IND vs ENG: ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಸುಳಿವು ನೀಡಿದ ರಿಷಭ್ ಪಂತ್!
India's Playing XI: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಂದು ಗುರುವಾರ ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಪ್ಲೇಯಿಂಗ್ XI ಅನ್ನು ಈಗಾಗಲೇ ಪ್ರಕಟಿಸಿದೆ. ಆದರೆ, ಭಾರತ ತಂಡ ಇನ್ನೂ ಪ್ರಕಟಿಸಿಲ್ಲ. ಇದೀಗ ಸುದ್ದಿಗೋಷ್ಠಿಯಲ್ಲಿ ಉಪ ನಾಯಕ ರಿಷಭ್ ಪಂತ್ ಪ್ಲೇಯಿಂಗ್ XI ಬಗ್ಗೆ ಮಾತನಾಡಿದ್ದಾರೆ.

ಭಾರತದ ಪ್ಲೇಯಿಂಗ್ XI ಬಗ್ಗೆ ರಿಷಭ್ ಪಂತ್ ಪ್ರತಿಕ್ರಿಯಿಸಿದ್ದಾರೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜುಲೈ 10 ರಂದು ಗುರುವಾರ ಇಲ್ಲಿನ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಎರಡು ದಿನಗಳ ಮುಂಚಿತವಾಗಿ ಇಂಗ್ಲೆಂಡ್ ತಂಡ, ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಆದರೆ, ಶುಭಮನ್ ಗಿಲ್ (Shubman Gill) ನಾಯಕತ್ವದ ಪ್ರವಾಸಿ ಭಾರತ ತಂಡ ಇನ್ನೂ ತನ್ನ ಪ್ಲೇಯಿಂಗ್ XI ಅನ್ನು ಪ್ರಕಟಿಸಿಲ್ಲ. ಪಂದ್ಯ ಪೂರ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಉಪ ನಾಯಕ ರಿಷಭ್ ಪಂತ್ (Rishabh Pant), ಆಡುವ ಬಳಗದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಲೀಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಏಕೈಕ ಸ್ಪಿನ್ನರ್ ಆಗಿ ಆಡಿದ್ದರು. ನಂತರ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾಗೆ ವಾಷಿಂಗ್ಟನ್ ಸುಂದರ್ ಸಾಥ್ ನೀಡಿದ್ದರು. ಆ ಮೂಲಕ ಶಾರ್ದುಲ್ ಠಾಕೂರ್ ಸ್ಪಿನ್ ಆಲ್‌ರೌಂಡರ್‌ಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಮೊದಲನೇ ಟೆಸ್ಟ್‌ನಲ್ಲಿ ಆಡಿದ್ದ ಜಸ್‌ಪ್ರೀತ್ ಬುಮ್ರಾ, ಎರಡನೇ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಆಕಾಶ ದೀಪ್ ಆಡಿದ್ದರು. ಸಾಯಿ ಸುದರ್ಶನ್ ಸ್ಥಾನದಲ್ಲಿ ನಿತೀಶ್ ರೆಡ್ಡಿ ಆಡಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಆಡಲಿದ್ದಾರೆ.
IND vs ENG: ಆಡಮ್ ಗಿಲ್‌ಕ್ರಿಸ್ಟ್‌ಗೆ ರಿಷಭ್ ಪಂತ್ ಹೋಲಿಕೆ ಇಲ್ಲ ಎಂದ ಆರ್ ಅಶ್ವಿನ್!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಷಭ್ ಪಂತ್, "ಭಾರತ ತಂಡದ ಪ್ಲೇಯಿಂಗ್ xiನಲ್ಲಿನ ಸ್ಥಾನಗಳು ಇನ್ನೂ ಪೂರ್ಣವಾಗಿಲ್ಲ ಹಾಗೂ ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ಕ್ರೀಡಾಂಗಣದ ಪಿಚ್ ಎರಡು ದಿನಗಳಿಗೆ ಬದಲಾಗುತ್ತದೆ. ಹಾಗಾಗಿ ನಾವು ಅಂತಿಮ ಕ್ಷಣದಲ್ಲಿ ಈ ಕರೆಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ಇದು 3+1 or 3+2 ಆಗಬಹುದು," ಎಂದು ತಿಳಿಸಿದ್ದಾರೆ.
ಭಾರತವನ್ನು ಸೋಲಿಸುತ್ತೇವೆಂದ ಬೆನ್ ಸ್ಟೋಕ್ಸ್
ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಟೆಸ್ಟ್ ಸರಣಿಯಲ್ಲಿ1-1 ಸಮಬಲ ಕಾಯ್ದುಕೊಂಡಿವೆ. ಇದೀಗ ಲಾರ್ಡ್ಸ್ ಟೆಸ್ಟ್ ಗೆಲ್ಲುವ ತಂಡ ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ. ಅದರಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಕೂಡ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಐದು ದಿನಗಳ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತಕ್ಕೆ ಕಠಿಣ ಸವಾಲು ನೀಡಬೇಕೆಂದು ಹೇಳಿದ್ದಾರೆ.
IND vs ENG 3rd Test: ಲಾರ್ಡ್ಸ್ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
"ಇದು ಯಾವಾಗಲೂ ಸರಣಿಯಾಗಿರುತ್ತಿತ್ತು, ಕ್ಷಣಗಳು ಕಡಿಮೆಯಾಗುತ್ತಲೇ ಇದ್ದವು, ಫಲಿತಾಂಶಗಳು ಕಡಿಮೆಯಾಗುತ್ತಲೇ ಇದ್ದವು ಏಕೆಂದರೆ ಎರಡು ಉತ್ತಮ ತಂಡಗಳು ಪರಸ್ಪರ ಹೋರಾಡುತ್ತಿವೆ. ಹೆಡಿಂಗ್ಲೆಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೆವು ಮತ್ತು ಕಳೆದ ಪಂದ್ಯದಲ್ಲಿ ಅವರು (ಭಾರತ) ಉತ್ತಮ ಪ್ರದರ್ಶನ ತೋರಿದ್ದಾರೆ. ಎರಡು ಉತ್ತಮ ತಂಡಗಳು ಪರಸ್ಪರ ವಿರುದ್ಧ ಹೋರಾಡುತ್ತಿರುವಾಗ, ನೀವು ಕಠಿಣ ಪೈಪೋಟಿಯನ್ನು ನೋಡುತ್ತೀರಿ. ನಮಗೆ ಯಾರ ವಿರುದ್ಧವೂ ಮೇಲುಗೈ ಸಾಧಿಸಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಎದುರಾಳಿ ಯಾರೇ ಆಗಿರಲಿ, ನಾವು ಅವರನ್ನು ಗೌರವಿಸುತ್ತೇವೆ. ಈ ವಾರ ನಾವು ಕಮ್‌ಬ್ಯಾಕ್ ಮಾಡುತ್ತೇವೆ ಹಾಗೂ ಭಾರತ ತಂಡವನ್ನು ಶಕ್ತಿಯುತವಾಗಿ ಸೋಲಿಸಲು ಪ್ರಯತ್ನಿಸುತ್ತೇವೆ ಮತ್ತು ಸ್ಪಷ್ಟವಾಗಿ ಗೆಲುವಿನೊಂದಿಗೆ ಹೊರಬರಲು ಪ್ರಯತ್ನಿಸುತ್ತೇವೆ," ಎಂದು ಸ್ಟೋಕ್ಸ್ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದಾರೆ.