ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tea Export: ಚಹಾ ರಫ್ತು- ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದ ಭಾರತ

2024ರ ಕ್ಯಾಲೆಂಡರ್ ವರ್ಷದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದಿಂದ 154.81 ಮಿಲಿಯನ್ ಕೆ.ಜಿ. ಚಹಾವನ್ನು ರಫ್ತು ಮಾಡಿದ್ದು, ಇದರ ಮೌಲ್ಯ 4,833.12 ಕೋಟಿ ರೂ.ಗಳಾಗಿವೆ. ದಕ್ಷಿಣ ಭಾರತವು 99.86 ಮಿಲಿಯನ್ ಕೆ.ಜಿ. ರಫ್ತು ಮಾಡಿದ್ದು ಇದರ ಮೌಲ್ಯ 2,278.31 ಕೋಟಿ ರೂ.ಗಳಾಗಿದೆ.

ಚಹಾ ರಫ್ತಿನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?

Profile Vidhya Iravathur Apr 1, 2025 5:03 PM

ನವದೆಹಲಿ: ಚಹಾ ರಫ್ತಿನಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿದ್ದ ಭಾರತ ಈಗ ಮೂರನೇ ಸ್ಥಾನಕ್ಕೆ ಏರಿದೆ(Tea exports). 2024ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದಿಂದ ಒಟ್ಟು 254.67 ಮಿಲಿಯನ್ ಕೆ.ಜಿ. ಚಹಾವನ್ನು ರಫ್ತು ಮಾಡಲಾಗಿದೆ. ಇದರ ಮೌಲ್ಯ 7,111.43 ಕೋಟಿ ರೂ. ಗಳಾಗಿವೆ ಎಂದು ಭಾರತೀಯ ಚಹಾ ಮಂಡಳಿ ತಿಳಿಸಿದೆ. ಕೇಂದ್ರ ಸರ್ಕಾರ, ಚಹಾ ಮಂಡಳಿ ಮತ್ತು ಭಾರತೀಯ ಚಹಾ ಉದ್ಯಮದ ಎಲ್ಲಾ ಪಾಲುದಾರರ ಸಂಘಟಿತ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಚಹಾ ಮಂಡಳಿಯು ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

2024ರ ಕ್ಯಾಲೆಂಡರ್ ವರ್ಷದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದಿಂದ 154.81 ಮಿಲಿಯನ್ ಕೆ.ಜಿ. ಚಹಾವನ್ನು ರಫ್ತು ಮಾಡಿದ್ದು, ಇದರ ಮೌಲ್ಯ 4,833.12 ಕೋಟಿ ರೂ. ಗಳಾಗಿವೆ. ದಕ್ಷಿಣ ಭಾರತವು 99.86 ಮಿಲಿಯನ್ ಕೆ.ಜಿ. ರಫ್ತು ಮಾಡಿದ್ದು ಇದರ ಮೌಲ್ಯ 2,278.31 ಕೋಟಿ ರೂ.ಗಳಾಗಿದೆ. ಚಹಾ ರಫ್ತಿನಲ್ಲಿ ಉತ್ತರ ಭಾರತದ ಕೊಡುಗೆಗಳು ಪ್ರಮಾಣ ಶೇ. 60.79 ಆಗಿದ್ದು, ಆದಾಯ ಶೇ. 67.96 ರಷ್ಟಿದ್ದರೆ , ದಕ್ಷಿಣ ಭಾರತದ ಕೊಡುಗೆ ಪ್ರಮಾಣ ಶೇ. 39.21 ಮತ್ತು ಆದಾಯ ಶೇ. 32.04 ರಷ್ಟಾಗಿವೆ. ಇದರಿಂದ ಏಪ್ರಿಲ್ 1ರಂದು 72 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಭಾರತೀಯ ಚಹಾ ಮಂಡಳಿಯ ಸಂಭ್ರಮ ಮತ್ತಷ್ಟು ಹೆಚ್ಚಿಸಿದಂತಾಗಿದೆ.

1953ರ ಚಹಾ ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಸ್ಥಾಪಿಸಲಾದ ಚಹಾ ಮಂಡಳಿಯನ್ನು 1954ರ ಏಪ್ರಿಲ್ 1ರಂದು ರಚಿಸಲಾಯಿತು. ಇದು ಕೇಂದ್ರ ಸರ್ಕಾರದ ನಿರ್ದೇಶನದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಹಾ ಮಂಡಳಿಯು ಚಹಾ ಕೃಷಿ, ಉತ್ಪಾದನೆ, ಮಾರುಕಟ್ಟೆ, ರಫ್ತು ಮತ್ತು ದೇಶೀಯ ಪ್ರಚಾರ, ಚಹಾ ಉತ್ಪಾದನೆ ಮತ್ತು ಗುಣಮಟ್ಟ ಸುಧಾರಣೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ. ಕಾರ್ಮಿಕ ಕಲ್ಯಾಣ ಯೋಜನೆಗಳ ಮೂಲಕ ತೋಟ ಕಾರ್ಮಿಕರಿಗೆ ಸಹಾಯವನ್ನು ಒದಗಿಸುತ್ತದೆ. ಅಸಂಘಟಿತ ಸಣ್ಣ ಬೆಳೆಗಾರರನ್ನು ಪ್ರೋತ್ಸಾಹಿಸುವುದು, ಅಂಕಿಅಂಶಗಳ ಪ್ರಕಟಣೆ ಸೇರಿದಂತೆ ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿರ್ದೇಶಿಸುವ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ.