ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಆರ್‌ಟಿಐ ಹಣ ಬಂದಿಲ್ಲ ಎಂದು ಟಿಸಿ ಕೊಡದ ಶಾಲೆ : ಡಿಡಿಪಿಐಗೆ ಮೊರೆ

ಪೋಷಕ ಮಂಜುನಾಥ್ ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕರನ್ನು ಟಿಸಿ ನೀಡುವಂತೆ ಮನವಿ ಮಾಡಿದ್ದರೂ ಸಹ ಅವರು ನಿಮ್ಮ ಮಗಳ ಶಾಲಾ ಶುಲ್ಕ ಸರ್ಕಾರದಿಂದ ಪಾವತಿಯಾಗಿಲ್ಲ. ಇನ್ನೂ ಆಗಸ್ಟ್ ಕೊನೆವರೆಗೆ ಸಮಯವಿದೆ. ಆಗ ಕೊಡೋಣ ಎಂದು ತಿಳಿಸಿದ್ದಾರಂತೆ. ಆದರೆ ಹೊಸದಾಗಿ ದಾಖಲಾಗಿರುವ ವಸತಿ ಸಹಿತ ಶಾಲೆಯಲ್ಲಿ ವರ್ಗಾವಣೆ ಪತ್ರವಿಲ್ಲದಿದ್ದರೆ ಹಾಜರಾತಿ ಕೊರತೆ ಸಂಭವಿಸ ಬಹುದು ಎಂಬ ಆತಂಕ ಪೋಷಕರದ್ದು ಎಂದು ಅಲವತ್ತುಕೊಂಡಿದ್ದಾರೆ.

ಆರ್‌ಟಿಐ ಹಣ ಬಂದಿಲ್ಲ ಎಂದು ಟಿಸಿ ಕೊಡದ ಶಾಲೆ : ಡಿಡಿಪಿಐಗೆ ಮೊರೆ

ಡಿಡಿಪಿಐ ಪತ್ರ....

Profile Ashok Nayak Jul 10, 2025 12:31 AM

ಚಿಕ್ಕಬಳ್ಳಾಪುರ: ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯ ಟಿಸಿ ಪಡೆಯಲೆಂದು ಅರ್ಜಿ ಸಲ್ಲಿಸಿದ ಪೋಷಕರು ಎರಡು ತಿಂಗಳು ಅಲೆದರೂ ಟಿಸಿ ಸಿಗದ ಹಿನ್ನೆಲೆ ಯಲ್ಲಿ ಡಿಡಿಪಿಐ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಅಗಲಗುರ್ಕಿಯ ಬಿಜಿಎಸ್ ಶಾಲೆಯ ವಿರುದ್ಧ ಟಿಸಿ ನೀಡದೇ ಸತಾಯಿಸಿದ ಆರೋಪ ಕೇಳಿ ಬಂದಿದೆ.

ತಾಲೂಕಿನ  ಅಗಲಗುರ್ಕಿ ಗ್ರಾಮದ ಮಂಜುನಾಥ್ ಎಂಬುವರು ಏಳು ವರ್ಷಗಳ ಹಿಂದೆ ಆರ್‌ಟಿಇ ಕಾಯಿದೆ ಅಡಿಯಲ್ಲಿ ಅಗಲಗುರ್ಕಿಯ ಬಿಜಿಎಸ್‌ಶಾಲೆಗೆ ತಮ್ಮ ಮಗಳನ್ನು ಎಲ್ ಕೆಜಿಗೆ ಸೇರಿಸಿದ್ದರು. ಅಂದಿನಿಂದ ಸರ್ಕಾರವೇ ಆ ವಿದ್ಯಾರ್ಥಿನಿಯ ಶಾಲಾ ಶುಲ್ಕವನ್ನು ಪಾವತಿ ಮಾಡುತ್ತಿತ್ತು.

ಇದನ್ನೂ ಓದಿ: Chikkanayakanahalli News: ಸ್ನೇಹಿತೆಯನ್ನು ಕರೆಸಿ ಗೆಳೆಯರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿದ ಧೂರ್ತ!

