ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UAE Golden Visa: ಭಾರತೀಯರಿಗೆ ಜೀವಮಾನದ ಗೋಲ್ಡನ್ ವೀಸಾ: ಯುಎಇ ಹೇಳಿದ್ದೇನು?

ಯುಎಇ ಕೇವಲ 23 ಲಕ್ಷ ರೂ.ಗೆ ಭಾರತೀಯರಿಗೆ ಜೀವಿತಾವಧಿಯ ನಿವಾಸ ಸೌಲಭ್ಯ ಕೊಡುವ ಹೊಸ ಗೋಲ್ಡನ್ ವೀಸಾವನ್ನು ಪರಿಚಯಿಸಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಪ್ರಚಲಿತದಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆ ಉಂಟಾಗಿತ್ತು. ಈ ನಡುವೆ ಇದೀಗ ಯುಎಇ ಸ್ಪಷ್ಟನೆ ನೀಡಿದೆ.

23 ಲಕ್ಷ ರೂ. ಗೆ ಭಾರತೀಯರಿಗೆ ಯುಎಇ ಗೋಲ್ಡನ್ ವೀಸಾ?

ಯುಎಇ: ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಕೇವಲ 23 ಲಕ್ಷ ರೂ.ಗೆ ಭಾರತೀಯರಿಗೆ ಜೀವಿತಾವಧಿಯ ನಿವಾಸ ಸೌಲಭ್ಯ ಕೊಡುವ ಹೊಸ ಗೋಲ್ಡನ್ ವೀಸಾವನ್ನು (Lifetime Golden Visa) ಪರಿಚಯಿಸಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಪ್ರಚಲಿತದಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ (Social Media) ಭಾರಿ ಚರ್ಚೆ ಉಂಟಾಗಿತ್ತು. ಈ ನಡುವೆ ಇದೀಗ ಯುಎಇ (UAE) ಸ್ಪಷ್ಟನೆಯನ್ನು ನೀಡಿದ್ದು, ತನ್ನ ವೀಸಾ ನಿಯಮಗಳ ಕುರಿತು ಜುಲೈ 8ರಂದು ಪ್ರಕಟಣೆಯನ್ನು ಹೊರಡಿಸಿದ್ದು, ಗುರುತು, ಪೌರತ್ವ, ಕಸ್ಟಮ್ಸ್ ಮತ್ತು ಬಂದರು ಭದ್ರತೆಗಾಗಿ ಫೆಡರಲ್ ಪ್ರಾಧಿಕಾರ (ಐಸಿಪಿ) ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಯುಎಇ ಸರ್ಕಾರ, ಗೋಲ್ಡನ್ ವೀಸಾ ಕಾರ್ಯಕ್ರಮದ ಅಡಿಯಲ್ಲಿರುವ ನಿಯಮಗಳನ್ನು ಯುಎಇ ಕಾನೂನು ಮತ್ತು ಸಚಿವರ ನಿರ್ಧಾರಗಳ ಅಡಿಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಯಾವುದೇ ಹೊಸ ಫ್ಲಾಟ್-ಫೀ ಅಥವಾ ಜೀವಮಾನದ ವೀಸಾ ಕಾರ್ಯಕ್ರಮವನ್ನು ಯುಎಇ ಪ್ರಾರಂಭಿಸಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.

ಗೋಲ್ಡನ್ ವೀಸಾ ಎಂದರೇನು ?

2019ರಲ್ಲಿ ಪರಿಚಯಿಸಲಾದ ಗೋಲ್ಡನ್ ವೀಸಾ ದೀರ್ಘಾವಧಿಯ ನಿವಾಸ ಪರವಾನಗಿಯಾಗಿದೆ. ಇದು ವಿದೇಶಿ ಪ್ರಜೆಗಳು ಯುಎಇಯಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಇದು ಸಾಮಾನ್ಯವಾಗಿ 5 ಅಥವಾ 10 ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಒಂದು ವೇಳೆ ಅವಶ್ಯಕವಾಗಿದ್ದರೆ ಇದನ್ನು ನವೀಕರಿಸಬಹುದಾಗಿದೆ. ಆದರೆ ಇದಕ್ಕಾಗಿ ಕೆಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

ಯುಎಇ ಸರ್ಕಾರದ ಸ್ಪಷ್ಟನೆ

ಯುನೈಟೆಡ್ ಅರಬ್ ಎಮಿರೇಟ್ಸ್ ಕೆಲವು ರಾಷ್ಟ್ರೀಯತೆ ಹೊಂದಿರುವವರಿಗೆ ಜೀವಮಾನದ ಗೋಲ್ಡನ್ ವೀಸಾಗಳನ್ನು ನೀಡುವ ಬಗ್ಗೆ ಕೆಲವು ಮಾಧ್ಯಮಗಳು ಮತ್ತು ವೆಬ್‌ಸೈಟ್‌ಗಳು ವದಂತಿಗಳು ಹರಡಿದ್ದು, ಇದು ಸುಳ್ಳು ಸುದ್ದಿ. ದೇಶದ ವೀಸಾ ನಿಯಮಗಳು ಯುಎಇ ಕಾನೂನು ಮತ್ತು ಮಂತ್ರಿಮಂಡಲದ ನಿರ್ಧಾರಗಳನ್ನು ಆಧರಿಸಿವೆ. ಇದಕ್ಕೆ ಸಂಬಂಧಿಸಿ ಐಸಿಪಿಯ ಅಧಿಕೃತ ವೆಬ್‌ಸೈಟ್ ಮತ್ತು ಸ್ಮಾರ್ಟ್ ಅಪ್ಲಿಕೇಶನ್‌ನಲ್ಲಿ ಮಾಹಿತಿ ಲಭ್ಯವಿದೆ.

ಇದನ್ನೂ ಓದಿ: IND vs ENG: ʻಲಾರ್ಡ್ಸ್‌ನಲ್ಲಿ ಭಾರತವನ್ನು ಮಣಿಸುತ್ತೇವೆʼ-ಪ್ರವಾಸಿಗರಿಗೆ ಬೆನ್‌ ಸ್ಟೋಕ್ಸ್‌ ವಾರ್ನಿಂಗ್!

ದೇಶದ ಗೋಲ್ಡನ್ ವೀಸಾ ಅರ್ಜಿಗಳನ್ನು ಯುಎಇಯೊಳಗಿನ ಅಧಿಕೃತ ಸರ್ಕಾರಿ ಸಂಸ್ಥೆಗಳೇ ವಿಲೇವಾರಿ ಮಾಡುತ್ತಿವೆ. ಇದಕ್ಕೆ ಸಂಬಂಧಿಸಿ ಬೇರೆ ಯಾವುದೇ ದಾರಿ ಇಲ್ಲ. ಸುಳ್ಳು ಮಾಹಿತಿ ಹರಡಿ ಹಣ ಸಂಗ್ರಹಿಸುವ ಉದ್ದೇಶ ಹೊಂದಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಅದು ಎಚ್ಚರಿಸಿದೆ.

ಯುಎಇ ಗೋಲ್ಡನ್ ವೀಸಾ ಇದೆ. ಆದರೆ ಇದು ಜೀವಮಾನ ವೀಸಾ ಅಲ್ಲ. ಇದರಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಯಾರಿಗೂ 23 ಲಕ್ಷ ರೂ. ಗೆ ಜೀವಮಾನ ವೀಸಾ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ.