ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉದಯಪುರದಲ್ಲಿ ಕಲ್ಲುತೂರಾಟ, ಪರಿಸ್ಥಿತಿ ಉದ್ವಿಗ್ನ

ಉದಯಪುರದಲ್ಲಿ ಕಲ್ಲುತೂರಾಟ, ಪರಿಸ್ಥಿತಿ ಉದ್ವಿಗ್ನ

ಉದಯಪುರದಲ್ಲಿ ಕಲ್ಲುತೂರಾಟ, ಪರಿಸ್ಥಿತಿ ಉದ್ವಿಗ್ನ

Profile Vishwavani News Jun 30, 2022 1:13 PM
image-708c55ca-fe5e-45d8-9871-a2133da50d69.jpg
ರಾಜಸ್ಥಾನ: ಉದಯಪುರದಲ್ಲಿ ಹಾಡಹಗಲೇ ಟೈಲರ್ ಕನ್ನಯ್ಯಲಾಲ್ ಅವರನ್ನು ಪೈಶಾಚಿಕ ರೀತಿಯಲ್ಲಿ ಹತ್ಯೆಗೈದ ಘಟನೆ ಖಂಡಿಸಿ, ಗುರುವಾರ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಕಲ್ಲು ತೂರಾಟ ನಡೆದಿದೆ. ಉದಯಪುರದಲ್ಲಿ ವಿವಿಧ ಹಿಂದೂ ಸಂಘಟನೆಗಳ ಸಾವಿರಾರು ಮಂದಿ ನ್ಯಾಯ ಕೊಡಿಸಿ ಎಂದು ಘೋಷಣೆ ಕೂಗುತ್ತ ಪ್ರತಿ ಭಟನಾ ಮೆರವಣಿಗೆ ನಡೆಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೀಭತ್ಸ ಘಟನೆ ನಡೆದ ಸ್ಥಳದತ್ತ ಪ್ರತಿಭಟನಾಕಾರರು ತೆರಳಿದ ಸಂದರ್ಭ ಘರ್ಷಣೆ ನಡೆದಿದ್ದು, ಪೊಲೀಸರು ಗುಂಪನ್ನು ಚದುರಿ ಸಲು ಲಾಠಿ ಪ್ರಹಾರ ನಡೆಸಿರುವುದಾಗಿ ವರದಿ ವಿವರಿಸಿದೆ. ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಕನ್ನಯ್ಯಲಾಲ್ ಹತ್ಯೆಯ ನಂತರ ರಾಜಸ್ಥಾನದ ಉದಯಪುರ ಸೇರಿದಂತೆ ಹಲವು ನಗರ ಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಉದಯಪುರದಲ್ಲಿ ಎಲ್ಲಾ ಅಂಗಡಿ, ಮುಂಗಟ್ಟು ಬಂದ್ ಆಗಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.