#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranveer Allahbadia : ಎಫ್‌ಐಆರ್‌ ದಾಖಲಾಗುತ್ತಿದ್ದಂತೆ, ಕ್ಷಮಿಸಿ, ತಪ್ಪಾಯಿತು ಎಂದು ವಿಡಿಯೋ ಹರಿಬಿಟ್ಟ ಖ್ಯಾತ ಯೂಟ್ಯೂಬರ್‌ !

ಭಾರತದ ಜನಪ್ರಿಯ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬರ್‌ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಡೆದ ಕಾಮಿಡಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ವಿವಾದಾತ್ಮಕ ಹೇಳಿಕೆ ನೀಡಿದ್ದ  ರಣವೀರ್ ಅಲ್ಲಾಬಾಡಿಯಾ ವಿರುದ್ಧ ಎಫ್‌ಐಆರ್‌

ranveer allahbadia

Profile Vishakha Bhat Feb 10, 2025 5:04 PM

ನವದೆಹಲಿ: ಭಾರತದ ಜನಪ್ರಿಯ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬರ್‌ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಡೆದ ಕಾಮಿಡಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಅವರು ಆಡಿರುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದಂತೆ ರಣವೀರ್ ಅಲ್ಲಾಬಾಡಿಯಾ ಕ್ಷಮೆ ಯಾಚಿಸಿದ್ದಾರೆ.ರಣವೀರ್‌ ಮಾತ್ರವಲ್ಲದೆ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಅಪೂರ್ವ ಮಖೀಜಾ, ಕಾಮಿಡಿಯನ್‌ ಸಮಯ್‌ ರೈನಾ ಹಾಗೂ ಇಂಡಿಯಾಸ್‌ ಗಾಟ್‌ ಲಾಟೆಂಟ್‌ನ ಆಯೋಜಕರ ವಿರುದ್ಧವೂ ದೂರು ದಾಖಲಾಗಿದೆ.



ರಣವೀರ್ ಅಲ್ಲಾಬಾಡಿಯಾ ಅವರು ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಜೊತೆ ಮಾತನಾಡುವಾಗ ವಿವಾದ ಸೃಷ್ಟಿಸಿದ್ದು, ತಮಾಷೆಯಾಗಿ ಮಾತನಾಡುವ ಭರದಲ್ಲಿ ಅವರು ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಮಾತಾಡಿದ್ದರು. ನಿಮ್ಮ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್‌ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ್ದರು. ಆ ಪ್ರಶ್ನೆ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದು, ಆತ ಕೇಳಿದ್ದ ಪ್ರಶ್ನೆಯನ್ನು ಆತನಿಗೇ ಕೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Viral Video: ಸ್ಪರ್ಧಿಗೆ ಈ ರೀತಿ ಪ್ರಶ್ನೆ ಕೇಳಿ ಟೀಕೆಗೆ ಗುರಿಯಾದ ರಣವೀರ್ ಅಲ್ಲಾಬಾಡಿಯಾ; ಏನಿದು ವಿವಾದ?

ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ರಣವೀರ್‌ ಕ್ಷಮೆ ಕೇಳಿದ್ದು, ನಾನು ಹಾಗೆ ಹೇಳಬಾರದಿತ್ತು. ನನ್ನ ಕಮೆಂಟ್‌ ಸರಿಯಾಗಿರಲಿಲ್ಲ. ಅದು ತಮಾಷೆಯೂ ಅಲ್ಲ, ನಾನು ಹಾಸ್ಯದಲ್ಲಿ ಪರಿಣಿತನೂ ಅಲ್ಲ. ನಾನು ಈ ಬಗ್ಗೆ ಕ್ಷಮೆ ಕೇಳುತ್ತಿದ್ದೇನೆ. ಕುಟುಂಬವನ್ನು ನಾನು ಎಂದಿಗೂ ಅವಮಾನಿಸಲು ಬಯಸುವುದಿಲ್ಲ. ಈ ವಿಷಯದಿಂದ ನಾನು ಕಲಿತ್ತಿದ್ದೇನೆಂದರೆ ಎಲ್ಲಿ ಹೇಗೆ ಮಾತನಾಡಬೇಕು ಎಂಬುದು. ಆ ವಿವಾದ್ಮಕ ಕ್ಲಿಪ್‌ ತೆಗೆದು ಹಾಕುವಂತೆ ನಾನು ಆಯೋಜಕರಲ್ಲಿ ಮನವಿ ಕೂಡ ಮಾಡಿಕೊಂಡಿದ್ದೇನೆ. ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.