Stomach Cancer: ಈ ಒಂದು ಸರಳ ಚಿಕಿತ್ಸೆಯಿಂದ ಹೊಟ್ಟೆ ಕ್ಯಾನ್ಸರ್ ತಡೆಯಬಹುದು- ವೈದ್ಯರಿಂದ ಮಹತ್ವದ ಮಾಹಿತಿ ಬಹಿರಂಗ
Stomach Cancer: ನೇಚರ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು 50 ವರ್ಷಕ್ಕೂ ಕಡಿಮೆ ವಯಸ್ಸಿನವರಲ್ಲಿ ಹೊಟ್ಟೆ ಕ್ಯಾನ್ಸರ್ ಪ್ರಮಾಣ ಜಾಗತಿಕವಾಗಿ ಹೆಚ್ಚುತ್ತಿರುವುದನ್ನು ಪತ್ತೆ ಮಾಡಿದೆ. ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾದ ಸೋಂಕು ಇದಕ್ಕೆ ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಎಚ್ ಪೈಲೋರಿ ಸೋಂಕು ಗ್ಯಾಸ್ಟ್ರಿಕ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದ್ದು, ಇದನ್ನು ಸರಿಯಾದ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಅಧ್ಯಯನ ತಿಳಿಸಿದೆ.

ಸಾಂಧರ್ಬಿಕ ಚಿತ್ರ

ನವದೆಹಲಿ: ನೇಚರ್ ಮೆಡಿಸಿನ್ (Nature Medicine) ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು (Study) 50 ವರ್ಷಕ್ಕೂ ಕಡಿಮೆ ವಯಸ್ಸಿನವರಲ್ಲಿ ಹೊಟ್ಟೆ ಕ್ಯಾನ್ಸರ್ (Stomach Cancer) ಪ್ರಮಾಣ ಜಾಗತಿಕವಾಗಿ ಹೆಚ್ಚುತ್ತಿರುವುದನ್ನು ಪತ್ತೆ ಮಾಡಿದೆ. ಹೆಲಿಕೋಬ್ಯಾಕ್ಟರ್ ಪೈಲೋರಿ (H. pylori) ಎಂಬ ಬ್ಯಾಕ್ಟೀರಿಯಾದ ಸೋಂಕು ಇದಕ್ಕೆ ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಎಚ್ ಪೈಲೋರಿ ಸೋಂಕು ಗ್ಯಾಸ್ಟ್ರಿಕ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದ್ದು, ಇದನ್ನು ಸರಿಯಾದ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಅಧ್ಯಯನ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಸಂಶೋಧಕರು, 2008-2017ರ ನಡುವೆ ಹುಟ್ಟಿದವರಲ್ಲಿ 15.6 ಮಿಲಿಯನ್ ಹೊಸ ಹೊಟ್ಟೆ ಕ್ಯಾನ್ಸರ್ ಪ್ರಕರಣಗಳು ಉಂಟಾಗಬಹುದೆಂದು ಅಂದಾಜಿಸಿದ್ದಾರೆ. ಈ ಪೈಕಿ 76% ಪ್ರಕರಣಗಳು, ಅಂದರೆ ಮೂರನೇ ಎರಡು ಭಾಗ, ಹೆಚ್. ಪೈಲೋರಿಗೆ ಸಂಬಂಧಿಸಿದ್ದು, ಇವುಗಳನ್ನು ತಡೆಗಟ್ಟಬಹುದಾಗಿವೆ. ಏಷ್ಯಾದಲ್ಲಿ 10.6 ಮಿಲಿಯನ್ ಪ್ರಕರಣಗಳು, ಅಮೆರಿಕ ಮತ್ತು ಆಫ್ರಿಕಾದಲ್ಲೂ ಹೆಚ್ಚು ಸಂಖ್ಯೆಯ ಪ್ರಕರಣಗಳು ದಾಖಲಾಗಬಹುದೆಂದು ತಿಳಿದುಬಂದಿದೆ.
ಈ ಸುದ್ದಿಯನ್ನು ಓದಿ: Viral News: ವ್ಯಕ್ತಿಯ ಹೊಟ್ಟೆಯೊಳಗೆ 1 ಅಡಿ ಉದ್ದದ 'ಈಲ್ 'ಜೀವಿ ಪತ್ತೆ; ಡಾಕ್ಟರ್ ಫುಲ್ ಶಾಕ್!
ಹೆಚ್. ಪೈಲೋರಿ ಸೋಂಕಿಗೆ ಶೇ. 100 ಪರಿಣಾಮಕಾರಿ ತಪಾಸಣೆ ಮತ್ತು ಚಿಕಿತ್ಸೆ ಕಾರ್ಯಕ್ರಮ ಜಾರಿ ಮಾಡಿದರೆ, ಹೊಟ್ಟೆ ಕ್ಯಾನ್ಸರ್ ಪ್ರಕರಣಗಳನ್ನು ಶೇ. 75ರಷ್ಟು ತಡೆಗಟ್ಟಬಹುದಾಗಿದೆ. ಶೇ. 80-90 ಪರಿಣಾಮಕಾರಿ ಹೊಂದಿದ ಕಾರ್ಯಕ್ರಮಗಳೂ ಸಹ ಶೇ. 60-68ರಷ್ಟು ಪ್ರಕರಣಗಳನ್ನು ತಡೆಗಟ್ಟುತ್ತವೆ.
ಇವು ಕಡಿಮೆ ಆದಾಯದ ದೇಶಗಳಲ್ಲಿ ಸಹ ಅನುಷ್ಠಾನಗೊಳ್ಳಬಹುದಾದ ತಂತ್ರಗಳಾಗಿದ್ದು, HPV ಅಥವಾ ಹೆಪಟೈಟಿಸ್-B ಲಸಿಕೆ ಕಾರ್ಯಕ್ರಮಗಳಂತೆ ಲಾಭದಾಯಕವಾಗಿವೆ. ಈ ಅಧ್ಯಯನವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹೆಚ್. ಪೈಲೋರಿ ತಪಾಸಣೆ ಮತ್ತು ಲಸಿಕೆಗೆ ಹೆಚ್ಚು ಹೂಡಿಕೆ ಮಾಡುವಂತೆ ಸಲಹೆ ನೀಡಿದೆ. ಈ ಅಧ್ಯಯನವು ಜನಸಂಖ್ಯಾ ಮಟ್ಟದ ಸ್ಕ್ರೀನಿಂಗ್ ಮತ್ತು ಚಿಕಿತ್ಸಾ ಕಾರ್ಯಕ್ರಮಗಳಲ್ಲಿ ಹೂಡಿಕೆಯ ಅಗತ್ಯವನ್ನು ಒತ್ತಿಹೇಳಿದೆ ಮತ್ತು ಹೆಚ್. ಪೈಲೋರಿ ಲಸಿಕೆ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದೆ.