ಮಕ್ಕಳನ್ನು ಒಂಟಿಯಾಗಿ ಬಿಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂಬ ಸಂದೇಶ ನೀಡಿದೆ.