ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SBI Down: ಎಸ್‌ಬಿಐ ಆನ್‌ಲೈನ್‌ ಸೇವೆಯಲ್ಲಿ ವ್ಯತ್ಯಯ; ಲಕ್ಷಾಂತರ ಗ್ರಾಹಕರ ಪರದಾಟ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆನ್‌ಲೈನ್‌ ಸೇವೆ ಸ್ಥಗಿತವಾಗಿದ್ದು, ಇದು ಭಾರತದ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ನಗದು ವರ್ಗಾವಣೆ ಸೇರಿದಂತೆ ಆನ್‌ಲೈನ್‌ ಸೇವೆ ಸಾಧ್ಯವಾಗದೆ ಹಲವರು ಪರದಾಡುತ್ತಿದ್ದಾರೆ. ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಸ್‌ಬಿಐ ಆನ್‌ಲೈನ್‌ ಸೇವೆ ಸ್ಥಗಿತ; ಗ್ರಾಹಕರ ಪರದಾಟ

ಸಾಂದರ್ಭಿಕ ಚಿತ್ರ.

Profile Ramesh B Apr 1, 2025 3:39 PM

ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India)ದ ಆನ್‌ಲೈನ್‌ ಸೇವೆ ಸ್ಥಗಿತವಾಗಿದ್ದು, ಇದು ಭಾರತದ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ನಗದು ವರ್ಗಾವಣೆ ಸೇರಿದಂತೆ ಆನ್‌ಲೈನ್‌ ಸೇವೆ ಸಾಧ್ಯವಾಗದೆ ಹಲವರು ಪರದಾಡುತ್ತಿದ್ದಾರೆ (SBI Down). ಮೊಬೈಲ್‌ ಬ್ಯಾಂಕಿಂಗ್‌, ಎಟಿಎಂ ಸೇವೆಗಳಲ್ಲಿಯೂ ವ್ಯತ್ಯಯವಾಗಿದ್ದು, ಕೆಲವು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆನ್‌ಲೈನ್‌ ಸೇವೆಗಳು ಸೇರಿದಂತೆ ಬ್ಯಾಂಕ್‌ನ ಯುಪಿಐ ಸೇವೆಗಳಿಗೆ ಅಡಚಣೆ ಎದುರಾಗಿದೆ ಎಂದು ಎಸ್‌ಬಿಐ ಒಪ್ಪಿಕೊಂಡಿದೆ. ಮಾ. 26ರಂದು ಯುಪಿಐ ಸರ್ವರ್‌ನಲ್ಲಿ ಅಡಚಣೆ ಉಂಟಾಗಿ ಗ್ರಾಹಕರು ಕಂಗಾಲಾಗಿದ್ದರು. ಅದಾಗಿ 1 ವಾರ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಸಮಸ್ಯೆ ಕಂಡು ಬಂದಿದೆ.

ʼʼವಾರ್ಷಿಕ ಮುಕ್ತಾಯ ವಹಿವಾಟುಗಳ ಚಟುವಟಿಕೆ ಹಿನ್ನೆಲೆಯಲ್ಲಿ ನಮ್ಮ ಡಿಜಿಟಲ್‌ ಸೇವೆಗಳು ಏ. 1ರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆ ತನಕ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ಹೀಗಾಗಿ ತಡೆರಹಿತ ಸಣ್ಣ ಮೌಲ್ಯದ ವಹಿವಾಟುಗಳಿಗಾಗಿ ಯುಪಿಐಯ ಸರಳೀಕೃತ ಆವೃತ್ತಿ ಯುಪಿಐ ಲೈಟ್‌ ಬಳಸಿ. ನಿಮ್ಮ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆʼʼ ಎಂದು ಎಸ್‌ಬಿಐ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

ಎಸ್‌ಬಿಐಯ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: UPI Down: ಯುಪಿಐ ಸ್ಥಗಿತ; ಹಣ ಪಾವತಿಸಲು ಸಾಧ್ಯವಾಗದೆ ಲಕ್ಷಾಂತರ ಮಂದಿಯ ಪರದಾಟ

2022ರಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಣ್ಣ ಮೌಲ್ಯದ ವಹಿವಾಟುಗಳಿಗಾಇ ಯುಪಿಐಯ ಸರಳೀಕೃತ ಆವೃತ್ತಿ ಯುಪಿಐ ಲೈಟ್‌ ಅನ್ನು ಪರಿಚಯಿಸಿತ್ತು.

