ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanoj Kumar Mishra: ಅತ್ಯಾಚಾರ ಆರೋಪ; ಕುಂಭಮೇಳದಲ್ಲಿ ವೈರಲ್‌ ಆದ ಮೊನಾಲಿಸಾಗೆ ಸಿನಿಮಾ ಆಫರ್‌ ನೀಡಿದ ನಿರ್ದೇಶಕನ ಬಂಧನ

Monalisa Bhosle: ಮಹಾ ಕುಂಭಮೇಳದ ವೇಳೆ ರುದ್ರಾಕ್ಷಿ ಮಾರುತ್ತಿದ್ದ ಆಕರ್ಷಕ ಕಂಗಳ ಚೆಲುವೆ, ಮಧ್ಯ ಪ್ರದೇಶದ ಖರ್ಗೋನ್‌ ಜಿಲ್ಲೆಯ ಮೊನಾಲಿಸಾ ಬೋಸ್ಲೆಅವರಿಗೆ ಬಾಲಿವುಡ್‌ ಚಿತ್ರದ ಆಫರ್‌ ಅವಕಾಶ ನೀಡಿದ್ದ ನಿರ್ದೇಶಕ ಸನೋಜ್‌ ಕುಮಾರ್‌ ಮಿಶ್ರಾ ಇದೀಗ ಅತ್ಯಾಚಾರ ಕೇಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾನೆ.

ಮೊನಾಲಿಸಾಗೆ ಸಿನಿಮಾ ಆಫರ್‌ ನೀಡಿದ ನಿರ್ದೇಶಕನ ಬಂಧನ

ಸನೋಜ್‌ ಕುಮಾರ್‌ ಮಿಶ್ರಾ.

Profile Ramesh B Mar 31, 2025 2:33 PM

ಹೊಸದಿಲ್ಲಿ: ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ವೇಳೆ ರುದ್ರಾಕ್ಷಿ ಮಾರುತ್ತಿದ್ದ ಆಕರ್ಷಕ ಕಂಗಳ ಚೆಲುವೆ, ಮಧ್ಯ ಪ್ರದೇಶದ ಖರ್ಗೋನ್‌ ಜಿಲ್ಲೆಯ ಮೊನಾಲಿಸಾ ಬೋಸ್ಲೆ (Monalisa Bhosle) ಅವರಿಗೆ ಬಾಲಿವುಡ್‌ ಚಿತ್ರದ ಆಫರ್‌ ಅವಕಾಶ ನೀಡಿದ್ದ ನಿರ್ದೇಶಕ ಸನೋಜ್‌ ಕುಮಾರ್‌ ಮಿಶ್ರಾ (Sanoj Kumar Mishra) ಇದೀಗ ಅತ್ಯಾಚಾರ ಕೇಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾನೆ. ಆ ಮೂಲಕ ಸೆಟ್ಟೇರುವ ಮುನ್ನವೇ ಚಿತ್ರ ಅತಂತ್ರ ಸ್ಥಿತಿಗೆ ತಲುಪಿದೆ. ಆಕರ್ಷಕ ಕಣ್ಣುಗಳ ಮೂಲಕವೇ ದೇಶದ ಗಮನ ಸೆಳೆದ ಮೊನಾಲಿಸಾ ಅವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದವರಿಗೆ ಈ ಮೂಲಕ ನಿರಾಸೆಯಾದಂತಾಗಿದೆ.

ಬಂಧನಕ್ಕೊಳಗಾದ 45 ವರ್ಷದ ಸನೋಜ್‌ ಮಿಶ್ರಾಗೆ ದಿಲ್ಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀರಾಕರಿಸಿದ್ದು, ಇನ್ನಷ್ಟು ದಿನ ಕಂಬಿ ಎಣಿಸುವುದು ಖಾತರಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯೊಬ್ಬರಿಗೆ ಚಿತ್ರದ ಅವಕಾಶ ನೀಡುವುದಾಗಿ ವಂಚಿಸಿ ಅತ್ಯಾಚಾರ ಎಸಗಿರುವ ಆರೋಪ ಸನೋಜ್‌ ಮಿಶ್ರಾ ಮೇಲಿದೆ.



