ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Killer Mountain: ಕಿಲ್ಲರ್ ಪರ್ವತ ಏರಿ ಪಾಕಿಸ್ತಾನದ ಪ್ರವಾಸೋದ್ಯಮ ರಾಯಭಾರಿಯಾದ ಕತಾರ್‌ ರಾಜವಂಶದ ಶೇಖಾ ಅಸ್ಮಾ ಅಲ್ ಥಾನಿ

Sheikha Asma Al Thani: ಕತಾರ್‌ನ ರಾಜವಂಶದ ಸದಸ್ಯೆ ಮತ್ತು ಪರ್ವತಾರೋಹಿ ಶೇಖಾ ಅಸ್ಮಾ ಅಲ್ ಥಾನಿ ವಿಶ್ವದ ಅತಿ ಎತ್ತರದ ಮತ್ತು ಸವಾಲಿನ ಶಿಖರಗಳಲ್ಲಿ ಒಂದಾದ ನಂಗಾ ಪರ್ವತವನ್ನು ಏರಿದ ಮೊದಲ ಕತಾರ್‌ನ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ನಂಗಾ ಪರ್ವತವನ್ನು ಏರಿದ ಮೊದಲ ಕತಾರ್‌ನ ಮಹಿಳೆ ಈಕೆ

Profile Sushmitha Jain Jul 9, 2025 9:48 PM

ದೋಹಾ: ಕತಾರ್‌ನ (Qatar) ರಾಜವಂಶದ ಸದಸ್ಯೆ ಮತ್ತು ಪರ್ವತಾರೋಹಿ ಶೇಖಾ ಅಸ್ಮಾ ಅಲ್ ಥಾನಿ (Sheikha Asma Al Thani), ವಿಶ್ವದ ಅತಿ ಎತ್ತರದ ಮತ್ತು ಸವಾಲಿನ ಶಿಖರಗಳಲ್ಲಿ (Challenging Peaks) ಒಂದಾದ ನಂಗಾ ಪರ್ವತವನ್ನು (Nanga Parbat) ಏರಿದ ಮೊದಲ ಕತಾರ್‌ನ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಾಧನೆ ಬಗ್ಗೆ ಬರೆದುಕೊಂಡಿರುವ ಅವರು, ''8,000 ಮೀಟರ್‌ಗಿಂತ ಎತ್ತರದ 14 ಶಿಖರಗಳನ್ನು ಏರಬೇಕೆಂಬುದು ನನ್ನ ಕನಸು ಇದಾಗಿದ್ದು, ಎಂಟು ಕಠಿಣ ಪರ್ವತಗಳನ್ನು ಏರಿ, ಇಂದು ಮತ್ತೊಂದು ಯಶಸ್ಸು ಸಾಧಿಸಿದ್ದೇನೆʼʼ ಎಂದಿದ್ದಾರೆ.

ಅಲ್ಲದೇ ತಮ್ಮ ಪ್ರಯಾಣದ ಬಗ್ಗೆ ಸುದೀರ್ಘವಾಗಿ ಬರೆದಿರುವ ಅವರು "ಎಲ್ಲೆಡೆ ಮಂಜುಗಟ್ಟಿದ ಹಿಮ, ಪ್ರತಿ ಕೆಲವು ಸೆಕೆಂಡ್‌ಗಳಿಗೊಮ್ಮೆ ಬೀಳುವ ಕಲ್ಲುಗಳು, ಅನಿರೀಕ್ಷಿತ ತಿರುವುಗಳು ಎದುರಾದವು. ಇದು ನನ್ನ ಮನೋಬಲವನ್ನು ಪರೀಕ್ಷಿಸಿತ್ತು. ನನ್ನ ದೌರ್ಬಲ್ಯವನ್ನು ನಿರಂತರವಾಗಿ ನೆನಪಿಸಿತು" ಎಂದು ಅವರು ಬರೆದಿದ್ದಾರೆ.

