ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 2 ಕೋಟಿಗಾಗಿ ಇನ್ಶೂರೆನ್ಸ್‌ಗಾಗಿ ಬದುಕಿದ್ದ ಮಗನನ್ನೇ.... ಈ ಪಾಪಿ ಮಾಡಿದ ನಾಟಕ ಎಂತಹದ್ದು ಗೊತ್ತಾ?

ತಂದೆ ಸತೀಶ್‍ ಕುಮಾರ್‌ 2 ಕೋಟಿ ರೂ.ಗಳ ಟರ್ಮ್ ಇನ್ಶೂರೆನ್ಸ್ ಹಣವನ್ನು ಪಡೆಯುವ ಸಲುವಾಗಿ ಜೀವಂತವಾಗಿರುವ ತನ್ನ ಮಗ ಗಗನ್‍ ಸತ್ತಿದ್ದಾನೆಂದು ಹೇಳಿದ್ದಾನೆ. ಈ ಬಗ್ಗೆ ಅನುಮಾನಗೊಂಡು ಪೊಲೀಸರು ತನಿಖೆ ಮಾಡಿದ್ದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.ಈ ಸುದ್ದಿ ಈಗ ಎಲ್ಲೆಡೆ ವೈರಲ್(Viral News) ಆಗಿದೆ.

ಇನ್ಶೂರೆನ್ಸ್‌ಗಾಗಿ ಪಾಪಿ ಅಪ್ಪ ಹೀಗಾ ಮಾಡೊದು?

Profile pavithra Apr 1, 2025 4:25 PM

ನವದೆಹಲಿ: ಹಣ ಜೀವನಕ್ಕೆ ಬಹಳ ಮುಖ್ಯವಾದುದು. ಹಾಗಾಗಿ ಕೆಲ ಜನರು ಹಣಕ್ಕಾಗಿ ಯಾವ ಕೀಳು ಮಟ್ಟಕ್ಕೂ ಕೂಡ ಇಳಿಯುತ್ತಾರೆ ಎಂಬುದಕ್ಕೆ ದೆಹಲಿಯ ನಜಾಪಘರ್‌ ಪ್ರದೇಶದಲ್ಲಿ ನಡೆದ ಘಟನೆಯೇ ಮುಖ್ಯ ಉದಾಹರಣೆ. ತಂದೆಯೊಬ್ಬ 2 ಕೋಟಿ ರೂ.ಗಳ ಟರ್ಮ್ ಇನ್ಶೂರೆನ್ಸ್ ಹಣವನ್ನು ಪಡೆಯುವ ಸಲುವಾಗಿ ಜೀವಂತವಾಗಿರುವ ತನ್ನ ಮಗ ಸತ್ತಿದ್ದಾನೆಂದು ಹೇಳಿದ್ದಾನೆ. ಅದಕ್ಕಾಗಿ ಆತ ಮಗನ ಶವಸಂಸ್ಕಾರ ಮಾಡುವ ನಾಟಕ ಮಾಡಿದ್ದು ಅಲ್ಲದೇ, ತಿಥಿಯ ಊಟದ ಆಯೋಜನೆ ಕೂಡ ಮಾಡಿದ್ದಾನಂತೆ. ಹಾಗೇ ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾನೆ. ಆದರೆ ಕೊನೆಗೆ ಸತ್ಯ ತಿಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ಈ ಸುದ್ದಿ ಭಾರೀ ವೈರಲ್‌(Viral News) ಆಗಿದೆ.

ನಡೆದಿದ್ದೇನು?

ಪೊಲೀಸರು ತಿಳಿಸಿದ ಪ್ರಕಾರ, ಅಪಘಾತಕ್ಕೆ ಸಂಬಂಧಿಸಿದಂತೆ ಮಾರ್ಚ್ 5 ರಂದು ಪಿಸಿಆರ್ ಕರೆ ಮಾಡಿದ ಆರೋಪಿ ಸತೀಶ್ ಕುಮಾರ್ ಬೈಕ್ ಅಪಘಾತದಲ್ಲಿ ತಲೆಗೆ ಪೆಟ್ಟಾಗಿದ್ದ ತನ್ನ ಮಗ ಗಗನ್ ಅನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ತಿಳಿಸಿದ್ದಾನೆ.ಆದರೆ ಆತ ಲಿಖಿತ ದೂರು ದಾಖಲಿಸದೆ ಅಥವಾ ವೈದ್ಯಕೀಯ-ಕಾನೂನು ಪ್ರಕರಣ (ಎಂಎಲ್ಸಿ) ವರದಿಯನ್ನು ಪಡೆಯದೆ ಪೊಲೀಸ್ ಠಾಣೆಯಿಂದ ಹೊರಗೆ ನಡೆದಿದ್ದಾನೆ.
ಮಾರ್ಚ್ 11 ರಂದು ಪೊಲೀಸರು ಕುಮಾರ್‌ಗೆ ಕರೆ ಮಾಡಿದಾಗ, ಗಗನ್ ಮಾರ್ಚ್ 6 ರಂದು ನಿಧನನಾಗಿದ್ದಾನೆ ಮತ್ತು ಉತ್ತರ ಪ್ರದೇಶದ ಹಾಪುರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಹೇಳಿದ್ದಾನೆ.

ಆದರೆ ಪೊಲೀಸರು ಅನುಮಾನಗೊಂಡು ಈ ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಆ ವೇಳೆ ಅಪಘಾತದ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಂತರ, ಗಗನ್ ಮತ್ತು ಇನ್ನೊಬ್ಬ ವ್ಯಕ್ತಿ ಅಪಘಾತವಾದಂತೆ ಬಿಂಬಿಸಿದ್ದಾರೆ. ಮತ್ತು ನಕಲಿ ಅಂತ್ಯಸಂಸ್ಕಾರ ನಡೆದಿದೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಕುಮಾರ್ ಮತ್ತು ಮನಮೋಹನ್ ಎಂಬ ವಕೀಲರನ್ನು ಪ್ರಶ್ನಿಸಿದಾಗ, ಗಗನ್ ಸತ್ತಿಲ್ಲ ಎಂಬುದಾಗಿ ಬಾಯ್ಬಿಟ್ಟಿದ್ದಾರೆ. ಮತ್ತು ಫೆಬ್ರವರಿ 13 ರಂದು ಗಗನ್ ಹೆಸರಿನಲ್ಲಿ ನೀಡಲಾದ 2 ಕೋಟಿ ರೂ.ಗಳ ವಿಮಾ ಪಾವತಿಯನ್ನು ಕ್ಲೈಮ್ ಮಾಡುವುದು ಅವರ ಯೋಜನೆಯಾಗಿತ್ತು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಪ್ರಜ್ಞಾಹೀನ ಸ್ಥಿತಿಯಲ್ಲಿ ಫೇಮಸ್‌ ಕಂಟೆಂಟ್ ಕ್ರಿಯೇಟರ್ ಪತ್ತೆ; ಅಷ್ಟಕ್ಕೂ ಆಗಿದ್ದೇನು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು, ವಕೀಲ ಮನಮೋಹನ್ ಮತ್ತು ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದ ಬಿಎನ್ಎಸ್ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗ ಆರೋಪಿಗಳು ಜಾಮೀನಿಗಾಗಿ ಅಲೆಯುತ್ತಿದ್ದಾರೆ ಎನ್ನಲಾಗಿದೆ.