ಈ ಸುದ್ದಿಯನ್ನೂ ಓದಿ: Monalisa Bhosle: ಕುಂಭಮೇಳದ ಮೊನಾಲಿಸಾ ಈಗ ಇನ್‌ಸ್ಟಗ್ರಾಂ ಸುಂದರಿ

ಘಟನೆ ವಿವರ

2020ರಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಾಸಿಸುತ್ತಿದ್ದಾಗ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಾದ ಟಿಕ್‌ಟಾಕ್‌ ಮತ್ತು ಇನ್‌ಸ್ಟಾಗ್ರಾಮ್‌ ಮೂಲಕ ಮಿಶ್ರಾ ಪರಿಚಯವಾಯ್ತು ಎಂದು 28 ವರ್ಷದ ಮಹಿಳೆ ತಿಳಿಸಿದ್ದಾರೆ. ಅದಾದ ಬಳಿಕ ಆತ್ಮಹತ್ಯೆ ಬೆದರಿಕೆ ಹಾಕುವ ಮೂಲಕ ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ 2021ರ ಜೂ. 18ರಂದು ರೆಸಾರ್ಟ್‌ಗೆ ಕರೆದೊಯ್ದು ಮಾದಕವಸ್ತು ನೀಡಿ, ಮಿಶ್ರಾ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ನಿರಂತರ 4 ವರ್ಷಗಳ ಕಾಲ ಅತ್ಯಾಚಾರ ಮಾಡಿದ್ದಾಗಿ ದೂರಿದ್ದಾರೆ.

ಅಲ್ಲದೆ ಮಿಶ್ರಾ ತನ್ನ ಆಕ್ಷೇಪಾರ್ಹ ಫೋಟೋಗಳು ಮತ್ತು ವಿಡಿಯೊಗಳನ್ನು ಬಳಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಮತ್ತು ಚಲನಚಿತ್ರಗಳಲ್ಲಿ ಅವಕಾಶಗಳ ನೀಡುವುದಾಗಿ ಭರವಸೆ ನೀಡಿ ಮುಂಬೈನಲ್ಲಿ ಲಿವ್-ಇನ್ ಸಂಬಂಧಕ್ಕೆ ಒತ್ತಾಯಿಸಿದ್ದಾನೆ ಎಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ಈ ವೇಳೆ ಆತ ಅನೇಕ ಬಾರಿ ಹಲ್ಲೆಯನ್ನೂ ನಡೆಸಿದ್ದಾನೆ ಮತ್ತು 3 ಸಲ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಗಿ ವರದಿಯೊಂದು ತಿಳಿಸಿದೆ.

ಕಳೆದ ತಿಂಗಳು ಮಿಶ್ರಾ ತನ್ನನ್ನು ಸಂಪೂರ್ಣವಾಗಿ ತ್ಯಜಿಸಿ, ದೂರು ನೀಡಿದರೆ ಖಾಸಗಿ ಫೋಟೊ ಮತ್ತು ವಿಡಿಯೊ ಲೀಕ್‌ ಮಾಡುವುದಾಗಿ ಬೆದರಿಸಿದ್ದಾಗಿ ಮಹಿಳೆ ಹೇಳಿದ್ದಾರೆ. ಮಿಶ್ರಾಗೆ ಈಗಾಗಲೇ ಮದುವೆಯಾಗಿದ್ದು, ಮುಂಬೈಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ.

ಸದ್ಯ ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅತ್ಯಾಚಾರ, ಹಲ್ಲೆ, ಗರ್ಭಪಾತಕ್ಕೆ ಕಾರಣ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತ ಮಹಿಳೆ ಸೆಕ್ಷನ್ 164 ಸಿಆರ್‌ಪಿಸಿ ಅಡಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಲವಂತದ ಗರ್ಭಪಾತವನ್ನು ದೃಢೀಕರಿಸುವ ವೈದ್ಯಕೀಯ ದಾಖಲೆಗಳನ್ನು ಮುಜಾಫರ್ ನಗರದಿಂದ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮಿಶ್ರಾನನ್ನು ನಬಿ ಕರೀಮ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕುಂಭಮೇಳದ ವೇಳೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆದ ಮೊನಾಲಿಸಾ ಅವರನ್ನು ನಾಯಕಿಯನ್ನಾಗಿಸುವುದಾಗಿ ಘೋಷಿಸುವ ಮೂಲಕ ಮಿಶ್ರಾ ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ.