ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nikhil Kumaraswamy: 2028ರ ಚುನಾವಣೆಗೂ ಮೈತ್ರಿಯಿರಲಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ : ನಿಖಿಲ್ ಕುಮಾರಸ್ವಾಮಿ

೨೦೨೮ರಲ್ಲಿ ಕೂಡ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಕರ್ನಾಟಕದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ನಾಡಿಮಿಡಿತವಾಗಿದೆ. ಇದನ್ನು ಜನರೊಂದಿಗೆ ಜನತಾದಳ ಕಾರ್ಯಕ್ರಮದ ಪ್ರವಾಸದಲ್ಲಿ ರಾಜ್ಯದ ಉದ್ದಗಲಕ್ಕೂ ಕಂಡಿದ್ದೇನೆ. ಇದು ನಿಜವಾಗಬೇಕಾದರೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಒಮ್ಮತದಿಂದ ಕೆಲಸ ಮಾಡಿದಂತೆ ಮಾಡಬೇಕು

2028ರ ಚುನಾವಣೆಗೂ ಮೈತ್ರಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ

ಚಿಕ್ಕಬಳ್ಳಾಪುರ ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

Profile Ashok Nayak Jul 10, 2025 12:10 AM

ಬಿಜೆಪಿ ಜೆಡಿಎಸ್ ಮೈತ್ರಿಯ ಹೊಂದಾಣಿಕೆಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಒಪ್ಪಿದ್ದಾರೆ

ಚಿಕ್ಕಬಳ್ಳಾಪುರ : ರೈತಾಪಿ ವರ್ಗದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ೨೦೨೮ಕ್ಕೆ ರಾಜ್ಯದಲ್ಲಿ ಎನ್‌ಡಿಎ ಮೈತ್ರಿ ಪಕ್ಷ ಅಧಿಕಾರದಲ್ಲಿರಲಿದ್ದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ರಾಜ್ಯದ ಜನ ಬಯಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಜೆಡಿಎಸ್ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಬಲವರ್ಧನೆ ಮುಖ್ಯ

೨೦೨೮ರಲ್ಲಿ ಕೂಡ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಕರ್ನಾಟಕದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ನಾಡಿಮಿಡಿತವಾಗಿದೆ. ಇದನ್ನು ಜನರೊಂದಿಗೆ ಜನತಾದಳ ಕಾರ್ಯಕ್ರಮದ ಪ್ರವಾಸದಲ್ಲಿ ರಾಜ್ಯದ ಉದ್ದಗಲಕ್ಕೂ ಕಂಡಿದ್ದೇನೆ. ಇದು ನಿಜವಾಗಬೇಕಾದರೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಒಮ್ಮತದಿಂದ ಕೆಲಸ ಮಾಡಿದಂತೆ ಮಾಡಬೇಕು.ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Chip-Based E-Passports: ಚಿಪ್‌ ಆಧಾರಿತ ಇ-ಪಾಸ್‌ಪೋರ್ಟ್‌ ಪರಿಚಯಿಸಿದ ಭಾರತ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಮೇಟಿ ಸರಿಯಿಲ್ಲ!!!
ಚಿಕ್ಕಬಳ್ಳಾಪುರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಪಡೆಯೇ ಇಲ್ಲಿದೆ.ಚಿಂತಾಮಣಿಯಲ್ಲಿ ಜೆ.ಕೆ.ಕೃಷ್ಣಾರೆಡ್ಡಿ, ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ ಇಲ್ಲಿ ಜೆಡಿಎಸ್‌ನ ಶಕ್ತಿಯಾಗಿದ್ದಾರೆ.ಆದರೆ ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ೧೧ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರು ಇರುವಂತೆ ಕೆಲಸ ಮಾಡಬೇಕು. ಮುಖಂಡರಿಗೆ ವಿಶ್ರಾಂತಿ ಇಲ್ಲದಂತೆ ಕೆಲಸ ಮಾಡಿಸುತ್ತೇನೆ.ಪಕ್ಷಕ್ಕಾಗಿ ಶ್ರಮಿಸುವವರಿಗೆ ಮೊದಲ ಆಧ್ಯತೆ ನೀಡಲಾಗುವುದು. ಚಿಕ್ಕಬಳ್ಳಾಪುರ ದಲ್ಲಿ ಮೇಟಿ ಸರಿಯಿಲ್ಲ.ಸರಿ ಮಾಡುವ ಕೆಲಸ ಮಾಡುತ್ತೇನೆ ಎಂದರು.

