Viral Video: ಗಂಡನನ್ನು ಕೊಂದು ಹೂತು ಹಾಕ್ತೀರಾ....? ಕುಡಿದ ಮತ್ತಿನಲ್ಲಿ ಮಹಿಳೆಯ ರಂಪಾಟ! ವಿಡಿಯೊ ನೋಡಿ
ಛತ್ತೀಸ್‌ಗಢದ ಪಾಮ್ ಮಾಲ್‌ನಲ್ಲಿರುವ ಒನ್ ನೈಟ್ ಕ್ಲಬ್‌ನ ಹೊರಗೆ ತಡರಾತ್ರಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಆ ವೇಳೆ ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬಳು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ರಾಯ್‌ಪುರ: ಛತ್ತೀಸ್‌ಗಢದ ಕೊರ್ಬಾದ ಟ್ರಾನ್ಸ್‌ಪೋರ್ಟ್ ನಗರ ಪ್ರದೇಶದ ಪಾಮ್ ಮಾಲ್‌ನಲ್ಲಿರುವ ಒನ್ ನೈಟ್ ಕ್ಲಬ್‌ನ ಹೊರಗೆ ಹೈವೋಲ್ಟೆಜ್ ಡ್ರಾಮಾ ನಡೆದಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಘಟನೆಯಲ್ಲಿ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬಳು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ಗದ್ದಲದ ಮಧ್ಯೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಬಂದ ಪೊಲೀಸ್ ಅಧಿಕಾರಿಯ ಜೊತೆಗೆ ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬಳು ವಾಗ್ವಾದ ನಡೆಸಿದ್ದಾಳೆ. ಘಟನೆಯ ವಿಡಿಯೊಗಳು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ವೈರಲ್ ವಿಡಿಯೊದಲ್ಲಿ, ಕುಡಿದ ಮತ್ತಿನಲ್ಲಿದ್ದ ಮಹಿಳೆ "ನೀವು ನನ್ನ ಗಂಡನನ್ನು ಕೊಂದು ಹೂತು ಹಾಕುತ್ತೀರಾ? " ಎಂದು ಕೇಳಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
#उड़ताछत्तीसगढ़
— Mukesh S Singh (@truth_finder04) July 8, 2025
❌⛔️सावधान! वीडियो में भारी गाली-गलौज है — Viewers Discretion Advised📛⛔️
🚫📵🎧 कृपया हेडफोन लगाकर या म्यूट करके देखें | Loud verbal abuse in video🔞🚫
💥 Verdant industrial district Korba in Chhattisgarh ERUPTS outside One Night Club!
Drunken chaos, slaps &… pic.twitter.com/zCOAaNm4NZ
ವರದಿ ಪ್ರಕಾರ, ಟಿಪಿ ನಗರದ ಸಿಎಸ್‌ಇಬಿ ಔಟ್‌ಪೋಸ್ಟ್ ವ್ಯಾಪ್ತಿಗೆ ಬರುವ ಪಬ್‌ನೊಳಗೆ ಜಗಳ ನಡೆದಿದ್ದು, ಈ ವಿವಾದವು ಕೊನೆಗೆ ಬೀದಿಗೆ ಬಂದಿದೆ. ಪಬ್ ಹೊರಗೆ ತಡರಾತ್ರಿ ಎರಡು ಪಕ್ಷಗಳ ನಡುವೆ ಹೊಡೆದಾಟ ಶುರುವಾಗಿದೆ. ಇದರ ಪರಿಣಾಮವಾಗಿ ಅಲ್ಲೇ ನಿಲ್ಲಿಸಿದ್ದ ಮಹೀಂದ್ರಾ ಥಾರ್ ವಾಹನಕ್ಕೆ ಹಾನಿಯಾಯಿತು. ಮತ್ತು ಬಿಯರ್ ಬಾಟಲಿಗಳನ್ನು ರಸ್ತೆಗೆ ಎಸೆಯಲಾಗಿದೆ.
ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರ ನಡುವೆ ಸಂಧಾನ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ, ಎರಡೂ ಗುಂಪುಗಳು ಸಮಾಧಾನಗೊಳ್ಳದೆ ಪೊಲೀಸರೊಂದಿಗೂ ವಾದಕ್ಕೀಳಿದಿದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದರಿಂದ ಎರಡೂ ಗುಂಪುಗಳು ಯಾವುದೇ ಔಪಚಾರಿಕ ದೂರು ದಾಖಲಿಸಲಿಲ್ಲ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ದುಬೈ ಮಾಲ್‌ನಲ್ಲಿ ಸೂಪರ್‌ಮ್ಯಾನ್ ಹಾರಾಟ; ಏನಿದು ವೈರಲ್ ವಿಡಿಯೊ?
ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಲು ಪೊಲೀಸರು ಕೇಳಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಪ್ರಕರಣದ ತನಿಖೆ ಶುರುಮಾಡಿದ್ದು, ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮುಂದಾಗಿದ್ದಾರೆ. ಹಾಗೂ ಮಾದಕ ದ್ರವ್ಯ ಸೇವನೆಯ ಸಮಸ್ಯೆಯನ್ನು ನಿಯಂತ್ರಿಸಲು ಪೊಲೀಸರು ಒನ್ ನೈಟ್ ಕ್ಲಬ್ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಎನ್ನಲಾಗಿದೆ.