ಎಸ್‌ಬಿಐಯ ಮೊಬೈಲ್ ಬ್ಯಾಂಕಿಂಗ್ ಮತ್ತು ಫಂಡ್ ಸೇವೆಗಳ ಸ್ಥಗಿತದ ಸಮಸ್ಯೆಯನ್ನು ಡೌನ್‌ಡಿಟೆಕ್ಟರ್‌ (Downdetector) ವರದಿ ಮಾಡಿದೆ. ಬೆಳಗ್ಗೆ 11ರಿಂದ 11:30ರ ನಡುವೆ ಅತೀ ಹೆಚ್ಚಿನ ಗ್ರಾಹಕರ ದೂರು ದಾಖಲಾಗಿದೆ ಎಂದು ತಿಳಿಸಿದೆ. ಸಮಸ್ಯೆಗಳ ಪೈಕಿ ಸುಮಾರು ಶೇ. 64ರಷ್ಟು ಮೊಬೈಲ್ ಬ್ಯಾಂಕಿಂಗ್, ಶೇ. 33ರಷ್ಟು ಹಣ ವರ್ಗಾವಣೆ ಮತ್ತು ಶೇ. 3ರಷ್ಟು ಎಟಿಎಂಗೆ ಸಂಬಂಧಿಸಿವೆ. ವಹಿವಾಟು ನಡೆಸಲು ಸಾಧ್ಯವಾಗದಿರುವ ಬಗ್ಗೆ ಗ್ರಾಹಕರು ಸಾಮಾಜಿಕ ಮಾಧ್ಯಮಗಳನ್ನು ಕಳವಳ ವ್ಯಕ್ತಪಡಿಸಿದ್ದಾರೆ.

ಮಾ. 26ರ ಸಂಜೆ ಭಾರತದಲ್ಲಿ ಯುಪಿಐ ಸರ್ವರ್‌ ಸ್ಥಗಿತವಾಗಿದ್ದು, ಹಣ ಪಾವತಿ ಮಾಡಲು ಸಾಧ್ಯವಾಗದೆ ಲಕ್ಷಾಂತರ ಮಂದಿ ಪರದಾಡಿದ್ದರು. ಈ ಬಗ್ಗೆ ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಜನಪ್ರಿಯ ಪೇಮೆಂಟ್ ಆಪ್ಲಿಕೇಷನ್‌ಗಳ ಹಣ ಪಾವತಿ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು.

ಹೊಸ ನಿಯಮ

ಮೊಬೈಲ್ ನಂಬರ್ ಬದಲಾವಣೆ ಮಾಡುವುದರಿಂದ ಯುಪಿಐ ಪಾವತಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಎನ್​​ಪಿಸಿಐ ಹೊಸ ನಿಯಮಗಳನ್ನು ರೂಪಿಸಿದ್ದು, ಏ. 1ರಂದು ಜಾರಿಗೆ ಬಂದಿದೆ. ಅದರ ಪ್ರಕಾರ, ಬ್ಯಾಂಕುಗಳು, ಪೇಮೆಂಟ್ ಸರ್ವಿಸ್ ನೀಡುಗರು ಮೊಬೈಲ್ ನಂಬರ್ ರಿವೋಕೇಶನ್ ಪಟ್ಟಿ ಅಥವಾ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್​​ಫಾರ್ಮ್ ಅನ್ನು ಬಳಸಿ, ಪ್ರತೀ ವಾರವೂ ಡಾಟಾಬೇಸ್ ಅಪ್​​​ಡೇಟ್ ಮಾಡಬೇಕು. ಯುಪಿಐ ಬಳಕೆದಾರರಿಗೆ ನ್ಯೂಮರಿಕ್ ಯುಪಿಐ ಐಡಿಗಳನ್ನು ನೀಡುವ ಮುನ್ನ ಅಥವಾ ಅಪ್​​ಡೇಟ್ ಮಾಡುವ ಮುನ್ನ ಅವರಿಂದ ಅನುಮತಿ ಪಡೆಯಬೇಕು. ಗ್ರಾಹಕರು ಮೊಬೈಲ್ ನಂಬರ್ ನಿಷ್ಕ್ರಿಯಗೊಂಡಿದ್ದರೆ ಅಥವಾ ಬೇರೆ ನಂಬರ್​​ಗೆ ಬದಲಾಯಿಸಿಕೊಂಡಿದ್ದರೆ ಆಗ ಅದನ್ನು ಬ್ಯಾಂಕ್​​ನಲ್ಲಿ ಅಪ್​ಡೇಟ್ ಮಾಡಬೇಕು.