ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಿಕ್ಕಮ್ಮನನ್ನೇ ಮದುವೆಯಾಗುವಂತೆ ಯುವಕನಿಗೆ ಒತ್ತಾಯಿಸಿದ ಗ್ರಾಮಸ್ಥರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಇತ್ತೀಚೆಗೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ 24 ವರ್ಷದ ಮಿಥ್ಲೇಶ್ ಕುಮಾರ್ ಮುಖಿಯಾ ಎಂಬ ಯುವಕ ತನ್ನ ಚಿಕ್ಕಮ್ಮನೊಂದಿಗೆ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಆತನನ್ನು ಕ್ರೂರವಾಗಿ ಥಳಿಸಿ, ಆಕೆಯನ್ನೇ ಮದುವೆಯಾಗುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಿಥ್ಲೇಶ್‌ನನ್ನು ರಾಡ್‌ಗಳಿಂದ ಹೊಡೆಯುತ್ತಿರುವುದನ್ನು ಸೆರೆಹಿಡಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಚಿಕ್ಕಮ್ಮನ ಜತೆ ಲವ್ವಿಡವ್ವಿ; ಕೊನೆಗೆ ಆಗಿದ್ದೇನು?

Profile pavithra Jul 9, 2025 5:34 PM

ಪಾಟ್ನಾ: ಇತ್ತೀಚೆಗೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ 24 ವರ್ಷದ ಯುವಕನೊಬ್ಬ ತನ್ನ ಚಿಕ್ಕಮ್ಮನೊಂದಿಗೆ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಆತನನ್ನು ಕ್ರೂರವಾಗಿ ಥಳಿಸಿ, ಆಕೆಯನ್ನೇ ಮದುವೆಯಾಗುವಂತೆ (Marriage) ಒತ್ತಾಯಿಸಿದ ಘಟನೆಯೊಂದು ನಡೆದಿದೆ. ಮಿಥ್ಲೇಶ್ ಕುಮಾರ್ ಮುಖಿಯಾ ಎಂಬ ಯುವಕನನ್ನು ಅಪಹರಿಸಿ ಆತನ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಅವರ ಮನೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮಿಥ್ಲೇಶ್‌ನನ್ನು ರಾಡ್‌ಗಳಿಂದ ಹೊಡೆದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.

ಶಿವಚಂದ್ರ ಮತ್ತು ರೀಟಾ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಶಿವಚಂದ್ರ ಪತ್ನಿ ರೀಟಾ ದೇವಿ ಜತೆ ಮಿಥ್ಲೇಶ್ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಗುಂಪೊಂದು ಮಿಥ್ಲೇಶ್‌ನನ್ನು ಥಳಿಸಿದೆ. ನಂತರ ರೀಟಾಳನ್ನೂ ಸ್ಥಳಕ್ಕೆ ಕರೆತಂದು ಗ್ರಾಮಸ್ಥರು ಥಳಿಸಿದ್ದಾರೆ. ಬಳಿಕ ಮಿಥ್ಲೇಶ್ ಬಳಿ ರೀಟಾ ಹಣೆಯ ಮೇಲೆ ಸಿಂಧೂರ ಹಚ್ಚುವಂತೆ ಒತ್ತಾಯಿಸಲಾಗಿದೆ ಎಂದು ಮಿಥ್ಲೇಶ್ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಅಲ್ಲದೇ ಮಿಥ್ಲೇಶ್ ತಂದೆ ರಾಮಚಂದ್ರ ಮತ್ತು ಆತನ ಪತ್ನಿ ಈ ಕೃತ್ಯವನ್ನು ತಡೆಯಲು ಪ್ರಯತ್ನಿಸಿದಕ್ಕೆ ಅವರನ್ನು ಥಳಿಸಲಾಗಿತ್ತು. ಹಲ್ಲೆಯಲ್ಲಿ ಮಿಥ್ಲೇಶ್ ಬೆನ್ನು, ಕುತ್ತಿಗೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದೆ. ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದ ಕೂಡಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಭೀಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಂಜ್ ನಿವಾಸಿಗಳಾದ ರಾಹುಲ್ ಕುಮಾರ್ ಮತ್ತು ಸಜನ್ ಸಾಹ್ನಿ ಹಾಗೂ ಜೀವ್‌ಚಾಪುರ ನಿವಾಸಿಗಳಾದ ರಾಜ ಕುಮಾರ್, ವಿಕಾಸ್ ಮುಖಿಯಾ, ಶಿವಚಂದ್ರ ಮುಖಿಯಾ, ಸೂರಜ್ ಮುಖಿಯಾ, ಪ್ರದೀಪ್ ಠಾಕೂರ್, ಸುರೇಶ್ ಮುಖಿಯಾ ಸೇರಿ ಮಿಥ್ಲೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ಹೇಳಿದ್ದಾರೆ.

ಘಟನೆಯ ನಂತರ ಗಂಭೀರವಾಗಿ ಗಾಯಗೊಂಡ ಮಿಥ್ಲೇಶ್‌ನನ್ನು ಆರಂಭದಲ್ಲಿ ನರಪತ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಂತರ ಅವನ ಸ್ಥಿತಿ ಗಂಭೀರವಾಗಿರುವುದರಿಂದ ಅರಾರಿಯಾ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಸುದ್ದಿಯನ್ನೂ ಓದಿ:Viral Video: ನಾಯಿ ಮರಿ ಮೇಲೆ ಇದೆಂಥಾ ಕ್ರೌರ್ಯ? ಈ ದುಷ್ಟನ ಹೀನ ಕೃತ್ಯದ ವಿಡಿಯೊ ಇಲ್ಲಿದೆ

ಮಿಥಿಲೇಶ್ ತಂದೆ ರಾಮಚಂದ್ರ ಮುಖಿಯಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವರದಿಯಲ್ಲಿ ಎಂಟು ವ್ಯಕ್ತಿಗಳ ಹೆಸರಿದ್ದು, ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರು ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಉಳಿದ ಆರೋಪಿಗಳನ್ನು ಜೀವ್ಚಾಪುರ ಮತ್ತು ಬೆಳಗಂಜ್ ನಿವಾಸಿಗಳು ಎಂದು ಗುರುತಿಸಲಾಗಿದೆ.