ಇದೀಗ ಆ ಪೋಷಕರು ಪ್ರಶಾಂತಿ ಬಾಲಮಂದಿರ ಶಾಲೆ ಆರನೇ ತರಗತಿಯ ಪ್ರವೇಶಕ್ಕೆ ನಡೆಸಿದ ಆಯ್ಕೆ ಪರೀಕ್ಷೆಯಲ್ಲಿ ತಮ್ಮ ಮಗಳನ್ನು ಪರೀಕ್ಷೆ ಬರೆಸಿದ್ದು ಅಲ್ಲಿ ಆಯ್ಕೆಯಾಗಿದೆ.ಪರಿಣಾಮ ವಸತಿಸಹಿತವಾಗಿ ಶಿಕ್ಷಣ ಕಲಿಕೆಯನ್ನು ಉಚಿತವಾಗಿ ಕಲ್ಪಿಸುತ್ತಿರುವ ಆಶಾಲೆಗೆ ತಮ್ಮ ಮಗಳನ್ನು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲೇ ಹಿಂದೆ ಓದುತ್ತಿದ್ದ ಅಗಲಗುರ್ಕಿ ಬಿಜಿಎಸ್ ಶಾಲೆಗೆ ವರ್ಗಾವಣೆ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಎರಡು ತಿಂಗಳಿAದ ಹತ್ತಾರು ಬಾರಿ ಟಿಸಿ ಪಡೆಯಲು ಅಲೆದು ಅಲೆದು ಸುಸ್ತಾಗಿದ್ದಾರೆ.

ಈ ಕುರಿತು ಪೋಷಕ ಮಂಜುನಾಥ್ ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕರನ್ನು ಟಿಸಿ ನೀಡುವಂತೆ ಮನವಿ ಮಾಡಿದ್ದರೂ ಸಹ ಅವರು ನಿಮ್ಮ ಮಗಳ ಶಾಲಾ ಶುಲ್ಕ ಸರ್ಕಾರದಿಂದ ಪಾವತಿಯಾಗಿಲ್ಲ. ಇನ್ನೂ ಆಗಸ್ಟ್ ಕೊನೆವರೆಗೆ ಸಮಯವಿದೆ. ಆಗ ಕೊಡೋಣ ಎಂದು ತಿಳಿಸಿದ್ದಾರಂತೆ. ಆದರೆ ಹೊಸದಾಗಿ ದಾಖಲಾಗಿರುವ ವಸತಿ ಸಹಿತ ಶಾಲೆಯಲ್ಲಿ ವರ್ಗಾವಣೆ ಪತ್ರವಿಲ್ಲದಿದ್ದರೆ ಹಾಜರಾತಿ ಕೊರತೆ ಸಂಭವಿಸಬಹುದು ಎಂಬ ಆತಂಕ ಪೋಷಕರದ್ದು ಎಂದು ಅಲವತ್ತುಕೊಂಡಿದ್ದಾರೆ.