ಭ್ರಷ್ಟಾಚಾರ ಬಯಲಿಗೆ
ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಜನವಿರೋಧಿಯಾಗಿದ್ದು ದಿನಕ್ಕೊಂದು ಹಗರಣಗಳು ಬಯಲಿಗೆ ಬರುತ್ತಿವೆ.ಇದನ್ನು ವಿರೋಧ ಪಕ್ಷಗಳು ಮಾಡುವ ಅಗತ್ಯವಿಲ್ಲ ಸ್ವಪಕ್ಷದವರೇ ಮಾಡುತ್ತಿದ್ದಾರೆ. ೨ ವರ್ಷಗಳಲ್ಲಿ ರಾಜ್ಯದ ಅಭಿವೃದ್ದಿ ಶೂನ್ಯವಾಗಿದೆ.ಈ ಸರಕಾರದ ದುರಾಡಳಿತ ವನ್ನು ಜನತಗೆ ತಿಳಿಸುವ ಕೆಲಸವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು ಮಾಡಬೇಕು. ಕೇಂದ್ರ ಸರಕಾರದ ನರೇಂದ್ರಮೋದಿ ಸರಕಾರದ ಜನಪರ ಆಡಳಿತದ ಬಗ್ಗೆಯೂ ತಿಳಿಸಿ ಪ್ರತಿ ಕ್ಷೇತ್ರದಿಂದ ಕನಿಷ್ಟ ೫೦ಸಾವಿರ ಸದಸ್ಯತ್ವ ಮಾಡಿಸಬೇಕು.ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಮಾಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಹೆಚ್ಚಿನ ಒತ್ತು ನೀಡಿ ಎಂದರು.

ಬೈಕ್ರ‍್ಯಾಲಿ ಮಾಡಿ ಮಲಗಬೇಡಿ
ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ,ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜಣ್ಣ ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ಎರಡು ಕಿ.ಮಿ.ಬೈಕ್ ರ‍್ಯಾಲಿ ಮಾಡಿಸಿ , ಅದ್ದೂರಿ ಕಾರ್ಯಕ್ರಮ ಆಯೋಜಿಸಿ ನಮ್ಮನ್ನು ತೃಪ್ತಿಪಡಿಸಬೇಕು ಎಂದು ಭಾವಿಸಿದ್ದರೆ ನಿಮ್ಮ ಯೋಜನೆ ಬದಲಾಗಲಿ.ಈ ಕಾರ್ಯಕ್ರಮದ ನಂತರವೇ ನಿಜವಾದ ಕೆಲಸ ಪ್ರಾರಂಭವಾಗಲಿದೆ.ಇನ್ಮುಂದೆ ನೀವು ವಾರದಲ್ಲಿ  ೩ ದಿನ ಕಡ್ಡಾಯವಾಗಿ ಪಕ್ಷಕ್ಕಾಗಿ ಸಂಘಟನೆಗಾಗಿ ನಿಮ್ಮ ಸಮಯವನ್ನು ಮೀಸಲಾಗಿಡಿ, ನೀವು ಬೇಸರ ಮಾಡಿಕೊಂಡರೂ ಪರವಾಗಿಲ್ಲ ಈ ಕೆಲಸ ಮಾಡಿ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂಧಿಸಿ ಎಂದು ತಾಕೀತು ಮಾಡಿದರು.ಇದೇ ವೇಳೆ ಹಿರಿಯ ಮುಖಂಡರು ಯುವಕರಿಗೆ ಜವಾಬ್ದಾರಿ ನೀಡಿ, ಟಗರಿನಂತಹ ಶಕ್ತಿಯುಳ್ಳವರಿಗೆ ಸ್ಥಾನ ನೀಡಿ ಜೆಡಿಎಸ್ ಉಳಿಸಿ ಎಂದು ನಿಖಿಲ್‌ಗೆ ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪೋಶೆಟ್ಟಹಳ್ಳಿಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಮತ್ತು ತಂಡ ಬೈಕ್ ರ‍್ಯಾಲಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಕರೆ ತಂದಿದ್ದು ವಿಶೇಷವಾಗಿತ್ತು.

ವೇದಿಕೆಯಲ್ಲಿ ಅರಕಲಗೂಡು ಶಾಸಕ ಮಂಜುನಾಥ್ ಮಾತನಾಡಿದರು. ಮಾಜಿ ಎಂಎಲ್‌ಸಿ ತೂಪಲ್ಲಿ ಚೌಡರೆಡ್ಡಿ,ರಾಜ್ಯ ಪ್ರಧಾನ ಕಾರ್ಯದರ್ಶಿ ರೋಷನ್,ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ,ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಕಿಸಾನ್ ಕೃಷ್ಣಪ್ಪ,ಬಂಡ್ಲುಶ್ರೀನಿವಾಸ್,ಪ್ರಭಾ ನಾರಾಯಣಗೌಡ, ನಾರಾಯಣಗೌಡ,ಸೊಣ್ಣೇಗೌಡ ಮೇಲೂರು ಅಮರ್ ಮತ್ತಿತರರು ಇದ್ದರು.

*
ಜೆಡಿಎಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ ತಂದಿದೆ. ರೈತನಾದ ನನಗೆ ಪಕ್ಷದ ಟಿಕೆಟ್ ನೀಡಿ ಎಂಎಲ್‌ಎ ಮಾಡಿ ಜನಸೇವೆಗೆ ಅವಕಾಶ ಮಾಡಿಕೊಟ್ಟಿರುವ ಪಕ್ಷ ಮತ್ತು ತಂದೆಯ ಸಮಾನರಾದ ದೇವೇಗೌಡರು,ಕುಮಾರಸ್ವಾಮಿ ಅವರ ಋಣವನ್ನು ತೀರಿಸಲಾಗದು.ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ಬಲಗೊಳಿಸಲಿ, ವರಿಷ್ಟರು ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡೋಣ.೨೦೨೮ಕ್ಕೆ ಎನ್‌ಡಿಎ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡೋಣ.ಕುಮಾರಸ್ವಾಮಿ ೫ ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಪಣ ತೊಡೋಣ ಎಂದರು.