"ಆದರೆ ಆ ಕಠಿಣದ ಹಾದಿಯಲ್ಲಿ ಹೊಸ ಚೈತನ್ಯ ಕಾಣುತ್ತಿತ್ತು. ಸಕಾರಾತ್ಮಕ ಚಿಂತನೆ ಇತ್ತು. ಜೀವನದಡೆಗೆ ಶರಣಾಗತಿಯಿತ್ತು, ನನಗೆ ತಿಳಿಯದ ಶಕ್ತಿಯಿತ್ತು. ಶಿಖರಗಳನ್ನೇರಲು ಮಾತ್ರವಲ್ಲ, ಅನವಶ್ಯ ವಿಷಯಗಳನ್ನು ಬಿಟ್ಟು ಜೀವನವನ್ನು ಮುನ್ನಡೆಸಲು ಪ್ರೇರಣೆ ನೀಡಿತ್ತು. ಈ ಪರ್ವತಾರೋಹಣ ಪಯಣದ ಪ್ರತಿಯೊಂದು ಮಜಲುಗಳು, ಶಾಶ್ವತವಾಗಿ ನನ್ನೊಂದಿಗಿರಲಿದೆ" ಎಂದು ಶೇಖಾ ಹೇಳಿದ್ದಾರೆ.
ನಂಗಾ ಪರ್ವತದ ಶಿಖರದಲ್ಲಿ ಕತಾರ್‌ನ ಧ್ವಜವನ್ನು ಹಾರಿಸಿದ ಅವರು, ‘ಕಿಲ್ಲರ್ ಮೌಂಟೇನ್’ ಎಂದೇ ಕರೆಯಲ್ಪಡುವ ಈ ಶಿಖರವನ್ನು ಏರಿ, 14 ಎಂಟು ಸಾವಿರದ ಶಿಖರಗಳನ್ನು ಏರಿದ ಅತ್ಯಂತ ಕಡಿಮೆ ಜನರ ಗುಂಪಿಗೆ ಸೇರಲು ಒಂದು ಹೆಜ್ಜೆ ಹತ್ತಿರವಾಗಿದ್ದು, ಶೇಖಾ ಅವರ ಸಾಧನೆಯನ್ನು ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದೆ. ಮಂಗಳವಾರ, ಪಾಕಿಸ್ತಾನವು ಅವರನ್ನು ಪರ್ವತ ಮತ್ತು ಪ್ರವಾಸೋದ್ಯಮದ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಿಸಿದೆ.

ಈ ಸುದ್ದಿಯನ್ನು ಓದಿ: Viral Video: ಕಿಂಗ್ ಕೋಬ್ರಾವನ್ನು ಬರಿಗೈಯಲ್ಲೇ ಹಿಡಿದ ಆಸಾಮಿ; ಮೈಜುಮ್ಮೆನಿಸುವ ವಿಡಿಯೊ ನೋಡಿ
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್, ಎಕ್ಸ್‌ನಲ್ಲಿ ಅವರನ್ನು ಅಭಿನಂದಿಸಿ, "ನಂಗಾ ಪರ್ವತ ಏರಿದ ಶೇಖಾ ಅವರ ಇತ್ತೀಚಿನ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಸಾಹಸ ಮತ್ತು ದೃಢನಿಶ್ಚಯದ ಶಕ್ತಿಯುತ ಸಂದೇಶವನ್ನು ನೀಡುತ್ತದೆ. ಇದು ಪಾಕಿಸ್ತಾನ ಮತ್ತು ಕತಾರ್ ನಡುವಿನ ಶಾಶ್ವತ ಸ್ನೇಹಕ್ಕೆ ಸಾಕ್ಷಿಯಾಗಿದೆ" ಎಂದು ಬರೆದಿದ್ದಾರೆ.

ಶೇಖಾ ಅಸ್ಮಾ, ಎವರೆಸ್ಟ್, ಲೋತ್ಸೆ, ಮನಾಸ್ಲು, ಕೆ2, ಮತ್ತು ಅಮಾ ದಬ್ಲಾಮ್ ಶಿಖರಗಳನ್ನು ಏರಿದ ಮೊದಲ ಕತಾರ್‌ನ ಮಹಿಳೆಯಾಗಿದ್ದಾರೆ. ಜತೆಗೆ ಉತ್ತರ ಧ್ರುವಕ್ಕೆ ಸ್ಕೀಯಿಂಗ್ ಮಾಡಿದ ಮೊದಲ ಕತಾರ್‌ ವ್ಯಕ್ತಿಯೂ ಆಗಿದ್ದಾರೆ.