ಕೊನೆಗೆ ವಿಧಿಯಿಲ್ಲದೇ ಸರ್ಕಾರದಿಂದ ಹಣ ಬಾರದೇ ಮಗಳ ಟಿಸಿ ಪಡೆಯಲು ಸಾಧ್ಯವಿಲ್ಲ ಎಂದು ಡಿಡಿಪಿಐ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜೂನ್ ೧೮ರಂದು ಸಲ್ಲಿಸಿದ ಮನವಿಗೆ ಡಿಡಿಪಿಐರವರು ಜುಲೈ ೨ರಂದು ಬಿಇಒಗೆ ಆದೇಶ ಹಾಕಿ ತಕ್ಷಣ ಟಿಸಿ ಕೊಡಿಸಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಆದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಕುರಿತು ಪೋಷಕರು ಮಾಧ್ಯಮದವರ ಗಮನ ಸೆಳೆದಿದ್ದಾರೆ.ಈ ವಿಚಾರ ಡಿಡಿಪಿಐ ಗಮನಕ್ಕೆ ತಂದಾಗ ಅವರು ತಕ್ಷಣ ಮುಖ್ಯ ಶಿಕ್ಷಕ ಮೋಹನ್ ಕುಮಾರ್‌ರವರಿಗೆ ಕರೆ ಮಾಡಿ ತಕ್ಷಣ ಟಿಸಿ ವಿತರಿಸುವಂತೆ ಸೂಚಿಸಿದರು. ಟಿಸಿ ವಿತರಣೆಗೆ ಮುಖ್ಯ ಶಿಕ್ಷಕರು ಮೂರು ದಿನಗಳ ಕಾಲಾವಕಾಶ ಕೇಳಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸಮಸ್ಯೆ ಎಲ್ಲಿದೆ?
ಪ್ರತಿವರ್ಷದಂತೆ ೨೦೨೪-೨೫ನೇ ಸಾಲಿನ ಆರ್‌ಟಿಇ ವಿದ್ಯಾರ್ಥಿಗಳ ಶುಲ್ಕದ ಮೊದಲ ಕಂತು ಬಿಜಿಎಸ್ ಶಾಲೆಯಲ್ಲಿ ಓದುತ್ತಿರುವ ಆರ್ ಟಿಇ ಅಡಿ ಓದುತ್ತಿರುವ ೯೦ ಮಕ್ಕಳ ಹಣ ೭.೨೦ ಲಕ್ಷ ರೂ ಬಿಡುಗಡೆಯಾಗದಿರಲು ಬಿಜಿಎಸ್ ಶಾಲೆಯವರು ಸಲ್ಲಿಸಿದ ಲೆಕ್ಕಪತ್ರ ವರದಿ ಸಮರ್ಪಕವಾಗಿಲ್ಲದ ಕಾರಣ ಆಯುಕ್ತರ ಕಚೇರಿಯಲ್ಲಿ ತಿರಸ್ಕೃತವಾಗಿದೆ ಹೀಗಾಗಿ ಹಣ ಬಿಡುಗಡೆಯಾಗದೇ ನಿಲುಗಡೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಹೀಗೆ ತನ್ನದಲ್ಲದ ತಪ್ಪಿಗೆ ಪೋಷಕರೊಬ್ಬರು ವರ್ಗಾವಣೆ ಪತ್ರಕ್ಕಾಗಿ ಅಲೆಯುವಂತಾಗಿದ್ದು ವಿಪರ್ಯಾಸವೇ ಸರಿ.

*

ಆ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಮಾತನಾಡಿದ್ದೇನೆ. ಅವರು ಗುರುಪೂರ್ಣಿಮೆ ಸಿದ್ಧತೆಯಲ್ಲಿದ್ದಾರಂತೆ. ಶುಕ್ರವಾರ ಟಿಸಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಪೋಷಕರ ಸಮಸ್ಯೆಯನ್ನು ಬಗೆಹರಿಸಲಾಗುವುದು
-ನಿಂಗರಾಜಪ್ಪ ಡಿಡಿಪಿಐ ಚಿಕ್ಕಬಳ್ಳಾಪುರ.


ಬಿಜಿಎಸ್ ಶಾಲೆಯ ಸಮಸ್ಯೆಯನ್ನು ಡಿಡಿಪಿಐ ಕಚೇರಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ.ನಮ್ಮ ಅರ್ಜಿ ಕೇಸ್‌ವರ್ಕರ್ ಕಡೆಯಿಂದ ಮೇಲಾಧಿಕಾರಿಗಳಿಗೆ ತಲುಪಲು ವಾರವೇ ಬೇಕಾಗಿದೆ.ಅತ್ತ ಶಾಲೆಯ ಮುಖ್ಯೋಪಾಧ್ಯಾಯರನ್ನು ಕೇಳಿದರೆ ಸರಕಾರದಿಂದ ಆರ್‌ಟಿಇ ಹಣ ಬಂದಿಲ್ಲ. ಬಂದ ಮೇಲೆ ಟಿಸಿ ಕೊಡುತ್ತೇನೆ ಎನ್ನುತ್ತಾ ಅಮಾನವೀಯವಾಗಿ ಮಾತನಾಡುತ್ತಾರೆ.ಪರಿಸ್ಥಿತಿ ಹೀಗೆಯೇ ಆದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಮೊರೆಯಿಡುತ್ತೇನೆ.
--ಮಂಜುನಾಥ್ ವಿದ್ಯಾರ್ಥಿಯ ತಂದೆ.